Breaking News

ಬಿಗ್ ಟಿವಿ ಬಿಗ್ ಇಂಪಾಕ್ಟ್ : ಕಸದ ರಾಶಿ ಸ್ವಚ್ಛ ಗೊಳಿಸಿದ ಹುಬ್ಬಳ್ಳಿ ಕಾರ್ಪೋರೇಶನ್

ಹುಬ್ಬಳ್ಳಿ : ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಎಂದು ಅಭಿಯಾನ ಕೂಡ ಮಾಡಿದ್ದರು ಅದು ಕೇವಲ ನಾಮಕಾವಸ್ಥೆ ಮಾತ್ರ ಆಗಿದೆ ಎಂದು ಬಿಗ್ ಟಿವಿ ಇತ್ತೀಚಿಗೆ ಸುದ್ದಿ ಬಿಟ್ಟರಿಸಿಟ್ಟು ಈ ನಗರದ ಪ್ರದೇಶವನ್ನು ನೋಡಿದ್ರ ಸ್ವಚ್ಛ ಭಾರತ ಮಾಯವಾಗಿದೆ ಎಂದು ತೋರಿಸಿದ ಬೆನ್ನಲ್ಲೇ ಹೀಗೆ ರಸ್ತೆ ಮಧ್ಯದಲ್ಲೇ ಕಸದ ರಾಶಿ .

ಒಂದು ಕಡೆ ಮಕ್ಕಳ ಆಟ ಇಷ್ಟೆಲ್ಲ ದೃಶ್ಯಗಳು ಕಂಡು ಬಂದಿದ್ದು , ವಾಣಿಜ್ಯ ನಗರಿಯ ದೇಶಪಾಂಡೆ ನಗರದ ಬ್ಯಾಹಟ್ಟಿ ಪ್ಲಾಟ್ ದಲ್ಲಿ . ಮೊದಲೇ ಸೋಂಕುಗಳು ಹೆಚ್ಚಾಗುತ್ತಿವೆ . ಅಂತದರಲ್ಲಿ ಇಲ್ಲಿ ಕಸದ ವಿಲೇವಾರಿ ಮಾಡದೆ ಕಾರಣ ರಸ್ತೆ ತುಂಬ ಕಸದ ರಾಶಿ ಹರಡಿದೆ ಎಂಬುದು ಅಧಿಕಾರಿಗಳಿಗೆ ಇವತ್ತು ಗೊತ್ತಾಗಿದೆ ಇಲ್ಲಿನ ನಿವಾಸಿಗಳು ಈ ರಸ್ತೆಯಲ್ಲಿ ಮನೆಗೆ ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು ಈ ಸಮಸ್ಯೆ ಬಗ್ಗೆ ಪಾಲಿಕೆದವರಿಗೆ ಕರೆ ಮಾಡಿದರು ಯಾರು ಕೂಡ ಕ್ಯಾರೆ ಎನ್ನುತ್ತಿಲ್ಲವಂತೆ . ಕೂಡಲೇ ಪಾಲಿಕೆ ಈ ಸ್ಥಳದಲ್ಲಿದ್ದ ಕಸವನ್ನು ದಿನಂಪ್ರತಿ ವಿಲೇವಾರಿ ಮಾಡಬೇಕಾಗಿದೆ ಎಂದು ಬಿಗ್ ಟಿವಿ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಇಲ್ಲಿನ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಂತಾಗಿದೆ.

ಇನ್ನು ಮುಂದೆ ಆದರೂ ಪಾಲಿಕೆ ಸಿಬ್ಬಂದಿಗಳು ದಿನನಿತ್ಯ ಕಸದ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡಲಿ ಎಂಬುದು ಸ್ಥಳೀಯರ ಆಶಯವಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *