Breaking News

Breaking News

ಬೆಂಗಳೂರು: ರ್ಯಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ರ್ಯಾಪಿಡೋ ಚಾಲಕನೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯೋರ್ವಳು ಬಿಟಿಎಂ ಲೇಔಟ್‌ನಿಂದ ಇಂದಿರಾನಗರಕ್ಕೆ ಬೈಕ್ ಬುಕ್‌ ಮಾಡಿದ್ದಳು. ಬಳಿಕ ಬೈಕ್‌ನಲ್ಲಿ ಬರುವಾಗ ಚಾಲಕ ಮೊಹಮ್ಮದ್ ಖಾಜಾ, ದಾರಿಯುದ್ದಕ್ಕೂ ಮೈಮುಟ್ಟಿ ಅಸಭ್ಯ ವರ್ತಿಸಿದ್ದಾನೆಂದು ಯುವತಿ ಆರೋಪಿಸಿದ್ದು, ಈ ಸಂಬಂಧ ಯುವತಿ ದೂರು ನೀಡಿದ್ದಾಳೆ. ಇದರ ಮೇರೆಗೆ ಇದೀಗ ಇಂದಿರಾನಗರ ಠಾಣೆ ಪೊಲೀಸರು ರ್ಯಾಪಿಡೋ ಚಾಲಕ ಮೊಹಮ್ಮದ್ ಖಾಜಾ ಎನ್ನುವಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Read More »

ಕ್ಯಾಶ್ಯು ಇಂಡಸ್ಟ್ರೀಸ್ ನಲ್ಲಿ ಕಳ್ಳತನ

ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಬಾಲಾಜಿ ಕ್ಯಾಶ್ಯು ಇಂಡಸ್ಟ್ರೀಸ್ ಕಚೇರಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳವುಗೈದಿದ್ದಾರೆ. ಕಚೇರಿಯ ಹಿಂಬಾಗಿಲನ್ನು ಕಳ್ಳರು ಮುರಿದು ಒಳನುಗ್ಗಿ, ಸಂಸ್ಥೆಯ ದಾಖಲೆಗಳು ಸೇರಿದಂತೆ 9 ಕಂಪ್ಯೂಟರ್‌ಗಳು, 8 ಸಿಸಿಟಿವಿ ಕೆಮರಾಗಳು, ಒಂದು ಡಿವಿಆರ್ ಹಾಗೂ 3 ಟೆಲಿವಿಷನ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ವಾಮದಪದವು ನಿವಾಸಿ ಟಿ. ವರದರಾಜ್ ಪೈ (46) ಅವರು ಘಟನೆಗೆ ಸಂಬಂಧಿಸಿ ದೂರು ನೀಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದಲ್ಲಿ ನಡೆದಿದೆ. ಹೋಟೆಲ್ ಮಾಲೀಕ ಸೈಯದ್ ಆಪ್ರೂಜ್ ಮೇಲೆ ಆರೋಪಿಗಳು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದು,ಅವರಿಗೆ ಹಾಗೂ ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ ವೇಳೆ ಬಿಲ್ ಕೇಳಿದ್ದಕ್ಕೆ ಕೋಪಗೊಂಡ ಆರೋಪಿಗಳು ಮರುದಿನ ಬಂದು ಜಗಳವಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ …

Read More »

ಮಸಬಿನಾಳ ಬಳಿ ಭೀಕರ ಅಪಘಾತ: ಎರಡು ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು

ಬಸವನಬಾಗೇವಾಡಿ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಬಳಿ ನಡೆದಿದೆ. ಮೃತರನ್ನು ಇಂಗಳೇಶ್ವರ ತಾಂಡಾದ ನಿವಾಸಿ ಸಂತೋಷ ಲಾಲು ಚವಾಣ್ (32) ಹಾಗೂ ದೇಗಿನಾಳ ಗ್ರಾಮದ ಭೀಮನಗೌಡ ಪಾಟೀಲ (45) ಎಂದು ಗುರುತಿಸಲಾಗಿದೆ. ಇನ್ನೂ ಅಪಘಾತದಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಬಸವನಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು …

Read More »

ಬಂಟ್ವಾಳದಲ್ಲಿ ಮಾದಕ ವಸ್ತು ಸೇವಿಸಿ ಅಸಭ್ಯ ವರ್ತನೆ- ಒಬ್ಬ ವಶಕ್ಕೆ

ಬಂಟ್ವಾಳ: ನರಿಕೊಂಬು ಗ್ರಾಮದ ನೆಹರೂ ನಗರ ಎಂಬಲ್ಲಿ ಮಾದಕ ವಸ್ತುವನ್ನು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ತಂಡದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿ ಬಂಟ್ವಾಳ ಸಜಿಪ ಮೂಡ ನಿವಾಸಿ ಶಾಕೀರ್ (28 ) ಎಂದು ಗುರುತಿಸಲಾಗಿದೆ.ಮಾರ್ಚ್‌ 30 ರಂದು ಸಂಜೆ, ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಕಾ&ಸು ಸಂದೀಪ್ ಕುಮಾರ್ ಶೆಟ್ಟಿರವರಿಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರೂ ನಗರ ಎಂಬಲ್ಲಿ ಕೆಲವು ವ್ಯಕ್ತಿಗಳು …

Read More »

ಬೆಂಗಳೂರಲ್ಲಿ ಪೊಲೀಸರು ಇದ್ದಾರಾ.. ಇಲ್ವಾ?: ಹೈವೇಯಲ್ಲೇ ಕಾರಿನ ರೂಫ್ ಟಾಪ್ ಓಪನ್ ಮಾಡಿ ಬಾಟಲಿ ಎತ್ತಿದ ವ್ಯಕ್ತಿ

ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ ಓಪನ್ ಮಾಡಿ ಯುವಕನೊಬ್ಬ ಮದ್ಯ ಸೇವಿಸಿರುವ ಘಟನೆ ಬೆಂಗಳೂರು-ನೆಲಮಂಗಲ ಮಾರ್ಗದಲ್ಲಿ ನಡೆದಿದೆ. ಈ ಪುಂಡಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. KA 01 MM 7215 ನೋಂದಣಿ ಸಂಖ್ಯೆಯ XUV 500 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ, ಚಲಿಸುತ್ತಿದ್ದ ವಾಹನದ ರೂಫ್ ಟಾಪ್‌ನಿಂದ ಹೊರಬಂದು ಮದ್ಯ ಸೇವಿಸಿದ್ದಾನೆ. ನೀರಿನ ಬಾಟಲಿಯಲ್ಲಿ ಮದ್ಯ …

Read More »

ಹೊಲದಲ್ಲಿ ಗಾಂಜಾ ಬೆಳೆದ ವ್ಯಕ್ತಿಯ ಬಂಧನ

ಬೆಳಗಾವಿ: ಸಮೀಪದ ಮುಗಳಿಹಾಳ ಗ್ರಾಮದ ಹೊಲದಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಗಳಿಹಾಳ ಗ್ರಾಮದ ಸಾಬಣ್ಣಾ ಬಸಪ್ಪ ದಳವಾಯಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 19 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಲದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಐ.ಎಂ. ಮಠಪತಿ, ಪಿಎಸ್‌ಐ ಎಲ್.ಬಿ. ಮಾಳಿ, ಎಎಸ್‌ಐ ಬಿ.ಕೆ. ರಂಗಣ್ಣವರ ಹಾಗೂ ಸಿಬ್ಬಂದಿಗಳಾದ ವಿಠ್ಠಲ ಭಾಂಗಿ, ಎಂ.ಬಿ. …

Read More »

ನಕಲಿ ಆಧಾರ್ ಕಾರ್ಡ್ ತಯಾರು! ಇಬ್ಬರ ವಿರುದ್ಧ ಪ್ರಕರಣ ದಾಖಲು

ರಾಮನಗರ: ಐಜೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ನ್ಯಾಯಾಲಯದಲ್ಲಿ ಜಾಮೀನು ಪಡೆದ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಮೇಲುಕೋಟೆ ಹೋಬಳಿ ಹೊಸಕೋಟೆ ಗ್ರಾಮದ ಬೆಟ್ಟೇಗೌಡ ಬಿನ್ ನರಸಿಂಹೇಗೌಡ ಮತ್ತು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕಸಬಾ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ಜಿ.ಬಿ.ಮಂಜುನಾಥ ಬಿನ್ ಭದ್ರಯ್ಯ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಮಾ.13ರಂದು ರಾಮನಗರದ ಹಿರಿಯ ಶಿರಸ್ತೇದಾರರು, ಪ್ರಧಾನ …

Read More »

ಕನ್ನೊಳ್ಳಿ ಅಪಘಾತ ಪ್ರಕರಣಕ್ಕೆ ತಿರುವು: ಯುವಕ ಆತ್ಮಹತ್ಯೆ ಶಂಕೆ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಸಮೀಪ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರೊಬ್ಬರು ಸಜೀವ ದಹನಗೊಂಡ ಪ್ರಕರಣಕ್ಕೆ ಬೇರೆ ತಿರುವು ದೊರಕಿದ್ದು, ಆತ್ಯಹತ್ಮೆಯ ಶಂಕೆ ವ್ಯಕವಾಗಿದೆ. ಮೃತರನ್ನು ದೇವರ ಹಿಪ್ಪರಗಿ ಪಟ್ಟಣದ ಮುಳಸಾವಳಗಿ ಗ್ರಾಮದ ನಿವಾಸಿ ಅಭಿಷೇಕ್ ಸಾಯಬಾಗೌಡ ನಾಗರಾಳ (19) ಎಂದು ಗುರುತಿಸಲಾಗಿದೆ. ಅಭಿಷೇಕ್ ಸಾಯಬಾಗೌಡ ನಾಗರಾಳ ಈ ಘಟನೆಗೂ ಮುನ್ನ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂ ಹರಿಬಿಟ್ಟಿದ್ದಾರೆ. ಮೂವರ ಹೆಸರು ಉಲ್ಲೇಖಿಸಿ ನನ್ನ …

Read More »

ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಾಚ್‍ಗಳ ಮಾರಾಟ: ಐವರ ಬಂಧನ

ಬೆಂಗಳೂರು: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಾಚ್‍ಗಳನ್ನು ಮಾರಾಟ ಮಾಡುತ್ತಿದ್ದ 5 ಅಂಗಡಿಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ 25 ಲಕ್ಷ ಮೌಲ್ಯದ 670 ವಾಚ್ ಹಾಗೂ 414 ಬಿಡಿ ಭಾಗಗಳನ್ನು ಜಪ್ತಿ ಮಾಡಿದ್ದಾರೆ. ನಗರದ ಚಿಕ್ಕಪೇಟೆ, ಸುಲ್ತಾನ್‍ಪಾಳ್ಯ ಮುಖ್ಯರಸ್ತೆ, ಗಂಗಾನಗರ, ದಿಣ್ಣೂರು ಮುಖ್ಯರಸ್ತೆಯಲ್ಲಿರುವ ವಾಚ್ ಅಂಗಡಿಗಳಲ್ಲಿ ಪ್ರತಿಷ್ಠಿತ ಕಂಪೆನಿಗಳ ಹೆಸರಿನ ವಾಚ್‍ಗಳು ಹಾಗೂ ಬಿಡಿ ಭಾಗಗಳನ್ನು ನಕಲಿ ಮಾಡಿ ಅಸಲಿ …

Read More »