Breaking News

Breaking News

ಹಳೆಯ ವೈಷಮ್ಯ : ಕೊಲೆಯಲ್ಲಿ ಅಂತ್ಯ

ಹುಬ್ಬಳ್ಳಿ: ತಾಲೂಕಿನ ಹೊರವಲಯದ ನೂಲ್ವಿ ಗ್ರಾಮದ ಗೊರಂಪುಲ್ ಬಳಿ ಯುವಕನನ್ನು ಶುಕ್ರವಾರ ರಾತ್ರಿ ಬಡಿದು ಕೊಲೆ ಮಾಡಲಾಗಿದೆ. ಶಂಕು ಕಮಡೊಳ್ಳಿ (34) ಕೊಲೆಯಾದವರು. ನೂಲ್ವಿ ಗ್ರಾಮದ ನಿವಾಸಿಯಾಗಿದ್ದರು. ಕಳೆದ ದಿನ ಎಂದಿನಂತೆ ಮನೆಯಿಂದ ಹೊರ ಹೋಗುವುದಾಗಿ ಹೇಳಿ ಹೋಗಿದ್ದನು. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More »

ಬೆಳಗಲಿ ಗ್ರಾ.ಪಂ ಅಧ್ಯಕ್ಷನಾಗಿ ಹನಮಂತಪ್ಪ ಸೊಟ್ಟಮ್ಮನವರ ಆಯ್ಕೆ

ಹುಬ್ಬಳ್ಳಿ: ಬೆಳಗಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬೆಳಗಲಿ ಗ್ರಾಮದ 2ನೆ ವಾರ್ಡಿನ ಸದಸ್ಯ ಹನಮಂತಪ್ಪ ಸೊಟ್ಟಮ್ಮನವರ  ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ,ಅಧಿಕಾರ ಹಂಚಿಕೆಯ ಒಪ್ಪಂದದ ಆಧಾರದಲ್ಲಿ ನಿಕಟಪೂರ್ವ ಅಧ್ಯಕ್ಷ ಹನಮಂತ ಖಂಡಣ್ಣವರ  ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ನಡೆದು ಹನಮಂತಪ್ಪ ಸೊಟ್ಟಮ್ಮನವರ ಅವರು ಅವಿರೋಧ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಹನಮಂತಪ್ಪ ಸೊಟ್ಟಮ್ಮನವರ ಇವರಿಗೆ ಕುಂದಗೋಳ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ್ …

Read More »

ಗ್ರಾಮ ದೇವತೆ ಶ್ರೀ ಕರೆಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಅರವಿಂದ್ ಬೆಲ್ಲದ್ ಚಾಲನೆ

ಧಾರವಾಡ : ಜಯನಗರದ ಗ್ರಾಮ ದೇವತೆ ಶ್ರೀ ಕರೆಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ ನೀಡಿ ದೇವರ ದರ್ಶನ ಪಡೆದರು ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕರು ಮಾತನಾಡಿದರು . ಇದೆ ವೇಳೆಯಲ್ಲಿ ದೇವಸ್ಥಾನ ವತಿಯಿಂದ ಶಾಸಕರಿಗೆ ಸನ್ಮಾನ ಮಾಡಲಾಯಿತು . ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ವಿಷ್ಣುತೀರ್ಥ ಕೊರ್ಲಹಳ್ಳಿ , ಶ್ರೀ ಗಿರೀಶ್ ಮತ್ಸದಿ , ಶ್ರೀ ಮಂಜುನಾಥ ರೇಣಕೆ , ದೇವಸ್ಥಾನದ ಟ್ರಸ್ಟಿನ ಶ್ರೀ …

Read More »

ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಮುನೇನಕೊಪ್ಪ ಭಾಗಿ

ನವಲಗುಂದ : ತಾಲೂಕಿನ ಅರಹಟ್ಟಿ ಗ್ರಾಮದಲ್ಲಿ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ , ಹಾಗೂ ನೂತನ ಗ್ರಾಮದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಆದಿಶಕ್ತಿ ಪುರಾಣೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಸ್ಪಿ ಮುನೇನಕೊಪ್ಪಭಾಗಿಯಾಗಿ ದೇವರ ದರ್ಶನ ಪಡೆದರು . ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಸಚಿವರು ಮಾತನಾಡಿದರು . ಇದೆ ವೇಳೆಯಲ್ಲಿ ಸಚಿವರಿಗೆ ಸನ್ಮಾನ ಮಾಡಲಾಯಿತು . ಈ ಸಂದರ್ಭದಲ್ಲಿ ಅರಹಟ್ಟಿ ಗ್ರಾಮ ಗ್ರಾಮಸ್ಥರು ಸೇರಿದಂತೆ ಅನೇಕರ ಭಕ್ತರು ಭಾಗಿಯಾಗಿದರು .

