Breaking News

Breaking News

ಹುಬ್ಬಳ್ಳಿ: ಕೆರೆಯಲ್ಲಿ ಯುವಕನ ಶವ ಪತ್ತೆ, ಕೊಲೆಯೋ ಅಥವಾ ಆತ್ಮಹತ್ಯೆಯೋ ?

ಹುಬ್ಬಳ್ಳಿ: ತಾಲೂಕಿನ ಗಾಮಣಗಟ್ಟಿ ಗ್ರಾಮದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ, ಮೃತ ಯುವಕನ ಹೆಸರು ಸದ್ದಾಂ ಸವಾಂತನವರ್ ಎಂದು ತಿಳಿದುಬಂದಿದೆ. ಮೃತ ಯುವಕ ಮೂರು ದಿನದಿಂದ ನಾಪತ್ತೆಯಾಗಿದ್ದು ಇವತ್ತು ಶವವಾಗಿ ಪತ್ತಯಾಗಿದ್ದಾನೆ, ಇದು ಆತ್ಮಹತ್ಯೆಯೋ ಅಥವಾ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು ಈ ಸಂಬಂಧ ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಕೋಟ್ಯಾಂತರ ಮೌಲ್ಯದ ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಯತ್ನ: ಐವರು ಆರೋಪಿಗಳನ್ನು ಬಂಧಿಸಿದ ಸಿಐಡಿ..

ಹುಬ್ಬಳ್ಳಿ ಆನೆ ದಂತದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಗಾವಿ ಹಾಗೂ ಮಹಾರಾಷ್ಟ್ರ ಮೂಲದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಸಿ.ಐ.ಡಿ ವಿಶೇಷ ಅರಣ್ಯ ಸಂಚಾರಿ ದಳದ ತಂಡ ಯಶಸ್ವಿಯಾಗಿದೆ. ಕೊಲ್ಲಾಪುರ ಮೂಲದ ಸಾತ್ ಜಮಾದಾರ್ , ವಿಜಯ ಕುಂಬಾರ, ಸಾಗರ ಪುರಾಣಿಕ, ನಿಪ್ಪಾಣಿಯ ವಿನಾಯಕ ಕಾಂಬ್ಳೆ, ದಾನಾಜಿ ಪಾಟೀಲ್ ಬಂಧಿತ ಆರೋಪಿಗಳಾಗಿದ್ದಾರೆ.‌ ಬಂದಿತರಿಂದ ಆನೆ ದಂತದಿಂದ ತಯಾರಿಸಿದ್ದ 384 ಗ್ರಾಂ ತೂಕದ ಅಲಂಕಾರ ಪೆಟ್ಟಿಗೆ, 112 …

Read More »

ಲಕ್ಷಾಂತರ ಮೌಲ್ಯದ ಆನೆ ದಂತ ಕಲಾಕೃತಿ ಮಾರಾಟ ಮಾಡುತ್ತಿದ್ದ ಐವರು ಖದೀಮರು ವಶಕ್ಕೆ:

ಹುಬ್ಬಳ್ಳಿ: ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ವಿಶೇಷ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಐವರು ದಂತ ಚೋರರನ್ನು ವಶಕ್ಕೆ ಪಡೆದಿದ್ದಾರೆ. ಹೌದು..ಎಡಿಜಿಪಿ ಸಿ.ಐ.ಡಿ ಬೆಂಗಳೂರು ಮತ್ತು ಪ್ರಭಾರ ಡಿ.ಐ.ಜಿ.ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರು ಹಾಗೂ ಪೊಲೀಸ್ ಉಪಾಧೀಕ್ಷಕರು ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಅರಣ್ಯ ಇಲಾಖೆಯು ಐವರನ್ನು …

Read More »

ಸತ್ಯಾಗ್ರಹ ನಿರತರಿಗೆ ಸಾಥ್ ನೀಡಿದ ಹೆಚ್.ಡಿ.ಕುಮಾರಸ್ವಾಮಿ

ಧಾರವಾಡ : ಧಾರವಾಡ ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ 16ನೇ ದಿನ ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹಕ್ಕೆ ಮಂಗಳವಾರ ಮಾಜಿ ಸಿ ಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಸಾಥ್ ನೀಡಿದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 15-20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ 358 ನೀರು ಸರಬರಾಜು ನೌಕರರ ಮರು ಸೇರ್ಪಡೆ ಹಾಗೂ ಎಂಟು ತಿಂಗಳ ಸಂಬಳ ಬಿಡುಗಡೆಗೆ ಒತ್ತಾಯಿಸಿ ನಡೆಯುತ್ತಿರುವ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ ಹೆಚ್ ಡಿ …

Read More »

ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಸಿಕ್ಕಿಲ್ಲ ಸೈಕಲ್: ವಿದ್ಯಾರ್ಥಿಗಳ ಆಸೆ ಆಯ್ತು ನಿರಾಸೆ…!

