Breaking News

Breaking News

ಇಬ್ಬರು ಪ್ರೊಬೇಷನರಿ ಮೋಟಾರ್ ವಹಿಕಲ್‌ ಪಿಐ ಸೇರಿ ಮೂವರ ಸೆರೆ

ಬೆಂಗಳೂರು: ನೈಸ್‌ ರಸ್ತೆ ಟೋಲ್‌ ಪ್ಲಾಜಾದಲ್ಲಿ ಓವರ್‌ ಲೋಡ್‌ ಟ್ರಕ್‌ ಬಿಡಲು ಲಂಚ ಪಡೆದ ಆರೋಪದಡಿ ಇಬ್ಬರು ಪ್ರೊಬೇಷನರಿ ಮೋಟಾರ್‌ ವೆಹಿಕಲ್‌ ಇನ್‌ಸ್ಪೆಕ್ಟರ್‌ಗಳು ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನೆಲಮಂಗಲ ಆರ್‌ಟಿಒ ಕಚೇರಿ ಪ್ರೊಬೇಷನರಿ ಮೋಟರ್‌ ವೆಹಿಕಲ್‌ ಇನ್‌ಸ್ಪೆಕ್ಟರ್‌ಗಳಾದ ಕಿರಣ್‌ (37) ಮತ್ತು ದಿನೇಶ್‌ ಕುಮಾರ್‌ (48) ಮತ್ತು ಮಧ್ಯವರ್ತಿ ಲಾರಿ ಚಾಲಕ ರಮೇಶ್‌ (40) ಬಂಧಿತರು. ಮಹಾರಾಷ್ಟ್ರದ ಪ್ರಶಾಂತ್‌ ದತ್ತಾತ್ರೇಯ ಜಾಧವ್‌ ಎಂಬವರು ನೀಡಿದ ದೂರಿನ …

Read More »

ವಜ್ರದ ಹರಳು ವಶ; 6 ಮಂದಿ ಬಂಧನ

ಹುಬ್ಬಳ್ಳಿ: ಯಾವುದೇ ದಾಖಲೆ ಇಲ್ಲದೆ ವಜ್ರದ ನಮೂನೆಯ ಹರಳುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿ, ₹3 ಲಕ್ಷ ಮೌಲ್ಯದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಾಂಧಿನಗರದ ಸಂತೋಷ ಅಗಸೆ, ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಕಳಸೂರಿನ ಕಾಂತೇಶ ಕನಕಣ್ಣವರ, ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿಯ ವೀರೇಂದ್ರ ದೇಶಗತ್ತಿ, ಹುಬ್ಬಳ್ಳಿ ಅಕ್ಕಿಪೇಟೆಯ ರವಿ ಪೂಜಾರ ಹಾಗೂ ಗಿರೀಶ ಚವ್ಹಾಣ್‌ ಮತ್ತು …

Read More »

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ ಜಗಳಕ್ಕೆ ಪೊಲೀಸರೇ ಮಧ್ಯಪ್ರವೇಶಬೆಕ್ಕು ಗರ್ಭಿಣಿ ಆಯ್ತು… ಆದರೆ ಜಗಳ ಯಾರದ್ದು…? ನೆರೆಹೊರೆಯವರ ‘ವಿಚಿತ್ರ’ ವಾರ್.! ಬೆಂಗಳೂರು: ಸಣ್ಣ ವಿಷಯಕ್ಕೆ ದೊಡ್ಡ ಗಲಾಟೆ ಆಗೋದು ಹೊಸದೇನಲ್ಲ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಘಟನೆ ಕೇಳಿದ್ರೆ ನೀವು ಕೂಡ ನಕ್ಕುಬಿಡ್ತೀರಾ ಅಥವಾ ಆಶ್ಚರ್ಯ ಪಡ್ತೀರಾ ಅನ್ನೋದು ಖಚಿತ!. ನಗರದ ಶೇಷಾದ್ರಿಪುರಂ …

Read More »

