Breaking News

Breaking News

ಸಾರ್ವಜನಿಕ ಉದ್ದಿಮೆ ಇಲಾಖೆಯನ್ನು ರದ್ದು ಮಾಡಿ ಆದೇಶ ಹೊರಡಿಕೆ

ಬೆಂಗಳೂರು : ಆಡಳಿತ ಸುಧಾರಣೆ ಸಲುವಾಗಿ ರಾಜ್ಯ ಸರ್ಕಾರ ಸಚಿವಾಲದಯದಲ್ಲಿರುವ ಸಾರ್ವಜನಿಕ ಉದ್ದಿಮೆ ಇಲಾಖೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಇಲಾಖೆಗಳ ವಿಲೀನ, ಕಾಆರ್ಯ ನಿರ್ವಹಣೆಯ ಹಂಚಿಕೆ ಕುರಿತಂತೆ ಅಧ್ಯಯನ ಮಾಡಿ ವರದಿ ನೀಡಲು ರಚನೆಯಾಗಿರುವ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಮಾಡಿರುವ ಶಿಫಾರಸಿನಂತೆ ಇಲಾಖೆಯನ್ನು ರದ್ದು ಮಾಡಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ನಡವಳಿ ಹೊರಡಿಸಿದ್ದು, ಸಚಿವ ಸಂಪುಟ ಉಪ ಸಮಿತಿಯ ನಡವಳಿಯ ಕಂಡಿಕೆ-11ರಲ್ಲಿ ಕರ್ನಾಟಕ …

Read More »

ಮಾಜಿ ಸಿಎಂಗೆ ಕೋನರೆಡ್ಡಿ ನಿವಾಸದಲ್ಲಿ ಅತಿಥಿ ಸ್ವೀಕಾರ

ಧಾರವಾಡ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಧಾರವಾಡ ಜಿಲ್ಲೆ ಪ್ರವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಿನ ಉಪಹಾರವನ್ನು ಇತ್ತೀಚಿಗೆ ಜೆಡಿ(ಎಸ್)ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಎನ್ ಎಚ್ ಕೋನರೆಡ್ಡಿ ನಿವಾಸದಲ್ಲಿ ಸೇವಿಸಿದರು. ಈ ಭಾಗದ ಜನಪ್ರಿಯ ತಿಂಡಿಗಳಾಗಿರುವ ಪಡ್ಡು ಮತ್ತು ಪೂರಿಯನ್ನು ಅವರು ಇಷ್ಟಪಟ್ಟು ಸವಿದರು. ಜೊತೆಗೆ ಮಾವಿನ ಹಣ್ಣಿನ ಸೀಕರಣೆಯನ್ನೂ ಅವರಿಗೆ ಬಡಿಸಲಾಯಿತು. ಸಿದ್ದರಾಮಯ್ಯನವರೊಂದಿಗೆ ಪಕ್ಷದ ಕಾರ್ಯಕರ್ತರು ಎಷ್ಟಿದ್ದರೆಂದರೆ ಕೋನರೆಡ್ಡಿ ಅವರ ಕುಟುಂಬದ ಹೆಣ್ಣುಮಕ್ಕಳಿಗೆ ಮಾಜಿ ಮುಖ್ಯಮಂತ್ರಿಗಳ …

Read More »

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ : ಯಡಿಯೂರಪ್ಪ

ವಿಜಯಪುರ : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸುತ್ತಾರೆ.ಅವರು ಎಲ್ಲಿ ನಿಂತರೂ ಗೆದ್ದು ಬರ್ತಾರೆ. ಮುಂದಿನ ದಿನಗಳಲ್ಲಿ ಜನರ ಆಶೀರ್ವಾದದಿಂದ ಒಳ್ಳೆ ಅವಕಾಶ ಸಿಗುತ್ತದೆ. ಭವಿಷ್ಯದಲ್ಲಿ ಬೆಳೆಯುತ್ತಾನೆ ಎಂಬ ವಿಶ್ವಾಸವಿದೆ ಎಂದರು. ಯಡಿಯೂರಪ್ಪ ಮತ್ತು ಕುಟುಂಬವನ್ನು ಬಿಜೆಪಿ ಪಕ್ಕಕ್ಕೆ ಸರಿಸಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು …

Read More »

ಹಜ್ ಯಾತ್ರಾರ್ಥಿಗಳಿಗೆ ಶುಭಾಶಯಗಳ ಹಾರೈಕೆ: ದೇಶದ ಒಳಿತಿಗಾಗಿ ಪ್ರಾರ್ಥಿಸುವಂತೆ ಕೋರಿಕೆ

ಹುಬ್ಬಳ್ಳಿ : ಹುಬ್ಬಳ್ಳಿಯಿಂದ  ಪವಿತ್ರ ಹಜ್ ಯಾತ್ರೆ ಕೈಗೊಂಡಿರುವಹಜ್ ಯಾತ್ರಾರ್ಥಿಗಳಿಗೆ ಇಂದು ನಗರದ ಇಂಡಿ ಪಂಪ್  HSF ದರ್ಗಾದಲ್ಲಿ ಸನ್ಮಾನಿಸಿ ಶುಭಾಶಯ ಕೊರಲಾಯಿತು, ಹಳೆ ಹುಬ್ಬಳ್ಳಿಯ ಖಾಜಾ ಮೊಯಿನುದ್ದೀನ್ ಪಟ್ಟಣವಾಲೇ ,ಹಾಪಿಜ್ ಮೊಹಮ್ಮದ್ ನೋರಿ ,ಹಾಗೂ ಪಜಲು ಅಹ್ಮದ್ ಕಾಲಿಗುಡ್ಡೆ ಇದೆ ಮೊದಲ ಬಾರಿಗೆ ಹಜ್ ಯಾತ್ರೆ ಕೈಗೊಂಡಿದ್ದಿದ್ದಾರೆ ಈ ವೇಳೆ ಮಾತನಾಡಿದ ಮುನ್ನಾ ಲಕ್ಕುಂಡಿ ಮೂವರು ನಮ್ಮ ದೇಶದ ದರ್ಗಾ ಅನುಯಾಯಿಗಳು ಹಜ್ ಯಾತ್ರೆ ಮಾಡುತ್ತಿರುವುದು ಸಂತಸ ತಂದಿದೆ …

Read More »

ನಿಯಮ ಪಾಲಿಸದವರನ್ನು ಗುಂಡಿಟ್ಟು ಹೊಡಿಯುವ ಹೇಳಿಕೆಗೆ ಈಗಲೂ ಬದ್ಧ: ಮುತಾಲಿಕ್ ಪುನರುಚ್ಚಾರ

ಹುಬ್ಬಳ್ಳಿ: ಸುಪ್ರೀಂಕೋರ್ಟ್ ನಿಯಮ ಪಾಲಿಸದೆ ಇರುವವರ ಮೇಲೆ ಗುಂಡಿಟ್ಟು ಹೊಡಿಯೋ ಹೇಳಿಕೆಗೆ ಈಗಲೂ ಬದ್ಧ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪುನರುಚ್ಚಾರ ಮಾಡಿದ್ದಾರೆ. ಕೇಶ್ವಾಪೂರ ಮಧುರಾ ಕಾಲೋನಿಯಲ್ಲಿರುವ ಜಗದೀಶ್ ಮನೆ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿಯಮ ಪಾಲನೆ ಮಾಡೋಕೆ ಆಗಿಲ್ಲಾಂದ್ರೆ ರಾಜಿನಾಮೆ ಕೊಡಿ. ನನ್ನ ಕೈಗೆ ಅಧಿಕಾರ ಕೊಟ್ಟು ನೋಡಿ ಯಾರು ಕಾನೂನು ಪಾಲನೆ ಮಾಡಲು ಅವರಿಗೆ ಗುಂಡ್ಲಪೇಟೆ ಗತಿಯಾಗುತ್ತದೆ …

Read More »

ಪಾದಾಚಾರಿಗೆ ಗುದ್ದಿದ ಬೈಕ್ ಸವಾರ

ಹುಬ್ಬಳ್ಳಿ: ಪಾದಾಚಾರಿಯೊಬ್ಬರು ದಾಟುತ್ತಿದ್ದಾಗ ಬೈಕ್ ಸವಾರನೊಬ್ಬ ಗುದ್ದಿದ ಪರಿಣಾಮ ವೃದ್ಧನ ಕಾಲು ಮುರಿದು ರಕ್ತಸ್ರಾವ ಆದ ಘಟನೆ ಇಂದು ಬೆಳ್ಳಂಬೆಳಗ್ಗೆ ನಗರದ ವಿದ್ಯಾನಗರದ ಗುರುದತ್ತ ಭವನದ ಬಳಿ ನಡೆದಿದೆ. ಸುಮಾರು 55 ವರ್ಷದ ವೃದ್ಧ ರಸ್ತೆದಾಟುತ್ತಿದ್ದಾಗ R15 ಬೈಕ್ ಸವಾರ ವೇಗವಾಗಿ ಬಂದಿದ್ದ ಪರಿಣಾಮ, ವೃದ್ಧನಿಗೆ ರಭಸವಾಗಿ ಗುದ್ದಿದ್ದಾನೆ. ವೃದ್ಧನ ಕಾಲು ಮುರುದಿದ್ದು, ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾಣೆ ಮಾಡಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ….