ಹುಬ್ಬಳ್ಳಿ: ಅದು ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟು ಮಾಡಿದ್ದ ಯೋಜನೆ. ಈ ಯೋಜನೆಯಿಂದ ಪ್ರಾಥಮಿಕ ಶಿಕ್ಷಣಕ್ಕೆ ಮೊಟಕುಗೊಳಿಸುತ್ತಿದ್ದವರು ಪ್ರೌಢ ಶಿಕ್ಷಣಕ್ಕೂ ಬಂದಿದ್ದರು. ಈ ಯೋಜನೆ ಲಾಭ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಜೀವನಕ್ಕೆ ಬಹುದೊಡ್ಡ ಆಸರೆಯಾಗಿತ್ತು. ಆದರೆ ಆ ಯೋಜನೆ ಲಾಭ ಮಾತ್ರ ಈಗ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಅಷ್ಟಕ್ಕೂ ಏನಿದು ಯೋಜನೆ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣದ ಮಹತ್ವವನ್ನು ಪರಿಚಯಿಸುವ ಸದುದ್ದೇಶದಿಂದ ಉಚಿತ ಸೈಕಲ್ ವಿತರಣೆ ಮಾಡುತ್ತಿದ್ದ ಸರ್ಕಾರ ಶೈಕ್ಷಣಿಕ ವರ್ಷ …

Read More »

ನೀರಾವರಿ ಹೆಸರಲ್ಲಿ ಬಿಜೆಪಿ ಮಹಾ ವಂಚನೆ, ಕುಮಾರಸ್ವಾಮಿ ಆರೋಪ

ಹುಬ್ಬಳ್ಳಿ ಬ್ರೇಕಿಂಗ್… ‌ಹುಬ್ಬಳ್ಳಿ – ಮಹಾದಾಯಿ ನೀರಿನ ವಿಚಾರದಲ್ಲಿ ಕಾನೂನಾತ್ಮಕ, ತಾಂತ್ರಿಕ ದೋಷ ಸರಿಪಡಿಸಿಕೊಳ್ಳಲು ಹೇಳಿದ್ದೆಆದ್ರೆ ಬಿಜೆಪಿ ನಾಯಕರು ಪ್ರಚಾರ ಆದ್ರೆ ಸಾಕು ಅಂತಾ ಅದನ್ನೇ ಮಾಡ್ತಿದಾರೆ ಎಂದು ಹೇಳಿದ ಎಚ್‌ ಡಿಕೆ. ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ,ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅಂತಾರೆಯಾರಿಂದ ಆಗಿದೆ ಅನ್ಯಾಯ. ನೀರಾವರಿ ಯೋಜನೆ ಹೆಸರಲ್ಲಿ ಈ ಭಾಗದ ನಾಯಕರೇ ದುಡ್ಡು ಹೊಡೆಯೋ ಕೆಲಸ ,ಬಡವರ ಜೊತೆ ರಾಷ್ಟ್ರೀಯ ಪಕ್ಷಗಳ ಚೆಲ್ಲಾಟಮಾಜಿ ಸಿಎಂ ಎಚ್.ಡಿ.ಕೆ …

Read More »

