BigTv News
July 5, 2026
Breaking News
ಪಂಜಾಬ್‌ನ ತರಣ್ ತರಣ್‌ನಲ್ಲಿ ಪತ್ನಿಯನ್ನು ತವರು ಮನೆಯಿಂದ ಕರೆತರಲು ಬಂದಿದ್ದ ಲವ್‌ಜೀತ್ ಸಿಂಗ್ ಮೇಲೆ ಪತ್ನಿಯ ಸಹೋದರ ಸಜನ್ ಸಿಂಗ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಲವ್‌ಜೀತ್ ಅವರನ್ನು ರಕ್ಷಿಸಲು ಮುಂದಾದ ಗುರ್ಜಿತ್ ಕೌರ್ ಅವರಿಗೂ ಬೆಂಕಿ ತಗುಲಿ ಗಂಭೀರ ಗಾಯಗಳಾಗಿದ್ದು, ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಜನ್ ಸಿಂಗ್ ಹಾಗೂ ಸಂದೀಪ್ ಕೌರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Read More »
BigTv News
July 5, 2026
Breaking News
ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ವಿರುದ್ಧ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಭಟ್ಕಳ ನಗರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆರೋಪದ ಪ್ರಕಾರ, ಬಾಲಕಿಯನ್ನು ಪುಸಲಾಯಿಸಿ ಭಟ್ಕಳದ ಖಾಸಗಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ ಎನ್ನಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೊ ಕಾಯ್ದೆ ಹಾಗೂ ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ …
Read More »
BigTv News
July 5, 2026
Breaking News
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ದುಷ್ಕರ್ಮಿಗಳು ಮೂರು ಹಸುಗಳ ಕಾಲು, ಬಾಲ ಹಾಗೂ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಹಸುಗಳನ್ನು ಕಳ್ಳತನ ಮಾಡಲು ಯತ್ನಿಸಿ ವಿಫಲವಾದ ಬಳಿಕ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಗಾಯಗೊಂಡ ಹಸುಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗಿದ್ದು, ಇತ್ತೀಚೆಗೆ ಈ ಭಾಗದಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳು ನಾಪತ್ತೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆ ಕುರಿತು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, …
Read More »
BigTv News
July 5, 2026
Breaking News
ಉಕ್ರೇನ್ ರಷ್ಯಾದ ತೈಲ ಘಟಕಗಳು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿ ಭಾರೀ ಡ್ರೋನ್ ದಾಳಿ ನಡೆಸಿದೆ. ಸುಮಾರು 500 ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ರಷ್ಯಾ ತಿಳಿಸಿದೆ. ದಾಳಿಯಿಂದ ತೈಲ ಸಂಗ್ರಹಣಾ ಕೇಂದ್ರಗಳಿಗೆ ಹಾನಿಯಾಗಿದ್ದು, ಹಲವು ಪ್ರದೇಶಗಳಲ್ಲಿ ಇಂಧನ ಕೊರತೆ ಉಂಟಾಗಿದೆ. ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಉದ್ದ ಸಾಲುಗಳು ಕಂಡುಬಂದಿವೆ. ಇದರ ನಡುವೆ, ಪೂರ್ವ ಡೊನ್‌ಬಾಸ್‌ನ ಪ್ರಮುಖ ನಗರವನ್ನು ವಶಪಡಿಸಿಕೊಂಡಿರುವುದಾಗಿ ರಷ್ಯಾ ಹೇಳಿಕೊಂಡಿದ್ದು, ಈ ಕುರಿತು ಸ್ವತಂತ್ರ ದೃಢೀಕರಣ ಇನ್ನೂ …
Read More »
BigTv News
July 5, 2026
Breaking News
ಬಳ್ಳಾರಿ: ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ವೀವ್ಸ್ ಪಡೆಯುವ ಹುಚ್ಚಿನಿಂದ ನಕಲಿ ಬಂದೂಕು ಹಿಡಿದು ರೀಲ್ಸ್ ಮಾಡಿದ ಮೂವರು ಯುವಕರನ್ನು ಬಳ್ಳಾರಿಯ ಕೌಲ್ ಬಜಾರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಾಹಿಲ್, ವಿಕಾಸ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಇವರು ನಗರದ ಬಂಡಿಹಟ್ಟಿ ಸಮೀಪದ ಹೆಚ್.ಎಲ್.ಸಿ ಕಾಲುವೆ ಬಳಿ ಸಾರ್ವಜನಿಕರಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಪ್ರದರ್ಶಿಸಿ ವಿಡಿಯೋ ಚಿತ್ರೀಕರಿಸಿದ್ದರು. ಈ ವಿಡಿಯೋ ಸಾಮಾಜಿಕ …