Read More »

ಸಿಡಿಲು ಬಡಿದು ಮಹಿಳೆ ಸಾವು

ರಟ್ಟೀಹಳ್ಳಿ : ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ವೇಳೆ ಮಂಗಳವಾರ ಸಂಜೆ ಸಿಡಿಲು ಬಡಿದು ಮಹಿಳೆ ಸಾವಿಗೀಡಾಗಿದ್ದು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಕೋಟೆ ನಿವಾಸಿ ಕರಿಯಮ್ಮ ರಂಗಪ್ಪ ಪರಸಪ್ಪನವರ (35) ಮೃತರು. ಲತಾ ಮಾರುತೆಪ್ಪ ಸುಣಗಾರ, ಮಾರುತೆಪ್ಪ ಸುಣಗಾರ, ಸುಧಾ ಪರಸಪ್ಪನವರ, ರತ್ನಾ ಉಪ್ಪಾರ, ಸಾಕಮ್ಮ ಸುಣಗಾರ, ರವೀಂದ್ರ ಪರಸಪ್ಪನವರ, ಜುಬೇದಾ ಬಾಗಲಮನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ …

Read More »

ಸಿ.ಟಿ.ರವಿಗೆ ಪ್ರಶ್ನಿಸಿದ ವಿದ್ಯಾರ್ಥಿಗಳು

ಹಾಸನ: ‘ಶಾಲೆ ಪ್ರಾರಂಭವಾಗಿ ಒಂದು ತಿಂಗಳಾದರೂ ಪಠ್ಯ ಪುಸ್ತಕ ಬಂದಿಲ್ಲ. ಯಾವಾಗ ಕೊಡ್ತೀರಿ?’ ಎಂದು ವಿದ್ಯಾರ್ಥಿಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಪ್ರಶ್ನಿಸಿದರು. ಬೇಲೂರು ರಣಘಟ್ಟ ಯೋಜನೆ ಕಾಮಗಾರಿ ಪ್ರಗತಿ ವೀಕ್ಷಣೆಗೆ ಬಂದಿದ್ದ ರವಿ ಅವರು ಚಿಲ್ಕೂರು ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, ಮನೆ ಕಡೆಗೆ ತೆರಳುತ್ತಿದ್ದ ಇಬ್ಬೀಡು ಶ್ರೀ ಶಿವನಂಜುಂಡೇಶ್ವರ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ‘ಪಠ್ಯಪುಸ್ತಕಗಳು ವಿತರಣೆಯಾಗಿಲ್ಲ’ ಎಂದು ದೂರಿದರು.

Read More »

ಹೆಚ್. ವಿಶ್ವನಾಥ್ ಹೇಳಿಕೆ ತಿರಿಗೇಟು ಕೊಟ್ಟ ಮಾಜಿ‌ ಸಿಎಂ

ಮೈಸೂರು: ಪ್ರತಾಪ್ ಸಿಂಹ ಒಬ್ಬ ಅಯೋಗ್ಯ, ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾವೆಲ್ಲರೂ ಒಟ್ಟಿಗೆ ಲಾ ಪ್ರಾಕ್ಟೀಸ್ ಮಾಡಿದ್ದೇವೆ.ಅವನಿಗೇನಾಗಿದೆ ಬಾಯಿಗೆ ಬಂದಂಗೆ ಮಾತನಾಡುತ್ತಾನೆ. ಮಹಾರಾಜರನ್ನು ಬಿಟ್ಟರೇ ನಾನೇ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಕೊಚ್ಚಿಕೊಳ್ಳುತ್ತಾನೆ. ಈ ಎಂಪಿ ಕಾಲದಲ್ಲಿ ಏನೂ ಕೆಲಸವಾಗಿಲ್ಲ ಎಂದು ಆರೋಪಿಸಿದರು. 2014ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಾಮಾಣಿಕವಾಗಿ …

Read More »

ಸಿದ್ದರಾಮಯ್ಯ ಅವರ ಘನತೆಗೆ ತಕ್ಕಂತೆ ವರ್ತಿಸಬೇಕು :: ಶೆಟ್ಟರ್ ‌ಟೀಕೆ

ಹುಬ್ಬಳ್ಳಿ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು. ಅವರ ಘನತೆಗೆ ತಕ್ಕಂತೆ ವರ್ತಿಸಬೇಕು. ಅದು ಬಿಟ್ಟು ಪುಂಡ, ಪೋಕರಿಗಳ ಸಾಮಾನ್ಯ ಕಾರ್ಯಕರ್ತರಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಟೀಕಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅತ್ಯಂತ ಕೆಳಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಐದು ವರ್ಷ ಮುಖ್ಯಮಂತ್ರಿ ಆಗಿದ್ದವರ ಸಂಸ್ಕೃತಿ ಇದಲ್ಲ. ಚಡ್ಡಿ ಹಾಕಿರುವ ಆರ್‌ಎಸ್‌ಎಸ್‌ ಕಾರ್ಯಕರ್ತರಿಂದಲೇ ದೇಶ ಒಗ್ಗಟ್ಟಾಗಿದೆ, ದೇಶ ಉಳಿದಿದೆ. ಅವರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿ ಅಲ್ಪಸಂಖ್ಯಾತರ ಮತ ಪಡೆಯಬಹುದು …

Read More »