Breaking News

Breaking News

ಹವಮಾನ ಇಲಾಖೆಯಿಂದ ಮಹತ್ವದ ಸೂಚನೆ

ಬೆಂಗಳೂರು:ಕರ್ನಾಟಕದಲ್ಲಿ ವರುಣನ ಅಬ್ಬರಇನ್ನೂ ಹೆಚ್ಚಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಕರ್ನಾಟಕದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಇಂದು ಕೂಡ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಾದ್ಯಂತ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಇಂದು ಸಂಜೆಯ ಬಳಿಕ ಹಗುರ ಮಳೆಯಾಗಲಿದೆ.

Read More »

ಆಟೋ ಮತ್ತು ಕಾರ್ ಮುಖಾಮುಖಿ ಡಿಕ್ಕಿ; ಸಿಸಿ ಟಿವಿಯಲ್ಲಿ ಸೆರೆ

ಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ನಗರದ ತತ್ವದರ್ಶಿ ಆಸ್ಪತ್ರೆಯ ರೋಡ್ ಕಲ್ಲೂರ್ ಪೆಟ್ರೋಲ್ ಬಂಕ್ ಹತ್ತಿರ ನಡೆದ ಆಟೋ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ ಅಪಘಾತ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಧ್ಯ ನೀವು ದೃಶ್ಯಗಳಲ್ಲಿ ನೋಡ್ತಿರಬಹುದು ನಾರಾಯಣ ಉಪ್ಪಾರ ಎಂಬ ಆಟೋ ಚಾಲಕ ವೇಗವಾಗಿದ್ದು ಪಲ್ಟಿಯಾಗಿಯೇ ಕಾರಿಗೆ ಗುದ್ದಿದ್ದಾನೆ. ಇದು ಅಲ್ಲಿಯೇ ಇದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಘಟನಾ ಸ್ಥಳಕ್ಕೆ …

Read More »

ಎಲ್ಲರೂ ಶಾಂತಿಯಿಂದ ಹಬ್ಬ ಆಚರಣೆ ಮಾಡಿ : ರಾಜಯೋಗಿಂದ್ರ ಸ್ವಾಮೀಜಿ

ಹುಬ್ಬಳ್ಳಿ : ನಗರದ ಪ್ರತಿಷ್ಠಿತ ಮೂರುಸಾವಿರ ಮಠಕ್ಕೆ ಮುಸ್ಲಿಮರ ಮುಂಖಂಡರ ಬೇಟಿ ನೀಡಿ ಬಾವೈಕ್ಯತೆ ಸಂಕೇತಿಕವಾಗಿ ಮಠದ ಸ್ವಾಮಿಗಳಾದ ಡಾ. ಜಗದ್ಗರು ಗುರುಸಿದ್ದ ರಾಜಯೋಗಿಂದ್ರ ಸ್ವಾಮಿಗಳಿಗೆ ರಂಜಾನ ಹಬ್ಬದ ಶುಭಾಶಯ ಕೋರಿ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮಿಗಳು ಮಾತನಾಡಿ ಈವತ್ತು ಬಸವಜಯಂತಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಒಂದೆ ದಿನ ಆಚರಿಸಲ್ಪಡುತ್ತಿದ್ದು, ಆ ದೇವರೆ ಬಾವೈಕ್ಯತೆಯಿಂದ ಇರುವಂತೆ ಈ ಹಬ್ಬಗಳು ಒಟ್ಟಿಗೆ ಬರುವಂತೆ ಮಾಡಿದ್ದಾನೆ ಹಿಗಾಗಿ ಎಲ್ಲರು ಶಾಂತಿಯಿಂದ, …

Read More »

ಎರಡು ವರ್ಷಗಳ ನಂತರ ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ರಂಜನಾ ಸಂಭ್ರಮಾಚರಣೆ

