Breaking News

Breaking News

ಗಾಂಜಾ ಮಾರಾಟ ಆರೋಪ : ಓರ್ವನ ಬಂಧನ

ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಚಿಕ್ಕಲ್ ಬಡಾವಣೆ ನಿವಾಸಿ ಮಹಮ್ಮದ್ ಆಂಬ್ರೋಸ್ (50) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಎ.12 ರಂದು ಅಣ್ಣಾ ನಗರ ಚಾನಲ್ ಏರಿಯಾ ಪ್ರದೇಶದಲ್ಲಿ ಮಹಮ್ಮದ್ ಆಂಬ್ರೋಸ್ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 85 ಸಾವಿರ ರೂ. ಮೌಲ್ಯದ 1 ಕೆಜಿ 720 …

Read More »

ಮಂಗಳೂರು| ಆರಿಫ್ ಕೊಲೆ ಪ್ರಕರಣ: ಮೂವರು ಪೊಲೀಸ್‌ ವಶಕ್ಕೆ

ಉಳ್ಳಾಲ: ತೊಕ್ಕೊಟ್ಟುವಿನಲ್ಲಿ ನಡೆದ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರ್ಷದ್, ಪುಚ್ಚೆ ನಿಸಾಕ್, ಜುನೈದ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಶ್ರಫ್ ಮೇಲಿನ ಪಿತೂರಿ ಮತ್ತು ದಾಳಿಯಲ್ಲಿ ಇವರು ಭಾಗಿಯಾಗಿದ್ದಾರೆ ಎಂಬ ಶಂಕೆಯ ಮೇರೆಗೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ವಶಕ್ಕೆ ಪಡೆದವರ ಪೈಕಿ ಅರ್ಷದ್ ಎಂಬಾತ ಆರೋಪಿಗಳಿಗೆ ಶಸ್ತ್ರಾಸ್ತ್ರ, ಪೊಲೀಸರ ಚಲನವಲನದ ಮಾಹಿತಿ, ಸಾರಿಗೆ ಮತ್ತು …

Read More »

ಗ್ಯಾರೇಜ್‌ಗೆ ಹೊತ್ತಿಕೊಂಡ ಬೆಂಕಿ: ಲಕ್ಷಾಂತರ ಮೌಲ್ಯದ ಕಾರು ನಾಶ!

ಬೆಂಗಳೂರು: ನಗರದ ಬೊಮ್ಮನಹಳ್ಳಿ ಸಮೀಪದ ಹೊಂಗಸಂದ್ರದಲ್ಲಿ ಕಾರು ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಐಷರಾಮಿ ಕಾರುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ರಾತ್ರಿ ಸುಮಾರು 9 ಗಂಟೆ ವೇಳೆಗೆ ಸಂಭವಿಸಿದ ಈ ಅವಘಡದಲ್ಲಿ BMW ಸೇರಿದಂತೆ ನಾಲ್ಕೈದು ಕಾರುಗಳು ಬೆಂಕಿಗಾಹುತಿಯಾಗಿ ಕರಕಲಾಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಎರಡು ವಾಹನಗಳು …

Read More »

ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರ ದಾಳಿ

ಸಿ.ಎಸ್ ಪುರ(ಗುಬ್ಬಿ): ಅಕ್ರಮ ಮರಳು ಅಡ್ಡೆಯ ಮೇಲೆ ಸಿ.ಎಸ್. ಪುರ ಪೊಲೀಸರು ಸೋಮವಾರ ದಾಳಿ ನೆಡಸಿ ಟ್ರ್ಯಾಕ್ಟರ್ ಜಪ್ತಿ ಮಾಡಿ ಮರಳು ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜನ್ನೇನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಶಿಂಷಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಪಿಎಸ್‌ಐ ಧರ್ಮಾಂಜಿ ಹಾಗೂ ಸಿಬ್ಬಂದಿ ವಾಹನ ಸಂಖ್ಯೆ ಇಲ್ಲದಿರುವ ಟ್ರ್ಯಾಕ್ಟರ್ ಮತ್ತು ಮರಳು ಸಾಗಾಟ …

Read More »

ಜೂಜಾಡುತ್ತಿದ್ದ 16 ಜನರ ಬಂಧನ

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಪಾರ್ಟಿ ಹಾಲ್‌ನಲ್ಲಿ ಜೂಜಾಡುತ್ತಿದ್ದ 16 ಜನರನ್ನು ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ 48,430 ರೂ. ವಶಕ್ಕೆ ಪಡೆದಿದ್ದಾರೆ. ನರಸೀಪುರದ ಬಸವರಾಜು, ಪರಿಣಾಮಿಪುರದ ಮಲ್ಲಿಕಾರ್ಜುನಸ್ವಾಮಿ, ಬೆಂಗಳೂರಿನ ಮಂಜು, ಜ್ಯೋತಿ ಲಿಂಗಯ್ಯ, ವೆಂಕಟೇಶ, ವೀರಭದ್ರಯ್ಯ, ಯೋಗೇಶ್, ವಿಶಾಲ್, ನಂಜೇಗೌಡ, ಮಂಜು ನಾಥ, ಪ್ರವೀಣ್, ರಂಗಸ್ವಾಮಿ, ಕೃಷ್ಣಮೂರ್ತಿ, ಕಿರಣ್, ಅಶೋಕ್ ಕುಮಾರ್, ಇಬ್ರಾಹಿಂ ಬಂಧಿತರು. ಬಂಧಿತರು ಶಿವನಸಮುದ್ರ ಗ್ರಾಮದ ಶಿಂಷಾ ಮಾರಮ್ಮನ ದೇವಾಲಯಕ್ಕೆ ಆಗಮಿಸಿದ್ದು ಈ ವೇಳೆ ಪಾರ್ಟಿ ಹಾಲ್ವೊಂದರಲ್ಲಿ …

Read More »

ಜೀವ ಬೆದರಿಕೆ; ಕೇಸ್ ದಾಖಲು

ಕುಂದಾಪುರ: ಇಬ್ರಾಹಿಂ, ಮುಸ್ತಾಕಿಂ, ಮನೆಯ ಮಕ್ಕಳೊಂದಿಗೆ ಹೆಮ್ಮಾಡಿಯ ಸಂತೋಷ ನಗರದ ಹತ್ತಿರದ‌ ಮೈದಾನದಲ್ಲಿ ಆಟ ಆಡುತ್ತಿದ್ದಾಗ ಇಲಾಹಿದ್ ಎಂಬಾತ ಬಂದು ಬೆದರಿಕೆ ಒಡ್ಡಿ ಹಲ್ಲೆಗೈದಿರುವುದಾಗಿ ಸಂತೋಷನಗರ ನಿವಾಸಿ ಮೊಹಮ್ಮದ್ ಖ್ವಾಜಾ ದೂರು ನೀಡಿದ್ದಾರೆ. ಇದಲ್ಲದೆ ನೀರಿನ ಟ್ಯಾಂಕ್‌ಗೆ ವಿಷ ಹಾಕುವುದಾಗಿ ಸಹ ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಪ್ರತಿಷ್ಠಿತ ಆಸ್ಪತ್ರೆ ಮುಖ್ಯಸ್ಥನಿಂದ ಲೈಂಗಿಕ ಕಿರುಕುಳ ಆರೋಪ: ಮಹಿಳಾ ಅಕೌಂಟೆಂಟ್ ದೂರು

ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಯೊಂದರ ಮುಖ್ಯಸ್ಥನ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹೆಚ್.ಎಸ್.ಆರ್. ಲೇಔಟ್ ಠಾಣೆ ಪೊಲೀಸರಿಗೆ ಆಸ್ಪತ್ರೆಯ ಮಹಿಳಾ ಅಕೌಂಟೆಂಟ್ ದೂರು ನೀಡಿದ್ದಾರೆ. ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಆಸ್ಪತ್ರೆಯ ಮುಖ್ಯಸ್ಥನಿಗೆ ನೋಟಿಸ್ ನೀಡಲಾಗಿದೆ.ಆರೋಪಿ ಸದ್ಯ ಹೊರ ರಾಜ್ಯದಲ್ಲಿದ್ದಾನೆ. ಕಳೆದ 9 ತಿಂಗಳಿಂದ ಆಸ್ಪತ್ರೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಕೆಲಸದ ವೇಳೆ ಅನುಚಿತವಾಗಿ ವರ್ತಿಸಿದ್ದಾರೆ. …

Read More »

ಕೋಳಿ ಅಂಕದ ಅಡ್ಡೆಗೆ ಪೋಲಿಸ್ ದಾಳಿ

ವಿಟ್ಲ ಕಸಬಾ ಗ್ರಾಮದ ಮಾಡ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕದ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಂದ್ರಶೇಖರ (43), ಇಬ್ರಾಹಿಂ (65), ಹೊನ್ನಪ್ಪ (46) ಮತ್ತು ವಿಟ್ಲಪಡ್ನೂರು ನಿವಾಸಿ ಚಂದ್ರಹಾಸ (32) ಬಂಧಿತರು. ಉಳಿದ ಆರೋಪಿಗಳನ್ನು ಪೊಲೀಸರು‌ ಬಂಧಿಸಲು ಮುಂದಾದಾಗ ಬಾಬಣ್ಣ ಮತ್ತು ಹೊನ್ನಪ್ಪ ಹರಿಜನ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರ್ಯಾಚರಣೆಯ ವೇಳೆ ಜೂಜಾಟಕ್ಕೆ …

Read More »

ಕೇರಳದಿಂದ ಅಕ್ರಮ ಕೆಂಪುಕಲ್ಲು ಸಾಗಾಟ: ಪ್ರಕರಣ ದಾಖಲು

ಪುತ್ತೂರು: ಕೇರಳದಿಂದ ಕೆಂಪುಕಲ್ಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಸುಳ್ಯಪದವು ಚೆಕ್ ಪೋಸ್ಟ್ ನಲ್ಲಿ ತಡೆದ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎ. 12ರಂದು ಪೊಲೀಸರು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಯುತ್ತಿದ್ದಾಗ ಲಾರಿಯೊಂದು ಕೇರಳ ಭಾಗದಿಂದ ಆಗಮಿಸಿದ್ದು, ಅದನ್ನು ತಡೆದು ಪರಿಶೀಲಿಸಿದಾಗ ಕೆಂಪುಕಲ್ಲು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಕುರಿತು ಚಾಲಕ ಮಾಡ್ನೂರು ಗ್ರಾಮದ ವಿಶ್ವನಾಥನನ್ನು ವಿಚಾರಿಸಿದಾಗ ಕೆಂಪುಕಲ್ಲನ್ನು ಕೇರಳದಿಂದ ಗುಂಡ್ಯ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ …

Read More »

ಬೆಂಗಳೂರು | ₹9.13 ಕೋಟಿ ಮೌಲ್ಯದ ಗಾಂಜಾ ಪತ್ತೆ: ನಾಲ್ವರು ಪೆಡ್ಲರ್‌ ವಶ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹9.13 ಕೋಟಿ ಮೌಲ್ಯದ 26.15 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಪ್ರತ್ಯೇಕ ವಿಮಾನಗಳಲ್ಲಿ ಬಂದಿಳಿದ ನಾಲ್ವರು ಪ್ರಯಾಣಿಕರ ಬ್ಯಾಗ್‌ಗಳ ತಪಾಸಣೆ ನಡೆಸಿದಾಗ, ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ. ನಾಲ್ವರು ಪೆಡ್ಲರ್‌ಗಳನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ₹5.79 …

Read More »