BigTv News
June 22, 2026
Breaking News
ಬೆಂಗಳೂರು: ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಹಣವಂತರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ನಟಿ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆ ಸ್ನೇಹ ಬೆಳೆಸಿ, ಚಿನ್ನದ ಆಭರಣಗಳನ್ನು ಬಿಡಿಸಿಕೊಳ್ಳಲು ಹಣ ಬೇಕೆಂದು ನಂಬಿಸಿ ಸಾಲ ಪಡೆದು ಬಳಿಕ ಸಂಪರ್ಕ ಕಡಿತಗೊಳಿಸುತ್ತಿದ್ದಳು ಎನ್ನಲಾಗಿದೆ. ಯುವಕನೊಬ್ಬರಿಂದ 1 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈಕೆಯ ವಿರುದ್ಧ ನಗರದ ಇತರೆ ಠಾಣೆಗಳಲ್ಲಿಯೂ ದೂರುಗಳು ದಾಖಲಾಗಿವೆ. ಪೊಲೀಸರು …
Read More »
BigTv News
June 22, 2026
Breaking News
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದ ಮಾಜಿ ರೌಡಿ ಶೀಟರ್ ಮಚ್ ಮಂಜನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವದಲ್ಲಿ ವಿಶೇಷ ಪೊಲೀಸ್ ತಂಡ ಸೆರೆಹಿಡಿದಿದೆ. ಕಳೆದ ಭಾನುವಾರ ಹಳಿಯಾಳದ ಮೌರ್ಯ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ಕುಡಿದ ಅಮಲಿನಲ್ಲಿದ್ದ ಮಚ್ ಮಂಜ, ಹೆಂಡತಿಯ ವಿಚ್ಛೇದನಕ್ಕೆ ಪೊಲೀಸರೇ ಕಾರಣ ಎಂದು ಆರೋಪಿಸಿ ಪೊಲೀಸ್ ಸಿಬ್ಬಂದಿಯ ಮೇಲೆ …
Read More »
BigTv News
June 22, 2026
Breaking News
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದ ನಿಟ್ಟಿನಲ್ಲಿ ಪೊಲೀಸರು, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಸೋಮವಾರ ಪರಿಶೀಲನೆ ನಡೆಸಿದರು. ನ್ಯಾಯಾಲಯದ ಆವರಣ ಹಾಗೂ ಕಟ್ಟಡದ ವಿವಿಧ ಭಾಗಗಳಲ್ಲಿ ಪರಿಶೀಲನೆ ನಡೆದಿದೆ.ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಉಡುಪಿ ಡಿವೈಎಸ್‌ಪಿ ಬೆಳ್ಳಿಯಪ್ಪ, ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆದಿದೆ.
Read More »
BigTv News
June 22, 2026
Breaking News
ಮೈಸೂರು ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಶಿವಣ್ಣ, ಅವರ ಪತ್ನಿ ನಾಗರತ್ನ ಹಾಗೂ ಮಗಳು ರಕ್ಷಿತಾ ಮನೆಯಲ್ಲೇ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಘಟನೆ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಸಾವಿಗೆ ಕಾರಣಗಳ ಬಗ್ಗೆ ಮಾಹಿತಿ ದೊರೆತಿದೆ. ಮೃತ ರಕ್ಷಿತಾಳ ಮದುವೆ ನಿಶ್ಚಯವಾಗಿದ್ದ ಸಂದರ್ಭದಲ್ಲಿ ಉಲ್ಲಾಸ್ ಗೌಡ ಎಂಬಾತ ಮೊಬೈಲ್ ಸಂದೇಶಗಳು ಹಾಗೂ ಫೋಟೋಗಳನ್ನು ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಅಲ್ಲದೆ ಆ ಮಾಹಿತಿಯನ್ನು …
Read More »
BigTv News
June 22, 2026
Breaking News
ಗದಗ ಜಿಲ್ಲೆಯ ಬೆಳಹೋಡ ಗ್ರಾಮದಲ್ಲಿ ಅಕ್ರಮ ಬಡ್ಡಿ ದಂಧೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ರೈತ ಮಹ್ಮದ್ ರಫೀಕ್ ಮತ್ತು ಅವರ ಸಹೋದರರು 17 ಲಕ್ಷ ರೂ. ಸಾಲ ಪಡೆದಿದ್ದು, ಅದೇ ನೆಪದಲ್ಲಿ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿ ಭೂಮಿಯನ್ನು ದಂಧೆಕೋರರು ವಂಚನೆಯ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳು ಮುಂಗಡ ಬಡ್ಡಿ ಹೆಸರಿನಲ್ಲಿ 5 ಲಕ್ಷ ರೂ. ಕಡಿತಗೊಳಿಸಿ, ರೈತನ ಕೈಗೆ ಕೇವಲ 12 ಲಕ್ಷ …
Read More »
Shaikh BigTv
June 22, 2026
Breaking News, Crime, ಉತ್ತರ ಕನ್ನಡ, ಕರ್ನಾಟಕ
