Shaikh BigTv
March 6, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರಂಗ ಪಂಚಮಿ ಅಂಗವಾಗಿ ಸ್ನೇಹಿತರಿಗಾಗಿ ವಿಶೇಷ ಡ್ಯಾನ್ಸ್ ಕಾರ್ಯಕ್ರಮ ಹುಬ್ಬಳ್ಳಿ: ರಂಗ ಪಂಚಮಿ ಹಬ್ಬದ ಅಂಗವಾಗಿ ಮಾರ್ಚ್ 6 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯ ವೀರಾಪೂರ ಓಣಿಯ ಬಸವಮಠ ಹಿಂಭಾಗದಲ್ಲಿರುವ ಬಿಜವಾಡ ಕಾಸಪ್ಪ ನಿಲಯದ ಸಮೀಪ ಸಂಗೀತ, ಡಿಜೆ ಡ್ಯಾನ್ಸ್ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮವನ್ನು ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರು ಹಾಗೂ VAB ಚಾರಿಟೇಬಲ್ ಫೌಂಡೇಷನ್ ರಾಜ್ಯಾಧ್ಯಕ್ಷರಾದ ಶ್ರೀ ಅನೂಪಕುಮಾರ ಎಸ್. …
Read More »
BigTv News
March 6, 2026
Breaking News
ಕೋಲಾರ: ಕಸ ಹಾಕುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ತಂದೆ ಕೊಲೆ ಮಾಡಲಾಗಿದ್ದು, ಮಗನಿಗೆ ಗಂಭೀರ ಗಾಯವಾಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. 60 ವರ್ಷದ ಶಾಜು ಖಾನ್ ಮೃತಪಟ್ಟವರು ಎಂದು ಹೇಳಲಾಗಿದೆ. ಮಚ್ಚಿನಿಂದ ಹೊಡೆದು ಕೊಲೆ ಮಾಡಿ ವಾಸೀಂ ಮತ್ತು ಶಬ್ಬೀರ್ ಪರಾರಿಯಾಗಿದ್ದಾರೆ. ಶಾಜು ಖಾನ್ ಪುತ್ರ ಶಹಾಬುದ್ದೀನ್ ಗೆ ಗಂಭೀರ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೌನಿಪಲ್ಲಿ ಪೊಲೀಸ್ …
Read More »
BigTv News
March 6, 2026
Breaking News
ಬಳ್ಳಾರಿ : ವ್ಯಕ್ತಿಯೊಬ್ಬರ ದಾಖಲೆಗಳು ಬಳಸಿ, ಬ್ಯಾಂಕ್ ಖಾತೆ ತೆರೆದು 64.62 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಪಾರ್ವತಿನಗರದ ನಿವಾಸಿ ಡಿ. ಸಿದ್ದೇಶ್ ಅವರನ್ನು 2025ರ ಜನವರಿಯಲ್ಲಿ ಭೇಟಿಯಾಗಿದ್ದ ಇಕ್ಬಾಲ್, ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದ.ಇವರ ಹೆಸರಿನಲ್ಲಿ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಬಳಾರಿ ಕಂಪ್ಯೂಟರ್ ಸಿಸ್ಟಮ್ಸ್ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆಸಿದ್ದ. ಖಾತೆ ತೆರೆಯುವ ನೆಪದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಿಎಸ್‌ಟಿ ಪ್ರತಿ ಹಾಗೂ …
Read More »
BigTv News
March 6, 2026
Breaking News
ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಚಾಮುಂಡಿಪುರದಲ್ಲಿ ಜಮೀನಿಗೆ ಬೆಂಕಿ ತಗುಲಿ ಮರಗಿಡಗಳು ಸುಟ್ಟು ನಾಶವಾಗಿವೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ದೂರಿ ಜಮೀನಿನ ಮಾಲೀಕ ನಾಗರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ನಾಗರಾಜು ಅವರು ಶನಿವಾರ ನಗರದ ನ್ಯಾಯಾಲಯಕ್ಕೆ ಹೋಗಿ ಸಂಜೆ ವಾಪಸ್ ಬರುವಾಗ ಜಮೀನಿಗೆ ಬೆಂಕಿ ಬಿದ್ದು ಮರಗಿಡ, ತೋಟದ ಮನೆ ಬೆಂಕಿಗೆ ಆಹುತಿಯಾಗಿದೆ. ಜಮೀನಿನಲ್ಲಿ ಕಟ್ಟಿದ್ದ ಜೋಡಿ ಹಸುಗಳಲ್ಲಿ ಒಂದು ಹಸು ಕಾಣೆಯಾಗಿದ್ದು, ಮತ್ತೊಂದು ಹಸುವಿಗೆ …
Read More »
BigTv News
March 6, 2026
Breaking News
ಬಳ್ಳಾರಿ : ವೇಗವಾಗಿ ಚಲಿಸಿದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಲ್ಲಿನ ಅಲ್ಲಂ ಸುಮಂಗಳಮ್ಮ ಕಾಲೇಜು ಬಳಿ ನಡೆದಿದೆ. ಆಂಧ್ರದ ಕರ್ನೂಲ್‌ನಿಂದ ಆಗಮಿಸಿದ್ದ ಕಾರು, ದುರ್ಗಮ್ಮ ಗುಡಿ ವೃತ್ತದಿಂದ ಸಂಚರಿಸುವ ವೇಳೆ ಅಲ್ಲಂ ಸುಮಂಗಳಮ್ಮ ಕಾಲೇಜು ಬಳಿ ರಸ್ತೆಯ ಹಂಪ್ಸ್ ಗಮನಿಸದ ಪರಿಣಾಮ ಕಾರು ಪಲ್ಟಿಯಾಗಿ ರಸ್ತೆಬದಿಯ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಚಾಲಕ ಸೇರಿದಂತೆ ಓರ್ವ ಸವಾರ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೊಬ್ಬ ಲೋಕೇಶ್ ಎಂಬ ಸವಾರ ಸಾರ್ವಜನಿಕರ …
Read More »
BigTv News
March 6, 2026
Breaking News
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕೊಳಗಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ರುಂಡವಿಲ್ಲದ ವೃದ್ಧೆಯ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಿವಾಸಿ ಮನ್ಮನೆಯ ಕೃಷ್ಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 20 ರಂದು ಕೊಳಗಿ ಅರಣ್ಯದಲ್ಲಿ ಬೆತ್ತಲಾಗಿ ಬಿದ್ದ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು. ಮಹಿಳೆಯನ್ನು ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಗೋಕರ್ಣ ಸಿಪಿಐ ಶ್ರೀಧರ್ …
Read More »
BigTv News
March 6, 2026
Breaking News
ಹೊಸಕೋಟೆ: ಉಪವಿಭಾಗ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ಮತ್ತು ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಒಟ್ಟು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ. ಡಿವೈಎಸ್‌ಪಿ ಮಲ್ಲೇಶ್ ಅವರ ನೇತೃತ್ವದಲ್ಲಿ ಟಿಎಸ್‌ಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಸುಂದರ್ ಹಾಗೂ ನಂದಗುಡಿ ಠಾಣೆ ಇನ್‌ಸ್ಪೆಕ್ಟರ್ ಶಾಂತರಾಮ ಅವರ ನೇತೃತ್ವದ ತಂಡಗಳು ಕಾರ್ಯಾಚರಣೆ ನಡೆಸಿ ಬಂಧಿತರಿಂದ ಒಟ್ಟು 5.5 ಕೆ.ಜಿ ಗಾಂಜಾ, ಎಂಡಿಎಮ್‌ಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು …
Read More »
BigTv News
March 6, 2026
Breaking News
ಕಾರ್ಕಳ: ತಾಲ್ಲೂಕಿನ ಕುಕ್ಕಂದೂರು ಗ್ರಾಮದಲ್ಲಿ ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗೆ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದವವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾರ್ಜೆಡ್ಡು ಶ್ರೀದೇವಿ ಕೃಪಾ ಹಾಲ್‌ನ ಎದುರುಗಡೆ ರಸ್ತೆ ಬದಿ ನಿಂತ ಗೂಡ್ಸ್ ವಾಹನವೊಂದರ ಹಿಂದುಗಡೆಯಿಂದ ನೀರು ಇಳಿಯುತ್ತಿತತ್ತು. ಇದನ್ನು ನೋಡಿ ಅನುಮಾನಗೊಂಡ ನಗರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಲೋಕೇಶ್ ಅವರು ವಾಹನವನ್ನು ಪರಿಶೀಲಿಸಿದಾಗ ಅದರೊಳಗೆ 2 ದನಗಳನ್ನು ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಕಟ್ಟಲಾಗಿತ್ತು.
Read More »
BigTv News
March 6, 2026
Breaking News
ಉಡುಪಿ: ಕಳೆದ 15 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ, ಸುಮಾರು 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಬೇಕಾಗಿದ್ದ ಎಲ್ ಪಿಸಿ ಹಾಗೂ ವಾರೆಂಟ್ ಆರೋಪಿಯನ್ನು ಉಡುಪಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕುಂದಾಪುರ ತಾಲೂಕಿನ ಕುಂಭಾಶಿ ನಿವಾಸಿ ವಿಘ್ನೇಶ್ವರ ಐತಾಳ್ (56) ಎಂದು ಗುರುತಿಸಲಾಗಿದೆ. ವಿಘ್ನೇಶ್ವರ ಐತಾಳ್ ವಿರುದ್ಧ 2011ರಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಸೇರಿ 10 ವಿವಿಧ ಪ್ರಕರಣಗಳು …
Read More »
BigTv News
March 6, 2026
Breaking News
ಮಡಂತ್ಯಾರು: ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾ. 4ರಂದು ಬೆಳಾಲು ಗ್ರಾಮದ ಕೀನ್ಯಾಜೆ ಎಂಬಲ್ಲಿಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜೂಜಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿದ್ದ ಕೆಲವರನ್ನು ವಿಚಾರಣೆ ಮಾಡಲಾಗಿದ್ದು, ಉಳಿದವರು ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ 5 ಕೋಳಿಗಳನ್ನು ಮತ್ತು ಕೋಳಿಗಳ ಕಾಲಿಗೆ ಕಟ್ಟುವ ೨ ಬಾಲುಗಳು …
Read More »