Breaking News

ಟಿಬಿ ಡ್ಯಾಂ ಅವಾಂತರ ಸಂಸದ ಶೆಟ್ಟರ್ ಕಿಡಿ

ಹುಬ್ಬಳ್ಳಿ: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೆಟ್ ಕೊಚ್ಚಿ ಹೋದ ಪ್ರಕರಣದ ವಿಚಾರ, ಇದಕ್ಕೆಲ್ಲ ಮೂಲ ಕಾರಣ ರಾಜ್ಯ ಸರ್ಕಾರ. ಇದಕ್ಕೆಲ್ಲ ಕಾರಣೀಭೂತರು ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು.
ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದ್ರೆ,ಅಧಿಕಾರಿಗಳು ನಿರ್ಲಕ್ಷ್ಯ ಮಾಡ್ತಾರೆಂದು ಹುಬ್ಬಳ್ಳಿಯಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು,
ಡ್ಯಾಂನಲ್ಲಿ ಇಂಜನೀಯರ್ಸ್ ಗಳೇ ಇಲ್ಲ.ಎಲ್ಲರೂ ಇನ್ ಚಾರ್ಜ್ ಮೇಲೆ ಇದ್ದಾರೆ.ಅವರ ಮೇಲೆ ಬಂದಿರೋ ಹಗರಣಕ್ಕೆ ಉತ್ತರ ಕೊಡೋದಕ್ಕೆ ಸಮಯ ವ್ಯಯ ಮಾಡ್ತೀದಾರೆ.ಸರ್ಕಾರ ನಡೆಸೋದಕ್ಕೆ ಅವರು ಆಸಕ್ತಿ‌ಕಳೆದುಕೊಂಡಿದ್ದಾರೆ.‌ ಬರೀ ಜನಾಂದೋಲನ,ಜನ ಸೇರಸೋದರಲ್ಲಿ ಸಮಯ ಹೋಗ್ತಿದೆ. ಅಭಿವೃದ್ಧಿ ಪರ ಕೆಲಸಗಳಿಗೆ ಅವರ ಬಳಿ ಸಮಯವೇ ಇಲ್ಲಾ. ನಾನು ನಿನ್ನೆ ಟಿಬಿ ಡ್ಯಾಂ ಭೇಟಿ ನೀಡಿದ್ದೇನೆ. ಅದನ್ನು ನೋಡಿದ್ರೆ ಬಹಳ ಬೇಜಾರಗತ್ತೆ. ಈ ರೀತಿ ಘಟನೆ ಆಗಬಾರದಿತ್ತು‌.
ಸರಿಯಾಗಿ ನಿರ್ವಹಣೆ ಮಾಡದೆ ಇರೋದಕ್ಕೆ ಇದಕ್ಕೆಲ್ಲ ಕಾರಣವಾಗಿದೆ ಎಂದ ಶೆಟ್ಟರ್.

ಡಿಕೆ ಶಿವಕುಮಾರ್ ಬಂದರೂ ಹೋದರೂ.
ಎಕ್ಸಪರ್ಟ್ ಟೀಮ್ ಕರಸ್ತೀನಿ ಅಂತಾ ಹೇಳಿ ಹೋದ್ರು. ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಡ್ಯಾಂ ಅದು. ಇಲ್ಲಿವರೆಗೂ ಈ ರೀತಿ ಘಟನೆ ಆಗಿರಲಿಲ್ಲ‌. ತುಂಗಭದ್ರಾ ಡ್ಯಾಂ ನಿಂದ ರೈತರು ವರ್ಷಕ್ಕೆ ಎರಡು ಮೂರು ಬೆಳೆ ಬೆಳೆಯುತ್ತಿದ್ರು.
ಕಳೆದ ಆರು ತಿಂಗಳ ಹಿಂದೆ ಡ್ಯಾಂ ನಲ್ಲಿ ನೀರ ಇರಲಿಲ್ಲ. ಆ ಸಮಯದಲ್ಲಿ ನಿರ್ವಹಣೆ ಮಾಡಿಲ್ಕ. ಪ್ರತಿ ವರ್ಷ ನಿರ್ವಹಣೆಗೆ ಹಣ ಖರ್ಚು ಮಾಡ್ತಾರೆ. ಸಿಎಮ್ ಡಿಸಿಎಮ್ ಹಗರಣ ಬಗ್ಗೆ ಉತ್ತರ ಕೊಡೋದು. ಪ್ರತಿ ಪಕ್ಷಕ್ಕೆ ಬೈಯ್ಯೋದೆ ಕೆಲಸ. ಹೀಗಾಗಿ ಜಲ ಸಂಪನ್ಮೂಲ ಸಚಿವರಿಗೆ ಅಧಿಕಾರಿಗಳ ಮೀಟಿಂಗ್ ಮಾಡಿಲ್ಲ.
ಬಂದರೂ ,ಊಟ ಮಾಡಿ ಹೋದ್ರು.
ಅವರಿಗೆ ಸೀರಿಯಸ್ ಇಲ್ಲ ಎಂದ ಶೆಟ್ಟರ್.
ಒಂದು ಬೆಳೆಗೂ ನೀರು ಸಿಗತ್ತೆ ಇಲ್ಲ ಅನ್ನೋದೆ ಅನುಮಾನ ಇದೆ. 40 ಟಿಎಮ್ ಸಿ ನೀರು ಕುಡಿಯೋಕೆ ಸಾಲಲ್ಲ. ಎರಡು ಬೆಳೆ ಲಾಸ್ ಆಗತ್ತೆ, ನೀರು ಸಿಗದೆ. ಅವರಿಗೆ ಪರಿಹಾರ ಕೊಡ್ತೀರಾ..? ಗ್ಯಾರಂಟಿ ಗೆ 50 ರಿಂದ 60 ಸಾವಿರ ಹಣ ಖರ್ಚು ಮಾಡ್ತೀರಿ. ನಿರ್ವಹಣೆಗೆ ಹಣ ಯಾಕೆ ಕೊಡಲ್ಲ. ಇದು ಸರ್ಕಾರದ ದಿವ್ಯ ನಿರ್ಲಕ್ಷ್ಯ ಎಂದ ಶೆಟ್ಟರ್. ಸಮಾನಂತರದ ಜಲಾಶಯ ಡಿಪಿಆರ್ ರೆಡಿ ಇದೆ.
ಆದರೂ ಜಲಾಶಯ ಆಗಿಲ್ಲ,ಅಭಿವೃದ್ಧಿಗೆ ಹಣವೇ ಇಲ್ಲ. ಸುಮ್ನೆ ಬರ್ತಿರಿ ಹೋಗ್ತೀರಿ ಎಂದ ಶೆಟ್ಟರ್.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *