BigTv News
June 6, 2026
Breaking News
ಮೈಸೂರು: ವ್ಯಕ್ತಿಯೊಬ್ಬರಿಗೆ ಮಹಿಳೆಯೊಬ್ಬರು ನಗ್ನ ವಿಡಿಯೋ ಕಾಲ್ ಮಾಡಿ 9.45 ಲಕ್ಷ ರೂ. ಕಸಿದುಕೊಂಡಿದ್ದಾರೆ. ನಗರದ ನಿವಾಸಿಯೊಬ್ಬರಿಗೆ ವೀಣಾ ರಾವ್ ಎಂಬ ಮಹಿಳೆಯು ಫೇಸ್ಬುಕ್ ಮೂಲಕ ಪರಿಚಯವಾದರು. ನಂತರ ನಗ್ನವಾಗಿ ವಾಟ್ಸ್ಆಯಪ್ ನಿಂದ ಕರೆ ಮಾಡಿದ ವೀಣಾ ರಾವ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುವುದು ಎಂದು ಬೆದರಿಸಿ ಪ್ರಾರಂಭದಲ್ಲಿ 10 ಸಾವಿರ ರೂ. ಪಡೆದುಕೊಂಡರು. ನಂತರ ಹಂತ ಹಂತವಾಗಿ ಒಟ್ಟು 9.45 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ. ಈ ಕುರಿತು …
Read More »
BigTv News
June 6, 2026
Breaking News
ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕೆರೆಯಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಕೊಮ್ಮಘಟ್ಟದ ನಿವಾಸಿ ಚೈತ್ರಾ (29) ಮೃತ ಮಹಿಳೆ. ಪತಿ ಶರತ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಚೈತ್ರಾ ಕಳೆದ 6 ವರ್ಷಗಳ ಹಿಂದೆ ಶರತ್ ಅವರನ್ನು ವಿವಾಹವಾಗಿದ್ದರು. ಶರತ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕೊಮ್ಮಘಟ್ಟದ ಬಾಡಿಗೆ ಮನೆಯಲ್ಲಿ ದಂಪತಿ ನೆಲೆಸಿದ್ದರು. ವರದಕ್ಷಿಣೆ ತರುವಂತೆ ಶರತ್ ಕಿರುಕುಳ ನೀಡುತ್ತಿದ್ದ ಆರೋಪ …
Read More »
BigTv News
June 6, 2026
Breaking News
ಮಂಗಳೂರು ಪೊಲೀಸ್ ಕಮಿಷನರೆಟ್ ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆ ಯೆನಪೋಯ ಆಸ್ಪತ್ರೆ ಹಿಂಭಾಗದಲ್ಲಿ ಇಕ್ಬಾಲ್ ಸಿಕ್ಕ್ಲಗರ್ (23), ಮುಕ್ಕಚೇರಿ ಬಳಿ ಉಳ್ಳಾಲ ಮಾಸ್ತಿಕಟ್ಟೆಯ ಫಝಲ್ ಹುಸೈನ್ (33)ರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂದರ್ ನ ಗ್ರೀನ್ ಪಾರ್ಕ್ ಬಳಿ ಕಂಡತ್ ಪಳ್ಳಿಯ ಮಹಮ್ಮದ್ ಜುನೈದ್ ಅಲಿಯಾಸ್ ಜುನ್ನಿ (32) ಮತ್ತು ಕುದ್ರೋಳಿ ಕರ್ಬಲಾ ರೋಡ್ ನಿವಾಸಿ ಮೊಹಮ್ಮದ್ …
Read More »
BigTv News
June 5, 2026
Breaking News
ಬೆಳ್ತಂಗಡಿ: ಸೋಮಂತಡ್ಕದಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಧರ್ಮಸ್ಥಳ ಠಾಣಾ ಪೊಲೀಸರು ದಾಳಿ ನಡೆಸಿ, ಒಬ್ಬನನ್ನು ವಶಕ್ಕೆ ಪಡೆದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಕ್ಕಿಂಜೆ ನಿವಾಸಿ ಅನಿಲ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದನ ಸಾಗಾಟ ಮಾಡುತ್ತಿದ್ದ ತೋಮಸ್ ತೋಟತ್ತಾಡಿ, ಕಬೀರ ಹಾಗೂ ದನ ಮಾರಾಟ ಮಾಡಿದ ಕಾನರ್ಪ ರಾಘವೇಂದ್ರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ. ಬುಧವಾರ ರಾತ್ರಿ ಸೋಮಂತಡ್ಕದಲ್ಲಿ ಮಾಂಸದ ಉದ್ದೇಶಕ್ಕಾಗಿ ಅಕ್ರಮ …
Read More »
BigTv News
June 5, 2026
Breaking News
ದಾವಣಗೆರೆಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ನಕಲಿ ಆಡಿಯೋ ವೈರಲ್ ಮಾಡಿದ ಆರೋಪದ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿರಾಜ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೂರಿನಲ್ಲಿ, ತಮ್ಮ ಹಾಗೂ ಜಮೀರ್ ಅಹಮದ್ ಖಾನ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಷಡ್ಯಂತ್ರದ ಭಾಗವಾಗಿ ನಕಲಿ ಆಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ …
Read More »
BigTv News
June 5, 2026
Breaking News
ತೀರ್ಥಹಳ್ಳಿ: ಫಾರಂಹೌಸ್ ವೊಂದರಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿದ ಆಗುಂಬೆ ಪೊಲೀಸರು 1 ಲಕ್ಷಕ್ಕೂ ಹೆಚ್ಚಿನ ಮಾಲಿನ ಸಮೇತ ಇಬ್ಬರನ್ನು ಬಂಧಿಸಿದ ಘಟನೆ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣ್ಣುವಳ್ಳಿ ಗ್ರಾಮದಲ್ಲಿ ಜೂ.5ರ ಶುಕ್ರವಾರ ನಡೆದಿದೆ. ಭದ್ರಾವತಿ ತಾಲೂಕಿನ ಬಾಲರಾಜ್@ಕಿರಣ ಬಿನ್ ಜಾನ್ (34) ಹಾಗೂ ಹರ್ಷ ಬಿನ್ ಮಂಜ (20) ಬಂಧಿತ ಆರೋಪಿಗಳು. ಜೂ.2 ರಂದು ಕಳ್ಳತನ ಪ್ರಕರಣವನ್ನು ಬೇಧಿಸಲು ಹೊರಟ ಆಗುಂಬೆ ಪೊಲೀಸ್ ಠಾಣೆಯ ಸಬ್ …
Read More »
BigTv News
June 5, 2026
Breaking News
ಗುಂಡ್ಲುಪೇಟೆ: ಸಾರ್ವಜನಿಕರ ಮಾಹಿತಿಯಿಂದ ಪಟ್ಟಣದ ಹಳೇ ಆಸ್ಪತ್ರೆ ಸಮೀಪ ಆಟೋಗಳಿಗೆ ತುಂಬಿ ಸಾಗಿಸಲೆತ್ನಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುರುವಾರ ರಾತ್ರಿ ಪಟ್ಟಣದ ಹಳೇ ಆಸ್ಪತ್ರೆ ಬಳಿಯ ಅಮೀರ್ ಜಾನ್ ರಸ್ತೆಯ ಗಲ್ಲಿಯಲ್ಲಿ ಆಟೋಗಳಿಗೆ ಮೂಟೆಗಳನ್ನು ತುಂಬಿಸುತ್ತಿರುವ ಬಗ್ಗೆ ಸಂಶಯಗೊಂಡ ಸಾರ್ವಜನಿಕರು ಹೊಯ್ಸಳ ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಪೊಲೀಸರನ್ನು ಕಂಡ ಕೂಡಲೇ ಆಟೋಗಳಿಗೆ ಚೀಲ ತುಂಬುತ್ತಿದ್ದ ಮೂವರು ಪರಾರಿಯಾದ ಹಿನ್ನೆಲೆಯಲ್ಲಿ ಚೀಲಗಳನ್ನು ಪರಿಶೀಲಿಸಿದಾಗ ಅದರಲ್ಲಿ ಅನ್ನಭಾಗ್ಯ …
Read More »
BigTv News
June 5, 2026
Breaking News
ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಅಕ್ರಮ ಮಣ್ಣು ಸಾಗಾಟ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಗ್ರಾಮಸ್ಥರ ಗುಂಪೊಂದು ಹಲ್ಲೆ ನಡೆಸಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ಪೊಲೀಸ್ ಪೇದೆ ವೀರೇಶ್ ಬಾಬು ಅವರನ್ನು ಬಿಎಂಸಿಆರ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ರಮ ಮಣ್ಣು ಸಾಗಾಟ ಹಾಗೂ ಜಾತಿನಿಂದನೆ ಪ್ರಕರಣದ ತನಿಖೆ ಹಿನ್ನೆಲೆ ಆರೋಪಿ ಅನೀಲ್ನನ್ನು ಬಂಧಿಸಲು ಪೊಲೀಸರು ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಕೆಲ ಗ್ರಾಮಸ್ಥರು ಆರೋಪಿಯನ್ನು …
Read More »
BigTv News
June 5, 2026
Breaking News
ಬಂಟ್ವಾಳ: ದನಕರುಗಳಿಗೆ ಮದ್ದು ನೀಡಲು ಹಾಗೂ ಕೃತಕ ಗರ್ಭದಾರಣೆ ಮಾಡುವ ಕಾರಣ ನೀಡಿ ತಂದ ಹಸುವನ್ನು ಮಾರಾಟ ಮಾಡಿದ ಆರೋಪದಲ್ಲಿ ಕಾವಳಮುಡೂರು ಗ್ರಾಮದ ಪ್ರಶಾಂತ್ ನಾಯ್ಕ್ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾವಳಪಡೂರುವಿನ ಮನೆಯಿಂದ ಪ್ರಶಾಂತ್ ನಾಯ್ಕ್ ಎಂಬವರು ದನಕರುಗಳನ್ನು ಮದ್ದು ನೀಡಲು ಹಾಗೂ ಕೃತಕ ಗರ್ಭಧಾರಣೆ ಮಾಡಲು 1 ಗಂಡು ಕರುವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಮನೆಯವರ ಅನುಮತಿ ಇಲ್ಲದೆ ಅವುಗಳನ್ನು ಮಾರಾಟ ಮಾಡಿರುವ ಮಾಹಿತಿ ಇದೆ …
Read More »
BigTv News
June 5, 2026
Breaking News
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಕರೆದ ತಕ್ಷಣ ಬರಲಿಲ್ಲ ಎಂಬ ಕಾರಣಕ್ಕೆ ನೇಪಾಳ ಮೂಲದ ಕೆಫೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಹರ್ಷ ಹಾಗೂ ಆತನ ಸ್ನೇಹಿತ ಶಶಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಬಾಬುರಾಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ವೇಳೆ ಕೆಫೆಯ ಹೊರಗೆ ನಿಂತಿದ್ದ ಆರೋಪಿಗಳು ಕಾರ್ಮಿಕನನ್ನು ಕರೆದಿದ್ದು, ಆತ ತಡವಾಗಿ ಬಂದಿದ್ದಕ್ಕೆ ಆಕ್ರೋಶಗೊಂಡು …
Read More »