Breaking News

Breaking News

ಡಿಫೇರೆಂಟ್ ಆಗಿ ಲುಕ್ ಕೊಟ್ಟ ಉರ್ಫಿ

ಬೆಂಗಳೂರು : ಕೆಲ ದಿನಗಳ ಹಿಂದೆ, ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು. ಇದರ ವಿಡಿಯೋ ಸಕತ್​ ವೈರಲ್​ ಆಗಿದ್ದು, ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು. ಇದಕ್ಕೂ ಮುಂಚೆ ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್‌ ಕೊಟ್ಟಿದ್ದರು. ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು ನಟಿ ಉರ್ಫಿ. ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದರು …

Read More »

ಬೆಂಗಳೂರು ಜನೆತೆಗೆ ಹವಾಮಾನ ಇಲಾಖೆ ಮಹತ್ವದ ಸೂಚನೆ

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 1 ವಾರ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಮುಂದಿನ ಗುರುವಾರದವರೆಗೆ ಅಲ್ಪ ಪ್ರಮಾಣದ ಮಳೆಯಾಗಲಿದ್ದು, ಶುಕ್ರವಾರ ಮತ್ತು ಶನಿವಾರ ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ವರದಿ ನೀಡಿದ್ದು ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.ಆಗಸ್ಟ್ 13 ರಿಂದ ಆಗಸ್ಟ್ 17ರವರೆಗಿನ ವರದಿಯನ್ನು ಬಿಡುಗಡೆ ಮಾಡಿದೆ. ಸೋಮವಾರ ಬೆಳ್ಳಂಬೆಳಗ್ಗೆ ಇದ್ದಕ್ಕಿದ್ದಂತೆಯೇ ವಿಪರೀತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರು ನಗರ ಮತ್ತು …

Read More »

ಅನ್ನದಾತರಿಗೆ ಛತ್ರಿ ಹಿಡಿದ ಪ್ರಧಾನಿ

ನವದೆಹಲಿ: ಅಧಿಕಾರಿಗಳು ಸಂವಾದವನ್ನು ರದ್ದುಗೊಳಿಸುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದರು ಆದರೆ ಮಳೆ ಇದ್ದರೂ ಕೂಡ ರೈತರೊಂದಿಗೆ ಸಂವಾದ ನಡೆಸುವುದನ್ನು ಮುಂದುವರೆಸಿದರು. ಸಂವಾದದ ಸಮಯದಲ್ಲಿ, ಪಿಎಂ ಮೋದಿ ಛತ್ರಿ ಹಿಡಿದುಕೊಂಡೇ ರೈತರ ಜೊತೆ ಸಂವಾದ ನಡೆಸಿದ ವಿಡಿಯೋ ಒಂದು ವೈರಲ್ ಆಗಿದೆ. ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಈ ಘೋಷಣೆಗೆ ‘ಜೈ ಅನುಸಂಧಾನ್’ ಅನ್ನು ಹೇಗೆ ಸೇರಿಸಿದ್ದಾರೆ ಎಂಬುದನ್ನು ಒತ್ತಿ ಹೇಳಿದರು. ಇದು ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚಿನ ಆದ್ಯತೆ …

Read More »

ನವಲಗುಂದ ಜನತೆಗೆ ಕಣ್ಣೀರು ತರಿಸಿದ ಈರುಳ್ಳಿ ಬೆಳೆ

ನವಲಗುಂದ: ಈ ಪಟ್ಟಣದ ಜನೆತೆ ಇದೀಗ ವರುಣ ಶಾಪವಾಗಿ ವ್ಯಕ್ತವಾಗಿದೆ. ವರುಣನ ಆಗಮನದಿಂದ ಖುಷಿಯಲ್ಲಿದ್ದ ಜನತೆಗೆ ಬೇಸರವುಂಟು ಮಾಡಿದೆ. ಇದೀಗ ಚೆನ್ನಾಗಿ ಬೆಳೆದ ಈರುಳ್ಳಿ ಸಂಪೂರ್ಣವಾಗಿ ನೀರುಪಾಲಾಗಿದೆ. ತಾಲೂಕಿನ ಯಮನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮಾರಗೊಪ್ಪ ಹದ್ದಿನಲ್ಲಿರುವ ರೈತನ ಹೊಲದ ಈರುಳ್ಳಿ ಬೆಳೆ ಹೊಲದಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ಬೆಳೆಹಾನಿಗಿದೆ. ಬಿತ್ತಿದ ದುಬಾರಿ ಬೀಜ, ಬಿತ್ತನೆ ಖರ್ಚು, ಕಳೆ ತಗೆಸುವುದು, ಔಷಧಿ ಸಿಂಪಡಣೆ ಮಾಡುವುದು ಸೇರಿ ಎಕರೆಗೆ ಕನಿಷ್ಟ …

Read More »

ಚಕ್ಕಡಿ ರಸ್ತೆಯನ್ನು ಪೊಜೆ ಮಾಡಿದ ಕೋನರಡ್ಡಿ

ನವಲಗುಂದ: ವಿಧಾನಸಭಾ ಕ್ಷೇತ್ರದ ಬಂಡಿವಾಡ ಗ್ರಾಮದ ಈ ರಸ್ತೆಚಕ್ಕಡಿ ದಾರಿಯನ್ನು ಅಭಿವೃದ್ಧಿ ಪಡೆಸುವಂತೆ ರೈತರು ಮನವಿ ಮಾಡಿದ್ದ ಹಿನ್ನಲೆ ಈ ರಸ್ತೆ ದಾರಿಯನ್ನು ಅಭಿವೃದ್ಧಿ ಪಡೆಸಲು ಭೂಮಿ ಪೂಜೆಯನ್ನು ಶಾಸಕ ಎನ್.ಎಚ್.ಕೋನರಡ್ಡಿ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಮೂಲಿಮನಿ, ಅಣ್ಣಪ್ಪ ಕುಲಕರ್ಣಿ, ಸಯ್ಯದಅಲಿ ಬಾವಾ ಖಾನವರ, ಮೈಲಾರೆಪ್ಪ ಹಂಗನಗಟ್ಟಿ, ಸದಸ್ಯರಾದ ಪಕ್ರುಸಾಬ ಹಸನಪ್ಪನವರ, ಮುತ್ತಪ್ಪ ಗಾಣಿಗೇರ, ಶಿವಪ್ಪ ಗದಗಿನ, ನೂರಸಾಬ ಹುಬ್ಬಳ್ಳಿ ಸೇರಿದಂತೆ …

Read More »

ಇಸ್ಮಾಯಿಲ್ ತಮಟಗಾರ ಕೊಲೆಗೆ ಸ್ಕೆಚ್ ! ರಾತ್ರೋರಾತ್ರಿ ಠಾಣೆ ಮೆಟ್ಟಿಲೇರಿದ ಕುಟುಂಬ..

ಅಂಜುಮನ್ ಸಂಸ್ಥೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. 10ಕ್ಕೂ ಹೆಚ್ಚು ಜನ ಅಪರಿಚಿತರು ತಮಟಗಾರ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಯುವಕರು ತಮಟಗಾರ ಅವರ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಟಗಾರ ಅವರು ಮನೆಯಲ್ಲಿರದೆ, ಬೆಂಗಳೂರಿನಲ್ಲಿ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇಸ್ಮಾಯಿಲ್ ಅವರ ಮೇಲೆ ಲಂಗೋಟಿ ಜಮಾದಾರ್ ಗಲ್ಲಿ, ಅಂಜುಮನ್ ಹಾಸ್ಟೆಲ್ ಬಳಿ …

Read More »
Featured Video Play Icon

ಹುಬ್ಬಳ್ಳಿ ಧಾರವಾಡ ಪೊಲೀಸರ ಭರ್ಜರಿ ಕಾರ್ಯಾಚರಣೆ…

Read More »

ಡಿಸಿಎಂ ವಿರುದ್ಧ ಮೈಸೂರಿನಲ್ಲಿ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ. ಕುಮಾರಸ್ವಾಮಿ…

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೈಸೂರು ಚಲೋ ಬಿಜೆಪಿ-ಜೆಡಿಎಸ್ ಪಾದಯಾತ್ರೆಯುದ್ದಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇದೀಗ ಮೈಸೂರಿನಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಅಣ್ಣನ ಮಗನ ವಿರುದ್ಧ ಪಿತೂರಿ ನಡೆಸಿದರು ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದರು. ಎಸ್.ಎಂ.ಕೃಷ್ಣ …

Read More »

K. I. A. D. B. ಬಹುಕೋಟಿ ವಂಚನೆ ಪ್ರಕರಣ: ED ಅಧಿಕಾರಿಗಳ ದಾಳಿ, ಪರಿಶೀಲನೆ!

ಧಾರವಾಡ ಕೆಐಎಡಿಬಿ ಬಹುಕೋಟಿ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು ಕಡತಗಳನ್ನ ಪರಿಶಿಲನೆ ನಡೆಸುತ್ತಿದ್ದಾರೆ.. ಪಾದಯಾತ್ರೆ ದೇಶದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮಾಡಲಿ: ಸಚಿವ ಕೆ.ಹೆಚ್.ಮುನಿಯಪ್ಪ ಕಿಡಿ! ನಗರದ ಖನಿಜ ಭವನದಲ್ಲಿರುವ ಕೆ ಐ ಎ ಡಿಬಿ ಕಛೇರಿ ಆಗಿದ್ದು ಬೆಂಗಳೂರು ಹಾಗೂ ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ ನಡೆಸಿದ್ದು ಧಾರವಾಡ ಕೆಐಎಡಿಬಿ ಭೂ ಸ್ವಾಧೀನ ಕಚೇರಿ, ಹಾಗೂ ಬೆಂಗಳೂರು ಮುಖ್ಯ ಕಚೇರಿ ಮೇಲೆ‌ …

Read More »

K. I. A. D. B. ಮುಖ್ಯ ಲೆಕ್ಕಾಧಿಕಾರಿ ನಿವಾಸದಲ್ಲಿ ಬರೋಬ್ಬರಿ 1.2 ಕೋಟಿ ಹಣ ಜಪ್ತಿ ಮಾಡಿದ ಇಡಿ..

ಕೆಐಎಡಿಬಿ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ಇಡಿ-ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಮುಖ್ಯ ಲೆಕ್ಕಾಧಿಕಾರಿ ಮನೆಯಿಂದ ಕೋಟ್ಯಂತರ ರೂಪಾಯಿ ನಗದು ಹಣ ಜಪ್ತಿ ಮಾಡಲಾಗಿದೆ… ಕೆಐಎಡಿಬಿ ಮುಖ್ಯ ಲೆಕ್ಕಾಧಿಕಾರಿ ವಾಣಿ ಅವರ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.. ವಾಣಿ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬರೋಬ್ಬರಿ 1.2 ಕೋಟಿ ಹಣ ಜಪ್ತಿ …

Read More »