BigTv News
May 16, 2022
Breaking News, ತುಮಕೂರು
ತುಮಕೂರು: ಸಾವಿನಲ್ಲಿ ಒಂದಾದ ತುಮಕೂರು ಮೂಲದ ಪ್ರೇಮಿಗಳಿಬ್ಬರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಪ್ರಿಯಕರ ಅಪಘಾತದಲ್ಲಿ ಮೃತಪಟ್ಟ ನೋವಿನಿಂದ ಹೊರಬರಲಾಗದೇ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಳು. ಇದೀಗ ಆಕೆಯ ಅಂತ್ಯಕ್ರಿಯೆಯನ್ನು ಪ್ರಿಯಕರನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ. ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ (23) ಹಾಗೂ ಅದೇ ತಾಲ್ಲೂಕಿನ ಅರೆಹಳ್ಳಿ ಗ್ರಾಮದ ಸುಷ್ಮಾ(22) ಮೃತ ಪ್ರೇಮಿಗಳು. ಧನುಷ್ ಅವರ ಜಮೀನಿನಲ್ಲೇ ಸುಷ್ಮಾಳ ಅಂತ್ಯಸಂಸ್ಕಾರವಾಗಿದೆ. ಯುವತಿ ಸ್ವಗ್ರಾಮ ಅರೆಹಳ್ಳಿಯಲ್ಲಿ ಸಮಾಧಿ ಮಾಡದೇ …
Read More »
BigTv News
May 16, 2022
Breaking News, ಬೆಂಗಳೂರು
ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು,ರಾಜ್ಯದಲ್ಲಿ ಮೇ 18 ರಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮೇ 16, 17ರಂದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
Read More »
BigTv News
May 16, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಎಂಸಿಡಿಸಿಸಿ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಅವರ ಮಗಳು ಸಾವಿಗೀಡಾಗಿದ್ದು, ತಂದೆಯು ಮಗಳ ಮೃತದೇಹ ತಬ್ಬಿ ಗೋಳಾಡುತ್ತಿದ್ದ ದೃಶ್ಯ ಎಲ್ಲರ ಕಣ್ಣಂಚಲಿ ನೀರುತಂದಿದೆ. ಮೈಸೂರಿನ ಗುಂಗ್ರಾಲ್ ಛತ್ರದ ತೋಟದ ಮನೆಯಲ್ಲಿ ಹರೀಶ್ ಗೌಡ ಅವರು ತಮ್ಮ ಮಗಳಾದ ಮೂವರು ವರ್ಷದ ಕಂದಮ್ಮ ಗೌರಿಯ ಅಂತ್ಯಕ್ರಿಯೆ ನೆರವೇರಿಸಿದರು. ಮಗಳಿಗೆ ಅಂತಿಮ ವಿದಾಯ ಹೇಳುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಗೌರಿ ಶನಿವಾರ ರಾತ್ರಿ ಇಹಲೋಹ ತ್ಯಜಿಸಿದ್ದಳು. ಇಂದು …
Read More »
BigTv News
May 16, 2022
Breaking News, ಧಾರವಾಡ
ಧಾರವಾಡ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಲಾಗಿದೆ, ಜೊತೆಗೆ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯ ಗೋಕುಲದಲ್ಲಿ ಜೀರ್ಣೋದ್ಧಾರವಾಗಿರುವ ದಾರಾವತಿ ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮಂತ ದೇವರ ಆಶೀರ್ವಾದ ಪಡೆದ ನಂತರ ಏರ್ಪಡಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹನುಮಂತ ಹುಟ್ಟಿದ್ದು ಕರ್ನಾಟಕದಲ್ಲಿ. ಆತ ಕನ್ನಡ ನಾಡಿನ ವರ …
Read More »
BigTv News
May 15, 2022
Breaking News, ಅಪರಾಧ, ಹುಬ್ಬಳ್ಳಿ-ಧಾರವಾಡ
ಧಾರವಾಡ ಜೆ ಎಸ್ ಎಸ್ ಕಾಲೇಜಿನ ಎದುರುಗಡೆ ಬೆಂಕಿ ಅವಘಡ ಸಂಭವಿಸಿ ಕಾರು ಹೊತ್ತಿ ಉರಿದ ಘಟನೆ ನಡೆದಿದ್ದು ಅಗ್ನಿ ಶಾಮಕ ದಳ ಹರಸಾಹಸ ಪಟ್ಟು ಬೆಂಕಿ ನಂದಿಸಿದೆ . ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ ಹುಬ್ಬಳ್ಳಿಯ ನಿವಾಸಿಯಾಗಿದ್ದ , ವಿಜಯಸಾಗರ ಕುಟುಂಬ ಸಮೇತ ಧಾರವಾಡಕ್ಕೆ ಬರುವಾಗ ಜೆ ಎಸ್ ಎಸ್ ಕಾಲೇಜು ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಈ ವೇಳೆ ಕಾರಿನಲ್ಲಿ ಗಂಡ – …
Read More »
BigTv News
May 14, 2022
Breaking News, ಧಾರವಾಡ
ಧಾರವಾಡ : ಮದುವೆಯ ಆಹ್ವಾನ ಪತ್ರಿಕೆ ಹಂಚಿದ್ದ ಮದುಮಗನೇ ಮದುವೆಗೂ ಮುನ್ನವೇ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಕಬ್ಬೇನೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ . ಕಬ್ಬೇನೂರು ಗ್ರಾಮದ ರಾಘವೇಂದ್ರ ಶಿಂಧೋಗಿ ( 32 ) ಎಂಬುವವರೇ ಮೃತಪಟ್ಟ ವ್ಯಕ್ತಿ . ಮೇ 12 ರಂದು ಕಲಘಟಗಿ ತಾಲೂಕಿನ ವಧುವಿನೊಂದಿಗೆ ಮದುವೆ ನಿಶ್ಚಿಸಲಾಗಿತ್ತು . ಹೀಗಾಗಿ ಮದುವೆ ಸಂಭ್ರಮದ ಖುಷಿಯಲ್ಲಿದ್ದ ಕುಟುಂಬಸ್ಥರು ಮದುವೆ ಆಮಂತ್ರಣ ಹಂಚಿ ಬಂದು , …
Read More »
BigTv News
May 14, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಭಾರೀ ಹಣಾಹಣಿಯ ಪ್ರತಿಷ್ಠಿತ ಚುನಾವಣಾ ಅಖಾಡ ಪಶ್ಚಿಮ ಶಿಕ್ಷಕರ ಕ್ಷೇತ್ರ. ಈ ಕ್ಷೇತ್ರಕ್ಕೆ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಸಾಕಷ್ಟು ಚಟುವಟಿಕೆಗಳು ಒಳೊಳಗೆ ತಯಾರು ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರ ಕ್ಷೇತ್ರದಲ್ಲಿ ಇದೀಗ ಮಿಂಚಿನ ರಾಜಕೀಯ ಚಟುವಟಿಕೆಗಳು ನಡೆದಿವೆ. ಈ ಮೊದಲು ನಡೆದ ಚುನಾವಣೆಗಳಂತೆ ಈ ಸಲದ ಚುನಾವಣೆಯಲ್ಲಿ ಅಲ್ಲಾ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಲಿ ವಿಧಾನ ಸಭಾ ಸಭಾಪತಿ ಬಸವರಾಜ ಹೊರಟ್ಟಿ ಕಣಕ್ಕೆ ಇಳಿಯಲು ಕಸರತ್ತು ನಡೆಸಿದ್ದಾರೆ. ಇನ್ನೊಂದು …
Read More »
BigTv News
May 14, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸವಿರುವ ಬಾದಾಮಿ ನಗರದಲ್ಲಿ ಹಲವಾರು ವರ್ಷಗಳಿಂದ ನಿರುಪಯುಕ್ತವಾಗಿದ್ದ ಓವರ್ ಹೆಡ್ ಟ್ಯಾಂಕ್ ನ್ನು ನೆಲಸಮಗೊಳಿಸಲಾಗಿದೆ. ಶಿಥಿಲಾವಸ್ತೆಯಲ್ಲಿತ್ತು ಎನ್ನಲಾದ ಓವರ್ ಹೆಡ್ ಟ್ಯಾಂಕ್ ನ್ನು ಮುನ್ನೆಚ್ಚರಿಕೆ ಕ್ರಮವಾಗಿ ನೆಲಸಮಗೊಳಿಸಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಟ್ಯಾಂಕ್ ನೆಲಸಮಗೊಳಿಸಲಾಗಿದೆ.
Read More »
BigTv News
May 14, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಎಂದು ಅಭಿಯಾನ ಕೂಡ ಮಾಡಿದ್ದರು ಅದು ಕೇವಲ ನಾಮಕಾವಸ್ಥೆ ಮಾತ್ರ ಆಗಿದೆ ಎಂದು ಬಿಗ್ ಟಿವಿ ಇತ್ತೀಚಿಗೆ ಸುದ್ದಿ ಬಿಟ್ಟರಿಸಿಟ್ಟು ಈ ನಗರದ ಪ್ರದೇಶವನ್ನು ನೋಡಿದ್ರ ಸ್ವಚ್ಛ ಭಾರತ ಮಾಯವಾಗಿದೆ ಎಂದು ತೋರಿಸಿದ ಬೆನ್ನಲ್ಲೇ ಹೀಗೆ ರಸ್ತೆ ಮಧ್ಯದಲ್ಲೇ ಕಸದ ರಾಶಿ . ಒಂದು ಕಡೆ ಮಕ್ಕಳ ಆಟ ಇಷ್ಟೆಲ್ಲ ದೃಶ್ಯಗಳು …
Read More »
BigTv News
May 14, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ತಾಲೂಕಿನ ಹೊರವಲಯದ ನೂಲ್ವಿ ಗ್ರಾಮದ ಗೊರಂಪುಲ್ ಬಳಿ ಯುವಕನನ್ನು ಶುಕ್ರವಾರ ರಾತ್ರಿ ಬಡಿದು ಕೊಲೆ ಮಾಡಲಾಗಿದೆ. ಶಂಕು ಕಮಡೊಳ್ಳಿ (34) ಕೊಲೆಯಾದವರು. ನೂಲ್ವಿ ಗ್ರಾಮದ ನಿವಾಸಿಯಾಗಿದ್ದರು. ಕಳೆದ ದಿನ ಎಂದಿನಂತೆ ಮನೆಯಿಂದ ಹೊರ ಹೋಗುವುದಾಗಿ ಹೇಳಿ ಹೋಗಿದ್ದನು. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Read More »