Breaking News

Breaking News

ಶ್ರೀಕ್ಷೇತ್ರ ಯಲ್ಲಮ್ಮನ‌ ದರ್ಶನ ಪಡೆದ ಸಿಎಂ

ಉಗರಗೋಳ(ಬೆಳಗಾವಿ ಜಿಲ್ಲೆ): ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡಿ, ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. ಮುಂಬರುವ ದಿನಗಳಲ್ಲಿ ಯಲ್ಲಮ್ಮನಗುಡ್ಡಕ್ಕೆ ಅಗತ್ಯ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಯಲ್ಲಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗ್ಯಾಳ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್‌ ಜಿ.ಬಿ.ಜಕ್ಕನಗೌಡ್ರ, …

Read More »

ಜ. 8ರಂದು ಗವಿಸಿದ್ದೇಶ್ವರ ಮಠದ ಮಹಾರಥೋತ್ಸವ

ಕೊಪ್ಪಳ: ಮುಂದಿನ ತಿಂಗಳು 8ರಂದು ಇಲ್ಲಿ ನಡೆಯಲಿರುವ ಪ್ರಸಿದ್ಧ ಗವಿಸಿದ್ದೇಶ್ವರ ಮಠದ ಮಹಾರಥೋತ್ಸವವನ್ನು ಈಶಾ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಉದ್ಘಾಟನೆ ಮಾಡುವುದು ಖಚಿತವಾಗಿದೆ. ವಾಸುದೇವ್‌ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಶುಕ್ರವಾರ ಮಠವೇ ಈ ಕುರಿತು ಪ್ರಕಟಣೆ ನೀಡಿದೆ. ಜಗ್ಗಿ ವಾಸುದೇವ್‌ 8ರಂದು ಸಂಜೆ 5.30ಕ್ಕೆ ಮಹಾರಥೋತ್ಸವಕ್ಕೆ ಚಾಲನೆ ನೀಡುವರು. ನಂತರ ಕೈಲಾಸ ಮಂಟಪದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಲಿದ್ದಾರೆ. …

Read More »

ರಾಜ್ಯದಲ್ಲಿ ಕೋವಿಡ್‌ ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ:
ಡಾ.ಸುಧಾಕರ್​

ದೇವನಹಳ್ಳಿ: ಕೇಂದ್ರ ಸರ್ಕಾರದ ಸಲಹೆ, ಸೂಚನೆಗಳ ಮೇರೆಗೆ ರಾಜ್ಯದಲ್ಲಿ ಕೋವಿಡ್‌ ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಡಾ.ಸುಧಾಕರ್​ ತಿಳಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಜನಜಂಗುಳಿ ಇರುವ ಸ್ಥಳಗಳು, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು, ಬೂಸ್ಟರ್‌ ಡೋಸ್ ತೆಗೆದುಕೊಂಡು ಸುರಕ್ಷಿತವಾಗಿರಬೇಕು. ಸಾರಿ (ಸೀವಿಯರ್‌ ಅಕ್ಯೂಟ್ ರೆಸ್ಪಿರೇಟರಿ ಇನ್ಫೆಕ್ಷನ್) ಲಕ್ಷಣಗಳಿದ್ದರೆ ಅಥವಾ ಶ್ವಾಸಕೋಶದ ಸಮಸ್ಯೆ, ಜ್ವರ ಇದ್ದರೆ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದರು. ಸರ್ಕಾರ ಜನಪರ ಕ್ರಮಗಳನ್ನು …

Read More »

ಡಿ.27ರಂದು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ : ಡಾ.ಕೆ.ಸುಧಾಕರ್‌

ಬೆಂಗಳೂರು : ಕೊರೋನಾ ಸೋಂಕು ಚಿಕಿತ್ಸಾ ವ್ಯವಸ್ಥೆಗಳ ಸುಸ್ಥಿತಿಯನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಡಿ.27ರಂದು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು (ಮಾಕ್‌ಡ್ರಿಲ್‌) ಕಾರ್ಯಾಚರಣೆ ನಡೆಸಲಾಗುವುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಕೇಂದ್ರ ಆರೋಗ್ಯ ಸಚಿವರ ವಿಡಿಯೋ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ‘ಒಂದು ವೇಳೆ ಸೋಂಕು ಹೆಚ್ಚಳವಾದರೆ ಚಿಕಿತ್ಸೆಗೆ ಎಲ್ಲಾ ತಯಾರಿ ಹೊಂದಿರಬೇಕು ಎಂದು ಕೇಂದ್ರ …