ಮೊಬೈಲ್ ಇಲ್ಲ… ಸುಳಿವು ಇಲ್ಲ… ಆದರೂ ಎಸ್ಕೇಪ್ ಆಗಲಿಲ್ಲ! ಮಚ್ಚ್ ಮಂಜ್ಯಾಗೆ ಖಾಕಿ ಶಾಕ್… ಗಡಿ ದಾಟಿದರೂ ತಪ್ಪಲಿಲ್ಲ..! PI ಜಯಪಾಲ ಪಾಟೀಲ ಟೀಂಗೆ ಬಿದ್ದ ಮಚ್ಚ್ ಮಂಜ್ಯಾ… ಹಳಿಯಾಳ: ಪೊಲೀಸರನ್ನೇ ಸವಾಲು ಹಾಕಿ ದರ್ಪ ಮೆರೆದಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ ಅಲಿಯಾಸ್ “ಮಚ್ಚ್ ಮಂಜ್ಯಾ” ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ… ವೇಷ ಬದಲಿಸಿಕೊಂಡು, ಯಾವುದೇ ಮೊಬೈಲ್ ಫೋನ್ ಬಳಸದೇ, ಡಿಜಿಟಲ್ ಸುಳಿವೇ ಬಿಡದೆ ಮಹಾರಾಷ್ಟ್ರ ಗಡಿಯವರೆಗೆ ತಲೆಮರೆಸಿಕೊಂಡಿದ್ದ ಮಂಜ್ಯಾನನ್ನು …
Read More »
BigTv News
June 22, 2026
Breaking News
ರಾಯಚೂರು ಜಿಲ್ಲೆಯ ಕುಲಸುಂಬಿ ಕಾಲೋನಿಯ ಬಾಡಿಗೆ ಮನೆಯಲ್ಲಿ 35 ವರ್ಷದ ತಿರುಪತಿ ಎಂಬಾತನ ತಲೆ ಇಲ್ಲದ ಕೊಳೆತ ಮೃತದೇಹ ಪತ್ತೆಯಾಗಿದ್ದು, ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಗೆ ಹೊರಗಿನಿಂದ ಬೀಗ ಹಾಕಲಾಗಿದ್ದ ಕಾರಣ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ತಲೆ ಇಲ್ಲದ ಶವ ಪತ್ತೆಯಾಗಿದೆ. ಹಂತಕರು ಕೊಲೆ ಮಾಡಿ ಮೃತನ ತಲೆಯನ್ನು ಕೊಂಡೊಯ್ದಿರುವ …
Read More »
BigTv News
June 22, 2026
Breaking News
ಬೀದರ್ ಜಿಲ್ಲೆಯ ಚಿದ್ರಿ ಗ್ರಾಮದಲ್ಲಿ ಮದುವೆ ಸಮಾರಂಭಕ್ಕೆ ತೆರಳಿದ್ದ ಕುಟುಂಬದ ಮನೆಯಲ್ಲಿ ಭಾರಿ ಕಳ್ಳತನ ನಡೆದಿದೆ. ರಾಜಕುಮಾರ ಬಿರಾದರ್ ಅವರ ಕುಟುಂಬ ಮನೆಗೆ ಮರಳಿದಾಗ ಮುಖ್ಯ ದ್ವಾರದ ಬೀಗ ಒಡೆದು ಕಳ್ಳರು ಮನೆಗೆ ನುಗ್ಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಬೆಡ್‌ರೂಮ್‌ನ ಅಲ್ಮೇರಾವನ್ನು ಒಡೆದು ಸುಮಾರು 150 ಗ್ರಾಂ ಚಿನ್ನದ ಆಭರಣ, 100 ಗ್ರಾಂ ಬೆಳ್ಳಿ ಆಭರಣ ಹಾಗೂ 1.50 ಲಕ್ಷ ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳುವಾದ ಆಸ್ತಿಯ …
Read More »
BigTv News
June 22, 2026
Breaking News
ಪಾಕಿಸ್ತಾನದ ಶಂಕಿತ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಬಂಧಿತನಾದ ತುಮಕೂರಿನ ಅಲ್ಲಾಭಕ್ಷು ವಿಚಾರಣೆ ವೇಳೆ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ಪಾಕಿಸ್ತಾನದ ಹ್ಯಾಂಡ್ಲರ್ ರಾಣಾ, “ನಮ್ಮ ಮಾತು ಕೇಳಿದರೆ ನಿನ್ನನ್ನು ಭಾರತದ ದೊಡ್ಡ ಡಾನ್ ಮಾಡುತ್ತೇವೆ” ಎಂದು ಆಮಿಷ ಒಡ್ಡಿದ್ದಾನೆ ಎಂದು ಹೇಳಿದ್ದಾನೆ. ಯುವಕರನ್ನು ಅಂತರ್ಜಾಲದ ಮೂಲಕ ಸಂಪರ್ಕಿಸಿ, ಹಣ, ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ತಾಂತ್ರಿಕ ನೆರವಿನ ಭರವಸೆ ನೀಡಿ ತಮ್ಮ ಜಾಲಕ್ಕೆ ಸೆಳೆಯಲು ಯತ್ನಿಸಲಾಗುತ್ತಿತ್ತು ಎನ್ನಲಾಗಿದೆ. ಭಾರತದಲ್ಲಿ ಹೊಸ ಭೂಗತ …
Read More »
BigTv News
June 22, 2026
Breaking News
ಮುಳ್ಳೇರಿಯ: ಸಹೋದರಿಯ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಸಹೋದರ ಮನೆಯಲ್ಲಿ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ಆದೂರು ಠಾಣಾ ವ್ಯಾಪ್ತಿಯ ಅಡೂರು ಚಾಮೆಕೊಚ್ಚಿಯ ಶ್ರೀಕೃಷ್ಣ ನಿಲಯದ ರಘುರಾಮ ರಾವ್ ಅವರ ಪುತ್ರ ಕೃಷ್ಣ ಪ್ರಸಾದ್ (34) ಸಾವಿಗೀಡಾದ ವ್ಯಕ್ತಿ.ಶನಿವಾರ ಸಂಜೆ ಮನೆಯೊಳಗೆ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮನೆಯಿಂದ ದುರ್ಗಂಧ ಹರಡಲಾರಂಭಿಸಿದ ಹಿನ್ನೆಲೆಯಲ್ಲಿ ಪರಿಸರ ನಿವಾಸಿಗಳು ಬಂದು ನೋಡಿದಾಗ ಮೃತದೇಹ …
Read More »