BigTv News
April 8, 2026
Breaking News
ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ೨೦೨೦ ರ ಸಥಾನಕುಲಂ ಕಸ್ಟಡಿ ಮರಣ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ ತಮಿಳುನಾಡಿನ ೯ ಪೊಲೀಸರಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದೆ. ಪೊಲೀಸ್ ಕಸ್ಟಡಿಯಲ್ಲಿ ಕಿರುಕುಳ ನೀಡಿ ತಂದೆ-ಮಗನ ಸಾವಿಗೆ ಕಾರಣರಾದ ೯ ಪೊಲೀಸರಿಗೆ ಮರಣದಂಡನೆ!ನ್ಯಾಯಾಲಯವು ಈ ಘಟನೆಯನ್ನು ‘ಅತ್ಯಂತ ಅಪರೂಪದಲ್ಲಿ ಅಪರೂಪದ’ ಮತ್ತು ಗಂಭೀರ ಸ್ವರೂಪದ ಅಪರಾಧವೆಂದು ಪರಿಗಣಿಸಿ ಈ ಕಠಿಣ ಶಿಕ್ಷೆಯನ್ನು ನೀಡಿದೆ. ೧. ಈ ತೀರ್ಪು ೬ ವರ್ಷಗಳ ಸುದೀರ್ಘ ವಿಚಾರಣೆಯ …
Read More »
BigTv News
April 8, 2026
Breaking News
ಹುಬ್ಬಳ್ಳಿ: ಎಸ್.ಎಂ.ಕೃಷ್ಣ ನಗರದ ಸ್ಮಶಾನಗಟ್ಟಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದೂ ಅಲ್ಲದೆ, ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಸಬಾಪೇಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಾನ್‌ಸ್ಟೆಬಲ್ ಎಸ್.ಎಸ್.ಮೇಟಿ ಅವರು ಚಾಕು ಇರಿತದಿಂದ ಗಾಯಗೊಂಡಿದ್ದು ಕೆಎಂಸಿ-ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಚ್.ಆರ್. ರಾಮಾಪುರ, ರಮಣ ಜೆ ಮತ್ತು ಪಿ.ಕೆ.ಚಲವಾದಿ ಮೇಲೆ ಹಲ್ಲೆ ನಡೆದಿದೆ. ಈಶ್ವರ ನಗರದ ನಿವಾಸಿಗಳಾದ ಅಯಾನ್ ರಫೀಕ್, ಸಮೀರ್, ತೌಫಿಕ್ ಮತ್ತು ವಿನಾಯಕ ಬಂಧಿತ …
Read More »
BigTv News
April 8, 2026
Breaking News
ಮುಳಬಾಗಿಲು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳಿಂದ ವಸೂಲಿ ಮಾಡಿ ಸಂಗ್ರಹಿಸಲಾಗಿದ್ದ ₹5 ಲಕ್ಷ ಹಣವನ್ನು ಹಾಡಹಗಲೇ ಕಳ್ಳರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಮುಳಬಾಗಿಲು ನಗರದ ಶಾಮೀರ್ ಮೊಹಲ್ಲಾದ ಸಂಘದ ಕಚೇರಿಯಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಪಡೆದಿದ್ದ ಸಾಲದ ಹಣವನ್ನು ವಾರದ ಕಂತಿನಲ್ಲಿ ವಸೂಲಿ ಮಾಡಿ ಸಂಘದ ಅಧಿಕಾರಿ ಶಶಿಕಲಾ ಸಂಗ್ರಹಿಸಿ, ಮುಖ್ಯ ಕಚೇರಿಗೆ ಸಾಗಿಸಲು ತಯಾರು ಮಾಡಿಕೊಳ್ಳುತ್ತಿದ್ದರು. ಆ ವೇಳೆ ಇಬ್ಬರು ಅಪರಿಚಿತರು ಕಚೇರಿಗೆ ನುಗ್ಗಿ ಶಶಿಕಲಾ ಅವರ …
Read More »
BigTv News
April 8, 2026
Breaking News
ಬೆಳಗಾವಿ: ಏ.2ರಂದು ವಾಟ್ಸಾಪ್‌ಗೆ ಅಪರಿಚಿತರಿಂದ ಮದುವೆ ಆಮಂತ್ರಣ ಮಾದರಿಯಲ್ಲಿ ಬಂದಿದ್ದ ಎಪಿಕೆ ಫೈಲ್ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ಹ್ಯಾಕ್ ಮಾಡಿ, ಬ್ಯಾಂಕ್ ಖಾತೆಯಲ್ಲಿದ್ದ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಾಟ್ಸಾಪ್‌ನಲ್ಲಿ ಮದುವೆ ಆಮಂತ್ರಣದ ಪಿಡಿಎಫ್ ಫೈಲ್ ರೀತಿಯಲ್ಲಿ ಎಪಿಕೆ ಫೈಲ್ ಕಳುಹಿಸಿ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಶಾಂತವ್ವ ಮರಿಗೌಡರ ಖಾತೆಗೆ ಕನ್ನ ಹಾಕಿರುವ ಸೈಬರ್ ಕಳ್ಳರು 2,17,705 ರೂ. ಬೇರೆ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆ ಜಿಲ್ಲಾ …
Read More »
BigTv News
April 8, 2026
Breaking News
ಮಂಗಳೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಉಳ್ಳಾಲದ ನಿವಾಸಿ ಆಹ್ಮದ್ ಕಬೀರ್ ಶಿಕ್ಷೆಗೊಳಗಾದ ಅಪರಾಧಿ. ಮಂಗಳೂರಿನ ಯಕ್ಷಧ್ರುವ ಸಹಕಾರಿ ಸಂಘದಲ್ಲಿ ಆಟೋ ರಿಕ್ಷಾ ಖರೀದಿಸಲು ಈತ ಸಾಲ ಪಡೆದಿದ್ದ. ಕ್ಲಪ್ತ ಕಾಲದಲ್ಲಿ ಸಾಲ ಮರುಪಾವತಿ ಮಾಡದೆ ಸುಸ್ತಿದಾರನಾಗಿದ್ದ. ಈ ಹಿನ್ನೆಲೆಯಲ್ಲಿ ಆಟೋ ರಿಕ್ಷಾವನ್ನು ಹರಾಜು ಹಾಕಿದ್ದ ಸಹಕಾರಿ ಸಂಘ, ಉಳಿದ ಮೊತ್ತಕ್ಕೆ ಸಂಬಂಧಿಸಿದಂತೆ ಅಪರಾಧಿ …
Read More »
BigTv News
April 8, 2026
Breaking News
ಬಹ್ರೈಚ್: ಸೂಕ್ತ ದಾಖಲೆಗಳಿಲ್ಲದೇ ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಬ್ರಿಟಿಷ್ ಪ್ರಜೆಗಳಿಗೆ ಇಲ್ಲಿನ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 50,000 ರೂ. ದಂಡ ವಿಧಿಸಿದೆ. ಶಿಕ್ಷೆಯ ಘೋಷಣೆ ಬಳಿಕ ಅವರಿಗೆ ಜಾಮೀನು ನೀಡಲಾಗಿದ್ದು, ಮೇಲ್ಮನವಿ ಅವಧಿಯಲ್ಲಿ ದೇಶ ತೊರೆಯಬಾರದು ಎಂದು ಸೂಚಿಸಲಾಗಿದೆ. ಪಾಕಿಸ್ತಾನ ಮೂಲದ ಹಸನ್ ಅಮ್ಮನ್ ಸಲೀಮ್(35) ಮತ್ತು ಕರ್ನಾಟಕದ ಉಡುಪಿ ಮೂಲದ ಸುಮಿತ್ರಾ ಶಕೀಲ್ ಒಲಿವಿಯಾ(61) ಅವರನ್ನು ನವೆಂಬರ್ 2025ರಲ್ಲಿ ಎಸ್‌ಎಸ್‌ಬಿ …
Read More »
BigTv News
April 8, 2026
Breaking News
ಕೊಪ್ಪಳ: ತಾಲೂಕಿನ ಕೋಳೂರು ಹತ್ತಿರದ ಹಿರೇಹಳ್ಳ ಪಕ್ಕದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಅಧಿಕೃತ ಮರಳು ಗುತ್ತಿಗೆದಾರರಿಗೆ ನಿಗದಿಪಡಿಸಿದ ಪ್ರದೇಶವನ್ನು ಮೀರಿ, ಸರ್ಕಾರಿ ಹಳ್ಳದಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ತಹಶೀಲ್ದಾರರು, ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸಂಯುಕ್ತವಾಗಿ ದಾಳಿ ನಡೆಸಿದರು. ದಾಳಿಯ ವೇಳೆ ಹಿಟಾಚಿ ಹಾಗೂ ಬೋಟ್‌ಗಳ ಮೂಲಕ ಮರಳುಗಾರಿಕೆ ನಡೆಯುತ್ತಿರುವುದು ಪತ್ತೆಯಾಯಿತು. …
Read More »
BigTv News
April 8, 2026
Breaking News
ಶಿವಮೊಗ್ಗ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಮುಂದುವರೆದಿವೆ. ಸಾಗರಕ್ಕೆ ಹೊರಟಿದ್ದ ಮಹಿಳೆಯ ಪರ್ಸ್‌ನಲ್ಲಿದ್ದ 179 ಗ್ರಾಂ ಚಿನ್ನದ ಸರ ಹಾಗೂ ₹ 35 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ. ಭದ್ರಾವತಿ ತಾಲ್ಲೂಕಿನ ಆನವೇರಿ ನಿವಾಸಿ ವಾಸಂತಿ ಏ.4ರಂದು ಮಗಳೊಂದಿಗೆ ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾಗರಕ್ಕೆ ತೆರಳುವ ಬಸ್ ಹತ್ತುವಾಗ ವಿಪರೀತ ಜನ ದಟ್ಟಣೆಯಿದ್ದು, ಅವರ ವ್ಯಾನಿಟಿ ಬ್ಯಾಗ್ ಒಳಗೆ ಮತ್ತೊಂದು ಪರ್ಸ್‌ನಲ್ಲಿ ಇಟ್ಟಿದ್ದ …
Read More »
BigTv News
April 8, 2026
Breaking News
ಕಮಲಾಪುರ: ತಾಲೂಕಿನ ಕಲಮೂಡ ಬಳಿ ಸುಟ್ಟ ಸ್ಥಿತಿಯಲ್ಲಿ ಶಿಕ್ಷಕಿ ಜ್ಯೋತಿ ಕಪಾಳ ಶವ ಶನಿವಾರ ಪತ್ತೆಯಾದ ಪ್ರಕರಣ ಕಳೆದ 24 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚಿಂಚೋಳಿ ತಾಲೂಕಿನ ಭುಂಯರ್ ಗ್ರಾಮದ ಅಮರ್ ಕುಡ್ದಳ್ಳಿ ಬಂಧಿತ ಆರೋಪಿ. ಕಷ್ಟ ಕಾಲದಲ್ಲಿ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಜ್ಯೋತಿ ಅವರನ್ನು ಆರೋಪಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಮರ್ ಹಾಗೂ ಜ್ಯೋತಿ ಮೊದಲಿನಿಂದಲೇ ಸ್ನೇಹಿತರು. ಜ್ಯೋತಿ ಅವರಿಂದ ಅಮರ್ ₹14 ಲಕ್ಷ ಹಣ …
Read More »
BigTv News
April 8, 2026
Breaking News
ಕೊಡಗಿನಲ್ಲಿ ಚಾರಣಕ್ಕೆಂದು ತೆರಳಿದ್ದ ಶರಣ್ಯ ನಾಪತ್ತೆಯಾಗಿ ವಾಪಸಾದ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿ ಶ್ರೀ ನಂದಾ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ ಕಾಣೆಯಾಗಿದ್ದಾಳೆ. ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ 14 ವರ್ಷದ ಈ ಬಾಲಕಿ ಪೋಷಕರೊಂದಿಗೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಚಂದ್ರದ್ರೋಣ ಪರ್ವತ ಸರಣಿಯ ಮಾಣಿಕ್ಯಧಾರಾ …
Read More »