ಹುಬ್ಬಳ್ಳಿ : ನಗರದಯಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಗಳಿಂದ ರಂಜಾನ್ ಆಚರಿಸಲಾಯಿತು. ಹುಬ್ಬಳ್ಳಿಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಸಾಮೂಹಿಕ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ಸ್ಥಗಿತಗೊಂಡಿತ್ತು. ಈ ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಹಿನ್ನೆಲೆಯಲ್ಲಿ, ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ವಿವಾದದ ಕೇಂದ್ರ ಬಿಂದುವಾಗಿದ್ದ ಚೆನ್ನಮ್ಮ ವೃತ್ತದಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮಾಜಿ ಸಚಿವ ಎ …

Read More »

ಭಾವೈಕ್ಯತೆಗೆ ಸಾಕ್ಷಿಯಾದ ಶರಬತ್ ವಿತರಣೆ

ಹುಬ್ಬಳ್ಳಿ:ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಂದು ಮುಂಜಾನೆ ಹುಬ್ಬಳ್ಳಿ ಈದ್ಗಾ ಮೈದಾನ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮುಸ್ಲಿಂ ಸಮುದಾಯದ ಎಲ್ಲರೂ ಸೇರಿ ಒಟ್ಟಾಗಿ (ನಮಾಜ್)ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಹು-ಧಾ ಸರ್ವ ಧರ್ಮ ಸ್ವಯಂ ಸೇವಕರು.(ರಿ) ಹಾಗೂ ಸೌದಾಗರ್ ಶಾಮಿನ ಸಪ್ಲೈಯರ ವತಿಯಿಂದ.ಬೆಳಗ್ಗೆ 11.30 ಗಂಟೆಗೆ ಸಮಯಕ್ಕೆ ಜೀ ಅಡ್ಡ ಪಿ.ಬಿ.ರಸ್ತೆಯಲ್ಲಿ ಪವಿತ್ರ ರಂಜಾನ್ ಹಬ್ಬದ ದಿನದ ಮುಸ್ಲಿಂ ಸಮುದಾಯದ ನಮಾಜ್ ಪ್ರಾರ್ಥನೆಸಲ್ಲಿಸಿ.ಎಲ್ಲರೂ ತಮ್ಮ ಮನೆಗೆ ತೆರಳುವ ವೇಳೆಯಲ್ಲಿ ಮುಸ್ಲಿಂ …

Read More »

ರಂಜಾನ್ ಹಬ್ಬ ಹಿನ್ನಲೆ : ಪ್ರಮುಖ ರಸ್ತೆಗಳು ಬಂದ್

ಹುಬ್ಬಳ್ಳಿ: ನಗರದ ಚನ್ನಮ್ಮ ಸರ್ಕಲ್ ನಲ್ಲಿರುವ ಪವಿತ್ರ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ಹಿನ್ನಲೆಯಲ್ಲಿ ಸಾವಿರಾರು ಬಕ್ತರು ಸೇರಿರುವ ಕಾರಣ ನಗರ ದ ಪ್ರತಿಷ್ಠಿತ ಚನ್ನಮ್ಮ ಸರ್ಕಲ್ ಗೆ ಬಂದು ಸೇರುವ , ನೀಲಿಜನ್ ರೋಡ್, ಹು-ಧಾ ಮುಖ್ಯ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮತ್ತು ಇತರೆ ಪ್ರಮುಖ ರಸ್ತೆಗಲ್ಲಗಳನ್ನು ಬಂದ ಮಾಡಗಿದೆ.ಈ ರಸ್ತೆ ಮೂಲಕ್ ಬರುವ ವಾಹನಗಳನ್ನು ಬೇರೆ ರಸ್ತೆಗಳ ಮೂಲಕ ಟ್ರಾಪೀಕ್ ಪೋಲಿಸ್ ಸಿಬ್ಬಂದಿ ಕಳಿಸಲಾಗುತ್ತಿದೆ.

Read More »

ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಇಂದು (ಮೇ.3) ಸಂಭ್ರಮದ ಈದ್‌ ಉಲ್‌ ಫಿತ್ರ್‌ (ರಂಜಾನ್‌ ಹಬ್ಬ) ಆಚರಣೆ ಮಾಡಲಾಯಿತು. ಹಬ್ಬದ ನಿಮಿತ್ತ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹೊಸ ಬಟ್ಟೆಗಳನ್ನು ತೊಟ್ಟು, ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡು ಬೈಕ್‌, ಆಟೋ, ಟಂಟಂ, ಕಾರುಗಳಲ್ಲಿ ಆಗಮಿಸಿ ಮೈದಾನದಲ್ಲಿ ಮೊದಲು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

Read More »

ರಂಜಾನ್ ಹಬ್ಬ ಹಿನ್ನೆಲೆ ಆಹಾರ ಕಿಟ್ ವಿತರಣೆ

ಧಾರವಾಡ : ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದು , ಎಲ್ಲರೂ ಖುಷಿಯಿಂದ ಹಬ್ಬ ಆಚರಸಲಿ ಎಂದು ಸಾಮಾಜಿಕ ಕಾರ್ಯಕರ್ತರಾದ ಸೊಗಲದ ಹಾಗೂ ಅವರ ಗೆಳೆಯರ ಬಳಗದವರು ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಹಾಗೂ ಸೀರೆ ಧಾರವಾಡದ ಟೋಲನಾಕಾ ಬಳಿ ವಿತರಿಸಿದ್ದಾರೆ. ಮಕ್ತುಂ ಸೊಗಲದ ಅವರ ನಿವಾಸದೆದುರು ಬಡ ಮುಸ್ಲಿಂ ಕುಟುಂಬಗಳಿಗೆ ಈ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಗಿದೆ.ಸುಮಾರು ಐದು ಸಾವಿರಕ್ಕಿಂತಲೂ ಅಧಿಕ ಕಿಟ್‌ಗಳನ್ನು ವಿತರಿಸಿ ರಂಜಾನ್ …

Read More »

ಉಮಚಗಿ ಗ್ರಾಮದಲ್ಲಿ ಅಂಬೇಡ್ಕ ಜಯಂತಿ ಆಚರಣೆ

ಧಾರವಾಡ : ಜಿಲ್ಲೆ ಹುಬ್ಬಳ್ಳಿ ತಾಲೂಕ ಉಮಚಗಿ ಗ್ರಾಮದಲ್ಲಿ ಮಂಗಳವಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರವರ 131 ನೇ ಜಯಂತಿಯನ್ನ ಆಚರಿಸಲಾಯಿತು . ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯರು ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಭಾಗಿಯಾಗಿದ್ದರು.ದಲಿತ ಪರ ನಾಯಕರು ಮುಖಂಡರು ಭಾಗಿಯಾಗಿದ್ದರು .

Read More »

ಧಾರವಾಡದಲ್ಲಿ ಕೊರೋನಾ‌ ಪ್ರಕರಣ ಶೂನ್ಯ

ಧಾರವಾಡ : ಜಿಲ್ಲೆಯಲ್ಲಿಂದು ಕೊರೊನಾ ಸೋಂಕು ಶೂನ್ಯವಾಗಿದೆ . ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 84,088 ಕ್ಕೆ ಏರಿಕೆಯಾಗಿದೆ . ಇನ್ನು ಇಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಹೊಂದಿದ ಬಗ್ಗೆ ಯಾವುದೇ ವರದಿಯಾಗಿಲ್ಲ . ಈ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ ನಿನ್ನೆಯಂತೆ 82 , 694 ರವರೆಗೆ ಇದೆ.ಏರಿಕೆಯಾಗಿದೆ.ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿನಿಂದ ಸಾವು ಸಂಭವಿಸಿಲ್ಲ . ಈವರೆಗೆ ಒಟ್ಟು 1,384 ಮಂದಿ ಕೋವಿಡ್‌ಗೆ ಮೃತಪಟ್ಟಿದ್ದಾರೆ .

Read More »