Breaking News

Breaking News

ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

ಕುಂದಗೋಳ: ತಾಲೂಕಿನ ಅಲ್ಲಾಪೂರ ಗ್ರಾಮದ ಎರಡು ಅಂಗನವಾಡಿ ಕೇಂದ್ರದಲ್ಲಿ ಇಂದು 131 ನೇ ಅಂಬೇಡ್ಕರ್‌ ಜಯಂತಿ ಅಂಗವಾಗಿ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರೆಡ್ಡಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಒಂದನೇ ಅಂಗನವಾಡಿ ಕೇಂದ್ರಕ್ಕೆ ಚೇರ್ ಟೇಬಲ್ ಇನ್ನು ಹಲವಾರು ವಸ್ತುಗಳನ್ನು ಸಹಾಯ ಹಸ್ತ ನೀಡಿದ ಗ್ರಾಮದ ದಾನಿಗಳಿಗೆ ಒಂದನೇ ಅಂಗನವಾಡಿ ಕಾರ್ಯಕರ್ತೆ ಯಿಂದ ಸಸಿ ನೀಡುವ ಮೂಲಕ ಗೌರವಿಸಿದರು ಈ ಸಂದರ್ಭದಲ್ಲಿ …

Read More »

ಸಂವಿಧಾನ ಶಿಲ್ಪಿಯ ಜಯಂತಿ ಆಚರಣೆ

ಧಾರವಾಡ: ವಿಶ್ವ ರತ್ನ , ಭಾರತರತ್ನ , ವಿಶ್ವಚೇತನ , ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ 131 ನೇಯ ಜಯಂತಿ ಅಂಗವಾಗಿ ಧಾರವಾಡದ ದಲಿತ ಹಿತ ಸಭಾ ವತಿಯಿಂದ ಲಕ್ಷಣ ಬೀಳಗಿ ಹಾಗೂ ಪದಾಧಿಕಾರಿಗಳು ಅಂಬೇಡ್ಕರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು .

Read More »

ವಿಶೇಷ ರೀತಿಯಲ್ಲಿ ಮಹಾವೀರ ಜಯಂತಿ ಮಾಡಿದ ಜನ

ಕುಂದಗೋಳ: ಗುಡೇನಕಟ್ಟಿ ಗ್ರಾಮದಲ್ಲಿ ಭಗವಾನ್ ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಆನೆಯ ಭಾವಚಿತ್ರ ಚಕ್ಕಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಬಾಹುಬಲಿ ಮಲ್ಲಿಗವಾಡ ಬಸವರಾಜ ಯೋಗಪ್ಪನವರ ಇನ್ನಿತರ ಇದ್ದರು.

Read More »

ಇಫಿಯಾರ್ ಕೂಟ ದಲ್ಲಿ ಪ್ರಸಾದ್ ಅಬ್ಬಯ್ಯ ಭಾಗಿ

ಹುಬ್ಬಳ್ಳಿ : ಮುಸ್ಲಿಂ ಭಾಂದವರ ಪವಿತ್ರ ರಂಜಾನ್ ಅಂಗವಾಗಿ ಕಮರಿಪೇಟೆಯ ಜಿ- ಅಡ್ಡೆಯಲ್ಲಿ ಹಮ್ಮಿಕೊಂಡಿದ್ದ ” ಇಫಿಯಾರ್ ಕೂಟ ” ದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯಭಾಗಿಯಾಗಿದರು . ಇದೆ ವೇಳೆಯಲ್ಲಿ ಸಮಸ್ತ ಮುಸ್ಲಿಂ ಭಾಂದವರಿಗೆ ರಂಜಾನ್ ಮಾಸದ ಶುಭ ಹಾರೈಸಿದರು.

Read More »

ಧಾರವಾಡದಲ್ಲಿ ಮಹಾವೀರ ಜಯಂತಿ ಆಚರಣೆ

ಧಾರವಾಡ: ನಗರದ ಸಂಗಮ ಸರ್ಕಲ್ ಬಳಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಲಾದ್ ಜೋಷಿ ಭಾಗಿಯಾಗಿ ಮಾತನಾಡಿದ ಅವರು ಮಹಾವೀರರ ಚಿಂತನೆಗಳನ್ನು ಭಾರತ ಅಳವಡಿಸಿಕೊಂಡಿರುವುದೇ ಇಂದು ಭಾರತದಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ ಇದನ್ನು ಜಗತ್ತು ಅರಿತುಕೊಂಡು ಸಾಗಿದರೆ ಜಗತ್ತಿನಲ್ಲಿ ಕೂಡ ಶಾಂತಿಯುತ ವಾತಾವರಣ ನಿರ್ಮಿಸಲು ಸಾಧ್ಯ ಎಂದರು ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು .

Read More »

ಭಗವಾನ್ ಮಹಾವೀರರ ಆದರ್ಶಗಳು ಎಲ್ಲರಿಗೂ ಪ್ರೇರಣಾದಾಯಕವಾಗಿದೆ : ಸಿಎಂ

ಬೆಂಗಳೂರು: ಚಿಕ್ಕ ವಯಸ್ಸಿನಲ್ಲಿ ಸರ್ವಸಂಗ ಪರಿತ್ಯಾಗಿಯಾಗಿದ್ದ ಭಗವಾನ್ ಮಹಾವೀರರ ಆದರ್ಶಗಳು ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶ್ರಮಣ ಭಗವಾನ್ ಮಹಾವೀರರ 2621ನೇ ಜನ್ಮಕಲ್ಯಾಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜೈನ ಸಮುದಾಯದವರು ಉನ್ನತ ಮಟ್ಟದ ತತ್ವಗಳನ್ನು ಪರಿಪಾಲನೆ ಮಾಡುತ್ತಾರೆ. ‘ಅಹಿಂಸೋ ಪರಮೋ ಧರ್ಮ’ ಎಂಬ ನೀತಿಯನ್ನು ಜೈನರು ನೂರಕ್ಕೆ ನೂರರಷ್ಟು ಪಾಲಿಸುತ್ತಾರೆ. ಅಹಿಂಸೆಯ ತತ್ವದಲ್ಲಿ ಕರುಣೆ, ಮಮತೆ ಹಾಗೂ ಆದರ್ಶದ ಬದುಕಿದೆ ಎಂದರು.