ಗುಂಡ್ಲುಪೇಟೆ ಪೊಲೀಸರಿಂದ 17 ಜೂಜುಕೋರರ ಬಂಧನ

ಗುಂಡ್ಲುಪೇಟೆ: ಪ್ರತ್ಯೇಕವಾಗಿ ಎರಡು ಕಡೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಪಟ್ಟಣ ಪೊಲೀಸರು 17 ಜೂಜುಕೋರರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್ ನೇತೃತ್ವದ ಪೊಲೀಸರ ತಂಡ ತಾಲೂಕಿನ ತೆಂಕಲಹುಂಡಿ ಮತ್ತು ಮಡಹಳ್ಳಿ ಗ್ರಾಮಗಳ ನಡುವೆ ಇರುವ ಹುಲಿಯಮ್ಮನ ಗುಡ್ಡದ ಬಳಿ ಜೂಜಾಡುತ್ತಿದ್ದ 9 ಜನರನ್ನು ವಶಕ್ಕೆ ಪಡೆದು, ಪಣಕ್ಕಿಟ್ಟಿದ್ದ 1,1,230 ರೂ.ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ …

Read More »

ವಿಟ್ಲದಲ್ಲಿ ಅಕ್ರಮ ಸ್ಫೋಟಕ ಸಂಗ್ರಹ: ಆರೋಪಿ ಜಗದೀಶ ಪೂಜಾರಿ ಬಂಧನ

ವಿಟ್ಲ : ಕಂಬಳಬೆಟ್ಟು ಸಮೀಪದ ಅಮೈ ಎಂಬಲ್ಲಿ ಮನೆಯ ಆವರಣದಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿ ಸುಡುಮದ್ದು ತಯಾರಿಸುತ್ತಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ಜಗದೀಶ ಪೂಜಾರಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ ತನ್ನ ಮನೆಯ ಆವರಣದಲ್ಲಿ ಸುಡುಮದ್ದು ತಯಾರಿಗೆ ಬೇಕಾದ ಸ್ಫೋಟಕ ಸಾಮಗ್ರಿಗಳನ್ನು ಶೇಖರಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಬಿ.ಎಸ್. ನಾಯಕ್ ನೇತೃತ್ವದ ತಂಡ …

Read More »

ಯಲಹಂಕ KIADB ಕಳ್ಳತನ ಭೇದಿಸಿದ ಪೊಲೀಸರು: ಮೂವರು ಆರೋಪಿಗಳು ಬಂಧನ

ಯಲಹಂಕ: KIADB ಕೈಗಾರಿಕಾ ಪ್ರದೇಶದಲ್ಲಿ ನಡೆದ ಲಕ್ಷಾಂತರ ರೂ. ಮೌಲ್ಯದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆದಿದ್ದ ಈ ಕಳ್ಳತನ ಪ್ರಕರಣದಲ್ಲಿ ಅಲ್ಯೂಮಿನಿಯಂ ಕೇಬಲ್, ಎಲೆಕ್ಟ್ರಿಕಲ್ ಉಪಕರಣಗಳು ಹಾಗೂ ಮಿಷಿನರಿ ಸಾಮಗ್ರಿಗಳನ್ನು ಕದ್ದೊಯ್ದು ಆರೋಪಿಗಳು ಪರಾರಿಯಾಗಿದ್ದರು. ಬಂಧಿತ ಆರೋಪಿಗಳನ್ನು ನಾಸೀರ್ ಹುಸೇನ್, ಮುಂನ್ಸಿಫ್ ಪಾಷಾ ಮತ್ತು ವಿಶ್ವಾಸ್ ಎಂದು ಗುರುತಿಸಲಾಗಿದೆ. ಇವರು ಮೂವರು ಕೆ.ಆರ್. ಪುರಂ ನಿವಾಸಿಗಳಾಗಿದ್ದು, ಒಂದೇ ತಂಡವಾಗಿ ಯೋಜನೆ ರೂಪಿಸಿ …

Read More »

ತುಮಕೂರು ಶಿರಾ ಬಳಿ KSRTC ಬಸ್‌ – ಲಾರಿ ನಡುವೆ ಭೀಕರ ಅಪಘಾತ; ಹಲವು ಸಾವು ನೋವು

ತುಮಕೂರು: ಶಿರಾದಿಂದ ಹಿರಿಯೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಕ್ಕೀಡಾಗಿದ್ದು, ಹಲವು ಸಾವು ನೋವು ಸಂಭವಿಸಿವೆ. ಶಿರಾ ತಾಲೂಕು ದ್ವಾರಾಳು ಬ್ರಿಡ್ಜ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದವರ ಪೈಕಿ 35ಕ್ಕೂ ಹೆಚ್ಚು ಜನರು ಗಾಯಗೊಂಡು, ಈ ಪೈಕಿ 10ಕ್ಕೂ ಹೆಚ್ಚು ಜನರಿಗೆ ತೀವ್ರ ಹಾನಿಯಾಗಿದೆ. ಶ್ರೀಕಾಂತ್ ಮತ್ತು 50 ವರ್ಷದ ಮಹಿಳೆ ಸೇರಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ ಎಂಬ …

Read More »

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ: ಕಾರು 5 ಪಲ್ಟಿ, ಯುವಕ ಸಾವು

ಕೋಲಾರ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ದೊಡ್ಡಕಾರಿ ಬಳಿ ನಡೆದಿದೆ. ಚೆನ್ನೈ ಮೂಲದ ದೇವಾನಂದ್ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸರ್ವೇಶ್ ಎಂಬ ಮತ್ತೋರ್ವ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಂಜಾನೆ ಬೆಂಗಳೂರಿನಿಂದ ಚೆನ್ನೈ ಕಡೆಗೆ ತೆರಳುತ್ತಿದ್ದ ಕ್ರೇಟಾ …

Read More »

ಮದ್ಯ ಸೇವಿಸಿ ಚಾಲನೆ: ಬೆಂಗಳೂರಲ್ಲಿ 747 ಪ್ರಕರಣ ದಾಖಲು

ಬೆಂಗಳೂರು: ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಚಾಲಕರ ವಿರುದ್ಧ 747 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ರಸ್ತೆ ಸುರಕ್ಷತೆಗಾಗಿ ಏಪ್ರಿಲ್ 6ರಿಂದ 12ರವರೆಗೆ ವಿಶೇಷ ಕಾರ್ಯಾಚರಣೆಯನ್ನು 53 ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 5091 ವಿವಿಧ ಮಾದರಿಯ ವಾಹನಗಳನ್ನು ಪರಿಶೀಲಿಸಿ, ಮದ್ಯ ಸೇವಿಸಿ ಚಾಲನೆ ಮಾಡಿದ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದೇ ರೀತಿ ಅತಿ ವೇಗವಾಗಿ ವಾಹನ ಚಲಾಯಿಸಿದವರ ವಿರುದ್ಧ …

Read More »

ಲಾಂಗು, ಮಚ್ಚುಗಳಿಂದ ಭೀಕರ ದಾಳಿ – ಮನೆಯೆದುರೇ ವ್ಯಕ್ತಿಯ ಹ*ತ್ಯೆ!

ಬೆಂಗಳೂರು : ರಾಜಧಾನಿ ಬೆಂಗಳೂರು ರೌಡಿಗಳ ಅಡ್ಡೆಯಾಗುತ್ತಿದ್ದು, ಮನೆಗೆ ನುಗ್ಗಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದಬ್ಬಗುಂಠಹಳ್ಳಿಯಲ್ಲಿ ಘಟನೆ ನಡೆದಿದ್ದು, ಶಿವಶಂಕರ್ ಮೃತ ದುರ್ದೈವಿ ಎಂದು ಗುರುತಿಸಿದ್ದಾರೆ. ಮನೆ ಆವರಣದಲ್ಲೇ ಶಿವಶಂಕರ್ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗಿದ್ದಾರೆ. ಸೋಮವಾರ ರಾತ್ರಿ ನಡೆದಿರುವ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬೆಂಗಳೂರು …

Read More »