Breaking News

Breaking News

ಶಿಕ್ಷಕರ ಬೇಡಿಕೆ ಈಡೇರದಿದ್ದರೆ ಅಹಿಂಸಾತ್ಮಕ ಚಳುವಳಿ ಹೋರಾಟ ಸತ್ಯಾಗ್ರಹ :ಸಜ್ಜನ

ಹುಬ್ಬಳ್ಳಿ :ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಶಿಕ್ಷಕರ ವಿವಿಧ ಬೇಡಿಕೆಗಳ ನೆನಗುದಿಗೆ ಬಿದ್ದಿದ್ದು, ಜೂನ್ ೧೫ ರೊಳಗೆ ಬೇಡಿಕೆ ಈಡೇರಿಸಬೇಕುಇಲ್ಲದಿದ್ದರೆ ಅಹಿಂಸಾತ್ಮಕ ಚಳುವಳಿ ಹೋರಾಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸರ್ಕಾರಕ್ಕೆ ಆಗ್ರಹಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಶೀಘ್ರವಾಗಿ ಕೇಂದ್ರ ಮಾದರಿ ಏಳನೇ ವೇತನ ಆಯೋಗ ಸಮಿತಿ ರಚಿಸಬೇಕು. ವಿಳಂವಾದಲ್ಲಿ ಶೇ. ಇಪ್ಪತೈದು ಮಧ್ಯಂತರ ಪರಿಹಾರ ನೀಡಬೇಕು, …

Read More »

ಜಗದೀಶ್ ಶೆಟ್ಟರ್ ವೈಫಲ್ಯ ಖಂಡಿಸಿ ವಿನೂತನ ಪ್ರತಿಭಟನೆ

ಹುಬ್ಬಳ್ಳಿ : ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮಾಜಿ ಸಿಎಂ, ಮಾಜಿ ಸಚಿವ 6 ಬಾರಿ ಶಾಸಕರಾದ ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ವೈಫಲ್ಯ ಖಂಡಿಸಿ ವಿನೂತನವಾಗಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ವಾರ್ಡ್ ನಂಬರ್ 58 ರಲ್ಲಿ ಪ್ರತಿಷ್ಠಿತ ಓಂ ಹೋಟೆಲ್ ಎದುರುಗಡೆ ಕೇಕ್ ಕಾರ್ನರ್ ದಿಂದ ಸೈಂಟ್ ಮೈಕಲ್ ಸ್ಕೂಲ್ ಹತ್ತಿರದ ಹದಗೆಟ್ಟ ರಸ್ತೆ ಮೇಲೆ ರಂಗೋಲಿ ಹಾಕಿ ಸಾರ್ವಜನಿಕರಿಂದ ವಿನೂತನ ಪ್ರತಿಭಟನೆ …

Read More »

ದಿಂಗಾಲೇಶ್ವರ ಶ್ರೀ ತಡೆಯಲು ನಾಕಾಬಂದಿ ಸಜ್ಜು

ಗದಗ: ಹಲವು ದಿನಗಳಿಂದ ಪರಿಷಂಟೇಜ್ ವಿಚಾರಕ್ಕೆ ಸಂಬಂಧಿಸಿದಂತೆ ದಿಂಗಾಲೇಶ್ವರ ಶ್ರೀ ಹಾಗೂ ಸರ್ಕಾರದ ಮದ್ಯೆ ಜಟಾಪಟಿ ನಡೆದೇ ಇದೆ. ಅದರಲ್ಲೂ ಸಚಿವ ಸಿ.ಸಿ. ಪಾಟೀಲ್ ಹಾಗೂ ಶ್ರೀಗಳ ವಿರುದ್ಧದ ವಾಕ್ಸಮರ್, ಶ್ರೀಗಳ ಭಕ್ತರು ಹಾಗೂ ಸಚಿವರ ಅಭಿಮಾನಿಗಳ ಮದ್ಯದಲ್ಲೂ ಬಂದು ನಿಂತಿದೆ. ಶ್ರೀಗಳ ಪೂರ್ವಾಶ್ರಮದ ಬಗೆಗಿನ ಹೇಳಿಕೆಯನ್ನು ಹಿಂಪಡೆದು ಕ್ಷಮಾಪಣೆ ಕೇಳಬೇಕು. ಇಲ್ಲದಿದ್ರೆ ಸಚಿವರ ಮನೆಯೆದುರು ಏ.27ರಂದು ಧರಣಿ ಹಮ್ಮಿಕೊಳ್ಳುವ ಬಗ್ಗೆ ಶ್ರೀಗಳು ಹೇಳಿಕೆ ನೀಡಿದ್ರು. ಈ ಹಿನ್ನೆಲೆಯಲ್ಲಿ ಇಂದು …

Read More »

ಸಮಾಜ ಸೇವಕ ಡಾ.ಯಲ್ಲಪ್ಪ ಹನಮಂತಪ್ಪಗೆ ಗೌರವ ಡಾಕ್ಟರೇಟ್

ಕುಂದಗೋಳ : ತಾಲೂಕಿನ ಚಾಕಲಬ್ಬಿ ಗ್ರಾಮದ ಯುವ ಮುಖಂಡ ಹಾಲಿ ಬೆಂಗಳೂರಿನ ವಾಸಿಯಾದ ಸಮಾಜ ಸೇವಕ ಡಾ.ಯಲ್ಲಪ್ಪ ಹನಮಂತಪ್ಪದಬಗೊಂದಿ ಅವರ ಸಮಾಜ ಸೇವೆಯನ್ನು ಗುರುತಿಸಿ ಯುನಿವರ್ಸಲ್ ಡೆವಲಪ್ಟೆಂಟ್ ಕೌನ್ಸಿಲ್ ಯುನಿವರ್ಸಿಟಿ ತಮಿಳುನಾಡು ಇವರು ಗೌರವ ಡಾಕ್ಟರೇಟ್’ನ್ನು ತಮಿಳುನಾಡಿನ ಹೊಟೇಲ್ ಕ್ಲಿಯರಸ್ಟ್’ನಲ್ಲಿ ಹೊಸೂರಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಡಾಕ್ಟರೇಟ್ ಪದವಿ ನೀಡಿ ಸಮಾಜಮುಖಿ ಕೆಲಸ ಮಾಡುವುದಕ್ಕೆ ನನ್ನನ್ನು ಪ್ರೇರೆಪಿಸಿದ ಯುನಿವರ್ಸಲ್ ಡೆವಲಪ್ಟೆಂಟ್ ಕೌನ್ಸಿಲ್ ಯುನಿವರ್ಸಿಟಿಗೆ ಸಮಾಜ ಸೇವಕ ಡಾ.ಯಲ್ಲಪ್ಪ ಹನಮಂತಪ್ಪದಬಗೊಂದಿ ಅಭಿನಂದನೆ …

Read More »

ಕಾಂಕ್ರೀಟ್ ಕಾಮಗಾರಿಗೆ ಭೂಮಿಪೂಜೆ ಸಲ್ಲಿಕೆ

ಹುಬ್ಬಳ್ಳಿ: ಶಾಸಕ ಪ್ರಸಾದ್ ಅಬ್ಬಯ್ಯ ವಾರ್ಡ್ ನಂ . 82 ರ ಸೋನಿಯಾಗಾಂಧಿ ನಗರದಲ್ಲಿ ಕೈಗೊಂಡಿರುವ 20 ಲಕ್ಷ ರೂ . ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು . ಈ ವೇಳೆಯಲ್ಲಿ ಬಡಾವಣೆಯ ಸಾರ್ವಜನಿಕರಿಗೆ ಶಾಸಕರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಇದ್ದರು .

Read More »

ವಾಲ್ಮೀಕಿ ಸಮಾಜದ ಮುಖಂಡ ಈರಣ್ಣಮಲ್ಲಿಗವಾಡ ನಿಧನ

ಧಾರವಾಡ : ನಗರದ ವಾಲ್ಮೀಕಿ ಸಮಾಜದ ಮುಖಂಡ ಈರಣ್ಣಮಲ್ಲಿಗವಾಡ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಸಾವಿಗೀಡಾಗಿದ್ದಾರೆ. ಧಾರವಾಡ ನಗರದಲ್ಲಿನ ಮನೆಯಲ್ಲಿ ಹೃದಯಾಘಾತವಾದ ನಂತರ ಅವರನ್ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ , ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.ನಗರದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದ ಈರಣ್ಣಮಲ್ಲಿಗವಾಡ ಹಲವು ಜನಪರ ಕಾರ್ಯಗಳನ್ನು ಮಾಡಿದ್ದರು . ಅವರ ಸಾವು , ನಗರದ ನೂರಾರೂ ಜನರಲ್ಲಿ ನೋವುಂಟು ಮಾಡಿದೆ .

