admin
February 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಆರ್.ಎಂ ಲೋಹಿಯಾನಗರದಲ್ಲಿ ನಡೆದಿರುವ ಸ್ಪೋರ್ಟ್ಸ್ ಕ್ಲಬ್ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಕೆಲಸ ಮಾಡುತ್ತಿದ್ದ ಓರ್ವ ಕಾರ್ಮಿಕ ಕಟ್ಟಡ ಮೇಲಿಂದ ಕೆಳಗೆ ಬಿದ್ದು ಮೃತನಾಗಿರುವ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಂಜುನಾಥ ರಾಮಣ್ಣನವರ (24) ಮೃತರಾದವರು. ಕಟ್ಟಡ ಕಟ್ಟಲು ಸುಸಜ್ಜಿತವಾಗಿ ಕಾರ್ಮಿಕರಿಗೆ ಅನುಕೂಲ ಮಾಡದಿರುವುದರಿಂದ ಪಕ್ಕಿರಪ್ಪ ಬಂಡಿವಾಡ, ಮ್ಯಾನೇಜರ್ ಭೂಪತಿ ಮತ್ತು ಮೋಹನ ಎಂಬುವವರ ನಿರ್ಲಕ್ಷ್ಯದಿಂದ ಮೃತರಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Read More »
admin
February 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹತ್ತಿರವಿರುವ ಸರ್ವೇ ನಂ 79 ನೇ ಲೇಔಟ್ ನಲ್ಲಿ ಇಟ್ಟಿದ್ದ ಒಟ್ಟು 66,500 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತ ಮಾಡಿರುವ ಪ್ರಕರಣ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ರಾಹುಲ್ ಪಾಟೀಲ ಎಂಬುವವರ ಜಾಗದಲ್ಲಿ ಮನೆ ಕಟ್ಟಲು ಇಟ್ಟಿದ್ದ 30 ಸಾವಿರ ಮೌಲ್ಯದ 40 ಪ್ಲೈವುಡ್ ಶೀಟ್ ಗಳು, 20 ಸಾವಿರ ಮೌಲ್ಯದ ಸೆಂಟ್ರಿಂಗ್ ಶೀಟ್ ಗಳು, 16,500 ರೂ. ಮೌಲ್ಯದ …
Read More »
admin
February 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹತ್ತಿರವಿರುವ ಸರ್ವೇ ನಂ 79 ನೇ ಲೇಔಟ್ ನಲ್ಲಿ ಇಟ್ಟಿದ್ದ ಒಟ್ಟು 66,500 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತ ಮಾಡಿರುವ ಪ್ರಕರಣ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ರಾಹುಲ್ ಪಾಟೀಲ ಎಂಬುವವರ ಜಾಗದಲ್ಲಿ ಮನೆ ಕಟ್ಟಲು ಇಟ್ಟಿದ್ದ 30 ಸಾವಿರ ಮೌಲ್ಯದ 40 ಪ್ಲೈವುಡ್ ಶೀಟ್ ಗಳು, 20 ಸಾವಿರ ಮೌಲ್ಯದ ಸೆಂಟ್ರಿಂಗ್ ಶೀಟ್ ಗಳು, 16,500 ರೂ. ಮೌಲ್ಯದ …
Read More »
admin
February 19, 2022
Breaking News, ಬೆಂಗಳೂರು
ಬೆಂಗಳೂರು : ಸಿಂಧೂರು, ತಿಲಕ, ಬಿಂದಿ ಧರಿಸಿದ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗದಂತೆ ತಡೆಯುವಂತಿಲ್ಲ. ಸಿಂಧು, ತಿಲಕ, ಬಿಂದಿ, ನಾಮ, ಬಳೆ ಶೃಂಗಾರ ವಸ್ತುಗಳು. ವಿದ್ಯಾರ್ಥಿಗಳನ್ನು ತರಗತಿ ಹೊರಗೆ ನಿಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಒಂದು ವೇಳೆ ವಿದ್ಯಾರ್ಥಿಗಳು ಸಿಂಧೂರ, ತಿಲಕ ಧರಿಸಿ ಬಂದರೆ ಅವರನ್ನು ಶಾಲೆಯೊಳಗೆ ಹೋಗಲು ಬಿಡಬೇಕು. ಒಂದುವೇಳೆ ಆ ವಿದ್ಯಾರ್ಥಿನಿಗಳನ್ನು ತಡೆದರೆ ಅಂತಹ ಶಾಲಾ ಶಿಕ್ಷಕರ ವಿರುದ್ಧ …
Read More »
admin
February 19, 2022
Breaking News, ಕಲಬುರಗಿ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾ. 24ರಂದು ಕಲಬುರಗಿಗೆ ಭೇಟಿ ನೀಡಿ, ಕೇಂದ್ರ ಸರಕಾರದ ಸ್ವಾಮಿತ್ವ ಯೋಜನೆಯಲ್ಲಿ ಫಲಾನುಭವಿಗಳಿಗೆ ಆಸ್ತಿ ಪ್ರಮಾಣ ಪತ್ರ ವಿತರಿಸಲಿದ್ದಾರೆ. ಅದೇ ದಿನ ಪ್ರಧಾನಿ ಪ್ರವಾಸಿ ತಾಣ ಹಂಪಿ ಹಾಗೂ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಜ್ಯದ 16 ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಸ್ವಾಮಿತ್ವ ಯೋಜನೆ ಜಾರಿಗೊಳಿಸಲಾಗಿದೆ. ಅದರ ಅನ್ವಯ ಡ್ರೋನ್ ಮೂಲಕ ಖಾಸಗಿ ಮತ್ತು ಸರಕಾರಿ ಆಸ್ತಿ ಸಮೀಕ್ಷೆ …
