Breaking News

Breaking News

ಒಂದೇ ಕುಟುಂಬದ ನಾಲ್ವರು ಮೃತದೇಹ ಮನೆಯಲ್ಲಿ ಪತ್ತೆ! ಡೆತ್‌ ನೋಟ್ ಕಂಡು ಪೊಲೀಸರು ಶಾಕ್!

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರಲ್ಲಿ ದಾಮೋದರಂ, ಅವರ ಪತ್ನಿ ನಿರ್ಮಲಾ ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ನಿರ್ಮಲಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಕಾರಣಗಳು ಘಟನೆಗೆ ಹಿನ್ನೆಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಮನೆಯಿಂದ ಒಂದು ಕೈಬರಹದ ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ ಸಾವಿನ ನಿಖರ ಕಾರಣ ಕುರಿತು ತನಿಖೆ …

Read More »

ಪಾಕ್​​​​ ಸಂಘಟನೆಗಳ ಜೊತೆ ನಂಟು, ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್!

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ 20 ವರ್ಷದ ಸುಯೇಲ್ ಎಂಬಾತನನ್ನು ಶಂಕಿತ ಉಗ್ರ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಲಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪಾಕಿಸ್ತಾನ ಮೂಲದ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಹಿಂದೆ ಬಂಧಿತರಾಗಿದ್ದ ಇಬ್ಬರು ಶಂಕಿತರ ಪ್ರಕರಣದ ಜಾಡು ಹಿಡಿದು …

Read More »

ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ಫ್ಲೈಓವರ್ ಇಡೀ ಕಾಮಗಾರಿಯೇ ಕಳಪೆ: ಎಂಜಿನಿಯರ್‌ ತಂಡದಿಂದ ದೂರು

ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದ ಫ್ಲೈಓವರ್ ಕಾಮಗಾರಿಯ ಗುಣಮಟ್ಟದ ಬಗ್ಗೆ ತಾಂತ್ರಿಕ ತಜ್ಞರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಶೀಲನೆ ವೇಳೆ ನಿರ್ಮಾಣಕ್ಕೆ ಬಳಸಿದ ಕಬ್ಬಿಣದ ಸರಳುಗಳು ಎರಡು ವರ್ಷಕ್ಕೂ ಹೆಚ್ಚು ಕಾಲ ಮಳೆ-ಗಾಳಿಗೆ ತೆರೆದುಕೊಂಡು ತುಕ್ಕು ಹಿಡಿದಿರುವುದು ಪತ್ತೆಯಾಗಿದೆ. ಸಾರ್ವಜನಿಕರು ಮತ್ತು ಕಾರ್ಮಿಕರ ಸುರಕ್ಷತೆಗೆ ಅಗತ್ಯ ಬ್ಯಾರಿಕೇಡ್‌ಗಳು ಹಾಗೂ ಎಚ್ಚರಿಕೆ ಕ್ರಮಗಳನ್ನು ಸಮರ್ಪಕವಾಗಿ ಕೈಗೊಂಡಿಲ್ಲ ಎಂದು ತಜ್ಞರು ಆರೋಪಿಸಿದ್ದಾರೆ. ಇದರಿಂದ ಅಪಘಾತಗಳ ಅಪಾಯ ಹೆಚ್ಚಿದ್ದು, ಈಗಾಗಲೇ ಕೆಲ ದುರ್ಘಟನೆಗಳು ಸಂಭವಿಸಿರುವುದಾಗಿ …

Read More »

ನಲ್ಲಿ ನೀರಿನಲ್ಲಿ ಕಾಲು ತೊಳೆಯಬೇಡ ಅಂದಿದ್ದಕ್ಕೆ ಪಿಜಿ ಮಾಲೀಕನ ಕೊಂದರು!

