Breaking News

Breaking News

ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ಜಾನುವಾರು ಸಾಗಾಟ ಜಾಲ ಪತ್ತೆ: ಮೂವರು ಆರೋಪಿಗಳ ಬಂಧನ, ಎರಡು ವಾಹನ ವಶ

ಅಮಾಸೆಬೈಲು: ಹೊಸಂಗಡಿ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ರವಿವಾರ ಬೆಳಗಿನ ಜಾವ ಅಮಾಸೆಬೈಲು ಪೊಲೀಸರು ನಡೆಸಿದ ವಾಹನ ತಪಾಸಣೆ ವೇಳೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸಾಗಾಟಕ್ಕೆ ಬಳಸಿದ ಗೂಡ್ಸ್ ವಾಹನ ಹಾಗೂ ಬೆಂಗಾವಲಾಗಿ ಬಂದಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಮೂಲದ ಮುಸ್ತಾಕ್ ಹುಸೇನ್ ಸಾಬ್ ನದಾಫ್ (29), ಸಲೀಂ ಹುಸೇನ್ ಸಾಬ್ ನದಾಫ್ (33) ಮತ್ತು ಕಂಡ್ಲೂರಿನ ನದೀಂ ಅಬ್ದುಲ್ …

Read More »

ರಾಂಪುರ ಬಳಿ ಡಿವೈಡರ್‌ಗೆ ಕಾರು ಡಿಕ್ಕಿ: ಇಬ್ಬರ ಸಾವು

ಮೊಳಕಾಲ್ಮುರು: ತಾಲ್ಲೂಕಿನ ರಾಂಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 150ರ ರಾಜಾಪುರ ಕ್ರಾಸ್‌ ಬಳಿ ಭಾನುವಾರ ಬೆಳಗಿನ ಜಾವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಲಗ್ಗೆರೆಯ ಸೀಗೆ ಗಾರ್ಡನ್ ನಿವಾಸಿ ಜೇಮ್ಸ್‌ ರವಿಚಂದ್ರ (38), ಹಾಸನ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆ ಚಿಕ್ಕೇನಹಳ್ಳಿಯ ನಂಜೇಗೌಡ (24) ಮೃತರು. ಕಾರು ಬೆಂಗಳೂರು ಕಡೆಯಿಂದ ಬಳ್ಳಾರಿಗೆ ಹೋಗುತ್ತಿತ್ತು. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ …

Read More »

ವರದಕ್ಷಿಣೆ ಕಿರುಕುಳ : ಹೆಚ್ಚಿನ ಹಣಕ್ಕೆ ಬೇಡಿಕೆ: ಮಹಿಳೆ ಮನೆಯಿಂದ ಹೊರಕ್ಕೆ

ಕಟಪಾಡಿ: ಹೆಚ್ಚಿನ ಹಣವನ್ನು ತರುವಂತೆ ಒತ್ತಾಯಿಸಿ ಪತಿ ಹಾಗೂ ಮನೆಯವರು 5 ½ ತಿಂಗಳ ಮಗುವಿನೊಂದಿಗೆ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಪಡುಬಿದ್ರಿ ಮಾರ್ಗ ಮಧ್ಯದಲ್ಲಿ ಬಿಟ್ಟು ಹೋದ ಘಟನೆಯೊಂದು ವರದಿಯಾಗಿದೆ.. ಮೂಡಬೆಟ್ಟು ಗ್ರಾಮದ ಸರಕಾರಿಗುಡ್ಡೆ ನಿವಾಸಿ ಯಾಸೀರ್‌ ಸಾಬನ್‌ ಅಲಿ ಎಂಬಾತ 2024ರ ಮೇ ತಿಂಗಳಿನಲ್ಲಿ ನಡ್ಸಾಲು ಗ್ರಾಮದ ಶಬ್ರೀನ ಎಂಬ ಯುವತಿಯನ್ನು ಮದುವೆಯಾಗಿದ್ದ. ಅನಂತರದ ದಿನಗಳಲ್ಲಿ ಶಬ್ರೀನ ಅವರಿಗೆ ಪತಿ, ಅವರ ತಂದೆ ಸಾಬನ್‌ ಸಾಹೇಬ್‌, ತಾಯಿ …

Read More »

ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಹರಿದು 2 ವರ್ಷದ ಮಗು ಸಾವು

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ ದುರ್ಘಟನೆಯೊಂದು ಸಂಭವಿಸಿ, ಮನೆಯ ಮುಂದೆ ನಿಂತಿದ್ದ 2 ವರ್ಷದ ಮಗು ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದೆ. ಮೃತ ಮಗುವನ್ನು ರಬೀಯಾ ದೊಡ್ಡಮನಿ (2) ಎಂದು ಗುರುತಿಸಲಾಗಿದೆ. ಮನೆಯ ಮುಂಭಾಗದಲ್ಲಿ ಇದ್ದಾಗಲೇ ಏಕಾಏಕಿ ಬಂದ ಟ್ರ್ಯಾಕ್ಟರ್ ಮಗುವಿನ ಮೇಲೆ ಹರಿದಿದ್ದು, ಗಂಭೀರ ಗಾಯಗಳಿಂದ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ಘಟನೆಯ ನಂತರ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಪ್ರಕರಣವನ್ನು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. …

Read More »

ಆಸ್ತಿ ವಿಚಾರಕ್ಕಾಗಿ ದಾಯಾದಿಗಳ ಮಧ್ಯೆ ಮಾರಾಮಾರಿ – ಮೂವರಿಗೆ ಗಂಭಿರ ಗಾಯ

ಮಂಡ್ಯ : ಆಸ್ತಿ ವಿಚಾರಕ್ಕಾಗಿ ದಾಯಾದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಒಂದೇ ಕುಟುಂಬದ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆಯ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪಿತ್ರಾಜಿತ ಆಸ್ತಿಯ ರಸ್ತೆಗೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಒಂದೇ ಕುಟುಂಬದ ಸೋಮೇಗೌಡ, ವಸಂತ್ ಕುಮಾರ್, ನಿಶಾಂತ್ ಕುಮಾರ್‌ಗೆ ಗಾಯವಾಗಿದ್ದು, ಉಗ್ರೇಗೌಡರ ಕುಟುಂಬದಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಸದ್ಯ ಗಾಯಾಳುಗಳಿಗೆ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, …

Read More »

ಕಾಂಗ್ರೆಸ್ ಸದಸ್ಯನಿಂದ ಹಲ್ಲೆಗೊಳಗಾದ ಪಾಲಿಕೆ ಇಂಜಿನಿಯರ್ ಮೇಲೆ ಅಟ್ರಾಸಿಟಿ ಕೇಸ್ ದಾಖಲು

ಬಳ್ಳಾರಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯನಿಂದ ಹಲ್ಲೆಗೊಳಗಾದ ಪಾಲಿಕೆ ಇಂಜಿನಿಯರ್ ಮೇಲೆಯೇ ಅಟ್ರಾಸಿಟಿ ಕೇಸ್ ದಾಖಲಾಗಿರುವ ಘಟನೆ ನಡೆದಿದೆ. ಬಳ್ಳಾರಿ ಮಹಾನಾಗರ ಪಾಲಿಕೆ ಇಂಜಿನಿಯರ್ ವೀರೇಶ್ ಮೇಲೆ ಕಾಂಗ್ರೆಸ್ ಸದಸ್ಯ ಕುಬೇರ್ ಹಲ್ಲೆ ನಡೆಸಿದ್ದಾರೆ. ಈಗ ಹಲ್ಲೆಗೊಳಗಾದ ವಿರೇಶ್ ವಿರುದ್ಧವೇ ದೂರು ದಾಖಲಾಗಿದೆ. ಮಹಾನಗರ ಪಾಲಿಕೆ ಮೇಯರ್ ಗಾದೆಪ್ಪ ಜೊತೆ ಠಾಣೆಗೆ ಬಂದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ವೀರೇಶ್ ವಿರುದ್ಧ ದೂರು ನೀಡಿದ್ದಾರೆ. ನಗರದ ರಾಯಲ್ ವೃತ್ತದಿಂದ …

Read More »

ಮಡಿಕೇರಿ: ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಮಹಿಳೆ ಪತ್ತೆ

ಧನ್‌ಬಾದ್: ಹಳೆಯ ಕಬ್ಬಿಣ ಕದಿಯುವ ಪ್ರಯತ್ನದಲ್ಲಿ ಅನಿಲ ಸೋರಿಕೆಯಾಗಿ ಮೂವರು ಮೃತಪಟ್ಟ ಘಟನೆ ಜಾರ್ಖಂಡ್‌ನ ಮುನಿಡಿಹ್‌ನಲ್ಲಿ ನಡೆದಿದೆ. ಭಾನುವಾರ ಮುಂಜಾನೆ ಕಬ್ಬಿಣದ ಸ್ಕ್ರ್ಯಾಪ್ ಕದಿಯಲು ಹೋದ ತಂಡವು ಅನಿಲ ತುಂಬಿದ್ದ ಸಿಲಿಂಡರ್ ಕತ್ತರಿಸಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ತೀವ್ರ ಪ್ರಮಾಣದಲ್ಲಿ ಅನಿಲ ಹೊರಬಂದಿದ್ದು, ಅದನ್ನು ಸೇವಿಸಿದ ಮೂವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ ಇತರ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More »

ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಅನಿಲ ಸೋರಿಕೆ: ಮೂವರ ಸಾವು

ಧನ್‌ಬಾದ್: ಹಳೆಯ ಕಬ್ಬಿಣ ಕದಿಯುವ ಪ್ರಯತ್ನದಲ್ಲಿ ಅನಿಲ ಸೋರಿಕೆಯಾಗಿ ಮೂವರು ಮೃತಪಟ್ಟ ಘಟನೆ ಜಾರ್ಖಂಡ್‌ನ ಮುನಿಡಿಹ್‌ನಲ್ಲಿ ನಡೆದಿದೆ. ಭಾನುವಾರ ಮುಂಜಾನೆ ಕಬ್ಬಿಣದ ಸ್ಕ್ರ್ಯಾಪ್ ಕದಿಯಲು ಹೋದ ತಂಡವು ಅನಿಲ ತುಂಬಿದ್ದ ಸಿಲಿಂಡರ್ ಕತ್ತರಿಸಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ತೀವ್ರ ಪ್ರಮಾಣದಲ್ಲಿ ಅನಿಲ ಹೊರಬಂದಿದ್ದು, ಅದನ್ನು ಸೇವಿಸಿದ ಮೂವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ ಇತರ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More »

ಸ್ನೇಹಿತನ ಊರಿಗೆ ಬಂದ ಇಬ್ಬರು ನೀರು ಪಾಲು

ಚಿಕ್ಕಬಳ್ಳಾಪುರ: ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಇಬ್ಬರು ಕೆರೆಯಲ್ಲಿ ನೀರು ಪಾಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ಸಮೀಪ ನಡೆದಿದೆ. ರಾಮಸಮುದ್ರ ಕೆರೆಯಲ್ಲಿ ಈಜಲು ಹೋಗಿದ್ದ ಬೆಂಗಳೂರಿನ ಜೆಪಿ ನಗರದ ಗಿರೀಶ್(35), ಕಿಶೋರ್(28) ಮೃತಪಟ್ಟವರು. ಭಾನುವಾರ ರಜೆ ಹಿನ್ನೆಲೆ ಸ್ನೇಹಿತ ಜಗದೀಶ್ ಅವರ ಸ್ವಗ್ರಾಮ ಗಡಿಮಿಂಚೇನಹಳ್ಳಿಗೆ 7 ಜನ ಸ್ನೇಹಿತರು ಬೆಂಗಳೂರಿನಿಂದ ಬಂದಿದ್ದಾರೆ. ಗ್ರಾಮಕ್ಕೆ ಸಮೀಪದ ಕೆರೆಯಲ್ಲಿ ಈಜಲು ನೀರಿಗೆ ಇಳಿದಿದ್ದಾರೆ. 7 ಜನರ ಪೈಕಿ ಇಬ್ಬರು …

Read More »

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

ನಗರದ ಪ್ರತ್ಯೇಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹುಬ್ಬಳ್ಳಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಹುಬ್ಬಳ್ಳಿಯ ಎರಡು ಪ್ರತ್ಯೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಿರುಕುಳದ ಪ್ರಕರಣಗಳು ದಾಖಲಾಗಿವೆ: ಮೊದಲ ಪ್ರಕರಣ: ಮಹಿಳೆಯೊಬ್ಬರಿಗೆ ಅಸಭ್ಯವಾಗಿ ವರ್ತಿಸಿ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಓರ್ವನನ್ನು ವಶಕ್ಕೆ …

Read More »