ಬಂಟ್ವಾಳ: ದನಕರುಗಳಿಗೆ ಮದ್ದು ನೀಡಲು ಹಾಗೂ ಕೃತಕ ಗರ್ಭದಾರಣೆ ಮಾಡುವ ಕಾರಣ ನೀಡಿ ತಂದ ಹಸುವನ್ನು ಮಾರಾಟ ಮಾಡಿದ ಆರೋಪದಲ್ಲಿ ಕಾವಳಮುಡೂರು ಗ್ರಾಮದ ಪ್ರಶಾಂತ್ ನಾಯ್ಕ್ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾವಳಪಡೂರುವಿನ ಮನೆಯಿಂದ ಪ್ರಶಾಂತ್ ನಾಯ್ಕ್ ಎಂಬವರು ದನಕರುಗಳನ್ನು ಮದ್ದು ನೀಡಲು ಹಾಗೂ ಕೃತಕ ಗರ್ಭಧಾರಣೆ ಮಾಡಲು 1 ಗಂಡು ಕರುವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಮನೆಯವರ ಅನುಮತಿ ಇಲ್ಲದೆ ಅವುಗಳನ್ನು ಮಾರಾಟ ಮಾಡಿರುವ ಮಾಹಿತಿ ಇದೆ ಎಂದು ರವಿ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇಂತಹುದೇ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಪ್ರಮೀಳ ಎಂಬವರು ಪ್ರಶಾಂತ್ ನಾಯ್ಕ್ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಶಂಭೂರಿನಿಂದ 1 ದನವನ್ನು ಗೋಶಾಲೆಗೆ ಕೊಂಡೊಯ್ದು ಚಿಕಿತ್ಸೆ ನೀಡುವುದಾಗಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

