Breaking News

Breaking News

ಸಾಲ ವಾಪಸ್ ಕೇಳಲು ಹೋದ ಮಹಿಳೆ ಮೇಲೆ ಹಲ್ಲೆ

ಧಾರವಾಡ: ಸಾಲ ವಾಪಸ್ ಕೊಡಿ ಎಂದು ಕೇಳಲು ಹೋದವಳ ಮೇಲೆ ಹಲ್ಲೆ ನಡೆಸಿರುವ ಘಟನೆ ಹಿರೇಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಕೌಸಲ್ಯ ಎಂಬ ಮಹಿಳೆ ಸುಶೀಲವ್ವಳ ಬಳಿ ಕರಾರು ಪತ್ರದೊಂದಿಗೆ 2 ಲಕ್ಷ ರೂ. ಸಾಲ ಪಡೆದುಕೊಂಡಿದ್ದಳು. ಈ ಸಾಲವನ್ನು ವಾಪಸ್ ಕೇಳಲು ಹೋದಾಗ ಕೌಸಲ್ಯ ತನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಜಾತಿನಿಂದನೆ ಮಾಡಿದ್ದಾಳೆ ಎಂದು ಸುಶೀಲವ್ವ ಆರೋಪಿಸಿದ್ದಾಳೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಧಾರವಾಡ ಗ್ರಾಮೀಣ …

Read More »

ಕೆಂಪು‌ ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಹೇಳಿಕೆ ನೀಡಿರುವ ಈಶ್ವರಪ್ಪವಿರುದ್ಧ ಕ್ರಮ ಕೈಗೊಳ್ಳಿ , ಇಲ್ಲದಿದ್ದರೆ ನಾನೇ ದೂರು‌ ದಾಖಲಿಸುವೆ : ಸಿಎಂ ಇಬ್ರಾಹಿಂ

ಹುಬ್ಬಳ್ಳಿ : ಮುಂದಿನ ದಿನಗಳಲ್ಲಿ ದೆಹಲಿಯ‌ ಕೆಂಪು‌ ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಎಂದು ಹೇಳಿಕೆ‌ ನೀಡಿರುವ ಕರ್ನಾಟಕದ ಮಂತ್ರಿ ಈಶ್ವರಪ್ಪ ವಿರುದ್ದ ಸೂಕ್ತ ಕಾನೂನು‌ ಕ್ರಮ‌ ಕೈಗೊಳ್ಳುವುದು ಯಾವಾಗ. ಬೊಮ್ಮಾಯಿ ಅವರು ಕ್ರಮ ಕೈಗೊಳ್ಳದಿದ್ದರೆ, ನಾನೇ ಬೆಂಗಳೂರಿಗೆ ತೆರಳಿ ಈಶ್ವರಪ್ಪ ವಿರುದ್ದ ದೂರು ದಾಖಲಿಸುತ್ತೇನೆ ಎಂದು ಸಿಎಂ ಇಬ್ರಾಹಿಂ ಸಿಎಂ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಹೆಣ್ಣು ಮಕ್ಕಳು‌ …

Read More »

ಉದ್ಯೋಗದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆಗೆ ಶರಣು

ಚಾಮರಾಜನಗರ: ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಮನು (22) ಎಂಬಾತ ನೌಕರಿ ಸಿಗದಿದ್ದಕ್ಕೆ ಜಿಗುಪ್ಸೆಗೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದಿದೆ. ಈತ ಇತ್ತೀಚೆಗೆ ವಿದ್ಯಾಭ್ಯಾಸ ಮುಗಿಸಿದ್ದು, ಯಾವುದೇ ನೌಕರಿ ಸಿಗದಿದ್ದರಿಂದ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಕ್ರಿಮಿನಾಶಕ ಸೇವಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, …

Read More »

ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ಪ್ರಿಯಾಂಕಾ ಗಾಂಧಿ

ನವದೆಹಲಿ:  2022 – ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನಡುವಿನ ಮಾತಿನ ಚಕಮಕಿ ಮುಂದುವರೆದಿದೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಪ್ರಿಯಾಂಕಾ ಗಾಂಧಿ ಕೂಡ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಗೆಲುವಿಗಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಭಾನುವಾರ ಪಂಜಾಬ್‌ನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಿಯಾಂಕಾ ಬಿಜೆಪಿಯನ್ನು ತೀವ್ರವಾಗಿ ಗುರಿಯಾಗಿಸಿದ್ದಾರೆ.

Read More »

‌ಕೋರ್ಟ್ ನಲ್ಲಿ ಗಲಾಟೆ ಪ್ರಕರಣ : 14 ದಿನಗಳು ವಕೀಲ ಜಗದೀಶ್ ನ್ಯಾಯಾಂ ಬಂಧನ

ಬೆಂಗಳೂರು: ಕೋರ್ಟ್‌ ಅಂಗಳದಲ್ಲಿ ಗಲಾಟೆ ಆರೋಪಕ್ಕೆ ಸಂಬಂದಪಟ್ಟಂತೆ ಪೋಲಿಸರು ವಶಕ್ಕೆ ಪಡೆದಿದ್ದ ವಕೀಲ ಜಗದೀಶ್‌ ಅವರನ್ನುಇದರ ಅನ್ವಯ ವಕೀಲ ಜಗದೀಶ್ ಅವರನ್ನು 14 ದಿನಗಳ ಕಾಲ ನ್ಯಾಯಾಮೂರ್ತಿಗಳು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಶನಿವಾರ ಪ್ರಕರಣವೊಂದರ ಸಂಬಂಧ ಜಗದೀಶ್‌ ಅವರು ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ನ್ಯಾಯಾಲಯಕ್ಕೆ ಆಗಮಸಿದ್ದರು, ಈ ವೇಳೆಯಲ್ಲಿ ಕೋರ್ಟ್ ಅಂಗಳದಲ್ಲಿ ಗಲಾಟೆಯಾಗಿತ್ತು, ಈ ಗಲಾಟೆಗೆ ಸಂಬಂಧಪಟ್ಟಂತೆ ವಕೀಲ ಜಗದೀಶ್‌ ತಮ್ಮ ಫೇಸ್‌ಬುಕ್‌ ನಲ್ಲಿ ಕೆಲವರ ಬಗ್ಗೆ ಆರೋಪಿಸಿದ್ದರು, …

Read More »

ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುವುದಿಲ್ಲ : ಸಿ ಎಂ ಇಬ್ರಾಹಿಂ

ಹುಬ್ಬಳ್ಳಿ: ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುವುದಿಲ್ಲ. ನಾನು ನಾಳೆ ರಾಜೀನಾಮೆ ನೀಡಿದರೇ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳುವ ಮೂಲಕ ಸಿಎಮ್ ಇಬ್ರಾಹಿಂ ಯೂಟರ್ನ್ ಹೊಡೆದಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡೋಲ್ಲ. ಈ ವೇಳೆ ರಾಜೀನಾಮೆ ಕೊಟ್ಟರೆ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ. ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಇಬ್ರಾಹಿಂ ಹೇಳಿದರು. ಹೈಕಮಾಂಡ್ …

Read More »

ಹೋಟೆಲ್ ಮಾಲಿಕನಿಗೆ ವಂಚನೆ : ಬಂಧನಕ್ಕೆಒಳಗಾದ ಪ್ರೇಮಿಗಳು

ಕೊಚ್ಚಿ: ಹೋಟೆಲ್ ಮಾಲಿಕನಿಗೆ ವಂಚನೆ ಮಾಡಲು ಹೋಗಿ ಪ್ರೇಮಿಗಳು ಬಂಧನಕ್ಕೊಳಗಾದ ಘಟನೆ ಕೇರಳದಲ್ಲಿ ನಡೆದಿದೆ. ರಿಂಝೀನಾ ಮತ್ತು ಶಾಜಹಾನ್ ಎಂಬ ಇಬ್ಬರು ಪ್ರೇಮಿಗಳು ಕೊಚ್ಚಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಬಳಿಕ ಹೋಟೆಲ್ ನಲ್ಲಿ ತಿಂದ ಆಹಾರದಿಂದ ತಮಗೆ ಅನಾರೋಗ್ಯವಾಗಿದೆ. ಈಗ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಮಗೆ ಪರಿಹಾರ ಕೊಡಿ ಎಂದು ದಾವೆ ಹೂಡಿದ್ದಾರೆ. ಅದರಂತೆ ಅವರು ದಾಖಲಾಗಿದ್ದ ಆಸ್ಪತ್ರೆಗೆ ಹೋಟೆಲ್ ಮಾಲಿಕ ಹೋಗುತ್ತಿದ್ದಂತೇ ಹಲ್ಲೆ ನಡೆಸಿ ಆತನ ಬಳಿಯಿದ್ದ 11 ಸಾವಿರ …

Read More »

ಬ್ರಾಹ್ಮಿ ಮುಹೂರ್ತದಲ್ಲಿ ಜರುಗಿದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ

ಬಾಗಲಕೋಟೆ: ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಒಕ್ಕೂಟದ ಜಾಗೆಯಲ್ಲಿ ರಾಜ್ಯದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ ಕಾರ್ಯಕ್ರಮ ಭಾನುವಾರ ನಸುಕಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಈ ಕಾರ್ಯಕ್ರಮ ನಡೆಯಿತು. 3ನೇ ಪೀಠದ ಪೀಠಾಧಿಕಾರಿ ಆಗುತ್ತಿರುವ ಷ. ಬ್ರ. ಡಾ. ಮಹದೇವ ಶಿವಾಚಾರ್ಯ ಸ್ವಾಮೀಜಿಗಳಿಗೆ ಪಟ್ಟಾಭಿಷೇಕ ಕಾರ್ಯ ನಡೆಯಿತು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹೆಸರಿನಲ್ಲಿ ಜಗದ್ಗುರು ಡಾ.ಮಹಾದೇವ …

Read More »

ಡಿವೈಡರ್​ಗೆ ಡಿಕ್ಕಿ, :ವಿಕಲಚೇತನ ಸಾವು

ಕಾರವಾರ: ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಓರ್ವ ವಿಕಲಚೇತನ ಸಾವನ್ನಪ್ಪಿದ್ದಾರೆ. ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ಸಂಭವಿಸಿದೆ. ನಿಜಾಮುದ್ದಿನ್ (36) ಮೃತ ದುರ್ದೈವಿ. ನಿಯಂತ್ರಣ ತಪ್ಪಿದ ಕಾರು ಆಕಳಿಗೆ ಗುದ್ದಿದೆ. ಬಳಿಕ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ನಿಜಾಮುದ್ದಿನ್ ಹಾಗೂ ಅವರ ಸ್ನೇಹಿತ ಅಬಕಾರಿ ಇಲಾಖೆ ಜಪ್ತಿ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋರಟಿದ್ದರು. ಈ ವೇಳೆ ಅಪಘಾತ ನಡೆದಿದೆ. ಕಾರು ಚಾಲಕ ಅಶೋಕ ಖೇಣಿಗೆ …

Read More »

ಕೊಳಕ್ಕೆ ಹಾರಿ ಯುವಕ ಆತ್ಮಹತ್ಯೆ

ರಾಮನಗರ: ಬೆಟ್ಟದ ಕೊಳಕ್ಕೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಬಳಿ ನಡೆದಿದೆ. ಸಿದ್ದರಾಮೇಶ್ವರ ಬೆಟ್ಟದ ಕೊಳಕ್ಕೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಜಿತ್ ತಡರಾತ್ರಿ ಮನೆಯಿಂದ ಹೋಗಿದ್ದ. ಪೋಷಕರು ನಾಪತ್ತೆ ದೂರಿನ ಹಿನ್ನೆಲೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಟವರ್ ಲೊಕೇಷನ್ ಆಧಾರದ ಮೇಲೆ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಸದ್ಯ ಈ ಪ್ರಕರಣ ಎಮ್ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »