Breaking News

Breaking News

ದೇವರ ತಾಳಿಯೇ ಈ ಕಳ್ಳರ ಟಾರ್ಗೆಟ್‌ – 22 ದೇವಸ್ಥಾನ ದೋಚಿದ್ದ ನಶೆಕೋರರ ಗ್ಯಾಂಗ್‌ ಸೆರೆ!

ತುಮಕೂರು: ಡ್ರಗ್ಸ್ ಚಟಕ್ಕಾಗಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರು ಮಂದಿಯ ಗ್ಯಾಂಗ್ ಅನ್ನು ತುರುವೆಕೆರೆ ಪೊಲೀಸರು ಬಂಧಿಸಿದ್ದು, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಕಳವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಹಾಸನ ಮತ್ತು ಮಂಡ್ಯ ಮೂಲದವರಾಗಿದ್ದು, ತುಮಕೂರು ಜಿಲ್ಲೆಯ 22 ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಹುಂಡಿ ಹಣದ ಜೊತೆಗೆ ದೇವಿಯ ಮೂರ್ತಿಗಳ ಚಿನ್ನದ ತಾಳಿಗಳನ್ನೂ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಕಳ್ಳತನಕ್ಕೆ …

Read More »

ಬೆಂಗಳೂರಿನಲ್ಲಿ ಘನಘೋರ ದುರಂತ: ಕಲ್ಲು ಕ್ವಾರಿಯಲ್ಲಿ ಬಂಡೆ ಸ್ಫೋಟಕ್ಕೆ 7 ಕಾರ್ಮಿಕರು ಬಲಿ

ಬೆಂಗಳೂರು: ದಕ್ಷಿಣ ತಾಲೂಕಿನ ಮಾದಪಟ್ಟಣ ಸಮೀಪದ ಕಲ್ಲು ಕ್ವಾರಿಯಲ್ಲಿ ಬೃಹತ್ ಬಂಡೆ ಕುಸಿದು ಏಳು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟ ದುರಂತ ಬುಧವಾರ ಬೆಳಗ್ಗೆ ಸಂಭವಿಸಿದೆ. ಮಾದಪಟ್ಟಣದ ಕಾವೇರಿ ಕ್ರಷರ್‌ನಲ್ಲಿ ಬ್ಲಾಸ್ಟಿಂಗ್ ವೇಳೆ ಬಂಡೆ ಕುಸಿದು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಜೆಸಿಬಿ ಮೂಲಕ ಬಂಡೆ ತೆರವು ಕಾರ್ಯ ಮುಂದುವರಿದಿದೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸರು …

Read More »

ಮೈಸೂರಲ್ಲಿ 1.20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಭೂಮಾಪಕ ಲೋಕಾಯುಕ್ತ ಬಲೆಗೆ

ಮೈಸೂರು : 1.20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಭೂಮಾಪಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮೈಸೂರಿನ ದಟ್ಟಗಳಿಯ ಹೋಟೆಲ್ ಬಳಿ ನಡೆದಿದೆ. ಹೋಟೆಲ್ ಬಳಿ ನಂಜನಗೂಡು ತಾಲೂಕು ಭೂಮಾಪಕ ಜಯಪ್ರಕಾಶ್ 1.20 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 1.50 ಲಕ್ಷ ಲಂಚಕ್ಕೆ ಜಯಪ್ರಕಾಶ್ ಬೇಡಿಕೆ ಇಟ್ಟಿದ್ದ ಮಾತುಕತೆಯ ವೇಳೆ 1.30 ಲಕ್ಷಕ್ಕೆ ಭೂಮಾಪಕ ಒಪ್ಪಿದ್ದ. ಇಂದು 1. 20 ಲಕ್ಷ ಲಂಚ …

Read More »

ಅಕ್ರಮವಾಗಿ ಕೇರಳ ಲಾಟರಿ ಮಾರಾಟ: ಇಬ್ಬರು ಅರೆಸ್ಟ್

ಚಾಮರಾಜನಗರ: ಅಕ್ರಮವಾಗಿ ಕೇರಳ ಲಾಟರಿ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೇರಳ ಲಾಟರಿ ಜಪ್ತಿ ಮಾಡಲಾಗಿದೆ. ಮೈಸೂರು ಮೂಲದ ಚಿನ್ನತಂಬಿನಾಯ್ಡು (86) ಹಾಗೂ ಯಳಂದೂರಿನ ಮಹೇಶ್ (25) ಬಂಧಿತ ಆರೋಪಿಗಳಾಗಿದ್ದಾರೆ. ಗುಂಡ್ಲುಪೇಟೆ ಹಾಗೂ ಸಂತೇಮರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಗುಂಡ್ಲುಪೇಟೆಯಲ್ಲಿ 55 ಸಾವಿರ ಮೌಲ್ಯದ 1,100 ಲಾಟರಿ ಟಿಕೆಟ್, ಸಂತೇಮರಹಳ್ಳಿ 57 ಸಾವಿರ ಮೌಲ್ಯದ 1,140 …

Read More »

ರಟ್ಟಿಹಳ್ಳಿಯಲ್ಲಿ ಮೊಟ್ಟೆ ವ್ಯಾಪಾರದ ಜಗಳ ಕೊಲೆಯಲ್ಲಿ ಅಂತ್ಯ, ಮೂವರು ಅರೆಸ್ಟ್!

ಹಾವೇರಿ: ರಟ್ಟಿಹಳ್ಳಿಯಲ್ಲಿ ಮೊಟ್ಟೆ ಖರೀದಿಸುವ ವೇಳೆ ಚಿಲ್ಲರೆ ಹಣದ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಅಂಗಡಿ ಮಾಲೀಕ ಶಿವಾಜಿರಾವ್ ಬೈರೋಜಿ (55) ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ರಟ್ಟಿಹಳ್ಳಿ ಪೊಲೀಸರು ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರಿದಿದೆ. ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ, ಇದು ಚಿಲ್ಲರೆ ಹಣದ ವಿವಾದದಿಂದ ನಡೆದ ಘಟನೆ ಎಂದು ಎಸ್‌ಪಿ ಯಶೋದಾ ವಂಟಗೋಡಿ ಸ್ಪಷ್ಟಪಡಿಸಿದ್ದಾರೆ. ಮರಣೋತ್ತರ …

Read More »

ಅಕ್ರಮ ಗೋದಾಮು ಪತ್ತೆ: 8,000ಕ್ಕೂ ಹೆಚ್ಚು ಕೊಡೈನ್ ಕೆಮ್ಮಿನ ಸಿರಪ್ ಬಾಟಲಿಗಳು ವಶ

ಬಹ್ರೈಚ್ (ಉತ್ತರ ಪ್ರದೇಶ): ಅಕ್ರಮ ಗೋದಾಮಿನ ಮೇಲೆ ಅಧಿಕಾರಿಗಳು ನಡೆಸಿದ ಜಂಟಿ ದಾಳಿಯಲ್ಲಿ ಕೊಡೈನ್ ಅಂಶವಿರುವ 8,000ಕ್ಕೂ ಹೆಚ್ಚು ಕೆಮ್ಮಿನ ಸಿರಪ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಔಷಧ ವ್ಯಾಪಾರಿಯೊಬ್ಬನನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿದ್ದಾರೆ. ದರ್ಗಾ ಷರೀಫ್ ಪೊಲೀಸ್ ವ್ಯಾಪ್ತಿಯ ಪರ್ಸೌರಾ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಗೋದಾಮಿನಲ್ಲಿ ಸಿರಪ್ ಸಂಗ್ರಹಿಸಿದ್ದ ಅಜಯ್ ಕುಮಾರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಬೇರೆ ವಿಳಾಸಕ್ಕೆ ಮಾತ್ರ ಔಷಧ ಮಾರಾಟ ಪರವಾನಗಿ ಹೊಂದಿದ್ದ ಎಂದು ಅಧಿಕಾರಿಗಳು …

Read More »

ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದ ಬೇಬಿ ಕೇರ್ ಸೆಂಟರ್ ಬಂದ್ ಮಾಡಿ ಬೀಗ ಜಡಿದ ಪೊಲೀಸರು

ಬೆಂಗಳೂರು: ಬ್ರೂಕ್‌ಫೀಲ್ಡ್‌ನ ಬೇಬಿ ಕೇರ್ ಸೆಂಟರ್‌ನಲ್ಲಿ ಮಕ್ಕಳ ಮೇಲೆ ಸಿಬ್ಬಂದಿ ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಂದ್ರವನ್ನು ಬಂದ್ ಮಾಡಿ ಬೀಗ ಜಡಿದಿದ್ದಾರೆ. ವೈರಲ್ ವಿಡಿಯೊ ಆಧರಿಸಿ ಹೆಚ್‌ಎಎಲ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಐವರು ಸಿಬ್ಬಂದಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಸಿಬ್ಬಂದಿ ತಲೆಮರೆಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ವೈರಲ್ ವಿಡಿಯೊ ಹಳೆಯದಾಗಿದೆ ಎಂದು ತಿಳಿದುಬಂದಿದ್ದು, ಮಕ್ಕಳ ಸಹಾಯವಾಣಿ ಅಧಿಕಾರಿಗಳ ದೂರಿನ ಮೇರೆಗೆ ಮಂಜುಳ, ವಿಜಯಲಕ್ಷ್ಮೀ, …

Read More »

ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮದ್ವೆಯಾಗೋದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ : ಕಾಮುಕ ಉಪನ್ಯಾಸಕ ಅರೆಸ್ಟ್‌!

