Breaking News

Breaking News

ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಬಂಧನ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರನ್ನು ಶ್ರೀರಾಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಒಂದೂವರೆ ತಿಂಗಳು ಗರ್ಭಿಣಿ ಆಗಿರುವುದು ಪತ್ತೆಯಾದ ನಂತರ ಈ ವಿಚಾರ ಗೊತ್ತಾಗಿದೆ. ಆರೋಪಿಯು ವರ್ಷದಿಂದ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ದೂರು ಆಧರಿಸಿ ಪೊಲೀಸರು, ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Read More »

ಖರ್ಜೂರ ವ್ಯಾಪಾರದ ಹೆಸರಿನಲ್ಲಿ 15.81 ಲಕ್ಷ ರೂ. ವಂಚನೆ; ಮೂವರ ವಿರುದ್ಧ ಪ್ರಕರಣ ದಾಖಲು

ಕತಾರ್‌ನಿಂದ ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ, ಉಡುಪಿಯ ವ್ಯಕ್ತಿಯೊಬ್ಬರಿಗೆ ಅವರ ಸ್ವಂತ ಅಳಿಯ ಸೇರಿ ಮೂವರು 15.81 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಡಗುಬೆಟ್ಟು ಗ್ರಾಮದ ನಿವಾಸಿ ಇಫ್ರಾನ್‌ ಅಜೀಜ್‌ ಅವರು ವಂಚನೆಗೊಳಗಾದವರಾಗಿದ್ದು, ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಳಿಯ ಮೊಹಮ್ಮದ್ ಶರ್ಪದ್ದೀನ್, …

Read More »

ಅನ್ಯಕೋಮಿನವರಿಂದ ಮುರಿನಕಟ್ಟೆ ಧ್ವಂಸ: ಭಟ್ಕಳ ಪಟ್ಟಣದಲ್ಲಿ ಉದ್ವಿಘ್ನ ಪರಿಸ್ಥಿತಿ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನವಾಯತ್ ಕಾಲನಿಯಲ್ಲಿ ಮಾರಿಯಮ್ಮನ ಮುರಿನಕಟ್ಟೆ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ತೆರವುಗೊಳಿಸಲಾಗಿದ್ದ ಮುರಿನಕಟ್ಟೆಯನ್ನು ಭಾನುವಾರ ಹಿಂದೂ ಸಂಘಟನೆಯ ಕಾರ್ಯಕರ್ತರು ಮರುಸ್ಥಾಪಿಸಿದ್ದರು. ಇದು ಹಿಂದೂಗಳ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದು, ಹಲವು ವರ್ಷಗಳಿಂದ ಮರುನಿರ್ಮಾಣಕ್ಕೆ ಒತ್ತಾಯಿಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ರಾತ್ರಿ ವೇಳೆ ಅನ್ಯಕೋಮಿನ ಕೆಲ ಮುಖಂಡರು ಹಾಗೂ ಜನರು ಆಗಮಿಸಿ ಕಟ್ಟೆಯನ್ನು ಕೆಡವಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ …

Read More »

ಟ್ಯೂಷನ್‌ಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ರೇ*ಪ್ – ಇಬ್ಬರು ಕಾಮುಕರು ಅರೆಸ್ಟ್!

ಗದಗ ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಟ್ಯೂಷನ್‌ಗೆ ತೆರಳುತ್ತಿದ್ದ ವೇಳೆ ಬಾಲಕಿಯನ್ನು ದಾರಿ ಮಧ್ಯೆ ಅಡ್ಡಗಟ್ಟಿದ ಇಬ್ಬರು ಆರೋಪಿಗಳು, “ನಿಮ್ಮ ಅಣ್ಣ ಅರ್ಜೆಂಟ್ ಆಗಿ ಕರೆಯುತ್ತಿದ್ದಾನೆ” ಎಂದು ನಂಬಿಸಿ ತಮ್ಮ ಜೊತೆ ಬರಲು ಒತ್ತಾಯಿಸಿದ್ದಾರೆ. ಬಾಲಕಿ ನಿರಾಕರಿಸಿದರೂ ಬಲವಂತವಾಗಿ ವಾಹನಕ್ಕೆ ತಳ್ಳಿ ಅಪಹರಿಸಿ, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಮನನೊಂದ …

Read More »

ಗೆಳೆಯರ ಮೇಲೆ ಹಲ್ಲೆ ನಡೆಸಿದ್ದನ್ನು ಕೇಳಲು ಹೋದ ವಿದ್ಯಾರ್ಥಿಗೆ ಚಾಕು ಇರಿತ!

ದಾವಣಗೆರೆ: ಗೆಳೆಯರ ಮೇಲೆ ಹಲ್ಲೆ ನಡೆಸಿದ್ದನ್ನು ಕೇಳಲು ಹೋಗಿದ್ದ ವಿದ್ಯಾರ್ಥಿಗೆ ಚಾಕು ಹಾಕಿದ ಘಟಕ ಶನಿವಾರ (ಮೇ 23) ರಾತ್ರಿ ವಿಜಯನಗರ ಬಡಾವಣೆಯಲ್ಲಿ ನಡೆದಿದೆ. ದಾವಣಗೆರೆಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ಅಭ್ಯಾಸ ಮಾಡುತ್ತಿರುವ ಮನೋಜ್ (19) ಚಾಕು ಇರಿತಕೊಳ್ಳಗಾಗಿರುವ ವಿದ್ಯಾರ್ಥಿ. ಮನೋಜ್ ಗೆಳೆಯರು ಜನ್ಮ ದಿನಾಚರಣೆಗೆ ತೆರಳಿದ್ದ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರವಾಗಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಗೆಳೆಯರು ಕರೆದಿದ್ದಕ್ಕೆ ಸ್ಥಳಕ್ಕೆ ತೆರಳಿದ್ದ ಮನೋಜ್ ಯಾವ ಕಾರಣಕ್ಕೆ ಹಲ್ಲೆ …

Read More »

ಸುಪ್ರೀಂ ಕೋರ್ಟ್​​​​​​ ಆದೇಶವೆಂದು ಫೇಕ್​ ದಾಖಲೆ ನೀಡಿ ಅಧಿಕಾರಿಗಳನ್ನೇ ಫೂಲ್​​​​ ಮಾಡಿದ ಕೈದಿಯ ರೋಚಕ ಕಥೆ!

ಬೆಂಗಳೂರು: ಹಣಕ್ಕಾಗಿ ಅಪಹರಣ ಹಾಗೂ ಕ್ರಿಮಿನಲ್ ಸಂಚು ರೂಪಿಸಿದ ಅಪರಾಧಕ್ಕಾಗಿ ಬೆಂಗಳೂರಿನ ನ್ಯಾಯಾಲಯವೊಂದು ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರಂತೆ ಈತ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಆದರೆ, ಜೈಲಿನಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ಸಿನಿಮೀಯ ಶೈಲಿಯ ಮಾಸ್ಟರ್ ಪ್ಲಾನ್ ಮಾಡಿದ್ದ ಈ ಚಾಣಾಕ್ಷ ಖೈದಿ, ಸುಪ್ರೀಂ ಕೋರ್ಟ್ ಹೆಸರಿನಲ್ಲೇ ಬಿಡುಗಡೆಯ ನಕಲಿ ಆದೇಶ ಪತ್ರ ಮತ್ತು ಮುದ್ರೆಯನ್ನು ಸೃಷ್ಟಿಸಿದ್ದ. ಇದನ್ನು …

Read More »

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆಯಲ್ಲಿ ನಡೆದ ಯುವಕನ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಜ್ಜಹಳ್ಳಿ ಗ್ರಾಮದ ನಿಶಾಂತ್, ಕಾರ್ತಿಕ್ ಹಾಗೂ ಗೂಳೂರುದೊಡ್ಡಿಯ ರವಿ ಬಂಧಿತ ಆರೋಪಿಗಳಾಗಿದ್ದಾರೆ. ಸಾಲದ ವಿಚಾರಕ್ಕೆ ಅಶೋಕ್ ಎಂಬಾತನನ್ನು ಬೆದರಿಸಲು ಬಂದಿದ್ದ ಆರೋಪಿಗಳು ಬಾರ್‌ನಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಸುನೀಲ್ ಜೊತೆ ಕ್ಷುಲ್ಲಕ ಜಗಳಕ್ಕೆ ಇಳಿದಿದ್ದರು. ಬಳಿಕ ರಸ್ತೆ ಮಧ್ಯೆ ಲಾಂಗ್‌ನಿಂದ ದಾಳಿ ನಡೆಸಿ ಸುನೀಲ್‌ನನ್ನು ಬರ್ಬರವಾಗಿ ಹತ್ಯೆ …

