Breaking News

Breaking News

ಷೇರು ಮರುಕಟ್ಟೆಯಲ್ಲಿ ಲಾಸ್ – ರೈಲಿಗೆ ತಲೆ ಕೊಟ್ಟ ವ್ಯಕ್ತಿ.!

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಸ್ ಆಗಿದ್ದಕ್ಕೆ ಮನನೊಂದು ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಹೆಬ್ಬಾಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ವೆಂಕಟೇಶ್ (50) ಎಂದು ಗುರುತಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಲಾಸ್ ಆಗಿದ್ದಲ್ಲದೇ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮೃತ ವೆಂಕಟೇಶ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಅಲ್ಲದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಸ್ ಕೂಡ ಆಗಿತ್ತು. ಜೊತೆಗೆ ಇತ್ತ ಸಾಲಗಾರರ ಕಾಟವು …

Read More »

ನಂಜನಗೂಡು: ಸರಣಿ ಕಳ್ಳತನ ಮಾಡಿದ್ದ ಆರೋಪಿ ಬಂಧನ

ನಗರದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿ ಚಾಮರಾಜನಗರ ತಾಲ್ಲೂಕಿನ ಗಾಳಿಪುರ ಗ್ರಾಮದ ಸಯ್ಯದ್ ರಿಯಾಜ್ ಎಂಬುವನನ್ನು ನಗರ ಠಾಣೆಯ ಪೊಲೀಸರು ಬಂಧಿಸಿ, ಕಳವು ಮಾಡಿದ್ದ ಚಿನ್ನ ಹಾಗೂ ನಗದನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಸಯ್ಯದ್ ರಿಯಾಜ್, ನಗರದ ಶ್ರೀಕಂಠಪುರಿ ಬಡಾವಣೆಯಲ್ಲಿ 5 ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸಿದ್ದ. ಮಾರ್ಚ್ 1 ರಂದು ನಗರದ ಬಸ್ ನಿಲ್ದಾಣದ ಪಕ್ಕದ ಹಾಸನ ಅಯ್ಯಂಗಾರ್ ಬೇಕರಿಯ ಬೀಗ …

Read More »

ಬಾಗಲಕೋಟೆ : ಅಪ್ರಾಪ್ತನಿಂದ ಯುವಕನ ಕೊಲೆ;‌ ಆರೋಪಿ ಪೊಲೀಸ್‌ ವಶಕ್ಕೆ

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದ ಗಲಾಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಯುವಕನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ರಾಹುಲ್ ಸಪ್ತಸಾಗರ (19) ಕೊಲೆಯಾದ‌ ಯುವಕ ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಯುವತಿಯ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಉಂಟಾಗಿತ್ತು ಎನ್ನಲಾಗಿದೆ. ಘಟನೆಯ ಮುನ್ನಾ ದಿನ ಅಪ್ರಾಪ್ತ ಬಾಲಕ ತನ್ನ ಸ್ನೇಹಿತರೊಂದಿಗೆ ಬಂದು ಗಲಾಟೆ ಮಾಡಿದ್ದಾನೆ. ಬಳಿಕ ಬೈಕ್ ನ ಕೀ ಚೈನ್‌ನಲ್ಲಿ ಇದ್ದ ಹರಿತವಾದ ಆಯುಧದಿಂದ …

Read More »

ಬಾಗೇಪಲ್ಲಿ | ಕಾರಿನಲ್ಲಿ ಅಗ್ನಿ ಅವಘಡ: ವ್ಯಕ್ತಿ ಸಾವು

ಬಾಗೇಪಲ್ಲಿ: ತಾಲ್ಲೂಕಿನ ಬಾಲರೆಡ್ಡಿಪಲ್ಲಿ ಬಳಿ ಭಾನುವಾರ ರಾತ್ರಿ ಕಾರಿನಲ್ಲಿ ಶಾರ್ಟ್ ಸರ್ಕಿಟ್‌ ಸಂಭವಿಸಿ ವ್ಯಕ್ತಿಯೊಬ್ಬರು ಸುಟ್ಟು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಉದಯ್‌ ಕುಮಾರ್‌ (65) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಅವರು, ತಮ್ಮ ತಾಯಿ ಯೋಗಕ್ಷೇಮ ವಿಚಾರಿಸಲು ಭಾನುವಾರ ಮಧ್ಯಾಹ್ನ ಗ್ರಾಮಕ್ಕೆ ಬಂದಿದ್ದರು. ರಾತ್ರಿ ಬೆಂಗಳೂರಿಗೆ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ. ಕಾರಿನಿಂದ ದಟ್ಟವಾದ ಹೊಗೆ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ …

Read More »

ಅಕ್ರಮ ಮರಳು ಸಾಗಾಟ: ಪೊಲೀಸ್ ದಾಳಿ

ಮಂಗಳೂರು: ಅಡ್ಯಾರ್-ಹರೇಕಳ ಸೇತುವೆ ಬಳಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸ್ಥಳಕ್ಕೆ ಕಂಕನಾಡಿ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಲಾರಿ ಚಾಲಕ ಹಾಗೂ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಅಂದಾಜು 3 ಲಕ್ಷ ರೂ. ಮೌಲ್ಯದ ಲಾರಿ ಹಾಗೂ ಮರಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

Read More »

ಕಾರಿನಲ್ಲಿ ಸಾಗಿಸುತ್ತಿದ್ದ 17,226 ಪ್ಯಾಕೆಟ್‌ ಪಾನ್‌ ಮಸಾಲೆ ಸಹಿತ ಬಂಧನ

ಕಂಬಳೆ: ಕಾರಿನಲ್ಲಿ ಸಾಗಿಸುತ್ತಿದ್ದ 17,226 ಪ್ಯಾಕೆಟ್‌ ಪಾನ್‌ ಮಸಾಲೆ ಸಹಿತ ಮುಟ್ಟತ್ತೋಡಿ ಚೆಟ್ಟುಂಗುಳಿ ಸಿ.ಎ. ಅಪಾರ್ಟ್ ಮೆಂಟ್‌ನಲ್ಲಿ ವಾಸಿಸುವ ನೋರ್ತ್ ತೃಕ್ಕರಿಪುರ ಮೀಲಿಯಟ್‌ ಹೌಸ್‌ನ ನಿವಾಸಿ ಮುಹಮ್ಮದ್‌ ಶಫೀರ್ (27)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಶಿರಿಯ ಸೇತುವೆ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಪಾಸಣೆ ಮಾಡಿದಾಗ ಶಫೀರ್‌ ಕಾರಿನಿಂದ ಇಳಿದು ಓಡಲು ಯತ್ನಿಸಿದಾಗ ಆತನನ್ನು ಸೆರೆಹಿಡಿಯಲಾಯಿತು.

Read More »

1.45 ಲಕ್ಷ ರೂ. ಮೌಲ್ಯದ ಆಡುಗಳ ಕಳ್ಳತನ

ಹಾವೇರಿ: ಮನೆ ಬಳಿಯ ದಡ್ಡಿಯಲ್ಲಿ ನಿಲ್ಲಿಸಿದ್ದ 1.45 ಲಕ್ಷ ರೂ. ಮೌಲ್ಯದ 10 ಆಡು ಮತ್ತು 2 ಹೋತು ಮರಿಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ಮಾಚಾಪೂರ ಗ್ರಾಮದಲ್ಲಿ ನಡೆದಿದೆ. ದುರಗಪ್ಪ ಬಸಪ್ಪ ದೊಡ್ಡಮನಿ (30) ಎಂಬುವರ ಆಡುಗಳನ್ನು ಕಳ್ಳತನ ಮಾಡಿರುವುದು. ಇವರು ತಮ್ಮ ಮನೆಯ ಪಕ್ಕದ ದಡ್ಡಿಯಲ್ಲಿ ಆಡುಗಳನ್ನು ನಿಲ್ಲಿಸಿದ್ದರು. ರಾತ್ರಿ ಸಮಯದಲ್ಲಿ ಯಾರೋ ಖದೀಮರು ಅವುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ …

Read More »

ದ್ವೇಷ; ತಂಡದಿಂದ ಹಲ್ಲೆ

ಕಾಸರಗೋಡು (ಬದಿಯಡ್ಕ): ಇನ್‌ಸ್ಟ್ರಾಗ್ರಾಂನಲ್ಲಿ ಕಮೆಂಟ್‌ ಮಾಡಿದ ದ್ವೇಷದಿಂದ ಬದಿಯಡ್ಕ ವಳಮಲೆ ನಿವಾಸಿ ಧವನೀಶ್‌(18), ಸ್ನೇಹಿತರಾದ ತನ್ಮಯ್‌ ಮತ್ತು ಶ್ರೇಯಸ್‌ ಅವರಿಗೆ ತಂಡವೊಂದು ತಡೆದು ನಿಲ್ಲಿಸಿ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.ಈ ಸಂಬಂಧ ನಾಸಿರ್‌, ಸಾಬಿತ್‌, ಸಿರಾಜ್‌, ರಿಯಾಸ್‌, ಅನ್ನಾಶಾ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಐದು ಮಂದಿಯ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಶನಿವಾರ ರಾತ್ರಿ ಬದಿಯಡ್ಕ ಪೇಟೆಯ ಹೊಟೇಲೊಂದರ ಪರಿಸರದಲ್ಲಿ ಹಲ್ಲೆ ಮಾಡಲಾಗಿದೆ. ಗೋಳಿಯಡಿಯಲ್ಲಿ ಘಟನೆ …

Read More »

ಧರ್ಮ ಜಾಗೃತಿ ಹೆಸರಲ್ಲಿ ಗ್ರಾಮಸ್ಥರ ಮತಾಂತರ ಆರೋಪ: ಎಫ್‌ಐಆರ್ ದಾಖಲು

ಕಲಬುರಗಿ ಹೊರವಲಯದ ಶರಣ ಶಿರಸಗಿ ಗ್ರಾಮದ ಜನರನ್ನು ಧರ್ಮ ಜಾಗೃತಿ ಹೆಸರಲ್ಲಿ ಮತಾಂತರ ಮಾಡಲಾಗುತ್ತಿದೆ ಎನ್ನುವ ಆರೋಪದ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಎವರ್ ಲಾಸ್ಟಿಂಗ್ ಲೈಫ್ ಫಾದರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾರ್ಚ್ 8ರಂದು ಹತ್ತರಿಂದ ಇಪ್ಪತ್ತು ಜನ ಶರಣ ಸಿರಸಗಿ ಗ್ರಾಮಕ್ಕೆ ಬಂದಿದ್ದು, ಧರ್ಮ ಜಾಗೃತಿ ಹೆಸರಲ್ಲಿ …

Read More »

ಶಾದಿಮಹಲ್ ಗಳಲ್ಲಿ ಆಭರಣ ಕದಿಯುತ್ತಿದ್ದ ಕಳ್ಳಿ ಸೆರೆ

ಶಿವಮೊಗ್ಗ: ನಗರದ ವಿವಿಧ ಶಾದಿಮಹಲ್ ಗಳಲ್ಲಿ ಮದುವೆಯ ಸಮಯದಲ್ಲಿ ಆಭರಣ, ನಗದನ್ನು ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಸೂಳೆಬೈಲ್ ವಾಸಿ ರುಕ್ಸಾರ್ ಫಿರ್ದೋಸ್ (30) ಬಂಧಿತೆ. ತುಂಗಾನಗರ ಪೊಲೀಸ್ ಠಾಣೆಯ 4 ಪ್ರಕರಣಗಳಲ್ಲಿ 18 ಲಕ್ಷ ರೂ.ಅಂದಾಜು ಮೌಲ್ಯದ 120 ಗ್ರಾಂ ಬಂಗಾರದ ಆಭರಣಗಳನ್ನು ಈಕೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಬಾಬು ಅಂಜನಪ್ಪ, ತುಂಗಾನಗರ ಇನ್ಸ್‌ಪೆಕ್ಟರ್ ಕೆ.ಟಿ ಗುರುರಾಜ್, ಎಸ್ ಐ ಗಾದಿಲಿಂಗಪ್ಪ ಗೌಡರ್ ನೇತೃತ್ವದ ತಂಡ …

Read More »