Breaking News

Breaking News

‘ಅಂತ್ಯವಾಯ್ತು’ ಪೋಸ್ಟರ್ ಅಂಟಿಸಲು ಹೋಗಿ ಮೂವರ ಸಾವು! ರಾಯಚೂರಲ್ಲಿ ಹೃದಯವಿದ್ರಾವಕ ದುರಂತ

ರಾಯಚೂರು: ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ ಸಜ್ಜಾ ಕುಸಿದು ಮೂವರು ಯುವಕರು ಮೃತಪಟ್ಟಿದ್ದಾರೆ. ಮೃತರನ್ನು ರವಿಚಂದ್ರ (35), ನಾಗರಾಜ್ (30) ಹಾಗೂ ಅರ್ಜುನ್ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಯುವಕರು ತಮ್ಮ ಕಿರುಚಿತ್ರದ ಪೋಸ್ಟರ್ ಅಂಟಿಸಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ದೇವದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಟ್ಟಡ ಕುಸಿತದ ಕಾರಣದ …

Read More »

ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ, ನಿಯಂತ್ರಣಕ್ಕೆ ಬಾರದ ಬೆಂಕಿ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ತಯಾರಿಕಾ ಕಂಪನಿಯಲ್ಲಿ ಶನಿವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಆಸಿಡ್ ಮತ್ತು ಟಿನ್ನರ್ ಸೇರಿದಂತೆ ರಾಸಾಯನಿಕ ವಸ್ತುಗಳಿದ್ದ ಕಾರಣ ಬೆಂಕಿ ವೇಗವಾಗಿ ಇಡೀ ಕಾರ್ಖಾನೆಗೆ ವ್ಯಾಪಿಸಿದೆ. ರಜಾದಿನವಾಗಿದ್ದರಿಂದ ಕಂಪನಿಯಲ್ಲಿ ಕೇವಲ 20 ಕಾರ್ಮಿಕರಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಹೊರಬಂದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ದಳ ಮತ್ತು ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ …

Read More »

ಹುಷಾರ್..! ಹುಷಾರ್..! ಗಂಡು ಮಗು ಹುಟ್ಟಿದೆ ಅಂತ ಪಾರ್ಟಿ ಕೇಳ್ಬೇಡಿ… ಮರ್ಡರ್ ಆಗೋ ಚಾನ್ಸ್ ಇದೆ..!

ಗಂಡು ಮಗು ಜನಿಸಿದ ಖುಷಿ ರಕ್ತಚರಿತ್ರೆಯಾಯಿತು ಸ್ನೇಹಿತನನ್ನೇ ಕೊಂದ ಗೆಳೆಯ.. ಪಾರ್ಟಿ ಕೊಡ್ರಪ್ಪ’ ಅಂದಿದ್ದೇ ತಪ್ಪಾಯ್ತು ಗೆಳೆಯನ ಕೈಯಲ್ಲಿ ಸ್ನೇಹಿತನ ಕೊಲೆ.. ಕ್ಷುಲ್ಲಕ ಜಗಳ, ಭೀಕರ ಅಂತ್ಯ. ಪಾರ್ಟಿ ವಿಚಾರಕ್ಕೆ ಜೀವ ಬಲಿ ಬೆಳಗಾವಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವಂತಹ ಕೊಲೆ ಪ್ರಕರಣೊಂದು ಬೆಳಕಿಗೆ ಬಂದಿದೆ. ಗಂಡು ಮಗು ಹುಟ್ಟಿದ ಖುಷಿಯಲ್ಲಿ ಪಾರ್ಟಿ ಕೇಳಿದ್ದ ಸ್ನೇಹಿತನನ್ನೇ ಮತ್ತೊಬ್ಬ ಸ್ನೇಹಿತ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ನಡೆದಿದೆ… ವಣ್ಣೂರು …

Read More »

ಗಾಂಜಾ ಮಾರಾಟ ಯತ್ನ: ಬಂಧನ

ಮಂಗಳೂರು: ಕೋಡಿಕಲ್ 4ನೇ ಕ್ರಾಸ್ ನಿಂದ ಫಲ್ಗುಣಿ ನಗರದ ಬಳಿ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಜೂ.27ರ ಶನಿವಾರ ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇರೆಬೈಲ್ ಕೊಂಚಾಡಿಯ ಅನುದೀಪ್ ಎನ್. (22) ಬಂಧಿತ ಆರೋಪಿ. ಆತನಿಂದ 18,000 ರೂ.ಮೌಲ್ಯದ 351 ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಠಾಣೆಯಲ್ಲಿ ಶಿವನಂದ ಎಂಬಾತನ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಅನುದೀಪ್ ಆತನಿಗೆ ಗಾಂಜಾ ನೀಡಿರುವ ಬಗ್ಗೆ ತಿಳಿದು …

Read More »

ಶಾಲೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಸುಟ್ಟು ಕರಕಲಾದ ಸಮವಸ್ತ್ರ, ಪಠ್ಯಪುಸ್ತಕ

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗುಂಟ್ರಾಳ ಗ್ರಾಮದ ಸರ್ಕಾರಿ ಶಾಲೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಶಾಲೆಯಲ್ಲಿದ್ದ ಸಮವಸ್ತ್ರ, ಪಠ್ಯಪುಸ್ತಕಗಳು ಸುಟ್ಟು ಹೋಗಿವೆ. ಶಾಲೆಯ ಆವರಣದಲ್ಲಿ ಅನೈತಿಕ ಚಟುವಟಿಕೆ ನಡೆಸದಂತೆ ಬುದ್ಧಿವಾದ ಹೇಳಿದ್ದಕ್ಕೆ ದುಷ್ಕರ್ಮಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ/ ಶಾಲೆಯ ಆವರಣದಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನ, ಧೂಮಪಾನ ಸೇರಿದಂತೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದು, ಇತ್ತೀಚೆಗೆ ಶಾಲೆಯ ಬೀಗ ಮುರಿದು ಒಳಗೆ ಮಲಗಿದ್ದರು.ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಶಿಕ್ಷಕರು ಈ …

Read More »

ಹೆಂಡತಿಯ ನಡತೆ ಮೇಲೆ ಅನುಮಾನ – ನಿದ್ರಿಸುತ್ತಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಪತಿ!

ಅಥಣಿ: ತಾಲೂಕಿನ ಕಟಗೇರಿ ಗ್ರಾಮದಲ್ಲಿ ಪತ್ನಿಯ ಮೇಲಿನ ಸಂಶಯದ ಹಿನ್ನೆಲೆ ಗಂಡನೇ ಮಲಗಿದ್ದ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಶೋಭಾ ಪರಗೊಂಡ ಸಾರವಾಡ ಮೃತರಾಗಿದ್ದು, ಆರೋಪಿ ಪತಿ ಪರಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಪತಿ ಅವಜೀಕರ ಮಠದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿಯ ನಡತೆಯ ಬಗ್ಗೆ ಅನುಮಾನ ಹೊಂದಿದ್ದ ಪರಗೊಂಡ, ಕೌಟುಂಬಿಕ ಕಲಹದ ನಡುವೆ ಶೋಭಾ ಗಾಢ ನಿದ್ರೆಯಲ್ಲಿದ್ದ ವೇಳೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. …

Read More »

ಕೆಫೆ ಮಾಲೀಕ, ಕ್ಯಾಶಿಯರ್ ದರ್ಪ – ಡೆಲಿವರಿ ಬಾಯ್ ಮೇಲೆ ಮನಬಂದಂತೆ ಹಲ್ಲೆ!

ಬೆಂಗಳೂರು: ಉಲ್ಲಾಳದ ‘ಕೂಲ್ ಜಂಕ್ಷನ್ ಕೆಫೆ’ಯಲ್ಲಿ ಆನ್‌ಲೈನ್ ಆಹಾರ ಆರ್ಡರ್ ವಿಳಂಬವನ್ನು ಪ್ರಶ್ನಿಸಿದ ಡೆಲಿವರಿ ಬಾಯ್ ಮೇಲೆ ಕೆಫೆ ಮಾಲೀಕ ಹಾಗೂ ಕ್ಯಾಶಿಯರ್ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರ್ಡರ್ ‘ರೆಡಿ’ ಎಂದು ಆ್ಯಪ್‌ನಲ್ಲಿ ತೋರಿಸಿದ್ದರೂ ಆಹಾರ ಸಿದ್ಧವಾಗಿರಲಿಲ್ಲ. ಇದನ್ನು ಪ್ರಶ್ನಿಸಿದ ಡೆಲಿವರಿ ಬಾಯ್ ಜೊತೆ ಮಾತಿನ ಚಕಮಕಿ ನಡೆದು, ಬಳಿಕ ಕೆಫೆ ಮಾಲೀಕ ರಾಜಣ್ಣ ಮತ್ತು ಕ್ಯಾಶಿಯರ್ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ …

Read More »

ಬೆಳಗಾವಿಯಲ್ಲಿ ಭೀಕರ ಮರ್ಡರ್ : ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ್ದ ಸ್ನೇಹಿತನ ಕೊಲೆ.!

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಶುರುವಾದ ಗಲಾಟೆ ತಾರಕಕ್ಕೇರಿ, ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಗಂಡು ಮಗು ಜನಿಸಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಮತ್ತೊಬ್ಬ ಸ್ನೇಹಿತ ಬರ್ಬರಾವಾಗಿ ಹತ್ಯೆ ಮಾಡಿದ್ದಾನೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ಈ ರಕ್ತಚರಿತ್ರೆ ನಡೆದಿದೆ. ವಣ್ಣೂರು ಗ್ರಾಮದ ನಿವಾಸಿಯಾದ ಹಣಮಂತಪ್ಪ ಇಟಗಿ ಕೊಲೆಯಾದ ದುರ್ದೈವಿ. ಆರೋಪಿ ವಿಶ್ವನಾಥ್ ಪೂಜಾರಿಗೆ ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಇದೇ ಖುಷಿಯಲ್ಲಿ …

Read More »

ಪಬ್‌ನಲ್ಲಿ ಬಿಲ್ ವಿಚಾರಕ್ಕೆ ಕಿರಿಕ್ – ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ದೋಚಿದ ಕಿರಾತಕರು!

ಮೈಸೂರು: ಅಗ್ರಹಾರದ ‘ಸಿಪಾಯಿ ಗ್ರಾಂಡೆ’ ಪಬ್‌ನಲ್ಲಿ ಬಿಲ್ ಪಾವತಿ ವಿಚಾರವಾಗಿ ತಡರಾತ್ರಿ ಗಲಾಟೆ ನಡೆದು, ಪಬ್ ಮ್ಯಾನೇಜರ್ ಮೇಲೆ ಏಳು ಮಂದಿ ಯುವಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. 15 ಸಾವಿರ ರೂ. ಮದ್ಯದ ಬಿಲ್ ಪಾವತಿಸುವ ನೆಪದಲ್ಲಿ ಮ್ಯಾನೇಜರ್‌ರನ್ನು ಹೊರಗೆ ಕರೆಸಿಕೊಂಡ ಆರೋಪಿಗಳು, ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ 23 ಗ್ರಾಂ ಚಿನ್ನದ ಸರ ಕಸಿದು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡ ಮ್ಯಾನೇಜರ್ …

Read More »

ಸಿಲಿಕಾನ್‌ ಸಿಟಿಯಲ್ಲಿ ಗೂಂಡಾಗಳ ಅಟ್ಟಹಾಸ – ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್‌ ಕಗ್ಗೊ*ಲೆ!

ಬೆಂಗಳೂರು: ನಗರದ ಜೆ.ಪಿ.ನಗರದ ಐಜಿ ಸರ್ಕಲ್‌ ಬಳಿ ರೌಡಿಶೀಟರ್ ರಾಜು ಭಾಯ್ ಅಲಿಯಾಸ್ ಅಲ್ ಮುರ್ಕ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಸಂಜೆ 5.30ರ ಸುಮಾರಿಗೆ ಚಹಾ ಕುಡಿದು ಮನೆಗೆ ಮರಳುತ್ತಿದ್ದ ವೇಳೆ ನಡೆದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜು ಭಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಸುಮಾರು 10 ವರ್ಷಗಳ ಹಿಂದಿನ ಕೊಲೆ ಪ್ರಕರಣದ ಹಳೆಯ ದ್ವೇಷವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು …

Read More »