Breaking News

ವೇಷ ಬದಲಿಸಿ ತಲೆಮರೆಸಿಕೊಂಡ ಮಚ್ಚ್ ಮಂಜ್ಯಾ ಅರೆಸ್ಟ್..! ಖಾಕಿ ಟೀಂ ರೋಚಕ ಆಪರೇಷನ್ ಸಕ್ಸಸ್..

ಮೊಬೈಲ್ ಇಲ್ಲ… ಸುಳಿವು ಇಲ್ಲ… ಆದರೂ ಎಸ್ಕೇಪ್ ಆಗಲಿಲ್ಲ! ಮಚ್ಚ್ ಮಂಜ್ಯಾಗೆ ಖಾಕಿ ಶಾಕ್…

ಗಡಿ ದಾಟಿದರೂ ತಪ್ಪಲಿಲ್ಲ..! PI ಜಯಪಾಲ ಪಾಟೀಲ ಟೀಂಗೆ ಬಿದ್ದ ಮಚ್ಚ್ ಮಂಜ್ಯಾ…

ಹಳಿಯಾಳ: ಪೊಲೀಸರನ್ನೇ ಸವಾಲು ಹಾಕಿ ದರ್ಪ ಮೆರೆದಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ ಅಲಿಯಾಸ್ “ಮಚ್ಚ್ ಮಂಜ್ಯಾ” ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ…

ವೇಷ ಬದಲಿಸಿಕೊಂಡು, ಯಾವುದೇ ಮೊಬೈಲ್ ಫೋನ್ ಬಳಸದೇ, ಡಿಜಿಟಲ್ ಸುಳಿವೇ ಬಿಡದೆ ಮಹಾರಾಷ್ಟ್ರ ಗಡಿಯವರೆಗೆ ತಲೆಮರೆಸಿಕೊಂಡಿದ್ದ ಮಂಜ್ಯಾನನ್ನು ಹಳಿಯಾಳ ಪೊಲೀಸರು ಸಿನಿಮೀಯ ಶೈಲಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ…

ಮೌರ್ಯ ಹೋಟೆಲ್ ಎದುರು ಸಾರ್ವಜನಿಕರ ಮಧ್ಯೆ ಗಲಾಟೆ ನಡೆಸಿ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ದರ್ಪ ತೋರಿದ್ದ ಮಂಜ್ಯಾ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಘಟನೆಯ ವಿಡಿಯೋ ವೈರಲ್ ಆಗಿ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟಾಗಿತ್ತು. ಇದರ ಬೆನ್ನಲ್ಲೇ ಇಲಾಖೆಯೊಳಗೆ ಅಮಾನತು ಮತ್ತು ವರ್ಗಾವಣೆ ಕ್ರಮಗಳು ನಡೆದಿದ್ದವು…

ಆದರೆ ನಿಜವಾದ ಸವಾಲು ನಂತರ ಆರಂಭವಾಯಿತು. ಮೊಬೈಲ್ ಇಲ್ಲ… ಕಾಲ್ ಡೇಟಾ ಇಲ್ಲ… ಲೊಕೇಶನ್ ಇಲ್ಲ… ತಂತ್ರಜ್ಞಾನ ಯುಗದಲ್ಲಿ ಇಂತಹ ಆರೋಪಿಯನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಪರೀಕ್ಷೆಯಾಗಿತ್ತು. ಆದರೂ ಹಳಿಯಾಳ ಖಾಕಿ ಪಡೆ ಛಲ ಬಿಡಲಿಲ್ಲ…

SP ದೀಪನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ, CPI ಜಯಪಾಲ ಪಾಟೀಲ ನೇತೃತ್ವದ ವಿಶೇಷ ತಂಡ ಮಾನವ ಬೇಹುಗಾರಿಕೆ, ಗುಪ್ತ ಮಾಹಿತಿ ಜಾಲ ಮತ್ತು ನೆಲಮಟ್ಟದ ಕಾರ್ಯಾಚರಣೆ ಮೂಲಕ ಬೇಟೆ ಆರಂಭಿಸಿತು…

ಕೊನೆಗೆ ಮಹಾರಾಷ್ಟ್ರದ ಸಾಂಗ್ಲಿ ಸಮೀಪ ಭಾನುವಾರ ನಡೆದ ರೋಚಕ ಆಪರೇಷನ್‌ನಲ್ಲಿ ಮಂಜ್ಯಾನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಈ ಬಂಧನದೊಂದಿಗೆ, ಪೊಲೀಸರ ಮೇಲೆ ಪ್ರಶ್ನೆ ಎತ್ತಿದವರಿಗೆ ಖಾಕಿ ಇಲಾಖೆ ಸ್ಪಷ್ಟ ಉತ್ತರ ನೀಡಿದ್ದು. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿದೆ…

ವೇಷ ಬದಲಿಸಿದರೂ. ಗಡಿ ದಾಟಿದರೂ. ಖಾಕಿ ಕಣ್ಣಿನಿಂದ ತಪ್ಪಲಿಲ್ಲ ಮಚ್ಚ್ ಮಂಜ್ಯಾ!

Share News

About Shaikh BigTv

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *