Breaking News

Breaking News

ಲೋಕಾಯುಕ್ತ ದಾಳಿ: ಗುರುಮಠಕಲ್ ಪೊಲೀಸ್ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಅಮಾನತು

ಯಾದಗಿರಿ: ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಗುರುಮಠಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಟ್ರಾಸಿಟಿ ಹಾಗೂ ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸದಿರಲು ಮತ್ತು ಪ್ರಕರಣಕ್ಕೆ ‘ಬಿ-ರಿಪೋರ್ಟ್’ ಸಲ್ಲಿಸಲು ಪಿಐ ವೀರಣ್ಣ ಅವರು 2 ಲಕ್ಷ ರೂ.ಲಂಚದ ಬೇಡಿಕೆ ಇಟ್ಟಿದ್ದರು. ಗ್ರಾಪಂ ಮಾಜಿ ಸದಸ್ಯ ಆನಂದ್ ಎಂಬುವವರು ನೀಡಿದ ದೂರಿನ ಮೇರೆಗೆ ಶುಕ್ರವಾರ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಮುಂಗಡವಾಗಿ 1 …

Read More »

ಲಂಚಕ್ಕೆ ಕೈ ಹಾಕಿದ ಪೊಲೀಸ್ ಇನ್ಸ್‌ಪೆಕ್ಟರ್ ಸಸ್ಪೆಂಡ್… ಈಗ ಹುಬ್ಬಳ್ಳಿ-ಧಾರವಾಡದ ಕಡೆಗೂ ಲೋಕಾಯುಕ್ತರ ಕಣ್ಣು ಬೀಳಲಿ!

ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್..! ಗುರುಮಠಕಲ್ ಪೊಲೀಸ್ ಠಾಣೆಯ ಪಿಐ ವೀರಣ್ಣ ದೊಡ್ಡಮನಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಜ್ಯದ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿರಲು ಮತ್ತು ‘ಬಿ-ರಿಪೋರ್ಟ್’ ಸಲ್ಲಿಸಲು 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, 1 ಲಕ್ಷ ರೂ. ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು… ಇದೀಗ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಅವರನ್ನು …

Read More »

ಬೆಳಗಾವಿ | ಎರಡು ಗುಂಪುಗಳ ಮಧ್ಯೆ ಗಲಾಟೆ: ಇಬ್ಬರಿಗೆ ಗಾಯ

ಬೆಳಗಾವಿ: ತಾಲ್ಲೂಕಿನ ಧಾಮಣೆ ಎಸ್‌. ಗ್ರಾಮದಲ್ಲಿ ಶುಕ್ರವಾರ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಜೀವಪ್ಪ ಗಾವಡೆ, ಅನಿಲ ಗಾವಡೆ ಗಾಯಾಳುಗಳು. ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ‘ಜೀವಪ್ಪ ತಮ್ಮ ಕೃಷಿಭೂಮಿಯಲ್ಲಿ ಕೊಳವೆಬಾವಿ ಕೊರೆಯಿಸಲು ಮೇ 5ರಂದು ವಾಹನ ತರಿಸಿದ್ದರು. ಆಗ ಇದೇಮಾರ್ಗದ ತಮ್ಮ ಜಮೀನಿನಲ್ಲಿ ವಾಹನ ಹಾಯ್ದು ಹೋಗಿದ್ದಕ್ಕೆ ಸುರೇಶ ಪಾಟೀಲ, ಗೋವಿಂದ ಪಾಟೀಲ, ವಿನಾಯಕ ಪಾಟೀಲ, ಶಿವಾಜಿ ಪಾಟೀಲ, ಅಪ್ಪಾಜಿ ಪಾಟೀಲ …

Read More »