ಅರವಿಂದ ಬೆಲ್ಲದ ವಿರುದ್ಧ ಮನೆ ಹಂಚಿಕೆ ಕುರಿತು ಪಾಲಿಕೆ ಎದುರು ಪ್ರತಿಭಟನೆ

ಹುಬ್ಬಳ್ಳಿ: ಆಶ್ರಯ ಯೋಜನೆಯಲ್ಲಿ ಹಂಚಿಕೆಯಾದಂತಹ ಮೂಲ ಫಲಾನುಭವಿಗಳನ್ನು ಮನೆಗಳನ್ನು ರದ್ದು ಮಾಡಿ, ಶಾಸಕ ಅರವಿಂದ ಬೆಲ್ಲದ ಅವರು ತಮಗೆ ಬೇಕಾದವರಿಗೆ ಮತ್ತು ತಮ್ಮ ಹಿತೈಷಿಗಳಿಗೆ, ತಮ್ಮ ಹಿಂಬಾಲಕರಿಗೆ ಮನೆಗಳನ್ನು ಮರು ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಮಾಡುತ್ತಿರುವುದನ್ನು ವಿರೋಧಿಸಿ ಧಾರವಾಡ ಜಿಲ್ಲಾ ಆಶ್ರಯ ಮನರ ಬಡಾವಣೆಗಳ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದಿಂದ ಇಂದು ಪಾಲಿಕೆ ಎದುರಿಗೆ ಶಾಸಕ ಅರವಿಂದ ಬೆಲ್ಲದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ಮಾಡಿದರು. ಇನ್ನು 300 ಕ್ಕೂ …

Read More »

14ರಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗಮನ, ಪಂಚರತ್ನ ಯಾತ್ರೆ ಮೂಲಕ ಸಂಘಟನಾ ಸಭೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಇದೇ 14ರಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದು, ಅಂದು ವಿವಿಧ ಕಡೆಗಳಲ್ಲಿ ಪಂಚರತ್ನ ಯಾತ್ರೆ ಮೂಲಕ ಸಂಘಟನಾ ಸಭೆ ನಡೆಯಲಿದ್ದಾರೆ ಎಂದು ಜೆಡಿಎಸ್ ಧಾರವಾಡ ಜಿಲ್ಲೆಯ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದಜೆಡಿಎಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಿ.ಬಿ.ಗಂಗಾಧರ ಮಠ ಹಾಗೂ ಗುರುರಾಜ ಹುಣಸಿಮರದ, …

Read More »

ಐತಿಹಾಸಿಕ ಗರಗ ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

ಧಾರವಾಡ ತಾಲೂಕಿನ ಐತಿಹಾಸಿಕ ಗರಗ ಮಡಿವಾಳೇಶ್ವರ ಕಲ್ಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮೀಜಿ ಇಂದು ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗಳಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಸ್ವಾಮೀಜಿಗಳು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪೂಜ್ಯರ ಅಂತ್ಯಕ್ರಿಯೆ ನಾಳೆ ಸೋಮವಾರ ಬೆಳಿಗ್ಗೆ 12 ಗಂಟೆಗೆ ಗರಗ ಗ್ರಾಮದ ಶ್ರೀಮಠದ ಆವರಣದಲ್ಲಿ ನಡೆಯಲಿದೆ. ಈ ಅಂತ್ಯಕ್ರಿಯೆಗೆ ನಾಡಿನ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಕಲ್ಮಠದ ಜವಾಬ್ದಾರಿ ಹೊತ್ತುಕೊಂಡಿದ್ದ ಚನ್ನಬಸವ ಸ್ವಾಮೀಜಿ ಮಠದ ಏಳೆಗಾಗಿ ಹಗಲಿರುಳು …

Read More »

57 ಕೇಸ್‌ಗೆ 14,250 ರೂ.ದಂಡ ಪಾವತಿ ಮಾಡಿದ ದ್ವಿಚಕ್ರ ವಾಹನ ಸವಾರ….

ಹುಬ್ಬಳ್ಳಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ವಾಹನ ಚಾಲಕರು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದಂತ ಇ- ಚಲನ್ ಮೇಲೆ ನೀಡಿದ 50% ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡೆಸುಕೊಳ್ಳುತ್ತಿದ್ದು, ವಾಹನ ಸವಾರನೊಬ್ಬ ಸ್ವ ಇಚ್ಛೆಯಿಂದ ಬಂದು 57 ಕೇಸ್ ಗೆ ದಂಡವನ್ನು ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ದಂಡ ಪಾವತಿ ಮಾಡಿದ್ದಾನೆ.ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಸಾರ್ವಜನಿಕರ ದಂಡ ಪಾವತಿಗೆ 50% ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಿವಾಸಿ ಸೂರಜ್ …

Read More »