Breaking News

Breaking News

ಟ್ವೀಟ್ ಆರೋಪ : ಶಾಸಕ ಜಿಗ್ನೇಶ್‌ ಮೆವಾನಿ ಬಂಧನ

ಕೋಕ್ರಜಾರ್‌, ಅಸ್ಸಾಂ: ಟ್ವೀಟ್‌ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡ ಗುಜರಾತ್‌ನ ಶಾಸಕ ಜಿಗ್ನೇಶ್‌ ಮೆವಾನಿ ಅವರನ್ನು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೆ ಬಂಧಿಸಲಾಗಿದೆ. ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಆರೋಪದಡಿ ಮೆವಾನಿ ಅವರನ್ನು ಅಸ್ಸಾಂನ ಪೊಲೀಸರು ಏ.19ರಂದು ಬಂಧಿಸಿದ್ದರು. ಕೋರ್ಟ್ ಈ ಬಗ್ಗೆ ಜಾಮೀನು ನೀಡಿತ್ತು. ಸರ್ಕಾರಿ ಸೇವೆಗೆ ಅಡ್ಡಿ ಆರೋಪಗಳಿಗೆ ಸಂಬಂಧಿಸಿ ಮೆವಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

Read More »

ಹಬ್ಬಗಳ ಕುರಿತು ಮಹತ್ವದ ಆದೇಶ ಹೊರಡಿಸಿದ ಸುಧಾಕರ್

ಬೆಂಗಳೂರು : ರಾಜ್ಯಕ್ಕೆ ಕೊರೊನಾ 4 ನೇ ಅಲೆ ಬರುವ ಬಗ್ಗೆ ಆತಂಕ ಎದುರಾಗಿದ್ದು, ಹಬ್ಬಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲರೂ ಸರಳ ಮಾರ್ಗಸೂಚಿ ಪಾಲಿಸಲು ಸಮಸ್ಯೆಯಾಗಲ್ಲ ಎಂದರು.

Read More »

ಸುಳ್ಳು ಜಾತಿ ಪ್ರಮಾಣ ಪಡೆದವರಿಗೆ ಬಿಗ್ ಶಾಕ್

ಬೆಂಗಳೂರು: ರಾಜ್ಯದಿಂದ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರೋ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗೆ ಸುಳ್ಳು ಮಾಹಿತಿ ನೀಡಿ, ಜಾತಿ ಪ್ರಮಾಣಪತ್ರವನ್ನು ಪಡೆದಿರುವ ಕುರಿತಂತೆ ಮಾಹಿತಿ ಸಂಗ್ರಹಿಸಿ, ನೀಡಲು ಇದೀಗ ಆದೇಶಿಸಿದೆ. ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದು, ರಾಜ್ಯದ ಹಲವಾರು ಕಡೆ ಅನರ್ಹರು ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿರೋ ಬಗ್ಗೆ ದಿನಾಂಕ 20-04-2022ರಂದು ನಡೆದ …

Read More »

ಮೂರನೇ ಮಹಾಯುದ್ಧ ಕುರಿತು ಎಚ್ಚರಿಕೆ ನೀಡಿದ ರಷ್ಯಾ

ಮಾಸ್ಕೋ : ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇದೀಗ ಮತ್ತೊಂದು ಅಪಾಯದ ಸೂಚನೆ ನೀಡಿದೆ. ಮೂರೇ ದಿನಕ್ಕೆ ಉಕ್ರೇನ್ ಮುಗಿಸಲು ಹೋದ ರಷ್ಯಾ ತಿಂಗಳು ಕಳೆದರೂ ಉಕ್ರೇನ್ ಕೈವಶ ಮಾಡಲು ಸಾಧ್ಯವಾಗಿಲ್ಲ. ಉಕ್ರೇನ್ ಬಹುತೇಕ ಧ್ವಂಸಗೊಂಡಿದ್ದರೂ ಹೋರಾಟ ನಿಂತಿಲ್ಲ. ಇತ್ತ ಹಲವು ದೇಶಗಳು ಉಕ್ರೇನ್‌ಗೆ ಬೆಂಬಲ ನೀಡಿದೆ. ಇದರ ಬೆನ್ನಲ್ಲೇ ಆಕ್ರೋಶಗೊಂಡಿರುವ ರಷ್ಯಾ, ಇದೀಗ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ.

Read More »

ಕೋವಿಡ್‌ ನಾಲ್ಕನೇ ಅಲೆಯ ಕುರಿತು ಮಹತ್ವ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಕೋವಿಡ್‌ ನಾಲ್ಕನೇ ಅಲೆಯ ಬಗ್ಗೆ ಚರ್ಚೆಯಾಗುತ್ತಿರುವುದು ಹಾಗೂ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸೋಮವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಜಾಗಗಳಲ್ಲಿ ಹಾಗೂ ಸಂಚಾರದ ವೇಳೆ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.