Read More »

ಕಾಮಗಾರಿಗೆ ಚಾಲನೆ ನೀಡಿದ ಮಾಜಿ ಸಿಎಂ

ಹುಬ್ಬಳ್ಳಿ: ನಗರದ ವಾರ್ಡ್ ನಂ . 39 ರ ಫಾರೆಸ್ಟ್ ಕಾಲೋನಿಯಲ್ಲಿ , ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಶ್ರೀ ಸಿದ್ದು ಮೊಗಳಿಶೆಟ್ಟರ್ , ಶ್ರೀ ಮೊಹನ ಬಡಿಗೇರ , ಶ್ರೀ ದೊಡ್ಡಯ್ಯ ಹಿರೇಮಠ , ಶ್ರೀ ಶ್ರೀನಿವಾಸ ಶಾಸ್ತ್ರಿ ಸೇರಿದಂತೆ ಕಾಲೋನಿಯ ಪ್ರಮುಖರು ಉಪಸ್ಥಿತರಿದ್ದರು .

Read More »

ಜಾತ್ರಾ ಮಹೋತ್ಸದಲ್ಲಿ ಪಾಲ್ಗೊಂಡ ಶಾಸಕಿ

ಕುಂದಗೋಳ : ಪಟ್ಟಣದ ಶ್ರೀ ದ್ಯಾಮವ್ವ ದೇವಿಯ ( ಗ್ರಾಮದೇವಿ ) ಜಾತ್ರೆಯ ನಿಮಿತ್ಯ ಶಾಸಕಿ ಶ್ರೀಮತಿ ಕುಸುಮಾವತಿಸಿ ಶಿವಳ್ಳಿಯವರು ಜಾತ್ರಾ ಮಹೋತ್ಸದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು . ಇದೆ ವೇಳೆಯಲ್ಲಿ ದೇವಸ್ಥಾನದ ವತಿಯಿಂದ ಶಾಸಕಿಗೆ ಸನ್ಮಾನ ಮಾಡಲಾಯಿತು . ಈ ಜಾತ್ರಾ ಮಹೋತ್ಸ ವದಲ್ಲಿ ಅನೇಕ ಭಕ್ತರು ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾದರು .

Read More »

ಅಕ್ಕಿ ಕದಿಮನನ್ನು ಬಂಧಿಸಿದ ಪೋಲಿಸರು

ಕಲಘಟಗಿ : ಪಟ್ಟಣದ ಹಳಿಯಾಳ ರಸ್ತೆಯ ಗೋದಾಮು ಬಳಿ ನಿಲ್ಲಿಸಿದ್ದ ಅಕ್ಕಿಸಾಗಣೆ ಲಾರಿ ಕಳವು ಆರೋಪದಡಿ ಪೊಲೀಸರು ಒಬ್ಬನನ್ನು ಶುಕ್ರವಾರ ಬಂಧಿಸಿದ್ದಾರೆ . ತಾಲೂಕಿನ ಶೀಗಿಗಟ್ಟಿ ಗ್ರಾಮದ ಶಂಕ್ರಯ್ಯಬಸಯ್ಯ ಹಿರೇಮಠ ಬಂಧಿತ ಆರೋಪಿ , ಹುಬ್ಬಳ್ಳಿಯಿಂದ ಕಲಘಟಗಿ ಮಾರ್ಗವಾಗಿ ದಾಂಡೇಲಿಗೆ 260 ಚೀಲ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು . ಪಟ್ಟಣದ ಯುವಶಕ್ತಿ ಸರ್ಕಲ್ ಬಳಿ ನಿಲ್ಲಿಸಿದ್ದಲಾರಿಯನ್ನು ಕದ್ದು ತಾಲೂಕಿನ ಅರೆಬಸನಕೊಪ್ಪ ಗ್ರಾಮದ ಬಳಿ ಬಿಟ್ಟು ಪರಾರಿಯಾಗಿದ್ದರು . ಈ ಕುರಿತು ಲಾರಿ …

Read More »

ಜನತಾ ಜಲಧಾರೆ ಕಾರ್ಯಕ್ರಮ : ಇಬ್ಬರು ಶಾಸಕರು ಗೈರುಹಾಸ

ಹಾಸನ: ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ತವರು ಕ್ಷೇತ್ರದಿಂದ ಇಬ್ಬರು ಶಾಸಕರು ಹಾಜರಾಗಿರುವುದು ಕಂಡು ಬಂದಿತ್ತು. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ಅವರು ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು. ಜೆಡಿಎಸ್ ಮುಖಂಡರಾದ ಎಚ್.ಡಿ.ರೇವಣ್ಣ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಜತೆಗಿನ ಭಿನ್ನಾಭಿಪ್ರಾಯದಿಂದ ಶಿವಲಿಂಗೇಗೌಡ ಎರಡು ತಿಂಗಳಿಂದ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

Read More »

ಟೊಮ್ಯಾಟೋ ಜ್ವರ ಕುರಿತು ನಿಗ್ಗಾವಹಿಸಿಕೊಳ್ಳಿ : ಜಿಲ್ಲಾಧಿಕಾರಿ

ಉಡುಪಿ: ಕೇರಳ- ತಮಿಳುನಾಡು ಗಡಿಯಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಅಧಿಕ ಮಕ್ಕಳಲ್ಲಿ ಟೊಮ್ಯಾಟೋ ಜ್ವರ ಕಂಡು ಬಂದಿದ್ದು, ಉಡುಪಿಯಲ್ಲಿ ಈ ರೋಗ ಲಕ್ಷಣ ಪತ್ತೆಯಾಗಿಲ್ಲ. ಆದರೂ ಗಡಿ ಜಿಲ್ಲೆಗಳಲ್ಲಿ ಈ ಕುರಿತು ನಿಗಾ ಅಗತ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ತಿಳಿಸಿದ್ದಾರೆ. ಜ್ವರ ಕಾಣಿಸಿಕೊಳ್ಳುವ ಮಕ್ಕಳ ದೇಹದಲ್ಲಿ ಟೊಮ್ಯಾಟೋ ಆಕಾರದ ಗುಳ್ಳೆಗಳು ಏಳುವುದರಿಂದ ಇದಕ್ಕೆ ಟೊಮ್ಯಾಟೋ ಜ್ವರ ಎಂದು ಹೆಸರಿಡಲಾಗಿದೆ. ಈ ಜ್ವರವು ವೈರಸ್‌ನಿಂದ ಹರಡುತ್ತಿದ್ದು …

Read More »

ಆಯಸಿಡ್ ಎರಚಿದ್ದ ಆರೋಪಿ ನಾಗೇಶ್ ಬಂಧನ

ಬೆಂಗಳೂರು : ಯುವತಿ ಮೇಲೆ ಆಯಸಿಡ್ ಎರಚಿದ್ದ ಆರೋಪಿ ನಾಗೇಶ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಕೆಂಗೇರಿ ಬ್ರಿಡ್ಜ್ ಬಳಿ ನಡೆದಿದೆ. ಬೆಂಗಳೂರಿನಲ್ಲಿ ಯುವತಿ ಮೇಲೆ ಆಯಸಿಡ್ ಎರಚಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ನಾಗೇಶ್ ನನ್ನು ನಿನ್ನೆ ಪೊಲಿಈಸರು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದರು.ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ನಾಗೇಶ್ ಪೊಲೀಸರಿಗೆ ಕೇಳಿದ್ದಾನೆ. ಈ ವೇಳೆ ಪೊಲೀಸರು ನೈಸ್ ರಸ್ತೆ ಬಳಿ ನಿಲ್ಲಿಸದೇ ಕೆಂಗೇರಿಯ ಬಳಿ ವಾಹನ …

Read More »