Read More »
BigTv News
July 5, 2026
Breaking News
ಬೆಂಗಳೂರು: ಜನರಿಗೆ ರಕ್ಷಣೆ ನೀಡೋ ಖಾಕಿಗೇ ರಕ್ಷಣೆ ಇಲ್ವಾ? ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರೋ ಘಟನೆ ಮೇಕ್ರಿ ಸರ್ಕಲ್ ಬಳಿ ನಡೆದಿದೆ. ನಡು ರಸ್ತೆಯಲ್ಲೇ ಪೊಲೀಸ್ ಅಧಿಕಾರಿಗೆ ಟೂಲ್ಸ್ನಿಂದ ಮನಬಂದಂತೆ ಹಲ್ಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಡಿಜೆ ಹಳ್ಳಿ ಠಾಣೆ ಕಾನ್ಸ್‌ಟೇಬಲ್ ವಿಜಯ್ ರಾಥೋಡ್ ಹಲ್ಲೆಗೆ ಒಳಗಾಗಿದ್ದಾರೆ. ಕಾನ್ಸ್‌ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ಮೇಖ್ರಿ ಸರ್ಕಲ್ ಬಳಿ ನಡುರಸ್ತೆಯಲ್ಲಿ ನಡೆದಿದೆ. ಡಿಜೆ ಹಳ್ಳಿ …
Read More »
BigTv News
July 4, 2026
Breaking News
ರಾಣೆಬೆನ್ನೂರು: ತಾಲ್ಲೂಕಿನ ದೇವರಗುಡ್ಡ ಮಾಲತೇಶ ದೇವಸ್ಥಾನದ ಪೂರ್ವ ದಿಕ್ಕಿನ ಮುಂದಿನ ಬಾಗಿಲ ಕದಕ್ಕೆ ಒಳಗಿನಿಂದ ಹಾಕಿದ್ದ ಸಲಾಕೆ ಒಡೆದು ದೇವಸ್ಥಾನದ ಒಳಗೆ ನುಗ್ಗಿ ಕಾಣಿಕೆ ಹುಂಡಿಯಲ್ಲಿದ್ದ ₹50 ಸಾವಿರ ಹಣ್ಣ ಕಳ್ಳತನ ಮಾಡಿದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನದ ಯತ್ನದ ವೇಳೆ ಕಾಣಿಕೆ ಹುಂಡಿಯಲ್ಲಿದ್ದ ಹಣ ದೇವಸ್ಥಾನದ ಒಳಭಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ದೇವಸ್ಥಾನಕ್ಕೆ ಅಳವಡಿಸಿದ ಸಿಸಿ …
Read More »
BigTv News
July 4, 2026
Breaking News
ನವದೆಹಲಿ: 2018ರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭ ನಡೆಸಿದ್ದ ಫೈರಿಂಗ್‌ನಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಬಿಜೆಪಿ ಶಾಸಕ ರಾಜ ಕುಮಾರ್ ಸಿಂಗ್ ಅವರಿಗೆ ದೆಹಲಿ ಕೋರ್ಟ್ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ₹25 ಲಕ್ಷ ದಂಡ ವಿಧಿಸಿದೆ. ದೆಹಲಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು ತೀರ್ಪಿನ ಕೆಲ ಭಾಗವನ್ನು ಓದಿದರು. ‘ಅಪರಾಧಿಗೆ ಐಪಿಸಿ ಸೆಕ್ಷನ್ 304 ಭಾಗ-2ರ ಅನ್ವಯ 4 ವರ್ಷ ಮತ್ತು …
Read More »
BigTv News
July 4, 2026
Breaking News
ನರೇಗಲ್ ಗಲಾಟೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಶೌಕತ್ ಅಲಿ ನೆಗಳೂರು ಅವರನ್ನು ಶುಕ್ರವಾರ ರಾತ್ರಿ ಯತ್ನಳ್ಳಿ ಗ್ರಾಮದ ಮಧುಗೌಡ ಪಾಟೀಲ ಅವರ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಜೂನ್ 29ರ ಗಲಾಟೆ ಬಳಿಕ ಆತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಶೌಕತ್ ಅಲಿ ಕಳೆದ ಮೂರು ದಿನಗಳಿಂದ ಮಧುಗೌಡ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪ್ರಕರಣದಲ್ಲಿ ಇದುವರೆಗೆ …
Read More »
BigTv News
July 4, 2026
Breaking News
ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಈಚೆಗೆ 6 ಜನರ ಬರ್ಬರ ಸರಣಿ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿ ಚಡಚಣ ಪೊಲೀಸ್ ಠಾಣೆ ಪಿಎಸ್‌ಐ ಅಮಾನತುಗೊಂಡಿದ್ದಾರೆ. ಇಲ್ಲಿನ ಪಿಎಸ್‌ಐ ಸೋಮೇಶ ಗೆಜ್ಜಿ ಅಮಾನತ್ತುಗೊಂಡಿವರು, ಈ ಸರಣಿ ಹತ್ಯೆಗೂ ಮುನ್ನ ನಿರಾಳೆ ಹಾಗೂ ಪಾಟೀಲ್ ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು, ಈ ಕಲಹ ನಿರ್ವಹಣೆಯಲ್ಲಿ ಪಿಎಸ್‌ಐ ಲೋಪ ಕಂಡು ಬಂದ ಹಿನ್ನೆಲೆ ಪಿಎಸ್‌ಐ ಸೋಮೇಶ ಗೆಜ್ಜಿಯನ್ನು ಅಮಾನತು …
Read More »