admin
March 24, 2022
Breaking News, ಬೆಂಗಳೂರು
ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ತಿದ್ದುಪಡಿಗಳನ್ನು ರದ್ದುಪಡಿಸಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಸಂಯುಕ್ತ ಹೋರಾಟ -ಕರ್ನಾಟಕ ನಗರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಜನ ಪರ್ಯಾಯ ಬಜೆಟ್ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಉಳುವವನೇ ನೆಲದ ಒಡೆಯನಾಗಬೇಕು ಎಂಬ ಉದ್ದೇಶದಿಂದ ಭೂಸುಧಾರಣಾ ಕಾಯ್ದೆ ಜಾರಿಗೆ ತರಲಾಗಿತ್ತು. ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ‘ಉಳ್ಳವನೇ ನೆಲದೊಡೆಯ’ ಎಂಬಂತಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶವನ್ನೇ ನೆಪ …
Read More »
admin
March 24, 2022
Breaking News, ಕಲಬುರಗಿ
ಕಲಬುರಗಿ: ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿರುವ ರಾಜ್ಯ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಹುಮಾನ ನೀಡಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಕಿದರು. ‘ಬಡ ರೈತರ ಹೊಲಗಳಿಗೆ ಬೋರ್‌ವೆಲ್ ಕೊರೆಸುವ ಗಂಗಾ ಕಲ್ಯಾಣ ಯೋಜನೆಯಲ್ಲಿಯೂ ಭಾರಿ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Read More »
admin
March 24, 2022
Breaking News, ಬೆಂಗಳೂರು
ಬೆಂಗಳೂರು :ಅಂಡಮಾನ್ ನಿಕೋಬಾರ್ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮುಂತಾದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ.
Read More »
admin
March 24, 2022
Breaking News, ಬೆಂಗಳೂರು
ಬೆಂಗಳೂರು: ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯವು ತಾಲೂಕಿಗೂ ವಿಸ್ತರಿಸುತ್ತದೆ. ಬಳಿಕ ಸೌತೆಕಾಯಿ, ಬದನೆಕಾಯಿ, ಮೆಣಸಿನಕಾಯಿ ಎಲ್ಲದಕ್ಕೂ ಒಂದೊಂದು ವಿವಿಗಳು ಬರಬಹುದು ಎಂದು ಮಾಜಿ ಸಚಿವ ಕೆ. ಆರ್. ರಮೇಶ್ಕುಮಾರ್ ವ್ಯಂಗ್ಯವಾಡಿದ್ದಾರೆ. ಮಾತನಾಡಿದ ಅವರು, ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯ ಮಾಡುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದರು. ಜಿಲ್ಲೆಗೊಂದು ವಿವಿ ಬೇಡಿಕೆ ಬರುವುದನ್ನು ಪೂರೈಸಲು ಸರಕಾರ ಮುಂದಾಗುತ್ತಿದೆ. ಇದು ತಾಲೂಕುಗೂ ವಿಸ್ತರಿಸಬಹುದು. ಮುಂದೆ ಸೌತೆಕಾಯಿ, ಬದನೆಕಾಯಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು …
Read More »
admin
March 24, 2022
Breaking News, ಬೆಂಗಳೂರು
ಬೆಂಗಳೂರು : ಯುಗಾದಿ ಹಬ್ಬವನ್ನು ವಿಶೇಷ ದಿನವಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಇನ್ಮುಂದೆ ಯುಗಾದಿಯನ್ನು ‘ಧಾರ್ಮಿಕ ದಿನ’ವನ್ನಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ. ಯುಗಾದಿ ಹಬ್ಬದ ದಿನವನ್ನು ಧಾರ್ಮಿಕ ದಿನವನ್ನಾಗಿ ಆಚರಿಸಲು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ಸುತ್ತೋಲೆ ಹೊರಡಿಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಸೂಚಿಸಿದ್ದಾರೆ ಅಂಥ ತಿಳಿದು ಬಂದಿದೆ.
Read More »
admin
March 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಅಪರಿಚಿತ ವಾಹನ ಡಿಕ್ಕಿ ಹೋಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ – ಗದಗ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಶಿರಗುಪ್ಪಿ ಗ್ರಾಮದ ಹತ್ತಿರ ನಡೆದಿದೆ . ಕೇಶವ ಕುಲಕರ್ಣಿ 4೦ ಮೃತಪಟ್ಟ ವ್ಯಕ್ತಿ ಅಪಘಾತದಿಂದ ನರಳುತ್ತಿದ್ದ ಇವರನ್ನು ಕಿಮ್ಸ್ ಗೆ ದಾಖಲಿಸಿತ್ತಾದರು ಚಿಕಿತ್ಸೆ ಪಲಿಸದೆ ಮೃತಪಟ್ಟಿದ್ದಾರೆ . ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ .
Read More »
admin
March 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ , ಸುಖದೇವ ಮತ್ತು ರಾಜಗುರು ಇವರ 91 ನೆ ಪುಣ್ಯಸ್ಮರಣೆ ಅಂಗವಾಗಿ ವಿದ್ಯಾನಗರದ ಭಗತ್‌ಸಿಂಗ್ ಸೇವಾ ಸಮಿತಿ ಆಶ್ರಯದಲ್ಲಿ ಇಂದು ಆಚರಿಸಲಾಯಿತು. ಸಮಿತಿಯ ಅಧ್ಯಕ್ಷ ಶಶಿಶೇಖರ ಡಂಗನವರ , ವೀರೇಶ ಕೆಸರಪ್ಪನವರ , ಬಸವರಾಜ ಹಿತ್ತಲಮನಿ , ರಾಜು ಅಗಸರ , ಸಮರ್ಥ್ ಶೆಟ್ಟಿ , ಅಜಿತ ಅಂಗಡಿ , ಮಂಜು ಹಜೇರಿ , ಶಿವು ಹಿರೇಮಠ , ಮಹೇಂದ್ರ ಕುಬಿಹಾಳ …
Read More »
admin
March 23, 2022
Breaking News, ಧಾರವಾಡ
ಧಾರವಾಡ : ಇತ್ತೀಚೆಗೆ ನಡೆದ ಪಿಎಸ್‌ಐ ಪರೀಕ್ಷೆ ಮತ್ತು 540 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಆಮ್ ಆದ್ಮಪಕ್ಷದ ಕಾರ್ಯಕರ್ತರು ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಇಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು . ಪೋಲಿಸ್ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈಗಾಗಲೇ ಹೋರಾಟ ಸೇರಿದಂತೆ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಆದರೆ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ . ಅಲ್ಲದೇ ಯಾವುದೇ …
Read More »
admin
March 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಇಲ್ಲಿಯ ಆನಂದ ನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತೀದ್ದ ವ್ಯಕ್ತಿಯನ್ನು ಬಂಧಿಸಿಲಾಗಿದೆ. ಪೃಥ್ವಿರಾಜ ಎಂಬ ವ್ಯಕ್ತಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಇದೀಗ ಪೋಲಿಸ್ ರು ಬೀಸಿದ ಬಲೆಗೆ ಸಿಲಿಕಿಕೊಂಡಿದ್ದಾನೆ. 2440 ರೂ ಮೌಲ್ಯದ ಮದ್ಯವನ್ನು ಖಾಕಿ ಪಡೆವಶಪಡಿಸಿಕೊಳ್ಳಲಾಗಿದೆ . ಈ ಕುರಿತ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Read More »
admin
March 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಭಗತಸಿಂಗ್ ಸೇವಾ ಸಂಘ ಹುಬ್ಬಳ್ಳಿ ಭಗತಸಿಂಗ್, ರಾಜಗುರು, ಸುಖದೇವ ಅವರ ಹುತಾತ್ಮ ದಿನದ ಅಂಗವಾಗಿ ಇಂದು ಹುಬ್ಬಳ್ಳಿಯ ರಾಷ್ಟೋತ್ತಾನ ಕೇಂದ್ರ ಹಾಗೂ ಹುಬ್ಬಳ್ಳಿಯ ಕಿಮ್ಸನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ವಿಶಾಲ ಜಾಧವ ಹಾಗೂ ಶ್ರೀ ಮಹೇಶ ಟೆಂಗಿನಕಾಯಿ ಶ್ರೀ ಪ್ರಶಾಂತ ಜಾಧವ ಶ್ರೀ ರಂಗನಾಯಕ ತಪೇಲಾ ಶ್ರೀ ಶಶಿಧರ ಜಗಾಪೂರ ಶ್ರೀ ನಿಕಿಲ್ ದೇವಿ ಶ್ರೀ ಪ್ರವೀಣ ಬುಳ್ಳಾರಿ ಶ್ರೀ …
Read More »