Breaking News

Breaking News

ಅತೀ ಹೆಚ್ಚು ಜನ ವಿಕ್ಷೀಸಿದ ರಾಣಿ ಎಲಿಜಬೆತ್ ಅಂತ್ಯಕ್ರಿಯೆಯ ಪ್ರಸಾರ

ವಯೋ ಸಹಜ ಕಾಯಿಲೆಯಲ್ಲಿ ಬಳಲುತ್ತಿದ್ದ ಬ್ರಿಟನ್ ಇತಿಹಾಸದಲ್ಲೇ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ನಡೆಸಿದ ರಾಣಿ ಎಂದೇ ಖ್ಯಾತಿ ಘಳಿಸಿದ ರಾಣಿ ಎಲಿಜಬೆತ್ II ನಿಧನರಾಗಿದ್ದಾರೆ. ರಾಣಿ ಎಲಿಜಬೆತ್ ಅಂತ್ಯಕ್ರಿಯೆಯ ಪ್ರಸಾರವನ್ನು ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಮಂದಿ ನೋಡಿದ್ದಾರೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 19ರಂದು ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆ ನಡೆದಿದ್ದು, ಅಂತ್ಯಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗಿತ್ತು. ಅಂದಾಜಿನ ಪ್ರಕಾರ ಸುಮಾರು 420 ಕೋಟಿ ಜನರು ಅಂತ್ಯಕ್ರಿಯೆ ವೀಕ್ಷಿಸಿದ್ದಾರೆ ಎಂದು …

Read More »

ಪಿಎಸ್‌ಐ ಅಕ್ರಮದಲ್ಲಿ ಪಾಲ್ಗೊಂಡಿರೋ ರಾಜಕಾರಣಿಗಳ ಬಂಧಿಸಿ

ಬೆಂಗಳೂರು : ನಿರೀಕ್ಷೆಯಂತೆ ಸದನದಲ್ಲಿ ಪಿಎಸ್‌ಐ ನೇಮಕಾತಿ ಹಗರಣ ಪ್ರತಿಧ್ವನಿಸಿದೆ. ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ಮುಗಿಬಿದ್ರು. ಪ್ರಕರಣದಲ್ಲಿ ಪಾಲ್ಗೊಂಡಿರೋ ರಾಜಕಾರಣಿಗಳ ಬಂಧನಕ್ಕೆ ಒತ್ತಾಯಿಸಿದ್ರು. ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಿದರು. ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಜೋರು ವಾಗ್ಯುದ್ಧ ನಡೆಯಿತು. ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ರು. ಉದ್ಯೋಗಾಂಕ್ಷಿಗಳು ನೀಡಿದ್ದ ಅಕ್ಕಿ, ಬೇಳೆಯ ಗಂಟನ್ನು ಸಿದ್ದರಾಮಯ್ಯ ತೋರಿಸಿದ್ದಕ್ಕೆ ಇದೆಲ್ಲಾ ಇವೆಂಟ್ ಮ್ಯಾನೇಜ್ಮೆಂಟ್ ಎಂದು …

Read More »

ಜಿಮ್ ಗಳಲ್ಲಿ ಪ್ರೋಟೀನ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ : ಸುಧಾಕರ್

ಬೆಂಗಳೂರು : ರಾಜ್ಯದ ಕೆಲ ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಮಾರಾಟ ಮಾಡಲಾಗುತ್ತಿದ್ದು, ಪ್ರೋಟೀನ್ ಪೌಡರ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ಹಲವು ಜಿಮ್​ನಲ್ಲಿ ಬಳಸುವ ಪ್ರೋಟೀನ್​ ಪೌಡರ್ ಅನ್ನು ಬ್ಯಾನ್‌ ಮಾಡುವಂತೆ ಸದನದಲ್ಲಿ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್​ ರೆಡ್ಡಿ ಜಿಮ್​ಗಳಲ್ಲಿ ಬಳಕೆ ಮಾಡುವ ಪ್ರೋಟೀನ್ ಪೌಡರ್‌ಗಳ ಬಗ್ಗೆ ಸದನದ ಗಮನ ಸೆಳೆದು ತಮ್ಮ ಸಂತೋಷ್ …