Read More »

ಬೌರಿಂಗ್ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಜನ ಸಾವಿಗೆ ಸ್ಫೋಟಕ ಕಾರಣ ಬಹಿರಂಗ: ಗುತ್ತಿಗೆದಾರರ ವಿರುದ್ಧ FIR

ಬೆಂಗಳೂರು ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದ್ದ ಚೆನ್ನೈ ಮೂಲದ ಎಎಸ್‌ಆರ್ ಟ್ರೇಡರ್ಸ್ ಕಂಪನಿ ವಿರುದ್ಧ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರು ದೂರು ನೀಡಿದ್ದಾರೆ. ಬೌರಿಂಗ್ ಹಾಗೂ ಲೇಡಿ ಕರ್ಝನ್ ಮೆಡಿಕಲ್ ಕಾಲೇಜಿನ ಕಟ್ಟಡ ಅವಶೇಷ ಮತ್ತು ಹೆಚ್ಚುವರಿ ತ್ಯಾಜ್ಯವನ್ನು ನಿಯಮಾನುಸಾರ ತೆರವುಗೊಳಿಸದೆ ಕಾಂಪೌಂಡ್ ಪಕ್ಕದಲ್ಲೇ ರಾಶಿ ಹಾಕಲಾಗಿತ್ತು. ತ್ಯಾಜ್ಯದ ಭಾರ ತಡೆಯಲಾಗದೆ …

Read More »

ಭಟ್ಕಳ: ಕಪ್ಪೆ ಚಿಪ್ಪು ಆರಿಸಲು ಕಳಿನಟ್ಟಿ ಹೊಳೆಗೆ ಇಳಿದಿದ್ದ 8 ಜನ ಸಾವು!

ಭಟ್ಕಳ: ಚಪ್ಪೆಕಲ್ಲು ತೆಗೆಯಲು ಹೋದ 8 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಭಾನುವಾರ ನಡೆದಿದೆ. ಪಡುಶಿರಾಲಿ ಬೆಂಗ್ರೆಯ ಲಕ್ಷ್ಮಿ ಮಹಾದೇವ ನಾಯ್ಕ (42), ಶಾರದಾಹೊಳೆಯವರಾದ ಉಮೇಶ ನಾಯ್ಕ (30), ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49), ಜ್ಯೋತಿ ನಾಗಪ್ಪ ನಾಯ್ಕ (34), ಮಾಲತಿ ನಾಯ್ಕ (38), ಮಾಸ್ತಮ್ಮ ನಾಯ್ಕ ಮೃತರು. …

Read More »

ಮೃತರನ್ನೂ ಬಿಡದ ಕಳ್ಳರು: ಮಹಿಳೆ ಮೈಮೇಲಿದ್ದ 18 ಗ್ರಾಂ ಚಿನ್ನಾಭರಣಗಳು ಕಳವು

ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಬಳಿಕ ಮೃತ ಮಹಿಳೆಯ ಮೈಮೇಲಿದ್ದ ಸುಮಾರು 18 ಗ್ರಾಂ ಚಿನ್ನದ ಒಡವೆಗಳನ್ನು ಕಳ್ಳರು ಕದ್ದೊಯ್ದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೇ 17ರಂದು ಕೇರಳ ಮೂಲದ ಪ್ರವಾಸಿಗರ ಜೀಪಿಗೆ ಮೀನು ಸಾಗಾಟ ವಾಹನ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿ, ಎಂಟು ಮಂದಿ ಗಾಯಗೊಂಡಿದ್ದರು. ಗೊಂದಲದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕಳ್ಳರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಕೊಲ್ಲೂರು ಠಾಣೆಯಲ್ಲಿ …

Read More »