Breaking News

Breaking News

ಕೋವಿಡ್‌ ಕಂಟಕದಿಂದ ಮತ್ತೆ ಆನ್‌ಲೈನ್‌ ಕ್ಲಾಸ್‌..?

ಬೆಂಗಳೂರು: ಕೋವಿಡ್‌ ಹೆಚ್ಚಳ ಹಿನ್ನೆಲೆ ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ ಶಾಲೆಗಳನ್ನು ಆನ್‌ಲೈನ್‌/ಆಫ್ ಲೈನ್‌ ಸೇರಿ ಎರಡರಲ್ಲಿ ಶಾಲೆಗಳಿಗೆ ಅನುಕೂಲವಾಗುವುದರಲ್ಲಿ ತರಗತಿಗಳನ್ನು ನಡೆಸಲು ಸರಕಾರ ಈಗಾಗಲೇ ಅವಕಾಶ ನೀಡಿದೆ. ಬೆಂಗಳೂರು ಸಹಿತ ವಿವಿಧ ಭಾಗಗಳ ಕೆಲವು ಖಾಸಗಿ ಶಾಲೆಗಳು ಶುಕ್ರವಾರದಿಂದಲೇ (ಜ.6) ಆನ್‌ಲೈನ್‌ ತರಗತಿಗಳನ್ನು ನಡೆಸಲು ನಿರ್ಧರಿಸಿದ್ದು, ಮಕ್ಕಳು ಮತ್ತು ವಿದ್ಯಾರ್ಥಿಗಳು ಶಾಲೆಗೆ ಬಾರದಂತೆ ಸೂಚನೆ ನೀಡಿವೆ. ಕೋವಿಡ್‌ ಹೆಚ್ಚಳದ ನಡುವೆ ಶಿಕ್ಷಕರ ವಿರೋಧ ಯಾಕೆ?ಶಾಲಾ ಕೊಠಡಿಗಳಲ್ಲಿ ಮಕ್ಕಳೊಂದಿಗೆ …

Read More »

ವಾರಾಂತ್ಯ ಕರ್ಫ್ಯೂ : ಏನೆಲ್ಲ ಇರುತ್ತೆ ? ಇರುವುದಿಲ್ಲ?

ಬೆಂಗಳೂರು: ಕೋವಿಡ್ ಪ್ರಕರಣಗಳು ಏಕಾಏಕಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಶುಕ್ರವಾರದಿಂದ (ಜ.7) ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಏನೆಲ್ಲ ಇರುತ್ತೆ… * ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ.* ದಿನಸಿ ಅಂಗಡಿ, ಹಾಲು, ತರಕಾರಿ, ಔಷಧ, ಪೆಟ್ರೋಲ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ* ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ ಇರುತ್ತದೆ* ಐಟಿ ಹಾಗೂ ಇತರೆ ಉದ್ಯಮ ಸಂಸ್ಥೆಗಳ ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಸಂಚಾರಕ್ಕೆ ಅನುಮತಿ*ಇ-ಕಾಮರ್ಸ್‌ ಸೇವೆಗೆ ಅವಕಾಶ* …

Read More »

ಸರ್ವೀಸ್ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಓಮ್ನಿ

ದಾವಣಗೆರೆ: ಜಿಲ್ಲೆಯ ಆನಗೋಡು ರಾಷ್ಟ್ರೀಯ ಹೆದ್ದಾರಿ ಬಳಿ ಒಕ್ಕಣಿಗೆ ಹಾಕಿದ್ದ ರಾಗಿ ಹುಲ್ಲಿನ ಮೇಲೆ ಓಮ್ನಿಕಾರು ಬರುತ್ತಿದ್ದಂತೆ, ಬೆಂಕಿ ಹೊತ್ತಿ ಧಗಧಗನೆ ಉರಿದು ಸುಟ್ಟು ಭಸ್ಮವಾಗಿದೆ. ಫಜಲ್ ಅಹಮ್ಮದ್ ಎಂಬವರಿಗೆ ಸೇರಿದ ಕಾರಾಗಿದೆ. ಅಂಗಡಿಗೆ ದಿನಸಿ ಸಾಮನುಗಳನ್ನ ಒಯ್ಯುವಾಗ ಹೊತ್ತಿ ಉರಿದಿದೆ. ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತಿದ್ದಂತೆ ಚಾಲಕ ಹೊರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲೆ ಓಮ್ನಿ ಕಾರು ಸಂಪೂರ್ಣ ಭಸ್ಮವಾಗಿದೆ.ಬೆಂಕಿ ಹೊತ್ತಿ ಉರಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ …

Read More »

ಪ್ರತಾಪಚಂದ್ರ ಶೆಟ್ಟಿ ರಾಜಕೀಯದಿಂದ ನಿವೃತ್ತಿ

ಕುಂದಾಪುರ: ನಾಲ್ಕು ಬಾರಿ ವಿಧಾನಸಭೆ ಸದಸ್ಯರಾಗಿ, ಮೂರು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿ 36 ವರ್ಷಗಳ ಸುದೀರ್ಘ‌ ಶಾಸಕತ್ವ ಅವಧಿ ಹೊಂದಿದ್ದ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಶಾಸಕತ್ವ ಜ. 5ರಂದು ಕೊನೆಯಾಗಲಿದೆ. ಪ್ರಸ್ತುತ ಚುನಾವಣಾ ರಾಜಕೀಯದಿಂದ ದೂರ ಇರುವ ಅವರು ಎಐಸಿಸಿ ಸದಸ್ಯರಾಗಿದ್ದುಕೊಂಡು ಪಕ್ಷ ಹಾಗೂ ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಲಿದ್ದಾರೆ.

Read More »

22 ವರ್ಷ ಬಳಿಕ ತಾಯಿ ಮಡಿಲು ಸೇರಿಗ ಮಗಳು

ಚಿಕ್ಕಮಗಳೂರು : ಇದು ಅಪರೂಪದಲ್ಲಿ ಅಪರೂಪದ ಘಟನೆ. ಅವರಿಬ್ಬರ ಮಧ್ಯೆ 22 ವರ್ಷಗಳ ಕಾಲ ಯಾವುದೇ ಸಂಪರ್ಕ ಇರಲ್ಲ, ಒಬ್ಬರನ್ನೊಬ್ಬರು ಭೇಟಿ ಮಾಡಿಲ್ಲ ಅಂದ್ರೆ ಕಲ್ಪನೆ ಮಾಡೋದಕ್ಕೂ ಸಾಧ್ಯವಿಲ್ಲ ಅಲ್ವಾ..? ಆದ್ರೆ ಕಾಫಿನಾಡಿನಲ್ಲಿ ನಡೆದ ಅದೊಂದು ಸ್ಟೋರಿ ನಿಜಕ್ಕೂ ಅದೆಂತಹ ಫಿಲ್ಮಿ ಸ್ಟೋರಿಯನ್ನೂ ಕೂಡ ಮೀರಿಸುತ್ತೆ.. ಇಂತದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮ. ಸಿನಿಮಾದಲ್ಲೂ  ಈ ರೀತಿಯ ಸನ್ನಿವೇಶ ನೋಡೋದು ತುಂಬಾ …

Read More »

ಟಿಪ್ಪರ್‌ ಡಿಕ್ಕಿ ವಿದ್ಯಾರ್ಥಿನಿ ಸ್ಥಳದಲ್ಲಿ ಸಾವು

ಬೆಂಗಳೂರು: ಟಿಪ್ಪರ್‌ ಡಿಕ್ಕಿಯಾಗಿ ದ್ವಿ ಚಕ್ರ ವಾಹನದ ಹಿಂದೆ ಕುಳಿತಿದ್ದ ವಿದ್ಯಾರ್ಥಿನಿ ತಲೆ ಮೇಲೆ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಟ್ಟಿರುವ ಘಟನೆ ಅಶೋಕನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್‌.ಎಸ್‌.ಪಾಳ್ಯ ನಿವಾಸಿ ಸಂಜನಾ ಪ್ರಿಯಾ (21) ಮೃತ ವಿದ್ಯಾರ್ಥಿನಿ. ದ್ವಿಚಕ್ರ ವಾಹನ ಚಾಲಕ ವಿನಯ್‌ಕುಮಾರ್‌(24) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಅನಾಥ ಮಕ್ಕಳ ತಾಯಿ ಇನ್ನಿಲ್ಲ

ನವದೆಹಲಿ: ಅನಾಥ ಮಕ್ಕಳ ತಾಯಿ ಎಂದೇ ಪ್ರಸಿದ್ಧ ಹೋದಿರುವ,   ಸಾವಿರಾರು ಅನಾಥ ಮಕ್ಕಳನ್ನ ಸಾಕುತ್ತಿದ್ದ ಸಿಂಧೂತಾಯಿ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಾವಿರಾರು ಮಕ್ಕಳನ್ನು ಭಿಕ್ಷೆ ಬೇಡಿ ಸಾಕಿದ್ದರು. ಅದರ ಜೊತೆಗೆ ಆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದ್ದರು. ಆದ್ರೆ ಅವರು ಇಂದು ಎಲ್ಲರನ್ನ ಬಿಟ್ಟು ಬಾರದೂರಿಗೆ ಹೋಗಿದ್ದಾರೆ. ಡಾ.ಸಿಂಧೂತಾಯಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿ. 24ರಿಂದಲೂ ಆಸ್ಪತದರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ …

Read More »

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಆರಂಭ

ಬೆಂಗಳೂರು: ಇದು ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಬಂದಿದೆ ಎಂಬುದನ್ನು ಖಚಿತಪಡಿಸುತ್ತದೆ. ನಾವೀಗ ಮೂರನೇ ಅಲೆಯ ಆರಂಭದಲ್ಲಿದ್ದೇವೆ . ರಾಜ್ಯದ ಕೋವಿಡ್ ಪಾಸಿಟಿವಿಟಿ ದರ ಕಳೆದ ಆರು ತಿಂಗಳುಗಳಿಂದ ಶೇ.1ರೊಳಗೆ ಇದ್ದದ್ದು, ಇದೀಗ ಶೇ.2.59ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನಾವೀಗ ಮೂರನೇ ಅಲೆಯ ಆರಂಭದಲ್ಲಿದ್ದೇವೆ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೊದಲು …

Read More »

ವಾಮಾಚಾರನಿಂದಾಗಿ ಬಿತ್ತು ಬಾಲಕನ ಹೆಣ

ಮೈಸೂರು: ಚಿಕ್ಕ ವಯಸ್ಸಿನಲ್ಲಿ ಮೌಢ್ಯಕ್ಕೆ ಮಾರು ಹೋದವ್ರು ಚೆಡ್ಡಿ ದೊಸ್ತ್ ಅನ್ನೇ ಬಲಿ ಪಡೆದಿರುವ ಘಟನೆ  ಮೈಸೂರುನಲ್ಲಿ ನಡೆದಿದೆ. ಅವ್ರೆಲ್ಲ ಒಂದೇ ಊರಿನ ಚೆಡ್ಡಿದೋಸ್ತ್ ಗಳು . ಇನ್ನೂ ಮೀಸೆ ಚಿಗುರದಿದ್ರೂ ಅವ್ರು ಮಾಡೋ ಕೆಲ್ಸ ಮಾತ್ರ ಭಯ ಹುಟ್ಟಿಸುವಂತದ್ದು. ಸ್ನೇಹಿತರು ಕರಿತಿದ್ದಾರೆ ಅಂತಾ ಹಿಂದೆ ಮುಂದೆ ಯೋಚನೆ ಮಾಡದೆ ಸ್ನೇಹಿತರೊಟ್ಟಿಗೆ ಹೋದ ಆ ಬಾಲಕ ಸಾವಿನ ಮನೆ ಸೇರಿದ್ದಾನೆ. ವಾಮಾಚಾರ ಮಾಡಿರೋ ಅಸಾಮಿಗಳ್ಯಾರು ಜ್ಯೋತಿಷಿಗಳಲ್ಲ ಬದಲಿಗೆ ಇನ್ನೂ ಚಿಗುರು …

Read More »

ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದ ಸರ್ಕಾರದ ಹೊಸ ಮಾರ್ಗ ಸೂಚಿ

ಬೆಂಗಳೂರು: ಕೊರೋನಾ ತಡೆಗೆ ಕೈಗೊಂಡ ಹೊಸ ಮಾರ್ಗಸೂಚಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದೆ. ರಾಜ್ಯದಲ್ಲಿ ಯಾವುದೇ ಸಭೆ, ಸಮಾರಂಭ, ಜಾತ್ರೆ, ರ್ಯಾಲಿ, ಪ್ರತಿಭಟನೆ ನಡೆಸದಂತೆ ನಿರ್ಬಂಧ ಹೇರಲಾಗಿದೆ.

Read More »