ಬೆಂಗಳೂರು ಕಸ್ತೂರಿನಗರದಲ್ಲಿ ಪಿಜಿ ಮಾಲೀಕ ಮಾಧವ್ ಮೇಟ್ಲಿ (37) ಅವರನ್ನು ಕ್ಷುಲ್ಲಕ ಜಗಳದ ವೇಳೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ರಾಕೇಶ್ (21) ಹಾಗೂ ಡಾನ್ ಬ್ರೈಟ್ಸನ್ (20) ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಲ್ಲಿ ನೀರಿನಲ್ಲಿ ಕಾಲು ತೊಳೆಯಬೇಡಿ ಎಂದು ಮಾಧವ್ ಹೇಳಿದ್ದಕ್ಕೆ ಜಗಳ ಆರಂಭವಾಗಿದೆ. ಬಳಿಕ ಆರೋಪಿಗಳು ಬ್ಯಾಟ್ ಕಸಿದುಕೊಂಡು ಮಾಧವ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಾಧವ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ರಾಮಮೂರ್ತಿ ನಗರ …

Read More »

ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ- ಕಾಮುಕನಿಗೆ ಧರ್ಮದೇಟು ನೀಡಿದ ಪ್ರಯಾಣಿಕರು!

ಕುಣಿಗಲ್ ಸಮೀಪದ ಬಿಳಿದೇವಾಲಯದ ಬಳಿ ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ. ಆತನ ವರ್ತನೆ ಗಮನಿಸಿದ ಸಹ ಪ್ರಯಾಣಿಕರು ಹಾಗೂ ಮಹಿಳೆಯ ಪತಿ ತಕ್ಷಣ ಮಧ್ಯಪ್ರವೇಶಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರೋಪಿ ತಾನು ಸಾರಿಗೆ ಸಂಸ್ಥೆಯ ಸಿಬ್ಬಂದಿ ಎಂದು ಸುಳ್ಳು ಹೇಳಿ ಬಸ್ ಹತ್ತಿದ್ದಾನೆ ಎಂಬ ಮಾಹಿತಿ ಕೂಡ ಬೆಳಕಿಗೆ ಬಂದಿದೆ. ಪ್ರಯಾಣಿಕರು ಪ್ರಶ್ನಿಸುತ್ತಿದ್ದಂತೆ ಆತ ಬಸ್ಸಿನಿಂದ ಇಳಿದು ಪರಾರಿಯಾಗಲು ಯತ್ನಿಸಿದರೂ, ಮಹಿಳೆಯ …

Read More »

ತಿನ್ನಲು ಅನ್ನ ಕೇಳಿದ್ದಕ್ಕೆ ಹೋಟೆಲ್ ಮಾಲೀಕನಿಂದ ಅಲೆಮಾರಿ ದಂಪತಿ ಮೇಲೆ ಹಲ್ಲೆ..

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಊಟ ಕೇಳಿದ್ದ ಅಲೆಮಾರಿ ದಂಪತಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕುಮಟಾದ ಗೋವರ್ಧನ ಹೋಟೆಲ್‌ನಲ್ಲಿ ನಡೆದ ಘಟನೆಯಲ್ಲಿ ಹೋಟೆಲ್ ಮಾಲೀಕ ಗಣೇಶ್ ನಾಯಕ್ ಹಾಗೂ ವಾಚ್‌ಮನ್ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದಂಪತಿ ಹೋಟೆಲ್‌ನಲ್ಲಿ ಆಹಾರ ಕೇಳಿದ್ದ ವೇಳೆ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ದಾಖಲಾಗಿವೆ. ಅಲೆಮಾರಿಯೊಬ್ಬ ಹೋಟೆಲ್ ಕಡೆ ಕಲ್ಲು ಎಸೆದಿದ್ದರಿಂದ ಕೋಪಗೊಂಡು …

Read More »

ಕೊಡಗು ನ್ಯಾಯಾಲಯಕ್ಕೆ ಸಹನಾಳ ಈ ಮೇಲ್ ಬಾಂಬ್ ಬೆದರಿಕೆ: ಐಸಿಸ್ ದಾಳಿ ಎಚ್ಚರಿಕೆ, ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ!

ಕೊಡಗು ಜಿಲ್ಲಾ ಪ್ರಧಾನ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 2 ಗಂಟೆಗೆ ಸ್ಫೋಟ ನಡೆಸುವುದಾಗಿ ಹಾಗೂ ಐಸಿಸ್ ಉಗ್ರರ ದಾಳಿ ನಡೆಯಲಿದೆ ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದ್ದರಿಂದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡರು. ಮಾಹಿತಿ ದೊರೆಯುತ್ತಿದ್ದಂತೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಪೊಲೀಸ್ ಅಧಿಕಾರಿಗಳು ನ್ಯಾಯಾಲಯ ಸಂಕೀರ್ಣದಲ್ಲಿ ಸುದೀರ್ಘ ಶೋಧ …

Read More »

ಬೆಂಗಳೂರನ್ನು ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ : ಪ್ರಿಯಕರನ ಜೊತೆ ಸೇರಿ ಅಪ್ಪ, ಅಮ್ಮ, ತಂಗಿಯನ್ನು ಕೊಂದ ಮಗಳು

ಬೆಂಗಳೂರು ಕೆಆರ್‌ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ತ್ರಿವಳಿ ಕೊಲೆ ನಡೆದಿದೆ. ತಂದೆ ಸೋಮಸುಂದರ್ (55), ತಾಯಿ ಮುತ್ತುಲಕ್ಷ್ಮೀ (49) ಹಾಗೂ ಪುತ್ರಿ ಸುಪ್ರಿಯಾ (20) ಮೃತರಾಗಿದ್ದು, ಹಿರಿಯ ಮಗಳು ಶ್ವೇತಾ ಮತ್ತು ಆಕೆಯ ಪ್ರಿಯಕರ ಕೇತನ್ ಮೇಲೆ ಹತ್ಯೆಯ ಶಂಕೆ ವ್ಯಕ್ತವಾಗಿದೆ. ಶ್ವೇತಾ ಮತ್ತು ಕೇತನ್ ಅವರ ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ …

Read More »

ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ : ಲವರ್ ಜೊತೆ ಸೇರಿ ಮಗಳಿಂದಲೇ ಕೊಲೆ ಶಂಕೆ.!

ಬೆಂಗಳೂರು: ರಾಜಧಾನಿಯಲ್ಲಿ ಅತ್ಯಂತ ಘೋರ ಮತ್ತು ರಕ್ತಸಿಕ್ತ ಘಟನೆಯೊಂದು ನಡೆದಿದ್ದು, ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯ ಸೀಗೆಹಳ್ಳಿಯ ಮನೆಯೊಂದರಲ್ಲಿ ಈ ಕೃತ್ಯ ನಡೆದಿದೆ.ಕೊಲೆಯಾದವರನ್ನು ತಂದೆ ಸೋಮ ಸುಂದರ (55), ತಾಯಿ ಲಕ್ಷ್ಮೀ (48) ಮತ್ತು ಸಹೋದರಿ ಸುಪ್ರಿಯಾ (20) ಎಂದು ಗುರುತಿಸಲಾಗಿದೆ. ಕುಟುಂಬದ ಹಿರಿಯ ಪುತ್ರಿ ಶ್ವೇತಾ ಅವರ ಮೇಲೆಯೇ ಶಂಕೆ ವ್ಯಕ್ತವಾಗಿದೆ. ಶ್ವೇತಾ ತನ್ನ ಪ್ರಿಯಕರ ಕೆನತ್ ಜೊತೆ ಸೇರಿಕೊಂಡು ಈ …

Read More »

ಚೆನ್ನೈ | ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಚೆನ್ನೈ : ‘ತಿರುವಳ್ಳೂರ್‌ ಜಿಲ್ಲೆಯ ‘ಸೇಂಟ್‌ ಪೀಟರ್ಸ್‌ ಪೌಲ್‌ ಸೀಫುಡ್‌ ಎಕ್ಸ್‌ಪೋರ್ಟ್‌ ಪ್ರೈವೇಟ್‌ ಲಿಮಿಟೆಡ್‌’ ಹೆಸರಿನ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಂ ಅನಿಲ ಸೋರಿಕೆಯಿಂದಾದ ಅವಗಢದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ’ ಎಂದು ಕಾರ್ಮಿಕ ಅಭಿವೃದ್ಧಿ ಸಚಿವ ಜೆ.ಮೊಹಮ್ಮದ್‌ ಫರ್ವಾಸ್‌ ಅವರು ಸೋಮವಾರ ವಿಧಾನಸಭೆಗೆ ಮಾಹಿತಿ ನೀಡಿದರು. ‘ಅನಿರೀಕ್ಷಿತವಾಗಿ ಪೈಪ್‌ಲೈನ್‌ನಲ್ಲಿ ಅನಿಲ ಸೋರಿಕೆಯಾಗಿದೆ. ಇದರಿಂದ 74 ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ ಉಂಟಾಯಿತು. ಈ ಪೈಕಿ 70 ಮಂದಿ ಮಹಿಳೆಯರಿದ್ದರು’ ಎಂದರು. …

Read More »