Shaikh BigTv
August 12, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೆಟ್ ಕೊಚ್ಚಿ ಹೋದ ಪ್ರಕರಣದ ವಿಚಾರ, ಇದಕ್ಕೆಲ್ಲ ಮೂಲ ಕಾರಣ ರಾಜ್ಯ ಸರ್ಕಾರ. ಇದಕ್ಕೆಲ್ಲ ಕಾರಣೀಭೂತರು ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದ್ರೆ,ಅಧಿಕಾರಿಗಳು ನಿರ್ಲಕ್ಷ್ಯ ಮಾಡ್ತಾರೆಂದು ಹುಬ್ಬಳ್ಳಿಯಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡ್ಯಾಂನಲ್ಲಿ ಇಂಜನೀಯರ್ಸ್ ಗಳೇ ಇಲ್ಲ.ಎಲ್ಲರೂ ಇನ್ ಚಾರ್ಜ್ ಮೇಲೆ ಇದ್ದಾರೆ.ಅವರ ಮೇಲೆ ಬಂದಿರೋ ಹಗರಣಕ್ಕೆ ಉತ್ತರ ಕೊಡೋದಕ್ಕೆ ಸಮಯ ವ್ಯಯ ಮಾಡ್ತೀದಾರೆ.ಸರ್ಕಾರ …
Read More »
Shaikh BigTv
August 12, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಮಾಡಬೇಕು ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾ ಮುಸ್ಲಿಮರನ್ನು ಭಾರತ ದೇಶದಿಂದ ಒದ್ದು ಓಡಿಸಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಶ್ರೀ ರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಅವರಿಗೆ ಮನವಿ ಸಲ್ಲಿಸಿದರು. ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಭಾರತ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
Read More »
bigtvnews22
August 12, 2024
Breaking News
ಪ್ಯಾರಿಸ್ : ಒಲಿಂಪಿಕ್ಸ್‌ನಲ್ಲಿ ಅಧಿಕ ತೂಕ ಹೊಂದಿದ ಕಾರಣಕ್ಕಾಗಿ, ಪದಕ ವಂಚಿತ ಭಾರತದ ಸ್ಟಾರ್ ಕುಸ್ತಿಪಟು, ವಿನೇಶ್ ಫೋಗಟ್ ಅವರಿಗೆ ಬಂಗಾರದ ಪದಕ ನೀಡಲು, ಹರಿಯಾಣದ ಸರ್ವ ಖಾಪ್ ಮಹಾಪಂಚಾಯತ್ ನಿರ್ಧರಿಸಿದೆ. ಭಾರತಕ್ಕೆ ಆಗಮಿಸುತ್ತಿದ್ದಂತೆ ಅದ್ದೂರಿ ಸ್ವಾಗತ ಮಾಡಿ ಚಿನ್ನದ ಪದಕ ನೀಡಲು ತೀರ್ಮಾನಿಸಿದೆ. ಜೊತೆಗೆ ವಿನೇಶ್‌ಗೆ ಭಾರತ ರತ್ನ ನೀಡಬೇಕೆಂದು ಕೋರಿ ಖಾಪ್ ಕೇಂದ್ರ ಸರ್ಕಾರಕ್ಕೆ ವಿನಂತಿಸಿಕೊಂಡಿದೆ. ಅಷ್ಟೇ ಅಲ್ಲದೆ ನಿವೃತ್ತಿಯ ತೀರ್ಮಾನವನ್ನು ಇನ್ನೊಮ್ಮೆ ಪರಿಶೀಲಿಸುವಂತೆ ಕೋರಿಕೊಂಡಿದೆ.