ಗೊಬ್ಬರ ತುಂಬಿದ್ದ ಲಾರಿ-ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ

ತುಮಕೂರು: ಗೊಬ್ಬರ ತುಂಬಿದ್ದ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ದುರಂತ ಸಂಭವಿಸಿದೆ. ಗೊಬ್ಬರ ತುಂಬಿದ್ದ ಲಾರಿ ಹಾಗೂ ಆಲ್ಟೋ ಕಾರಿನ ನಡುವೆ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ಕಾರು ಛಿದ್ರವಾಗಿದೆ. ಕಾರಿನ ಚಾಲಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಕುಮಾರಸ್ವಾಮಿ, ಗಾಯತ್ರಿ ಸೇರಿದಂತೆ ಮಂಡ್ಯ ಮೂಲದ ನಾಲ್ವರು …

Read More »

ಶ್ರೀರಂಗಪಟ್ಟಣ: 280 ಗ್ರಾಂ ಚಿನ್ನಾಭರಣ, ₹3.5ಲಕ್ಷ ನಗದು ಕಳವು

ಶ್ರೀರಂಗಪಟ್ಟಣ: ತಾಲ್ಲೂಕಿನ ನಗುವನಹಳ್ಳಿ ಗ್ರಾಮದ ವಿಜಯಕಮಾರ್‌ ಅವರ ಮನೆಯ ಬಾಗಿಲು ಮುರಿದು 280 ಗ್ರಾಂ ಚಿನ್ನಾಭರಣ ಹಾಗೂ ₹3.5ಲಕ್ಷ ನಗದು ಕಳವು ಮಾಡಿರುವ ಪ್ರರಕಣ ಬುಧವಾರ ತಡರಾತ್ರಿ ನಡೆದಿದೆ. ವಿಜಯಕಮಾರ್‌ ಕುಟುಂಬ ಸದಸ್ಯರು ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದ್ದು, ಗುರುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ವಿಜಯಕುಮಾರ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ …

Read More »

ಹಾರೋಹಳ್ಳಿ: ವೃದ್ಧೆ ಅಡ್ಡಗಟ್ಟಿ ಸರಗಳ್ಳತನ, ಇಬ್ಬರ ಸೆರೆ

ಹಾರೋಹಳ್ಳಿ: ನಾಲ್ಕು ದಿನಗಳ ಹಿಂದೆ ಹಾರೋಹಳ್ಳಿ ಪಟ್ಟಣದಲ್ಲಿ ನಡೆದಿದ್ದ ವೃದ್ಧೆಯ ಚಿನ್ನದ ಮಾಂಗಲ್ಯಸರ ಕಳ್ಳತನ ಮತ್ತು ಆನೇಕಲ್‌ನಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕುವೆಂಪು ನಗರದ ಆಟೊ ಚಾಲಕ ಲೋಕೇಶ(41), ಆನೇಕಲ್ ತಾಲ್ಲೂಕು ಮಟ್ಟನಹಳ್ಳಿಯ ಲಾರಿ ಚಾಲಕ ರಮೇಶ್ ವಿ.(43) ಬಂಧಿತರು. ಲಕ್ಷ್ಮಮ್ಮ ಅವರನ್ನು ಅಡ್ಡಗಟ್ಟಿದ ಬೈಕ್‌ನಲ್ಲಿದ್ದ ಅಪರಿಚಿತರಿಬ್ಬರು, ಅವರ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …

Read More »

ಕೊಡಿಗೇನಹಳ್ಳಿ: ಸರ ಕದ್ದ ಮಹಿಳೆ ಬಂಧನ

ಕೊಡಿಗೇನಹಳ್ಳಿ: ಚಿನ್ನದ ಸರ ಕದ್ದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದುಪುರದ ಸುಜಾತಮ್ಮ ಶುಕ್ರವಾರ ಬೆಳಿಗ್ಗೆ ದೊಡ್ಡ ಹೊಸಹಳ್ಳಿಗೆ ಜಾತ್ರೆಗೆಂದು ಬಸ್‌ನಲ್ಲಿ ಹೋಗುತ್ತಿದ್ದಾಗ ಕೊಡಿಗೇನಹಳ್ಳಿ ಬಸ್ ನಿಲ್ದಾಣದಲ್ಲಿ ವಾಂತಿಯಾಗಿದೆ. ಆ ಸಂದರ್ಭದಲ್ಲಿ ಕತ್ತಿನಲ್ಲಿದ್ದ ನೆಕ್ಲೇಸ್ ಕೆಳಗೆ ಬಿದ್ದಿರುವುದು ತಿಳಿದಿರಲಿಲ್ಲ. ಸ್ವಲ್ಪ ದೂರ ಮುಂದೆ ಹೋದ ಮೇಲೆ ನೆಕ್ಲೇಸ್ ಇಲ್ಲದಿರುವುದು ಗೊತ್ತಾದ ತಕ್ಷಣ ಕೊಡಿಗೇನಹಳ್ಳಿಗೆ ವಾಪಸ್‌ ಬಂದು 16 ಗ್ರಾಂನ ನೆಕ್ಲೇಸ್‌ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ …

Read More »

ಮೈಸೂರು: ಉದಯಗಿರಿ ಹತ್ಯೆ ಪ್ರಕರಣದ ಆರೋಪಿ ಬಂಧನ

ಮೈಸೂರು: ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಗೌಸಿಯಾನಗರದ ಉಮರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ದಾವಣಗೆರೆ ನಿವಾಸಿ, ಕಳೆದ 10 ವರ್ಷಗಳಿಂದ ಕ್ಯಾತಮಾರನಹಳ್ಳಿಯಲ್ಲಿ ನೆಲೆಸಿರುವ ನೆಲೆಸಿರುವ ಖಾಸಿಂಸಾಬ್ ಪುತ್ರ ಬಾಬು ಬಂಧಿತ ಆರೋಪಿ. ಕೆ.ಎನ್.ಪುರ-ಶಾಂತಿನಗರ ಬಾರ್ ಬಳಿಯ ಗಲ್ಲಿಯಲ್ಲಿ ಉಮರ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಸಾಕಷ್ಟು ಮಾಹಿತಿ …

Read More »

ಬೈಂದೂರು: 6 ಲಕ್ಷ ನಗದು ಕಳವು ಮಾಡಿದ್ದ ರಾಜಸ್ಥಾನ ಮೂಲದ ಆರೋಪಿ ಬಂಧನ

ಬೈಂದೂರು: ಯಡ್ತರೆ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದ ಬಾಡಿಗೆ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಭೇದಿಸಿರುವ ಬೈಂದೂರು ಪೊಲೀಸರು, ರಾಜಸ್ಥಾನ ಮೂಲದ ಆರೋಪಿಯನ್ನು ಬಂಧಿಸಿ 6 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಮಹೇಂದ್ರ ಸೈನ್ (23) ಬಂಧಿತ ಆರೋಪಿ. ಈತ ಬೈಂದೂರಿನ ಬಂಕೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಏಪ್ರಿಲ್ 23 ರಂದು ಮಧ್ಯಾಹ್ನ ಯಡ್ತರೆ ನಿವಾಸಿ ರಾವಲ್ ಸಿಂಗ್ ಎಂಬುವವರು ಮನೆಯಲ್ಲಿ ಇಲ್ಲದ ಸಮಯವನ್ನು ಹೊಂಚು …

Read More »

ವಾರಂಟ್ ಆರೋಪಿ ಬಂಧನ

ಬೆಳ್ತಂಗಡಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ್ದ ವಾರಂಟ್ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಸ್ಕೋರ್ಪಿಯಾ ಸತೀಶ್ (35) ಆರೋಪಿ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ ವಾರಂಟ್ ಆರೋಪಿ, ನೆಲ್ಯಾಡಿಯ ಸತೀಶ್ ಅಲಿಯಾಸ್ ಸ್ಕೋರ್ಪಿಯಾ ಸತೀಶ್ ತಪ್ಪಿಸಿಕೊಂಡಿದ್ದ. ಈತನನ್ನು ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್, ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಅವರ ತಂಡ, ನೆಲ್ಯಾಡಿಯಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ …

Read More »