ಹುಬ್ಬಳ್ಳಿ: ಬೆಳಗಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬೆಳಗಲಿ ಗ್ರಾಮದ 2ನೆ ವಾರ್ಡಿನ ಸದಸ್ಯ ಹನಮಂತಪ್ಪ ಸೊಟ್ಟಮ್ಮನವರ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ,ಅಧಿಕಾರ ಹಂಚಿಕೆಯ ಒಪ್ಪಂದದ ಆಧಾರದಲ್ಲಿ ನಿಕಟಪೂರ್ವ ಅಧ್ಯಕ್ಷ ಹನಮಂತ ಖಂಡಣ್ಣವರ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ನಡೆದು ಹನಮಂತಪ್ಪ ಸೊಟ್ಟಮ್ಮನವರ ಅವರು ಅವಿರೋಧ ಆಯ್ಕೆಯಾದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಹನಮಂತಪ್ಪ ಸೊಟ್ಟಮ್ಮನವರ ಇವರಿಗೆ ಕುಂದಗೋಳ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ್ ಹಾಗೂ ಬಿಜೆಪಿ ಮುಖಂಡ ಗದಿಗೆಪ್ಪ ಕಳ್ಳಿಮನಿ ,ಪ್ರವೀಣ್ ಸವೋಜಿ, ಮಾಜಿ ಅಧ್ಯಕ್ಷ ನಿಂಗನಗೌಡ ಸೇರಿದಂತೆ ಅನೇಕರುನೂತನ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ.

ಈ ವೇಳೆ ಮಾತನಾಡಿದ ಸೊಟ್ಟಮ್ಮನವರ ಬಿಜೆಪಿ ಪಕ್ಷದ ಸಿದ್ದಾಂತ. ಎಲ್ಲರು ಗ್ರಾಮದ ಅಭ್ಯುದಯಕ್ಕಾಗಿ ಕೆಲಸ ಮಾಡಿದ್ದಾರೆ ಎಂದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ ಬಡವರ ಪರವಾದ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

