Breaking News

Breaking News

ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ

ಬೆಂಗಳೂರು : ರಾಜ್ಯ ಸರ್ಕಾರವು  ಗ್ರಾಮೀಣ ಜನತೆ ಮತ್ತು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು , ಜನವರಿ 26 ರ ಗಣರಾಜ್ಯೋತ್ಸವ ದಿನದಂದು ರೈತರ ಮನೆ ಬಾಗಿಲಿಗೆ ಉಚಿತ ಪಹಣಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಜನವರಿ 26 ರಂದು ಕಂದಾಯ ಇಲಾಖೆಯಿಂದ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗುವುದು.

Read More »

ಕೈದಿ ಜೊತೆ ನ್ಯಾಯಾಧೀಶೆ ಲಿಪಲಾಕ್ : ವಿಡಿಯೋ ವೈರೆಲ್

ಅರ್ಜೆಂಟೀನಾ: ಪೊಲೀಸರು ಕೊಲೆ ಮಾಡಿರುವ ಅಪರಾಧಿ ಕ್ರಿಶ್ಚಿಯನ್​​ ಬೂಸ್ಟೋಸ್‌ ಎಂಬುವವನ್ನು ಜೈಲಿನಲ್ಲಿ ಸಿಗಲು ಹೋಗಿದ್ದ ನ್ಯಾಯಾಧೀಶೆ ಮಾರೀಲ್‌ ಸೌರೇಜ್ ಎಂಬುವವರು ಕಿಸ್‌ ಮಾಡಿದ್ದಾರೆ. ಈ ಘಟನೆ ಅರ್ಜೆಂಟೀನಾದಲ್ಲಿ ನಡೆದಿದ್ದು, ವೈರಲ್‌ ವಿಡಿಯೋದಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಯನ್ನು ಜೈಲಿನಲ್ಲಿ ಖಾಸಗಿಯಾಗಿ ಸಿಕ್ಕು ನ್ಯಾಯಾಧೀಶೆಯೊಬ್ಬರು ಕಿಸ್‌ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ವೈರಲ್‌ ಆಗಿಬಿಟ್ಟಿದೆ. ಇದೀಗ ಕಾನೂನು ಉಲ್ಲಂಘಿಸಿ …

Read More »

SSLC ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಮಾರ್ಚ್, ಏಪ್ರಿಲ್ 2022ರಲ್ಲಿ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ದಿನಾಂಕ 28-03-2022 ರಂದು ಪ್ರಥಮ ಭಾಷೆಗಳಾದಂತ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ( ಕೇಂದ್ರ ಪಠ್ಯಕ್ರಮ) ಸಂಸ್ಕೃತ ಪರೀಕ್ಷೆ ನಿಗದಿ ಪಡಿಸಲಾಗಿದೆ. 1. ದಿನಾಂಕ 29-03-2022ರಂದು ಯಾವುದೇ ಪರೀಕ್ಷೆ ಇರುವುದಿಲ್ಲ 2.  30-03-2022ರಂದು ದ್ವಿತೀಯ ಭಾಷೆ – …

Read More »

ಪ್ರಧಾನಿ ರ್ಯಾಲಿ ವಿಫಲಕ್ಕೆ ಉಗ್ರ ಸಂಚು?

ನವದೆಹಲಿ: ಪಂಜಾಬ್‌ನ ಫಿರೋಜ್‌ಪುರ ರ‍್ಯಾಲಿ ವಿಫಲಗೊಳಿಸಲು ಖಲಿಸ್ತಾನಿ ಉಗ್ರರು ಸಂಚು ನಡೆಸಿದ್ದ ವಿಷಯ ಬೆಳಕಿಗೆ ಬಂದಿದೆ ಇದೀಗ ಬೆಳಕಿಗೆ ಬಂದಿದೆ. ರ‍್ಯಾಲಿಗೂ ಎರಡು ದಿನ ಮೊದಲು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಸಿಖ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಮುಖ್ಯಸ್ಥ ಗುರುಪಾವತ್‌ಸಿಂಗ್‌ ಪನ್ನು, ಮೋದಿ ರ‍್ಯಾಲಿ ವಿಫಲಗೊಳಿಸುವಂತೆ ಕರೆ ಕೊಟ್ಟಿದಲ್ಲದೆ, ಹೀಗೆ ಮಾಡಿದವರಿಗೆ 1 ಲಕ್ಷ ಡಾಲರ್‌ (75 ಲಕ್ಷ ರು.) ಬಹುಮಾನ ಘೋಷಿಸಿದ್ದ ವಿಡಿಯೋವೊಂದು ಇದೀಗ ಬಹಿರಂಗವಾಗಿದೆ. ಜೊತೆಗೆ ಮೋದಿ ಕಾರಿಗೆ …

Read More »

ಶಾಲೆಗೆ ಮೊಬೈಲ್ ತಂದಿದ್ದಕ್ಕೆ ಘನ ಘೋರ ಶಿಕ್ಷೆ ಕೊಟ್ಟ ಶಿಕ್ಷಕಿ

ಮಂಡ್ಯ : ಶಾಲೆಗೆ ಮೊಬೈಲ್ ತಂದಿದ್ದಕ್ಕೆ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಾರದ ಹಿಂದೆ ಈ ಅಮಾನವೀಯ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗಳ ಜೊತೆ ಮುಖ್ಯ ಶಿಕ್ಷಕಿಯ ದೌರ್ಜನ್ಯ ವಿಷಯ ತಿಳಿದ ಪೋಷಕರು ಸ್ನೇಹಲತಾ ವಿರುದ್ದ ದೂರು ನೀಡಲು ಮುಂದಾಗಿದ್ದಾರೆ.

Read More »

ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ

ಪಂಜಾಬ್ ಪ್ರವಾಸದ ವೇಳೆ ಎದುರಾದ ಭದ್ರತಾ ವೈಫಲ್ಯಗಳ ಬಗ್ಗೆ ಮಾಹಿತಿ ನೀಡಿದರು. ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಅದೇ ರೀತಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಪ್ರಧಾನಿಗೆ ದೂರವಾಣಿ ಕರೆ ಮಾಡಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದರೆ ನಿನ್ನೆ ಪಂಜಾಬ್ ಪ್ರವಾಸದಲ್ಲಿದ್ದ ಮೋದಿ ಅವರನ್ನು ಪ್ರತಿಭಟನಾ ಕಾರರು ತಡೆದಿದ್ದು, ಫ್ಲೈಓವರ್ ಮೇಲೆ …

Read More »

ಭದ್ರತಾ ಲೋಪ : ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಬುಧವಾರ ಭೇಟಿ ಕೊಟ್ಟಾಗ ಉಂಟಾದ ಭದ್ರತಾ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಭವಿಷ್ಯದಲ್ಲಿ ಇಂತಹ ಭದ್ರತಾ ಲೋಪ ಸಂಭವಿಸದಂತೆ ಖಾತರಿಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಪ್ರಧಾನಿಯವರ ವಾಹನ ಸಾಲು ಭಟಿಂಡಾದಲ್ಲಿ ಸ್ವಲ್ಪ ಹೊತ್ತು ಸ್ಥಗಿತವಾಗಿತ್ತು. ಪ್ರಧಾನಿಯವರು ರ್‍ಯಾಲಿಯೊಂದರಲ್ಲಿ ಭಾಗವಹಿಸಬೇಕಿತ್ತು. ಆದರೆ, ಭದ್ರತಾ ಲೋಪದ ಬಳಿಕ ಪ್ರಧಾನಿಯವರು ಕಾರ್ಯಕ್ರಮದಲ್ಲಿ ಭಾಗವಹಿಸದೆಯೇ …

Read More »

ಕಬ್ಬಿನ ಜಮೀನಿನಲ್ಲಿ ಆಕಸ್ಮಿಕ ಅಗ್ನಿ ಅವಘಡ – ಅಪಾರ ಪ್ರಮಾಣದ ಕಬ್ಬು ಬೆಂಕಿಗಾಹುತಿ..!

ಧಾರವಾಡ: ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದ ಕಬ್ಬು ಬೆಂಕಿಗಾಹುತಿಯಾಗಿರುವಂತಹ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಳಿ ನಡೆದಿದೆ. ಇನ್ನು ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಜಮೀನುಗಳಿಗೆ ವ್ಯಾಪಿಸುತ್ತ ಸಾಗಿದ್ದು, ಅಕ್ಕಪಕ್ಕದ ಜಮೀನುಗಳ ರೈತರಲ್ಲಿ ಆತಂಕ ಮೂಡುವಂತೆ ಮಾಡಿದೆ. ಹೀಗಾಗಿ ಸ್ಥಳೀಯರು ಸಮರೋಪಾಧಿಯಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಅಗ್ನಿ ಅವಘಡ ಸುದ್ದಿ ತಿಳಿಯುತ್ತಲೇ ಸಮಯ ಪಜ್ಞೆ ಮೆರೆದಿರುವ ಪೊಲೀಸ್ ಇಲಾಖೆಯ ಸಿಬ್ಬಂಧಿ ಹವಾಲ್ದಾರ ಮಲ್ಲಿಕಾರ್ಜುನ ಚೌಡಣ್ಣವರ …

Read More »

ರಾಜ್ಯದಲ್ಲಿ ಇಂದು ಅಬ್ಬರಿಸಿದ ಕೊರೋನಾ

ಬೆಂಗಳೂರು: ರಾಜ್ಯದಲ್ಲಿ ಇಂದು  ಕೊರೋನಾ ಮಹಾಸ್ಪೋಟವಾಗಿದ್ದು, ಜನರಲ್ಲಿ ಮತ್ತೇ ಆತಂಕ ಹೆಚ್ಚುತ್ತಿದೆ. ಇದೀಗ ಸ್ವಲ್ಪಮಟ್ಟಿಗೆ ಏರಿಕೆಯನ್ನು ಜೀವನದಲ್ಲಿ ಕಂಡಂತಹ ಜನರಿಗೆ ಮತ್ತೇ ತಲೆ ನೋವು ಉಂಟಾಗಿದೆ. ಇಂದಿನ ಕೊರೋನಾ ಮಾಹಿತಿ ಒಂದೇ ದಿನ ಬರೋಬ್ಬರಿ 5031 ಜನರಿಗೆ ಸೋಂಕು ತಗುಲಿದೆ. ರಾಜಧಾನಿ ಬೆಂಗಳೂರಿನಲ್ಲಿ 4324 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಹೊಸ ಕೇಸ್ 4 ಸಾವಿರ ಗಡಿ ದಾಟಿದೆ. ರಾಜ್ಯದಲ್ಲಿ ಹೊಸ ಕೇಸ್ ಸಂಖ್ಯೆ 5 ಸಾವಿರ …

Read More »

ಸೆಪ್ಟೆಂಬರನಲ್ಲಿ ನಡೆದ ಚುನಾವಣೆ ಸಂವಿಧಾನಬದ್ಧವಾಗಿ ನಡೆದಿಲ್ಲ

ಹುಬ್ಬಳ್ಳಿ : ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಅಸಿಂಧುಗೊಳಿಸಬೇಕು. ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಚುನಾವಣೆ ಸಂವಿಧಾನಬದ್ಧವಾಗಿ ನಡೆದಿಲ್ಲ ವಾರ್ಡ್ ವಿಂಗಡಣೆ, ಮೀಸಲಾತಿ ಇತ್ಯಾದಿಗಳ ಸಂವಿಧಾನಬದ್ಧವಾಗಿ ನಡೆದಿಲ್ಲ. ಈ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ‌ಎಂದು ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ವೇದಿಕೆಯ ಮುಖಂಡ ಬಸವರಾಜ ಭಜಂತ್ರಿ ಆಗ್ರಹಿಸಿದರು. ಗೋಷ್ಟಿಯಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ ಈರಪ್ಪಾ ಎಮ್ಮಿ, ರಾಜು ನಾಯಕವಾಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Read More »