Breaking News

ಇಸ್ಮಾಯಿಲ್ ತಮಟಗಾರ ಕೊಲೆಗೆ ಸ್ಕೆಚ್ ! ರಾತ್ರೋರಾತ್ರಿ ಠಾಣೆ ಮೆಟ್ಟಿಲೇರಿದ ಕುಟುಂಬ..

ಅಂಜುಮನ್ ಸಂಸ್ಥೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. 10ಕ್ಕೂ ಹೆಚ್ಚು ಜನ ಅಪರಿಚಿತರು ತಮಟಗಾರ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಯುವಕರು ತಮಟಗಾರ ಅವರ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಟಗಾರ ಅವರು ಮನೆಯಲ್ಲಿರದೆ, ಬೆಂಗಳೂರಿನಲ್ಲಿ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇಸ್ಮಾಯಿಲ್ ಅವರ ಮೇಲೆ ಲಂಗೋಟಿ ಜಮಾದಾರ್ ಗಲ್ಲಿ, ಅಂಜುಮನ್ ಹಾಸ್ಟೆಲ್ ಬಳಿ ಹಲ್ಲೆ ನಡೆಸಲು ಈ ಯುವಕರು ಗುಂಪು ತಯಾರಾಗಿತ್ತು. ಇಸ್ಮಾಯಿಲ್ ಅವರ ಊರಲ್ಲಿ ಇಲ್ಲದೇ ಹೋಗಿದ್ದರಿಂದ ಆತಂಕಗೊಂಡಿರುವ ಅವರ ಮನೆಯವರು ಧಾರವಾಡದ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಟಗಾರ ಅವರ ಕುಟುಂಬ ತಮಗೆ ಜೀವ ಭಯವಿದೆ. ರಕ್ಷಣೆ ನೀಡಬೇಕು ಎಂದು ಹಿಂದೆಯೇ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *