Breaking News

Breaking News

ಮೇ 15ರಿಂದ ಶಾಲಾ ತರಗತಿ ಆರಂಭಿಸುವ ನಿರ್ಧಾರ : ನಾಗೇಶ್

‌ಮಂಗಳೂರು: ಕೊರೊನಾ ನಾಲ್ಕನೇ ಅಲೆ ಬರುವ ಸಾಧ್ಯತೆ ಇದ್ದರೂ ಮೇ 15ರ ಬಳಿಕ ಶಾಲಾ ತರಗತಿ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು. 3ನೇ ಅಲೆಯ ಸಂದರ್ಭದಲ್ಲಿ ಆತಂಕ ಇದ್ದರೂ ಶಾಲೆಗಳನ್ನು ತೆರೆದು ತರಗತಿ ನಡೆಸಿದ್ದೇವೆ. ಶಿಕ್ಷಣದ ಗುಣಮಟ್ಟ ಹಾಗೂ ಕಲಿಕಾ ಚೇತರಿಕೆ ಆಗ ಬೇಕಾಗಿರುವುದರಿಂದ ಈಗ ತರಗತಿಗಳನ್ನು ಬೇಗನೆ ಆರಂಭಿಸುವುದು ಅಗತ್ಯ ಎಂದವರು ಬುಧವಾರ ಇಲ್ಲಿ ಸುದ್ದಿಗಾರರಿಗೆ …

Read More »

ಕೋವಿಡ್ 4ನೇ ಅಲೆ : ಬೆಂಗಳೂರುನಲ್ಲಿ ಬೂಸ್ಟರ್ ಡೋಸ್ ಅಭಾವ

ಬೆಂಗಳೂರು: ಕೋವಿಡ್ 4ನೇ ಅಲೆ ಬಗ್ಗೆ ಎಚ್ಚರವಾಗಿರಿ ಅಂತ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಇಲ್ಲಿಗೆ ಮತ್ತೊಂದು ಅಲೆ ಬರೋದು ನಿಶ್ಚಿತ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಬೂಸ್ಟರ್ ಡೋಸ್ ಅಭಾವ ಎದುರಾಗಿದೆ. ಈಗಾಗಲೇ ಈ ಬಗ್ಗೆ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ ಅಂತ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನ ಬಗ್ಗೆ ಹೆಚ್ಚಿನ ಜಾಗೃತೆ ತೆಗೆದುಕೊಳ್ಳಲು ತಜ್ಞರು ಸೂಚಿಸಿದ್ದಾರೆ.

Read More »

ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ

ಮಂಗಳೂರು: ಡೀಮ್ಡ್ ಫಾರೆಸ್ಟ್ ನಿಯಮ ಸರಳಗೊಳಿಸಿ ರಾಜ್ಯದ ರೈತರ ಆತಂಕ ದೂರ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಮೂಡಬಿದರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 6.5 ಲಕ್ಷ ಎಕರೆ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ನಿಂದ ಹೊರಗಿಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ರಾಜ್ಯದ ರೈತರಿಗೆ ಅನೇಕ ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ನಿಯಮದಿಂದ ಆತಂಕ ಉಂಟಾಗಿತ್ತು.

Read More »

ಶಾಲೆ ಆರಂಭ ಕುರಿತು ಬೇಸರ ವ್ಯಕ್ತ ಪಡಿಸಿದ ಪೋಷಕರು… ಯಾಕೆ ಗೊತ್ತಾ?

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅವಧಿಗೆ ಮೊದಲೇ ಶಾಲೆಗಳನ್ನು ಆರಂಭಿಸಬೇಕು ಎನ್ನುವ ಶಿಕ್ಷಣ ಇಲಾಖೆ ಸೂಚನೆಗೆ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ. ಪ್ರವೇಶ ಶುಲ್ಕ ತೆತ್ತು, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್​ಡೌನ್ ಘೋಷಿಸುತ್ತಾರೆ. ಲಾಕ್​ಡೌನ್ ಹೇರಿಕೆ ಕಾರಣಕ್ಕೆ ಆನ್​ಲೈನ್ ತರಗತಿ ಆರಂಭಿಸುತ್ತಾರೆ. ಇದು ದೊಡ್ಡ ಹುನ್ನಾರ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

Read More »

ಬಾಲಿವುಡ್‌ ನಟನ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಕಾರಣಿಗಳು? ಅದು ಎನ್ನು ಅಂತೀರಾ ಈ ಸುದ್ದಿ ನೋಡಿ?

ಬೆಂಗಳೂರು: ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರ ‘ಹಿಂದಿ ರಾಷ್ಟ್ರ ಭಾಷೆ’ ಹೇಳಿಕೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದು, ‘ಹಿಂದಿ ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ’ ಎಂದಿದ್ದಾರೆ. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಇತ್ತೀಚೆಗೆ ಸುದೀಪ್‌ ನೀಡಿದ್ದ ಹೇಳಿಕೆಗೆ ಬಾಲಿವುಡ್‌ ನಟ ಅಜಯ್‌ ದೇವಗನ್ ಪ್ರತಿಕ್ರಿಯೆ ವಿವಾದ ಸೃಷ್ಟಿಸಿದೆ.

Read More »

ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಬೆಂಗಳೂರು : ಕಿರಿಯ ಪ್ರಾಥಮಿಕ ಶಾಲಾ ( 1 ರಿಂದ 5 ನೇ ತರಗತಿ) ಪದವೀಧರ ಶಿಕ್ಷಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಯಿಲ್ಲದೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ (6 ರಿಂದ 8 ನೇ ತರಗತಿ) ಬಡ್ತಿ ನೀಡಲು ಬಡ್ತಿ ಪ್ರಮಾಣವನ್ನು ಶೇ.40 ಕ್ಕೆ ಹೆಚ್ಚಿಸಲು ಅನುಮೋದಿಸಿದೆ. ರಾಜ್ಯ ಸರ್ಕಾರವುಉ ಬಡ್ತಿ ಮೂಲಕ ಭರ್ತಿ ಮಾಡುವ ಹುದ್ದೆ ಪ್ರಮಾಣ ಶೇ. 40 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಈ ಮೂಲಕ 52 ಸಾವಿರಕ್ಕೂ …

Read More »

ನಟಿ ತಾರಾ ತಾಯಿ ಪುಷ್ಪಾ ನಿಧನ

ಮೈಸೂರು: ನಟಿ ತಾರಾ ತಾಯಿ ಪುಷ್ಪಾ ನಿಧನ ಕನ್ನಡ ಹಿರಿಯ ನಟಿ ತಾರಾ ತಾಯಿ ಪುಷ್ಪಾ ಅನಾರೋಗ್ಯದಿಂದ ಬಳಲುತ್ತಿದ್ದ ಇಂದು ಚಿಕಿತ್ಸೆ ಫಲಕಾರಿಯಾದೇ ವಿಧಿವಶರಾಗಿದ್ದಾರೆ. ಪುಷ್ಪಾ( 76 ವರ್ಷದ). ಈ ವೇಳೆ ವಾಂತಿಯಿಂದ ತೀವ್ರ ಅಸ್ವಸ್ಥರಾಗಿದ್ದರು. ಆಗ ಕೂಡಲೇ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಯಿತಾದ್ರು, ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

Read More »

ದಿ‌ ೩೦ ರಿಂದ ಮೇ. ೩. ರವರೆಗೆ ಬಸವೇಶ್ವರ ಜಯಂತಿ ಉತ್ಸವ ಕಾರ್ಯಕ್ರಮ

ಹುಬ್ಬಳ್ಳಿ : ಶ್ರೀ ಗುರುಬಸವ ಮಂಟಪ ಟ್ರಸ್ಟ್ ಕಮೀಟಿ ವತಿಯಿಂದ ವಿಶ್ವಗುರು ಬಸವೇಶ್ವರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಇದೇ. ದಿ‌ ೩೦ ರಿಂದ ಮೇ. ೩. ರವರೆಗೆ ನಗರದ ವೀರಾಪೂರ ರಸ್ತೆಯ ಶ್ರೀ ಗುರು ಬಸವ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಶಶಿಧರ ಕರವೀರಶೆಟ್ಟರ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ೩೦ ರ ಕಾರ್ಯಕ್ರಮದಂದು ಮಹಾಮಹಿಮ ಸಂಗನ ಬಸವಣ್ಣನವರು ಘನಸಾನಿಧ್ಯ, ಮೂರುಸಾವಿರಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು …

Read More »

ಮೇ ೧೦ ರಂದು ಬೆಂಗಳೂರು ಚಲೋ

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಕಾಟಿಕ್ ಹಾಗೂ ಖಟಿಕ್ ಸಮಾಜದ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಕಾಟಿಕ್ ಹಾಗೂ ಖಟಿಕ್ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಮೇ ೧೦ ರಂದು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಂದು ದಿನದ ಬೃಹತ್ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಆರ್. ಕೆ. ಸಿದ್ದರಾಮಣ್ಣ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಟಿಕ್ ಹಾಗೂ ಖಟಿಕ್ ಜಾತಿಯು ಸಾಮಾಜಿಲ …

Read More »

ಏ.29 ರಿಂದ ಮೇ 1 ರವರೆಗೆ ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ವಜ್ರ ಮಹೋತ್ಸವ್

ಹುಬ್ಬಳ್ಳಿ: ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ವಜ್ರ ಮಹೋತ್ಸವವನ್ನು ಏ.29 ರಿಂದ ಮೆ.1 ರ ವರೆಗೆ ಮೂರು ದಿನಗಳಕಾಲ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಆಟ್ಸ ಸರ್ಕಲ್‌ನ ಚಂದ್ರಿಕಾ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅತ್ಯಂತ ಪ್ರಸಿದ್ಧ ಕಾಲವಿದರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಬೆಳಿಗ್ಗೆ 8 ಘಂಟೆ ಯಿಂದ 10.30 ವರೆಗೆ ಮತ್ತು ಸಂಜೆಯ 5 ಘಂಟೆಯಿಂದ 9 ರವರೆಗೆ ಅವದಿಯಲ್ಲಿ, ಮೂರು ದಿನಗಳ ಕಾಲ ಕೋಳಲು, ಸಂಗೀತ …

Read More »