BigTv News
October 9, 2022
Breaking News
ಗುಜರಾತ್ : ಕನ್ನಡ ಭಾಷೆ ಸಂಸ್ಕೃತಿಯನ್ನು ಭಾರತದಾತ್ಯಂತ ಗೌರವಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗುಜರಾತ್ ನ ಅಹ್ಮದಾಬಾದ್ ನಲ್ಲಿ ಕನ್ನಡ ಸಂಘದ 75 ವಾರ್ಷಿಕೋತ್ಸವದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಿದ್ದ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂಭ್ರಮದಲ್ಲಿದೆ. ಗುಜರಾತ್ ಅಹಮದಾಬಾದ್ ಕನ್ನಡ ಸಂಘ 75 ನೇ ವರ್ಷದ ಸಂಭ್ರಮದಲ್ಲಿದೆ. ಅಂದಿನ ದಿನಗಳಲ್ಲಿಯೇ ಗುಜರಾತ್ ನಲ್ಲಿ ಕನ್ನಡಿಗರು ಬೆರೆತು ವ್ಯಾಪಾರ ವಹಿವಾಟು …
Read More »
BigTv News
October 9, 2022
Breaking News, ಬೆಂಗಳೂರು
ಬೆಂಗಳೂರು: ಸ್ಥಳೀಯರು ಅಥವಾ ಶೃಂಗೇರಿ ಮಠದ ಧರ್ಮದರ್ಶಿಗಳಿಂದ ಕೋರಿಕೆ ಬಂದರೆ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ನಡೆಯುತ್ತಿರುವ ಟಿಪ್ಪು ಸುಲ್ತಾನ್ ಸಲಾಂ ಆರತಿ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶೃಂಗೇರಿಯಲ್ಲಿ ಸಲಾಂ ಆರತಿ ನಿಲ್ಲಿಸುವಂತೆ ಈವರೆಗೆ ಯಾವುದೇ ಮನವಿ ಬಂದಿಲ್ಲ. ಅಂತಹ ಬೇಡಿಕೆ ಬಂದರೆ ಸಲಾಂ ಆರತಿ ನಿಲ್ಲಿಸುತ್ತೇವೆ’ ಎಂದರು. ‘ಟಿಪ್ಪು ಸುಲ್ತಾನ್ ಕನ್ನಡಿಗನಲ್ಲ. ಆತನ ಆಡಳಿತದ ಅವಧಿಯಲ್ಲಿ …
Read More »
BigTv News
October 7, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ದನ ಸಾಗಾಟದ ಬಾಡಿಗೆ ವಿಚಾರಕ್ಕೆ ಗೆಳೆಯರ ನಡುವೆ ಕಲಹ ಏರ್ಪಟ್ಟು ಸಹೋದರರಿಬ್ಬರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ . ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯ ಹಸೈ ಮಲಾದಲ್ಲಿ ದನ ಸಾಗಾಟದ ಬಾಡಿಗೆ ವಿಚಾರಕ್ಕೇ ಗೆಳೆಯರ ನಡುವೆ ಮಾತಿಗೆ ಮಾತು ಬೆಳೆದು ಬೇಪಾರಿ ಸಹೋದರರ ಮೇಲೆ ಆವೇಜ್ ಹಾಗೂ ಉವೇಜ್ …
Read More »
BigTv News
October 7, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮಳೆಯ ಅಬ್ಬರಕ್ಕೆ ಅರ್ಧ ಬಸ್ ಸಂಪೂರ್ಣವಾಗಿ ಜಲಾವೃತವಾದ ಘಟನೆ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದ ಕಡೆ ನಡೆದಿದ್ದು, ಬಸ್ ನೀರಿನಲ್ಲಿ ಸಿಲುಕಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ಅಣ್ಣಿಗೇರಿ ಬಳಿಯ ಸಾಸ್ವಿಹಳ್ಳಿ ಹತ್ತಿರದ ಬಸ್ ಕಷ್ಟಕ್ಕೆ ಸಿಲುಕಿಗೊಂಡಿದೆ. ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಸಂಕಷ್ಟಕ್ಕೆ ಸಿಲುಕಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರಿಂದ ಬಸ್ ನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ. ಟ್ರ್ಯಾಕ್ಟರ್ ಮೂಲಕ ಬಸ್ ಎಳೆದು ಸ್ಥಳೀಯರು ಎಲ್ಲರನ್ನ ಸುರಕ್ಷಿತವಾಗಿಸಿದ್ದಾರೆ.
Read More »
BigTv News
October 7, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಿನೆ ಸುರಿದ ಧಾರಕಾರ ಮಳೆಯಿಂದಾಗಿ, ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದಲ್ಲಿ ಮನೆಗಳಿಗೆ ನುರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ಸುರಿದ ಮಳೆಯಿಂದ ಬೆಣ್ಣೆಹಳ್ಳ ಮತ್ತು ಗ್ರಾಮದ ಕೆರೆ ತುಂಬಿ ಗ್ರಾಮಕ್ಕೆ ನೀರು ನುಗ್ಗಿದೆ. ಅಂಬೇಡ್ಕರ್ ನಗರದ ನೂರಾರು ಮನೆಗೆ ನೀರು ನುಗ್ಗಿದ ಪರಿಣಾಮ ಗ್ರಾಮ ಸಂಪೂರ್ಣ ಜಲಾವ್ರತವಾಗಿದೆ. ಬಸವರಾಜ ಸುಂಕದ ಎಂಬುವರ ಮನೆಗೆ ನೀರು ನುಗ್ಗಿ ಮನೆ ಕುಸಿದಿದೆ. ಸುರಕ್ಷಿತೆ ದೃಷ್ಟಿಯಿಂದ ಜಾನುವಾರು ಬಸ್ ನಿಲ್ದಾಣದಲ್ಲಿ ಕಟ್ಟಿದ್ದು, ನಿಲ್ದಾಣವೂ …
Read More »
BigTv News
October 7, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮರ್ಡರ್ ಮಿಸ್ಟ್ರಿಯ ಕಥಾ ಹಂದರ ಹೊಂದಿರುವ 3.0 ಸಿನಿಮಾ ಅಕ್ಟೋಬರ್ ೧೪ ರಂದು ರಾಜ್ಯಾದ್ಯಂತ ಬೆಳ್ಳಿ ತೆರೆಗೆ ಬರಲಿದೆ ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3.0 ಚಲನಚಿತ್ರವು ಮೂವರು ಯುವಕರು ಹಾಗೂ ಯುವತಿಯೋರ್ವಳ ಸುತ್ತ ನಡೆಯುವ ಕ್ರೈಂ, ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಒಂದು ಹಾಡು ಒಳಗೊಂಡಿದೆ ಎಂದರು. ಶಶಿಕಿರಣ್, ಶಿವರಾಜ್ ಹಾಗೂ ಲೋಹಿತ್ ಈ ಚಿತ್ರದ …
Read More »
BigTv News
October 7, 2022
Breaking News
ಹುಣಸೂರು: ರಾಗಿ ಹೊಲದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ವೇಳೆ ಹಾವು ಕಚ್ಚಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಉದ್ದೂರು ಗ್ರಾಮದಲ್ಲಿ ನಡೆದಿದೆ. ಉದ್ದೂರು ಗ್ರಾಮದ ಲೇ.ಚಿಕ್ಕೇಗೌಡರ ಪುತ್ರ ನಂಜುಂಡೇಗೌಡ(56) ಮೃತ ರೈತ. ಇವರಿಗೆ ಇಬ್ಬರು ಪತ್ನಿಯರು, ಮೂವರು ಮಕ್ಕಳಿದ್ದಾರೆ. ಇವರು ತಮ್ಮ ಜಮೀನಿನಲ್ಲಿ ಬುಧವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಹಾವು ಕಚ್ಚಿದೆ. ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ …
Read More »
BigTv News
October 7, 2022
Breaking News, ಬೆಂಗಳೂರು
ಬೆಂಗಳೂರು: ಪಕ್ಷದ ಬಲವರ್ಧನೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಅ.11ರಿಂದ ಒಂದು ತಿಂಗಳ ಕಾಲ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಅಭಿಯಾನಕ್ಕೂ ಮುನ್ನವೇ ರಾಜ್ಯದಲ್ಲಿ ಬಿಜೆಪಿ ಆರು ರ‍್ಯಾಲಿಗಳನ್ನು ಆಯೋಜಿಸಲು ನಿರ್ಧರಿಸಿತ್ತು. ಆದರೆ ದಸರಾ ಹಾಗೂ ವಿಧಾನಸಭಾ ಅಧಿವೇಶನಗಳ ಹಿನ್ನೆಲೆಯಲ್ಲಿ ರ‍್ಯಾಲಿಗಳನ್ನು ನಡೆಸುವುದು ವಿಳಂಬವಾಯಿತು ಎಂದರು. …
Read More »
BigTv News
October 7, 2022
Breaking News, ಜಿಲ್ಲೆ, ಹಾಸನ
ಹಾಸನ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಈ ಯಾತ್ರೆಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಹೋದರ ಸುರೇಶ್ ಗೆ ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಏಳು ಗಂಟೆಯಿಂದ ನಾಗಮಂಗಲದ ಮಲ್ಲೇನಹಳ್ಳಿಯಿಂದ ಯಾತ್ರೆ ಆರಂಭವಾಗಲಿದೆ. ನಾಗಮಂಗಲ ತಾಲೂಕಿನ ಅಂಚೆ ಚಿತ್ತನಹಳ್ಳಿ ಬಳಿಯಿರುವ ಮೈದಾನದವರೆಗೂ ಸಾಗಿ ಹನ್ನೊಂದು ಗಂಟೆಗೆ ಲಂಚ್ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಮತ್ತೆ ನಾಲ್ಕು ಗಂಟೆಗೆ ಯಾತ್ರೆ ಆರಂಭಗೊಳ್ಳಲಿದೆ ಬೆಳ್ಳೂರು ಬಸ್ ಸ್ಟಾಪ್ …
Read More »
BigTv News
October 7, 2022
Breaking News, ಬೆಂಗಳೂರು
ಬೆಂಗಳೂರು: 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಕೆ.ಆರ್.ಪುರ ಸಂಚಾರ ಠಾಣೆ ಪಿಎಸ್‌ಐ ಸುಬ್ರಮಣಿ (35) ಅವರನ್ನು ಸಿಐಡಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಎಡಿಜಿಪಿ ಅಮ್ರಿತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ 60ಕ್ಕೂ ಹೆಚ್ಚು ಆರೋಪಿಗಳನ್ನು ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದೆ. ‘ಪಿಎಸ್‌ಐ ಅಕ್ರಮ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸುಬ್ರಮಣಿ ತಲೆಮರೆಸಿಕೊಂಡಿದ್ದ. ಬೆಂಗಳೂರಿನಲ್ಲಿ ಗುರುವಾರ ಈತನನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ …
Read More »