Read More »

ಕಾರ್ಮಿಕರ ಕಲ್ಯಾಣ ನಮ್ಮ ಮೊದಲ ಆದ್ಯತೆ : ಬೊಮ್ಮಾಯಿ

ಬೆಂಗಳೂರು: ಕಾರ್ಮಿಕರ ಕಲ್ಯಾಣ ನಮ್ಮ ಮೊದಲ ಆದ್ಯತೆ. ಕಾರ್ಮಿಕರ ಏಳಿಗೆಗೆ ಬೇಕಾಗುವ ಎಲ್ಲ ಯೊಜನೆಗಳನ್ನು ನಾವು ಜಾರಿಗೆ ತರುತ್ತೇವೆ. ಅವರ ಶ್ರಮಕ್ಕೆ ಬೆಲೆ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಕಾರ್ಮಿಕ ಇಲಾಖೆಯ ವತಿಯಿಂದ ವಿಧಾನಸೌಧದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನೂತನ ತಂತ್ರಾಂಶ ಉದ್ಘಾಟನೆ ಹಾಗೂ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ …

Read More »

ಮುಸ್ಲಿಂ ಉದ್ಯಮಿಯಿಂದ ತಿರುಪತಿಗೆ ₹1.02 ಕೋಟಿ ದೇಣಿಗೆ

ಹೈದರಾಬಾದ್‌: ತಿರುಪತಿ ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿರುವ ಚೆನ್ನೈನ ಉದ್ಯಮಿ ಅಬ್ದುಲ್‌ ಘನಿ ಎಂಬುವವರು ದೇವಸ್ಥಾನಕ್ಕೆ  ₹1.02 ಕೋಟಿ ದೇಣಿಗೆ ನೀಡಿದ್ದಾರೆ. ಪತ್ನಿ ಸುಬೀನಾ ಬಾನು ಮತ್ತು ಮಕ್ಕಳೊಂದಿಗೆ ಮಂಗಳವಾರ ದೇವರ ದರ್ಶನ ಪಡೆದ ಘನಿ ಅವರು ತಿರುಪತಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಪೀಠೋಪಕರಣ ಹಾಗೂ ಪಾತ್ರೆಗಳನ್ನು ಖರೀದಿಸಲು ₹87 ಲಕ್ಷ ಹಾಗೂ ಎಸ್‌.ವಿ.ಅನ್ನಪ್ರಸಾದಂ ಟ್ರಸ್ಟ್‌ಗೆ ₹15 ಲಕ್ಷ ಒದಗಿಸಿದರು.

Read More »

ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ ಹೊರಟ್ಟಿ

ಈ ಹಿಂದೆ ನಡೆದ ಮಾತುಕತೆಯಂತೆ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವ ಸಲುವಾಗಿ ಸೆಪ್ಟೆಂಬರ್ 21ರಂದು ಚುನಾವಣೆ ನಡೆಸಲು ಕೋರಿ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಇದರ ಮಧ್ಯೆ ಸಭೆ ನಡೆಸಿದ್ದ ಬಿಜೆಪಿಯ ಕೆಲವು ಹಿರಿಯ ಶಾಸಕರು, ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದಿರುವ ಬಸವರಾಜ್ ಹೊರಟ್ಟಿಯವರಿಗೆ ಆ ಸ್ಥಾನ ನೀಡುವುದು ಬೇಡ. ಪಕ್ಷದ ನಿಷ್ಠಾವಂತರನ್ನು ಪರಿಗಣಿಸಿ ಎಂದು ಆಗ್ರಹಿಸಿದ್ದರು. ಹೀಗಾಗಿ ಸಭಾಪತಿ ಚುನಾವಣೆ ನಡೆಸುವ ಪ್ರಸ್ತಾವದಿಂದ ಸರ್ಕಾರ …

Read More »

ವಿಚಾರಣೆ ವೇಳೆ ಡಿಕೆಶಿ ಆರೋಗ್ಯದಲ್ಲಿ ದಿಢೀರ್‌ ಏರುಪೇರು

ಬೆಂಗಳೂರು : ಹಣ ವರ್ಗವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನವದೆಹಲಿಯಲ್ಲಿರುವ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು. ಈ ಸಂದರ್ಭದಲ್ಲಿ ಡಿಕೆಶಿ ಆರೋಗ್ಯದಲ್ಲಿ ದಿಢೀರ್‌ ಏರುಪೇರಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜ್ವರ ಹೆಚ್ಚಾಗಿರುವುದರಿಂದ ದೆಹಲಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಡಿ ಡ್ರಿಲ್‌ ಆಗಮಿಸಿದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ. ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ವೇಳೆ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು 36 …

Read More »

ಹುಡುಗಿಯ ವಿಚಾರಕ್ಕೆ ಏರಡು ಗುಂಪಿನ ನಡುವೆ ಮಾರಾ ಮಾರಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರಿಮಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗತ್ತಲೇ ಇದೆ, ಈ ರೌಡಿಗಳಿಗೆ ಪೊಲೀಸರ ಭಯ ಅಂತೂ ಇಲ್ಲವೆಯಿಲ್ಲ. ಹಾಡು ಹಗಲೇ ಈ ಕ್ರಿಮಿ ರೌಡಿಗಳು ಗುಂಪು ಕಟ್ಟಿಕೊಂಡು ಬೇರೆ ಗುಂಪಿನ ಜೊತೆ ಹೊಡೆದಾಡಿಕೊಂಡ ಘಟನೆ ಹುಬ್ಬಳ್ಳಿಯ ದೇವಾಂಗಪೇಟೆಯೆಲ್ಲಿ ನಡೆದಿದೆ. ಒಂದು ಹುಡುಗಿಯ ವಿಚಾರವಾಗಿ ಏರೆಡು ಗುಂಪಿನ ನಡುವೆ ಮಾರಾ ಮಾರಿ ಆಗಿದೆ. ದಿನಾಂಕ:18/09/2022 ಸುಮಾರಿಗೆ ಸೂರಜ್ ಅನ್ನೋ ಹುಡುಗನಿಗೆ ಕಾರ್ತಿಕ ಕಾಶಿ ಅನ್ನೋ ಹುಡುಗ …

Read More »

ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅನಾರೋಗ್ಯದಿಂದ ನಿಧನ

ಮಂಗಳೂರು : ಗರೋಡಿ ಬಳಿಯ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅನಾರೋಗ್ಯದಿಂದ ಸೋಮವಾರ ಸಂಜೆ ನಿಧನಹೊಂದಿದ್ದಾರೆ. ಶ್ರಿ ದುರ್ಗಾ ಸದನ್ ಸೌಜನ್ಯ ಲೇನ್ ಬಿಕರ್ನಕಟ್ಟೆ ನಿವಾಸಿಯಾದ ಜಯಂತ್ ಕುಮಾರ್ ಅವರು ಕಂಕನಾಡಿಯ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ನಾಲ್ಕು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತ್ ಕುಮಾರ್ ಅವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಸೋಮವಾರ …

Read More »

300 ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ : ಬಿ.ಸಿ ನಾಗೇಶ್‌

ಬೆಂಗಳೂರು: ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 200 ದೈಹಿಕ ಶಿಕ್ಷಕರು ಹಾಗೂ 100 ವಿವಿಧ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತಿಳಿಸಿದರು. ಸೋಮವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಹೇಮಲತಾ ನಾಯಕ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಒಂದೂವರೆ ದಶಕದಿಂದ 2 ಸಾವಿರಕ್ಕೂ ಹೆಚ್ಚು ದೈಹಿಕ ಮತ್ತು ಚಿತ್ರಕಲಾ ಶಿಕ್ಷಕರ ಹುದ್ದೆಗಳ ಖಾಲಿ ಇವೆ.ಇದುವರೆಗೆ ಯಾವುದೇ ಶಿಕ್ಷಕರ ನೇಮಕಾತಿ ಆಗಿಲ್ಲ. ಒಟ್ಟು 2120 …

Read More »