ಬಳ್ಳಾರಿ: ಖಾಸಗಿ ಕಾಲೇಜಿನ ಉಪನ್ಯಾಸಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ. ನಗರದ ಖಾಸಗಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿದ್ದ ರವಿಕಿರಣ್ ವಿರುದ್ಧ ವಿದ್ಯಾರ್ಥಿನಿಯ ಪೋಷಕರು ದೂರು ನೀಡಿದ್ದು, ಆರೋಪಿ ಈಗಾಗಲೇ ವಿವಾಹಿತನಾಗಿರುವ ವಿಚಾರ ಬಳಿಕ ಬೆಳಕಿಗೆ ಬಂದಿದೆ. ದೂರಿನ ಆಧಾರದ ಮೇಲೆ ಮಹಿಳಾ ಠಾಣೆ ಪೊಲೀಸರು ಪೋಕ್ಸೊ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read More »

ಮೇಕೆ ಮಾಂಸದಲ್ಲಿ ಎಮ್ಮೆ ಮಾಂಸ ಬೆರೆಸಿ ಹೋಟೆಲ್ ಗಳಿಗೆ ಪೂರೈಕೆ : ಆಘಾತಕಾರಿ ವಿಡಿಯೋ ವೈರಲ್

ಹೈದರಾಬಾದ್: ನಗರದ ಎರಡು ಕಡೆ ನಡೆದ ದಾಳಿಯಲ್ಲಿ ಕಲಬೆರಕೆ ಮಾಂಸ ಹಾಗೂ ರಾಸಾಯನಿಕ ಬಳಸಿ ಸಂಸ್ಕರಿಸಿದ ಕೊಳೆತ ಮೀನು ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಹಬೀಬ್‌ನಗರದಲ್ಲಿ ಮೇಕೆ ಮಾಂಸದ ಹೆಸರಲ್ಲಿ ಎಮ್ಮೆ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನಿಂದ 50 ಕೆಜಿ ಕಲಬೆರಕೆ ಮಾಂಸವನ್ನು ಜಪ್ತಿ ಮಾಡಿ ಪರೀಕ್ಷೆಗೆ ಕಳುಹಿಸಲಾಗಿದೆ. ಮಂಗಳಹಾಟ್‌ನಲ್ಲಿ ಕೊಳೆತ ಮೀನು ಮತ್ತು ಸೀಗಡಿಗೆ ರಾಸಾಯನಿಕ ಬಳಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದು, 262 ಕೆಜಿ ಕೊಳೆತ …

Read More »

ಹು-ಧಾ ಕಾಂಗ್ರೆಸ್‌ಗೆ ಹೊಸ ಸಾರಥಿ ಯಾರು..? ಅಶ್ಪಾಕ್ ಕುಮಟಾಕರ್ ಹೆಸರು ಹೈಕಮಾಂಡ್ ಅಂಗಳದಲ್ಲಿ ಸದ್ದು..!

ಬಿ.ಕೆ. ಹರಿಪ್ರಸಾದ್ ಭೇಟಿ ಬಳಿಕ ರಾಜಕೀಯ ಸಂಚಲನ: ಮಹಾನಗರ ಜಿಲ್ಲಾಧ್ಯಕ್ಷ ಗಾದಿಗೆ ಅಶ್ಪಾಕ್ ಫಿಕ್ಸ್..? ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸ ಟ್ವಿಸ್ಟ್..! ಅಶ್ಪಾಕ್ ಕುಮಟಾಕರ್ ಹೆಸರು ಮುಂಚೂಣಿಗೆ; ಬಿ.ಕೆ. ಹರಿಪ್ರಸಾದ್ ಭೇಟಿ ಬಳಿಕ ರಾಜಕೀಯ ಚರ್ಚೆ ಕಾವು.. ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಾಜಕೀಯ ಅಂಗಳದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಮಹಾನಗರ ಜಿಲ್ಲಾ ಅಧ್ಯಕ್ಷ ಸ್ಥಾನದ ರೇಸ್ ದಿನೇದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಈ ಪಟ್ಟಿಯಲ್ಲಿ ಅಶ್ಪಾಕ್ …

Read More »