Read More »
Shaikh BigTv
August 12, 2024
Breaking News, ಧಾರವಾಡ
ಕಲಘಟಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಘಟಗಿ ತಾಲುಕಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿ. ೧೩ ರ ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಇಲ್ಲಿನ ಹನ್ನೆರಡುಮಠದ ಸಭಾಭವನದಲ್ಲಿ ಜರುಗಲಿದೆ. ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರ ಸಾನಿಧ್ಯದಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಘಟನೆಯ ರಾಜ್ಯಾಧ್ಯಕ್ಷ ಡಾ/ ವಾಸುದೇವ ಮೇಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧ್ಯಕ್ಷ ಸಿದ್ದಯ್ಯ ಕಟ್ಟೂರಮಠ …
Read More »
Shaikh BigTv
August 12, 2024
Breaking News, ಹುಬ್ಬಳ್ಳಿ-ಧಾರವಾಡ
ಧಾರವಾಡ: ಬಿಜೆಪಿ ಹಾಗೂ ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡುತ್ತಿವೆ ಎಂದು ಆರೋಪಿಸಿ ಧಾರವಾಡ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ದಾರವಾಡದ ಕಡಪ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜಭವನದ ದುರುಪಯೋಗ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್ ನೀಡಲಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
Read More »
Shaikh BigTv
August 12, 2024
Breaking News, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಮೃತ ಪಿಎಸ್ಐ ಪರಶುರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಡಲೇ ಆರೋಪಿಗಳನ್ನು ಬಂಧಿಸಿ ಪರಶುರಾಮ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸುವ ಮೂಲಕ, ಅವರಿಗೆ ರಕ್ಷಣೆ ನೀಡಬೇಕೆಂದು ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಒತ್ತಾಯಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ರಕ್ಷಣೆ ಮಾಡೋ ಕೆಲಸ ಒಂದಡೆಯಾದರೆ, ಪರಶುರಾಮ್ ಅವರ ಕುಟುಂಬಸ್ಥರು ನೋವಿನಲ್ಲಿದ್ದಾರೆ. ಅವರ ಹೇಳಿಕೆಯನ್ನು ಇದುವರೆಗೂ ಪಡೆದಿಲ್ಲ. ನಿಮಗೆ ತಾಕತ್ ಇದ್ದರೆ ಆರೋಪಿಗಳನ್ನು ಅರೆಸ್ಟ್ ಮಾಡಿ …
Read More »
Shaikh BigTv
August 12, 2024
Breaking News, ಜಿಲ್ಲೆ, ಹಾಸನ
ಹಾಸನ : ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರ್ಲಹಳ್ಳಿಯಲ್ಲಿ ಸಿಡಿಲು ಬಡಿದು 15 ಜನರಿಗೆ ಗಾಯವಾದ ಈ ದುರ್ಘಟನೆ ಸಂಭವಿಸಿದೆ. ಮಳೆಯ ನಡುವೆ ಕೆ.ಬಿ ಚಂದ್ರು ಎಂಬುವರಿಗೆ ಸೇರಿದಂತ ಜಮೀನಿನಲ್ಲಿ ಭತ್ತ ನಾಟಿಯಲ್ಲಿ ತೊಡಗಿದ್ದರು. ಭತ್ತ ನಾಟಿಯ ವೇಳೆಯಲ್ಲೇ ಸಿಡಿಲು ಬಡಿದ ಪರಿಣಾಮ, ಕೋರ್ಲಗದ್ದೆ ಗ್ರಾಮದ ರೇಣುಕಾ, ಸವಿತಾ, ಸುಮಿತ್ರ, ರೇಣುಕಮ್ಮ, ನೇತ್ರಾ, ನಿರ್ಮಲಾ, ವೀಣಾ, ಅನಿತಾ ಇದ್ದರು.ಇನ್ನೂ ಸಿಡಿಲು ಬಡಿತದಿದ್ದರಿಂದ ಲತಾ ಎಂಬುವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸಕಲೇಶಪುರದ ಖಾಸಗಿ …
Read More »
Shaikh BigTv
August 12, 2024
Breaking News, ಕರ್ನಾಟಕ
ಹೊಸಪೇಟೆ: ತುಂಗಭದ್ರಾ ಆಣೆಕಟ್ಟೆಯ 19 ನೇ ಕ್ರಸ್ಟ್ ಗೇಟ್ ಕೊಚ್ಚಿಹೋದ ಹಿನ್ನೆಲೆಯಲ್ಲಿ ಸೋಮುವಾರ ಜಲಾಶಯಕ್ಕೆ ದೌಡಾಯಿಸಿದ ಕೊಪ್ಪಳದ ಅಭಿನವ ಗವಿಸಿದ್ದೇಶ ಸ್ವಾಮೀಜಿ ಜಲಾಶಯ ವೀಕ್ಷಣೆ ಮಾಡಿದರು. ತುಂಗಭದ್ರಾ ಆಣೆಕಟ್ಟೆಗೆ ಬಂದ ಶ್ರೀಗಳು ಆಣೆಕಟ್ಟೆಯ ಮೇಲೆ ವಾಹನದಲ್ಲಿ ತೆರಳದೇ ನಡೆದುಕೊಂಡೇ ಹೋಗಿ ಜಲಾಶಯ ವೀಕ್ಷಣೆ ಮಾಡಿದ್ದಾರೆ.ಗೇಟ್ ಕಿತ್ತುಹೋದ, ಮರು ಅಳವಡಿಕೆ ಬಗ್ಗೆ ಅಲ್ಲಿದ್ದ ಸಿಬ್ಬಂದಿಯಿಂದ ಗವಿಶ್ರೀಗಳು ಮಾಹಿತಿ ಪಡೆದರು. ಜಲಾಶಯದ ಸ್ಥಿತಿ ಗತಿ, ಈಗಿರುವ ಪರಿಸ್ಥಿತಿಯನ್ನು ಕಂಡುಕೊಂಡರು. ಕಲ್ಯಾಣ ಕರ್ನಾಟಕದ ನಾಲ್ಕು …
Read More »
Shaikh BigTv
August 12, 2024
Breaking News, ಕೊಪ್ಪಳ
ಕೊಪ್ಪಳ : ಜಿಲ್ಲೆಯ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕಟ್ ಆಗಿ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇನ್ನೊಂದೆಡೆ ಮುರಿದು ಬಿದ್ದಿರುವ ಗೇಟ್ ಮೇಲಿನ ಒತ್ತಡ ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದಿಂದ ಇಂದು ಕೂಡ 1.5 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದ್ದು, ಕಟ್ಟೆಚ್ಚರ ವಹಿಸುವಂತೆ ಘೋಷಿಸಲಾಗಿದೆ. …
Read More »
Shaikh BigTv
August 12, 2024
Breaking News, ತುಮಕೂರು
ತುಮಕೂರ: ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ಜರುಗಿದೆ. ನವೀನ್ ಚನ್ನರಾಯಪಟ್ಟಣ ಕಡೆಯಿಂದ ತಿಪಟೂರು ಮಾರ್ಗವಾಗಿ ತೆರಳುತ್ತಿದ್ದರು. ಶೇಷಾದ್ರಿ ಹಾಗೂ ಸಚಿನ್ ಎಂಬುವರು ಬೈಕ್‌ನಲ್ಲಿ ಹಿಂದಿನಿಂದ ಬರುತ್ತಿದ್ದರು. ಮುಂದೆ ಹೋಗುತ್ತಿದ್ದ ನವೀನ್ ಏಕಾಏಕಿ ಬೈಕ್ ತಿರುಗಿಸಿದ ಪರಿಣಾಮ ಎರಡು ಬೈಕ್‌ಗಳ ನಡುವೆ ಡಿಕ್ಕಿ ಹೊಡೆದಿದೆ.ನವೀನ್, ಶೇಷಾದ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಸಚಿನ್ ಎಂಬುವರ …
Read More »