Read More »

ಬೇಸಿಗೆ ಮಳೆಯ ಅಬ್ಬರ : ರೈತರಿಬ್ಬರು ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಮಳೆಯ ಅಬ್ಬರ ಮುಂದುವರೆದಿದ್ದು, ಬೆಳಗಾವಿ ಮತ್ತು ವಿಜಯಪುರದಲ್ಲಿ ಸಿಡಿಲು ಬಡಿದು ರೈತರಿಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ತುಮ್ಮರಗುದ್ದಿ ಗ್ರಾಮದ ಭೀಮಪ್ಪ ಅಡಿವೆಪ್ಪ ಬಸರಿಮರದ(25) ಎಮ್ಮೆ ಮೇಯಿಸಲು ಹೋದಾಗ ಸಿಡಿಲು ಬಡಿದು ಅಸುನೀಗಿದ್ದರೆ, ಈತನ ತೆಗೆದುಕೊಂಡು ಹೋಗಿದ್ದ ಎಮ್ಮೆ ಕೂಡ ಸಿಡಿಲಿಗೆ ಬಲಿಯಾಗಿದೆ. ವಿಜಯಪುರ ತಾಲೂಕಿನ ಮದಭಾವಿ ಗ್ರಾಮದಲ್ಲಿ ಜಮೀನಿನಿಂದ ವಾಪಸ್‌ ಮನೆಗೆ ಬರುವಾಗ ಸಿಡಿಲು ಬಡಿದು ಮರೆಮಸಾಬ ಸಾಹೇಬಲಾಲ …

Read More »

ಏ.18ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಬೆಂಗಳೂರು, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ಸಂಜೆಯೂ ಜೋರಾಗಿ ಮಳೆಯಾಗಿದೆ. ಕರ್ನಾಟಕದ ಕರಾವಳಿ ಸೇರಿದಂತೆ ಕೆಲವು ಕಡೆ ಮುಂದಿನ 4 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳ ಕೆಲವು ಕಡೆ ಏ.18ರವರೆಗೆ ಮಳೆಯಾಗುವ ಸಂಭವವಿದೆ.

Read More »

ಬಿಜೆಪಿ ವಿಕೆಟ್ ಪತನ : ಈಶ್ವರಪ್ಪ ರಾಜೀನಾಮೆ ಘೋಷಣೆ

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್​ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ 3 ದಿನ ಮಾತಾಡಲ್ಲ ಎಂದಿದ್ದ ಕೆ.ಎಸ್​ ಈಶ್ವರಪ್ಪ, ದಿಢೀರ್​ ಸುದ್ದಿಗೋಷ್ಠಿ ಕರೆದು ರಾಜೀನಾಮೆ ನೀಡೋದಾಗಿ ಘೋಷಣೆ ಮಾಡಿದ್ದಾರೆ. ನಾಳೆಯೇ ರಾಜೀನಾಮೆ ನೀಡೋದಾಗಿ ಘೋಷಿಸಿದ್ದಾರೆ. ನಾಳೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರಕ್ಕೆ ಇರಿಸುಮುರಿಸು ಆಗಬಾರದು. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವೆ ಎಂದ್ರು  ಈ ಆರೋಪದಿಂದ ಮುಕ್ತನಾಗಿ ಬರುತ್ತೇನೆ. ಸಮಗ್ರ ತನಿಖೆ ಮಾಡುತ್ತೇವೆ ಎಂದು ಸಿಎಂ …

Read More »

ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನತೆಗೆ ಮಳೆರಾಯನ ಅಬ್ಬರ

ಹುಬ್ಬಳ್ಳಿ : ಬಿಸಿಲಿನ ಬೇಗೆಯಿಂದ ಬೆಂದಿದ್ದ ವಾಣಿಜ್ಯ ನಗರಿಯಲ್ಲಿ ಗುಡುಗು ಸಹಿತ ಭಾರೀ ಮಹಿಳೆಯಿಂದಾಗಿ ಕೆಲ ಕಾಲ ತಂಪಾದ ವಾತಾವರಣ ನಿರ್ಮಾಣವಾಯಿತು. ಇಂದು ಸಂಜೆ ಸುರಿದ ಬಾರಿ ಮಳೆಯಿಂದಾಗಿ ನಗರದ ಜನತೆ ಕೂಲ್ ಕೂಲ್ ಆದರು. ಛತ್ರಿ ಮೊರೆ ಹೋದ ಸಾರ್ವಜನಿಕರು ಮಳೆಯಲ್ಲಿಯೇ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು. ವಾಹನ ಸವಾರರು ಮಳೆಯಲ್ಲಿ ‌ನೆನದು ಸವಾರಿ ಮಾಡಿದರು. ನಗರದಾದ್ಯಂತ ಬಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ಪ್ರದೇಶಗಳಲ್ಲಿನ ಮನೆಗಳಿಗೆ …

Read More »