Read More »

ವಸತಿ ರಹಿತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ಗ್ರಾಮೀಣ ಪ್ರದೇಶದಲ್ಲಿ 5 ಲಕ್ಷ ಸೇರಿ ಒಟ್ಟು 10 ಲಕ್ಷ 10 ಲಕ್ಷ ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರವು 2022-23ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಆಶ್ರಯ ಯೋಜನೆಗಳಡಿ ಗ್ರಾಮೀಣ ಭಾಗದಲ್ಲಿ ಸುಮಾರು 5 ಲಕ್ಷಗಳ ಮನೆ ನಿರ್ಮಾಣ, ನಗರ ಪ್ರದೇಶದಲ್ಲಿ ಮುಖ್ಯಮಂತ್ರಿಗಳ 1 ಲಕ್ಷ ಮನೆ ನಿರ್ಮಾಣ ಹಾಗೂ ಕೇಂದ್ರ ಸರಕಾರ ದಿಂದ 1.4 ಲಕ್ಷ ಮನೆ, ಸ್ಲಂ …

Read More »

ವಿದ್ಯುತ್ ಸರಬರಾಜು ಕುರಿತು‌ ಮಹತ್ವದ ನೀಡಿದ ಇಂಧನ ಸಚಿವ

ಕಾರ್ಕಳ : ರಾಜ್ಯದ ಜನತೆಗೆ ಇಂಧನ ಸಚಿವ ಸುನೀಲ್ ಕುಮಾರ್ ನೆಮ್ಮದಿಯ ಸುದ್ದಿ ನೀಡಿದ್ದು, ರಾಜ್ಯದಲ್ಲಿ ದಿನದ 24 ಗಂಟೆ ವಿದ್ಯುತ್ ಸರಬರಾಜಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Read More »

ದೇಶದಲ್ಲಿ 2,541 ಹೊಸ ಕರೋನಾ ಪ್ರಕರಣಗಳು ದಾಖಲು

ದೇಶದಲ್ಲಿ 2,541 ಹೊಸ ಕರೋನಾ ಪ್ರಕರಣಗಳು ದಾಖಲಾಗಿರುವುದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 4,30,60,086 ಎಂದು ಕೇಂದ್ರ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16,522 ಕ್ಕೆ ಏರಿದೆ. ಒಟ್ಟು 5,22,223 ಸಾವುಗಳು ವರದಿಯಾಗಿದ್ದು, 24 ಗಂಟೆಗಳಲ್ಲಿ ಇನ್ನೂ 30 ಕೋವಿಡ್ ಸಂತ್ರಸ್ತರು ಸಾವನ್ನಪ್ಪಿದ್ದಾರೆ.

Read More »

ರಾಜ್ಯದಲ್ಲಿ 24 ಗಂಟೆಗಳಲ್ಲಿ 85 ಕೋವಿಡ್ ಪ್ರಕರಣಗಳು ದೃಢ

ಬೆಂಗಳೂರು: 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 85 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,686ಕ್ಕೆ ಏರಿದ್ದು, 70 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 24 ಗಂಟೆಗಳಲ್ಲಿ 7,171 ಕೋವಿಡ್ ಪರೀಕ್ಷೆ ನಡೆಸಲಾಗಿದೆ.ಬೆಂಗಳೂರು ನಗರದಲ್ಲಿ 82 ಪ್ರಕರಣ, ವಿಜಯಪುರದಲ್ಲಿ 1 ಮತ್ತು ತುಮಕೂರಿನಲ್ಲಿ 2 ಪ್ರಕರಣ ದಾಖಲಾಗಿವೆ.

Read More »