Read More »
admin
February 19, 2022
Breaking News, ಬೆಂಗಳೂರು
ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ‘ನಮ್ಮ ನೀರು, ನಮ್ಮ ಹಕ್ಕು’ ಪಾದಯಾತ್ರೆಯನ್ನು ಫೆಬ್ರವರಿ 27 ರಂದು ರಾಮನಗರದಿಂದ ಪುನರಾರಂಭಿಸಲಿದೆ. ವಿಧಾನಸೌಧದಲ್ಲಿ ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸಂಗಮದಿಂದ ಜ.9 ರಂದು ಆರಂಭಿಸಿ ಮಧ್ಯೆ ನಿಲ್ಲಿಸಿದ್ದ ಮೇಕೆದಾಟು ಪಾದಯಾತ್ರೆ ಮುಂದುವರಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
Read More »
admin
February 19, 2022
Breaking News, ಬೆಂಗಳೂರು
ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮೊಬೈಲ್ ನಂಬರ್ ಸಂಗ್ರಹಿಸಿ ಮೆಸೆಂಜರ್ ಹಾಗೂ ವಾಟ್ಸ್‌ಆಯಪ್ ಮೂಲಕ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ ಹಾಸನ ಮೂಲದ ಆರೋಪಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿವಾಸಿ ಹರೀಶ್(32) ಪೋಲಿಸ್ ರುಬಂಧಿಸಿದ್ದಾರೆ. ಜೆಸಿಬಿ ಚಾಲಕನಾಗಿರುವ ಹರೀಶ್, ಇತ್ತೀಚೆಗೆ ಬಿಳೆಕಹಳ್ಳಿ ನಿವಾಸಿಯೊಬ್ಬರ ಪತ್ನಿಗೆ ಕಳೆದ ಮೂರು ತಿಂಗಳಿಂದ ಪದೇ ಪದೇ ಕರೆ ಮಾಡುತ್ತಿದ್ದು, ಜತೆಗೆ ವಾಟ್ಸ್‌ಆಯಪ್ ಮೂಲಕ ಪೋರ್ನ್ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುತ್ತಿದ್ದ. …
Read More »
admin
February 19, 2022
Breaking News, ಬೆಂಗಳೂರು
ಬೆಂಗಳೂರು: ರಾಜ್ಯದಲ್ಲಿ ದೈನಂದಿನ ಕೊರೋನಾ ಪ್ರಕರಣಗಳ ಇಳಿಕೆಯ ಜೊತೆ ಜೊತೆಗೆ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲೂ ಕುಸಿತ ಕಂಡು ಬಂದಿದೆ. ಶುಕ್ರವಾರ 1,333 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 19 ಮಂದಿ ಮೃತರಾಗಿದ್ದಾರೆ.4,890 ಮಂದಿ ಚೇತರಿಸಿಕೊಂಡಿದ್ದಾರೆ. ಜನವರಿ 3 ರಂದು 1,290 ಪ್ರಕರಣ ದಾಖಲಾದ ಬಳಿಕದ ಅತ್ಯಂತ ಕನಿಷ್ಠ ಪ್ರಕರಣ ವರದಿಯಾಗಿದೆ. 83,555 ಕೋವಿಡ್ ಪರೀಕ್ಷೆ ನಡೆದಿದ್ದು ಶೇ.1.59ರ ಪಾಸಿಟಿವಿಟಿ ದರ ದಾಖಲಾಗಿದೆ. 26 ದಿನ (ಜನವರಿ 23)ರ ಬಳಿಕ ಮೊದಲ ಬಾರಿಗೆ …
Read More »
admin
February 19, 2022
Breaking News, ಜಿಲ್ಲೆ, ಮಂಗಳೂರು
ಮಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮಂಗಳೂರು ನಗರದ ಉರ್ವಾದ ನಿವಾಸಿ ರಾಜೇಶ್ (30) ಮೃತ ವ್ಯಕ್ತಿ. ನಗರದ ಜ್ಯೋತಿ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿಯ ಕಬ್ಬಿಣದ ಸರಳು ಕದ್ದೊಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಗಳ ಪೈಕಿ ರಾಜೇಶ್ಗೆ ರಾತ್ರಿ ವೇಳೆಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆತನನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರಿಂದ ರಾಜೇಶ್ …
Read More »
admin
February 19, 2022
Breaking News, ಬೆಂಗಳೂರು
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್(86) ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಫೆಬ್ರವರಿ 9 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ.ರಾಜೇಶ್ ಅವರು ಏಪ್ರಿಲ್ 15, 1935 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
Read More »