Read More »

ಧಾರ್ಮಿಕ ಸ್ಥಳಗಳನ್ನು ತೆರವು ಮಾಡುತ್ತಿರುವುದು ನೋವಿನ ಸಂಗತಿ-ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ನಾಗರಿಕತೆ ಬೆಳೆಯುತ್ತಿದೆ. ಅವಶ್ಯಕತೆಯು ಹೆಚ್ಚಿದೆ. ಅಲ್ಲದೇ ರಸ್ತೆಗಳ ವಿಸ್ತೀರ್ಣವು ಹೆಚ್ಚಾಗುತ್ತಿರುವ ಕಾರಣ ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಇದೇ ರಸ್ತೆಯಲ್ಲಿಯೇ 13 ಧಾರ್ಮಿಕ ಸ್ಥಳಗಳನ್ನು ತೆರವು ಮಾಡಲಾಗಿದೆ. ದೇಗುಲಗಳನ್ನು ಹಾಗೂ ಮಸೀದಿ ಮತ್ತು ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಭೈರಿದೇವರಕೊಪ್ಪದ ದರ್ಗಾಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, …

Read More »

ಕುಂದಗೋಳ ಗ್ರಾಮಕ್ಕೆ ಸಿದ್ದರಾಮಯ್ಯ ಭೇಟಿ

ಧಾರವಾಡ : ತಾಲೂಕಿನ ಕುಂದಗೋಳ ಗ್ರಾಮಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ದಾಸ ಶ್ರೇಷ್ಠ ಕನಕ ದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಸಂಶಿ ಗ್ರಾಮದಲ್ಲಿರುವ ಶ್ರೀ ಕರಿ ಸಿದ್ದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಶಾಸಕರಾದ ಕುಸುಮಾ ಶಿವಳ್ಳಿ, ಮಾಜಿ ಶಾಸಕ ಕೋನರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪಾಟೀಲ್ ಹಾಜರಿದ್ದರು.

Read More »

ಹುಬ್ಬಳ್ಳಿ ಜೆ . ಜಿ ಕಾಲೇಜಿನ 1989 ರ   ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ     

ಹುಬ್ಬಳ್ಳಿ :  ನಗರದ ಜೆ.ಜಿ ಕಾಲೇಜ್ ಆಫ್ ಕಾಮರ್ಸ್ ನಲ್ಲಿ 34 ವರ್ಷಗಳ    ಹಿಂದೆ  ವ್ಯಾಸಂಗ ಪೂಣ೯ಗೊಳಸಿದ ವಿದ್ಯಾರ್ಥಿ ಸ್ನೇಹ ಸಮ್ಮೇಳನ ಇತ್ತೀಚಿಗೆ ಜರುಗಿತು, ದೇಶ ವಿದೇಶಗಳಿಂದ 81 ಜನ ಸ್ನೇಹಿತರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು . ಜಿ.ಜಿ ಕಾಲೇಜಿನ ಪ್ರಾಂಶುಪಾಲರಾದ  ಎಸ್.ಎಲ್.ಪಾಟೀಲ್ ಹಾಗೂ  ಡಾ. ವಿಶ್ವನಾಥ್. ಕೊರವಿ  ಅವರು ಬಂದಂತಹ ಸ್ನೇಹಿತರಿಗೆ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಹಳೆ ನೆನಪುಗಳನ್ನು ಕಳೆದರು. ‌ ನವೀನ್ ಹೋಟೆಲಿನಲ್ಲಿ ಗುರುಗಳ ಸನ್ಮಾನವನ್ನು …

Read More »

ಅಗ್ನೀಪಥ ಯೋಜನೆಯಲ್ಲಿ 4 ಯುವಕರು, ಒಬ್ಬರು CISFಗೆ ಆಯ್ಕೆ : ವಿಶೇಷ ಗೌರವ ಸಲ್ಲಿಕೆ

ಧಾರವಾಡ: ಯಾದವಾಡ ಗ್ರಾಮ ಪಂಚಾಯತಿಯಿಂದ ಸೈನ್ಯಕ್ಕೆ ಆಯ್ಕೆಯಾದ ಊರಿನ ಹೆಮ್ಮೆಯ ಯುವಕರಿಗೆ ಪಂಚಾಯತ್ ಕಾಯಾ೯ಲಯದ ಆವರಣದಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಮೆಹಬೂಬಸುಬಾನಿ ಮುಜಾವರ , ಕಾಸೀಮ ಕುತುಬುದ್ದೀನ ಭಾವಿಮನಿ‌, ರಾಘವೇಂದ್ರ ಯಲಿಗಾರ , ಮೃತ್ಯುಂಜಯ ಕುಸುಗಲ್ ಆರ್ಮಿಗೆ ಆಯ್ಕೆಯಾಗಿದ್ದಾರೆ. ಸಚಿನ ಕುಸುಗಲ್ ಎಂಜಿನೀಯರಿಂಗ್ ( CISF) ಈಗಾಗಲೇ ಹುದ್ದೆಗೆ ಸೇರ್ಪಡೆಯಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಅವರ ಪೋಷಕರು ಸನ್ಮಾನ ಸ್ವೀಕರಿಸಿದರು. ಅಂಗನವಾಡಿ ಕಾರ್ಯರ್ತೆಯಾಗಿ ಸೇವಾ ನಿವೃತ್ತಿ ಹೊಂದಿದ ಯಾದವಾಡ ಗ್ರಾಮದವರೇ ಆದ …

Read More »


ಕೇಂದ್ರದ ಮಾಜಿ ಸಚಿವಗೆ ಇಡಿ ಶಾಕ್

ಕೇಂದ್ರದ ಮಾಜಿ ಸಚಿವ, ಡಿಎಂಕೆ ಸಂಸದ ಎ. ರಾಜಾ ಅವರಿಗೆ ಸಂಬಂಧಿಸಿದ 45 ಎಕರೆ ಭೂಮಿಯನ್ನು ಇಡಿ ಜಪ್ತಿ ಮಾಡಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೇಂದ್ರದ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಅವರ ಬೇನಾಮಿ ಕಂಪನಿಯ ಹೆಸರಿನಲ್ಲಿದೆ ಎಂದು ಹೇಳಲಾದ ಸುಮಾರು 55 ಕೋಟಿ ರೂ. ಮೌಲ್ಯದ 45 ಎಕರೆ ಭೂಮಿಯನ್ನು ಜಾರಿ ನಿರ್ದೇಶನಾಲಯವು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. 2004 ರಿಂದ 2007 ರವರೆಗೆ ಕೇಂದ್ರ ಪರಿಸರ ಮತ್ತು ಅರಣ್ಯ …

Read More »

ಮದುವೆಯಾದ 7 ತಿಂಗಳಿಗೆ ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ

ಹಾಸನ : ಮದುವೆಯಾದ 7 ತಿಂಗಳಿಗೆ ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ವರದಿಯಾಗಿದೆ. ಮೃತ ಯುವತಿಯನ್ನು ರೋಹಿಣಿ (23) ಎಂದು ಗುರುತಿಸಲಾಗಿದೆ.7 ತಿಂಗಳ ಹಿಂದೆ ಸುಮಂತ್ ಎಂಬಾತನ ಜೊತೆ ರೋಹಿಣಿ ಮದುವೆಯಾಗಿತ್ತು. 3 ತಿಂಗಳ ಗರ್ಭಿಣಿಯಾಗಿದ್ದ ಈಕೆ ಕೆರೆ ಸಮೀಪ ಬಂದು ಅಲ್ಲಿಯೇ ಬಟ್ಟೆ ಒಗೆಯುತ್ತಿದ್ದ ಮಹಿಳೆಯರ ಜೊತೆ ಕೆಲಕಾಲ ಮಾತನಾಡಿ, ಸಂಬಂಧಿಕರ ಮನೆಗೆ ಬಂದಿದ್ದೀನಿ ಎಂದು ಮಹಿಳೆಯರಿಗೆ ಹೇಳಿದ್ದಳು. ಇತ್ತ ಮಹಿಳೆಯರು ಬಟ್ಟೆ ಒಗೆದು …

Read More »