Breaking News

ಪಿಎಸ್ ಐ ಪರಶುರಾಮ ಕುಟುಂಬಕ್ಕೆ ನ್ಯಾಯ ಒದಗಿಸಿ : ಶೆಟ್ಟರ್

ಹುಬ್ಬಳ್ಳಿ: ಮೃತ ಪಿಎಸ್ಐ ಪರಶುರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಡಲೇ ಆರೋಪಿಗಳನ್ನು ಬಂಧಿಸಿ ಪರಶುರಾಮ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸುವ ಮೂಲಕ, ಅವರಿಗೆ ರಕ್ಷಣೆ ನೀಡಬೇಕೆಂದು ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ರಕ್ಷಣೆ ಮಾಡೋ ಕೆಲಸ ಒಂದಡೆಯಾದರೆ, ಪರಶುರಾಮ್ ಅವರ ಕುಟುಂಬಸ್ಥರು ನೋವಿನಲ್ಲಿದ್ದಾರೆ. ಅವರ ಹೇಳಿಕೆಯನ್ನು ಇದುವರೆಗೂ ಪಡೆದಿಲ್ಲ. ನಿಮಗೆ ತಾಕತ್ ಇದ್ದರೆ ಆರೋಪಿಗಳನ್ನು ಅರೆಸ್ಟ್ ಮಾಡಿ ಎಂದು ಅವರು ಸವಾಲ್ ಎಸೆದರು.
ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳುತ್ತಿದೆ. ಅವರ ಕುಟುಂಬಸ್ಥರ ಶಾಪ ಸರ್ಕಾರಕ್ಕೆ ತಟ್ಟೆ ತಟ್ಟುತ್ತೆ ಎಂದರು.
ನಾನು ನಿನ್ನೆ ಮೃತ ಪಿಎಸ್ಐ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದೇನೆ. ಪಿಎಸ್ಐ ಪರಶುರಾಮ ಮನೆಗೆ ಹೋದಾಗ ಹಣ ಕೊಟ್ಟಿದ್ದೀವಿ ಅಂದಿದ್ದಾರೆ‌. ಅವರ ಹಣವು ಹೋಯ್ತು, ಜೀವನವು ಹೋಯ್ತು, ಇದನ್ನು ನೋಡಿದರೇ ಭ್ರಷ್ಟಾಚಾರ ಮಿತಿ ಮೀರಿದೆ ಎಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *