Breaking News

Breaking News

ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು: ವ್ಯಕ್ತಿ ಸಜೀವ ದಹನ

ಬೆಂಗಳೂರು : ಕಾರೊಂದು ನಡುರಸ್ತೆಯಲ್ಲಿ ಹೊತ್ತಿ ಉರಿದು ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ಘಟನೆ ನಗರದ ನೈಸ್ ರಸ್ತೆಯ ಚನ್ನಸಂದ್ರದ ಬಳಿ ನಡು ರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ದರ್ಶನ್ (40) ಸುಟ್ಟು ಕರಕಲಾದ ನತ ದೃಷ್ಟ . ಕೂಡಲೇ ಸ್ಥಳೀಯರು ನೈಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ನೈಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆರ್. ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಬೆಂಗಳೂರು ಉತ್ತರ ವಿಭಾಗದ ಸಂಚಾರಿ ಡಿಸಿಪಿ …

Read More »

ಏಕಾಏಕಿ 12 ಸಾವಿರ ಸೈನಿಕರನ್ನು ರಷ್ಯಾದ ಗಡಿಗೆ ನಿಯೋಜಿಸಿದ ಅಮೆರಿಕ ಅಧ್ಯಕ್ಷ

ಕೀವ್‌/ಮಾಸ್ಕೋ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಶನಿವಾರ ಏಕಾಏಕಿ ತನ್ನ 12 ಸಾವಿರ ಸೈನಿಕರನ್ನು ರಷ್ಯಾದ ಗಡಿ ಯುದ್ದಕ್ಕೂ ನಿಯೋಜಿಸಿದ್ದಾರೆ. ರಷ್ಯಾದೊಂದಿಗೆ ಗಡಿ ಹಂಚಿಕೊಂಡಿರುವ ಲಾಟ್ವಿಯಾ ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ದೇಶಗಳಲ್ಲಿ ಅಮೆರಿಕದ ಸೇನೆಗಳಿವೆ. ಜತೆಗೆ, ಉಕ್ರೇನ್‌ನಲ್ಲಿ ಆರಂಭಿಸಿರುವ ಯುದ್ಧವು ಪುತಿನ್‌ಗೆ ಯಾವ ಕಾರಣಕ್ಕೂ ಜಯ ತಂದುಕೊಡುವುದಿಲ್ಲ ಎಂದೂ ಬೈಡೆನ್‌ ಗುಡುಗಿದ್ದಾರೆ. ಸೇನೆ ಜಮಾಯಿಸುವ ಮೂಲಕ ಅಮೆರಿಕವು ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಸಜ್ಜಾಗಿರುವ ಸುಳಿವು ನೀಡಿದೆ. ಅಮೆರಿಕವು …

Read More »

ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ

ರಿಯಾದ್‌: 2021ರಲ್ಲಿ ಸೌದಿಯಲ್ಲಿ 67 ಮಂದಿಗೆ ಮರಣದಂಡನೆ ವಿಧಿಸಲಾಗಿದ್ದು, ಭಯೋತ್ಪಾದನೆ ಸಂಬಂಧಿಸಿದ ವಿವಿಧ ಅಪರಾಧಗಳ ಮೇಲೆ ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿರುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ. ಇದು 2021 ರಲ್ಲಿ ಜಾರಿಗೆ ತಂದಿದ್ದ ಮರಣದಂಡನೆಗಳಿಗಿಂತಲೂ ಹೆಚ್ಚು ಎಂದು ಸರ್ಕಾರ ತಿಳಿಸಿದೆ. ಶಿಕ್ಷೆಗೊಳಗಾದವರು ಇಸ್ಲಾಮಿಕ್ ಸ್ಟೇಟ್, ಅಲ್-ಖೈದಾ, ಹೌತಿ ಮತ್ತು ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದರು ಎಂದು ಸೌದಿಯ ಸರ್ಕಾರಿ ಹೇಳಿದೆ. ಮರಣದಂಡನೆಗೆ ಒಳಗಾದವರೆಲ್ಲರೂ ಪ್ರಮುಖ ಸ್ಥಳಗಳ …

Read More »

ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ತೊರೆದರೆ ಆಶ್ಚರ್ಯ ಇಲ್ಲ: ಸಿ.ಟಿ.ರವಿ

ಚಿಕ್ಕಮಗಳೂರು: ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ನಿಂದ ಹೊರಕ್ಕೆ ಕಾಲಿಟ್ಟಿದ್ದಾರೆ’ ‘ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ತೊರೆದರೆ ಆಶ್ಚರ್ಯ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ‘ಅವರೆಲ್ಲ ಬಹಳ ದೋಸ್ತಿಗಳುಇಬ್ರಾಹಿಂ ಅವರನ್ನು ಮುಂದೆ ಕಳುಹಿಸಿ ನಂತರ ಅವರ ಹೋಗಬಹುದು’ ಎಂದು ಕುಟುಕಿದರು.‘ಆಮಿಷವೊಡ್ಡಿ ಪಕ್ಷದ ಸದಸ್ಯತ್ವ ಮಾಡಿಸಿದರೆ ಆ ಸದಸ್ಯರಿಗೆ ಪಕ್ಷ ಬದ್ಧತೆ ಇರಲ್ಲ. ಪಕ್ಷದ ವಿಚಾರಧಾರೆ, ನಾಯಕತ್ವದ ಮೇಲೆ ನಂಬಿಕೆ ಇಟ್ಟು ಸದಸ್ಯರಾದವರು ಮಾತ್ರ ಪಕ್ಷದಲ್ಲಿ ಉಳಿದುಕೊಳ್ಳುತ್ತಾರೆ. ಕಾಂಗ್ರೆಸ್‌ನಲ್ಲಿ …

Read More »

ಕುಮಾರಸ್ವಾಮಿ ಕುರಿತು ಟೀಕೆ ಮಾಡಿದ‌ ಡಿ.ಕೆ. ಸುರೇಶ್‌

ರಾಮನಗರ: ಈಗಲ್‌ಟನ್ ರೆಸಾರ್ಟ್‌ ವಿವಾದದ ಬಗ್ಗೆ ಸದನದಲ್ಲಿ ಕುಮಾರಸ್ವಾಮಿ-ಸಿದ್ದರಾಮಯ್ಯ ನಡುವಿನ ವಾಗ್ವಾದ ಕುರಿತು ಶುಕ್ರವಾರ ಇಲ್ಲಿ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್‌, ‘ಈಗಲ್‌ಟನ್‌ ಪರವಾಗಿ ಮಾತನಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರ ನಿಜವಾದ ಬಣ್ಣ ಬಯಲಾಗಿದೆ’ ಎಂದು  ಲೇವಡಿ ಮಾಡಿದರು. ‘ದಂಡ ಹೆಚ್ಚಾಗಿ ಹಾಕಿರುವುದಕ್ಕೆ ಅವರಿಗೆ ಏನು ತೊಂದರೆ ಆಗಿದೆಯೋ ಗೊತ್ತಿಲ್ಲ. ಸರ್ಕಾರ ಹಾಗೂ ಜಿಲ್ಲಾಧಿಕಾರಿ ಸೇರಿ ಕಾನೂನಿನ ಪ್ರಕಾರ ದಂಡ ನಿಗದಿ ಮಾಡಿದ್ದಾರೆ. ರೆಸಾರ್ಟ್‌ನವರು …

Read More »

ರೈಲಿಗೆ ತೆಲೆಕೊಟ್ಟು ಸಾವಿನಲ್ಲಿ ಒಂದಾಂದ ದಂಪತಿಗಳು

ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಲಿಸುವ ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ. ರೇಲ್ವೆ ನಿಲ್ದಾಣದ ಕೂಗಳತೆ ದೂರದಲ್ಲಿಯೇ ದಂಪತಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೆಲವೇ ಸಮಯದ ಹಿಂದೆ ಬೆಳಕಿಗೆ ಬಂದಿದೆ. ಸುಮಾರು 35 ರಿಂದ 40 ವಯಸ್ಸಿನ ಮಹಿಳೆ ಹಾಗೂ 45ರಿಂದ 50 ವಯಸ್ಸಿನ ಪುರುಷ ಸಾವಿಗೀಡಾಗಿದ್ದು, ದಂಪತಿಗಳು ನೊಂದು …

Read More »
Featured Video Play Icon

ಇಸ್ಟೇಟ್ ಆರೋಪಿಗಳ ಜೊತೆ ಹುಬ್ಬಳ್ಳಿ ಪೋಲಿಸರು ಡಿಲಿಂಗ್…?

ಹುಬ್ಬಳ್ಳಿ : ವಾಣಿಜ್ಯ ನಗರದಲ್ಲಿ ಕಳ್ಳ ದಂಧೆಗೆ ಎನ್ನು ಕಮ್ಮಿ ಇಲ್ಲಾ. ಆದ್ರೆ ಪೋಲಿಸ್ ರು ಇಂತಹ ಕೆಲಸದಲ್ಲಿ ತೊಡಗಿರುವುದು ವಿಪರ್ಯಾಸ. ಇಸ್ಪೇಟ್ ಆಡುತ್ತಿದ್ದ ಮಾಹಿತಿ ಇದ್ದರು ಆ ಜನರನ್ನು ಪೋಲಿಸ್ ರು ಬಂಧಿಸಿಲ್ಲಾ. ಮಾ. 1 ರಿಂದ ಇವತ್ತು ದಿನಗಳು ಕಳೆದರು ಪೋಲಿಸ್ ರು ಯಾರನ್ನು ಕೂಡಾ ಬಂಧನ ಮಾಡದೇ FIR ಕೂಡಾ ದಾಖಲಿಸದೇ ಪೋಲಿಸರ್ ರೇ ಕಣ್ಣಾ ಮುಚ್ಚಾಲೆ ಆಡ ಆಡುತ್ತೀದ್ದಾರೆ. ವಿಡಿಯೋ ಸಹ ಸಿಕ್ಕಿದೆ. ಇಂತಹ …

Read More »

ಹುಬ್ಬಳ್ಳಿಯಲ್ಲಿ ಮಾ. 26ಕ್ಕೆ ಟೈಕಾನ್ ಉದ್ಯಮಶೀಲತಾ ಶೃಂಗಸಭೆ : ವಿಜಯ ಸೈಗಲ್

ಹುಬ್ಬಳ್ಳಿ: ಟೈಕಾನ್ ಹುಬ್ಬಳ್ಳಿಯ ವತಿಯಿಂದ ಮಹಿಳಾ ಕಾನ್ಕ್ಲೇವ್, ಸ್ಟಾರ್ಟ್ ಅಫ್ ಶೃಂಗಸಭೆ ಮತ್ತು ಟೈಕಾನ್ -2022 ವಾರ್ಷಿಕೋತ್ಸವವನ್ನು ಇದೇ 26ರಂದು ಉಣಕಲ್ ಹತ್ತಿರ ನವೀನ್ ಹೊಟೇಲ್ ನಲ್ಲಿ ಆಯೋಜಿಸಲಾಗಿದೆ ಎಂದು ಟೈಕಾನ್ ಅಧ್ಯಕ್ಷ ವಿಜಯ ಸೈಗಲ್ ಹೇಳಿದರು. ನಗರದಲ್ಲಿಂದು ಟೈಕಾನ್ ಶೃಂಗಸಭೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿ ಬಳಿಕ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಿ ಇಂಡಸ್ ಎಂಟರ್ ಪ್ರೆನಿಯರ್ಸ್ ಟೈ ಹುಬ್ಬಳ್ಳಿಯು ದೊಡ್ಡಮಟ್ಟದ ಉದ್ಯಮಶೀಲತಾ ಶೃಂಗ ಸಭೆಯನ್ನು ಆಯೋಜಿಸಿದೆ. ಎಜುಕೇಷನ್, ನೆಟ್ವರ್ಕಿಂಗ್, …

Read More »

ಚೊಂಟಾ ಬಾಂಬೆಯಲ್ಲಿ ಕೊಲೆಯಾದ ರೀತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಅಕ್ಬರ್ ಮುಲ್ಲಾ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಡೆಯಲ್ಲಿ ನೆತ್ತರು ಹರೆದಿದ್ದು, ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿಯ ಜನರು ಬೆಚ್ಚಿ ಬಿದ್ದಿದ್ದಾರೆ. ನಗರದ ಕೃಷ್ಣ ಭವನದ ಎದುರಿನಲ್ಲಿ ಅಪರಿಚಿತ ಮಹಿಳೆಯೊಬ್ಬಳು ಕೊಲೆಯಾದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಬೆಳಿಗ್ಗೆ ರಕ್ತ ನೋಡಿದ ಜನರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾದ ಮಹಿಳೆಯ ಹೆಸರು ಸುಮಾ ಎಂದು ಅಂದಾಜಿಸಲಾಗಿದ್ದು, ಪ್ರಕರಣದ ಹೆಚ್ಚಿನ ಮಾಹಿತಿ ತನಿಖೆಯ ನಂತರವೇ ಗೊತ್ತಾಗಲಿದೆ ಎನ್ನುತ್ತಾರೆ …

Read More »

ಉತ್ತರ ಪ್ರದೇಶ ಸಿಎಂ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ ರಾಜಿನಾಮೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಲಕ್ನೋದ ರಾಜಭವನದಲ್ಲಿ ರಾಜ್ಯಪಾಲ ಆನಂದ್ ಮಣಿಬೆನ್ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಮೂಲಗಳ ಪ್ರಕಾರ, ಯೋಗಿ ಆದಿತ್ಯನಾಥ್ ಅವ್ರು ಹೋಳಿಗಿಂತ ಮೊದಲು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಮಾರ್ಚ್ 14 ಅಥವಾ 15ರಂದು ನಡೆಯುವ ಸಾಧ್ಯತೆಯಿದೆ. ಏತನ್ಮಧ್ಯೆ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಉನ್ನತಾಧಿಕಾರಿ ನಾಯಕರು ಮತ್ತು ಎನ್ ಡಿಎ ಆಡಳಿತವಿರುವ ರಾಜ್ಯಗಳ ಇತರ …

Read More »