Read More »

ಮೋದಿ ಹೊರಿ ನಿಧನ

ಹುಬ್ಬಳ್ಳಿ: ಎಲ್ಲರಿಗೂ ಮೋದಿ ಎಂದು ಚಿರಪರಿಚಿತ ವಾದ ಹುಬ್ಬಳ್ಳಿ ಯ ಶ್ರೀ ಸಿದ್ಧಾರೂಢ ಮಠದ ಗೋ ಶಾಲೆ ಯ ಹಿರಿಯ ಹೋರಿ ಇಂದು ಉಭಯ ಸದ್ಗುರುಗಳಿಗೆ ತನ್ನ ಕೊನೆಯ ಸೇವೆ ಸಲ್ಲಿಸಿ ಕೊನೆ ಉಸಿರು ಎಳೆಯಿತು. ಈ ಹೋರಿಯು ಹುಟ್ಟಿನಿಂದಲೇ ಶ್ರೀ ಮಠದಲ್ಲಿ ಬೆಳೆದು ಈ ಹೋರಿ ಶ್ರೀ ಮಠದ ಸಭೆ ಸಮಾರಂಭ ಮೆರವಣಿಗೆ ಗಳಲ್ಲಿ ಮುಂಚೂಣಿ ವಹಿಸಿ ತನ್ನ ಸೇವೆ ಸಲ್ಲಿಸುತಿತ್ತು. ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಸದ್ಗುರುಗಳ …

Read More »

ಹುಬ್ಬಳ್ಳಿ ಗಲಭೆಯಲ್ಲಿ ಯಾವುದೇ ಪಕ್ಷದ ಮುಖಂಡರು ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು: ಶೆಟ್ಟರ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಯಾವುದೇ ಪಕ್ಷದ ಮುಖಂಡರು ಭಾಗಿಯಾಗಿದ್ದರೂ ಕಾನೂನು ರೀತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹುಬ್ಬಳ್ಳಿಯ ಶಾಂತಿಗೆ ದಕ್ಕೆಯನ್ನುಂಟು ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಬಿಜೆಪಿ ಪ್ರಮುಖರ ಸಭೆಯ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,‌ ಸುಮಾರು ವರ್ಷಗಳಿಂದ ಯಾವುದೇ ಗಲಾಟೆ ಹಾಗೂ ಕೋಮುಗಲಭೆ ಇಲ್ಲದಿರುವ ಹುಬ್ಬಳ್ಳಿಯಲ್ಲಿ ಈಗ ಏಕಾಏಕಿ ಅಶಾಂತಿಯನ್ನು ಹುಟ್ಟು ಹಾಕಲಾಗಿದೆ. ಈ ಘಟನೆಯಲ್ಲಿ …

Read More »

ನ್ಯಾಯಾಲಯ ಅಧಿಕಾರಿ ರಾಜೇಶ ಚಿನ್ನಣ್ಣವರ ಮನೆ ಕಳ್ಳತನ

ಹುಬ್ಬಳ್ಳಿ : ನಗರದ ಅಮರಗೋಳದ ಕೆಎಚ್‌ಬಿಯ ನ್ಯಾಯಾಧೀಶರ ಕಾಲೊನಿಯ ನ್ಯಾಯಾಲಯ ಅಧಿಕಾರಿ ರಾಜೇಶ ಚಿನ್ನಣ್ಣವರ ಅವರ ಮನೆ ಬಾಗಿಲು ಮುರಿದು ರೂ.17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ. ರೂ,1,80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 37 ಸಾವಿರ ನಗದು ಕಳವು ಮಾಡಲಾಗಿದೆ.ಈ ಕುರಿತು ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸಚಿವ ವಿ ಸೋಮಣ್ಣ ಅವರಿಗೆ ಟೋಪಿ ಹಾಕಿದ ಮಾಜಿ ಸಿಎಂ

ಹುಬ್ಬಳ್ಳಿ: ನಗರದ ಖಾಸಗಿ ಹೊಟೇಲ್ ದಲ್ಲಿ ನಡೆಯುತ್ತಿರುವ ಬಿಜೆಪಿ ವಿಭಾಗಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಸತಿ ಸಚಿವ ವಿ ಸೋಮಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷದ ಟೋಪಿ ಹಾಕಿದರು. ಸೋಮಣ್ಣ ಅವರಿಗೆ ಟೋಪಿ‌ಹಾಕುವ ಮೊದಲು ಶೆಟ್ಟರ್ ಅವರು ತಾನೂ ಟೋಪಿ ಹಾಕಿಕೊಂಡರು. ಈ ಸಂಧರ್ಭದಲ್ಲಿ ಅವರೊಂದಿಗೆ ಮಹೇಶ ಟೆಂಗಿನಕಾಯಿ, ನಾರಾಯಣ ಜರತಾರಘರ ಹಾಗೂ ಇತರರು ಉಪಸ್ಥಿತರಿದ್ದರು.

Read More »

ಬುದ್ಧಿಮಾಂದ್ಯ ಮಕ್ಕಳ ಜೊತೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಕಲಂದರ್ ಮುಲ್ಲಾ

ಹುಬ್ಬಳ್ಳಿ: ಹುಟ್ಟು ಹಬ್ಬ ಬಂತಂದರೆ ಸಾಕು ಪಾರ್ಟಿ, ಮೊಜು ಮಸ್ತಿ ಮಾಡುವುದೆ ಹೆಚ್ಚು. ಆದರೆ ಇಲ್ಲೊಬ್ಬ ಯುವನಾಯಕ ಬುದ್ಧಿಮಾಂದ್ಯ ಮಕ್ಕಳೊಂದಿಗೆ ವಿಶೇಷವಾಗಿ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲಂದರ್ ಮುಲ್ಲಾ ಹಟೇಲಸಾಬ್ ಅವರು, ಇಂದು ತಮ್ಮ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯ ಉಣಕಲ್‌ದಲ್ಲಿರುವ ಮಂದಮತಿ ಮಹಿಳೆಯರ ಅನುಪಾಲನಾ ವಸತಿಯಲ್ಲಿ ಮಕ್ಕಳ ಕೈಯಿಂದ ಸಸಿಗಳನ್ನು ನೆಟ್ಟಿಸಿ, ಮಕ್ಕಳಿಗೆ ಸಿಹಿ ಹಂಚಿ, ಊಟ …

Read More »