Breaking News

Breaking News

ಎಥಿನಾಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಬೆಂಕಿ; ಚಾಲಕ ಪಾರು

ರಾಣೆಬೆನ್ನೂರ: ಎಥಿನಾಲ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿದ ಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ&48ರಲ್ಲಿ ಗುರುವಾರ ನಡೆದಿದೆ. ಲಾರಿಯು ಹುಬ್ಬಳ್ಳಿಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸರ್ವೀಸ್ ರಸ್ತೆ ದಾಟಿ ಜಮೀನುವೊಂದರ ಬಳಿ ಬಿದ್ದು ನಿಂತಿದೆ. ಇದರಿಂದ ಬೆಂಕಿ ಹತ್ತಿಕೊಂಡಿದ್ದು ಕೆಲ ಹೊತ್ತಿನಲ್ಲಿ ಧಗಧಗನೆ ಉರಿಯಲು ಶುರುವಾಗಿದೆ. ಚಾಲಕ ಕೂಡಲೇ ಪಾರಾಗಿದ್ದು, ಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ …

Read More »

ಬಸ್ ಡಿಕ್ಕಿ ಕಾರು ಚಾಲಕ ಸಾವು

ಯಲ್ಲಾಪುರ: ಕಾರೊಂದು ಬಸ್ ಗೆ ಡಿಕ್ಕಿ ಹೊಡೆದು ಕಾರ್ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಮಳಲಗಾಂವ ಕ್ರಾಸ್ ಬಳಿ ನಡೆದಿದೆ. ಕುಂದಾಪುರದ ಮುಖೇಶ ಶೆಟ್ಟಿ (40) ಮೃತ ವ್ಯಕ್ತಿ. ಸಿದ್ದಾಪುರ ಕಡೆಯಿಂದ ಬೆಳಗಾವಿಗೆ ಮದುವೆಗೆಂದು ಹೊರಟಿದ್ದ ಬಸ್ ಗೆ ಕಲಘಟಗಿಯಿಂದ ಶಿರಸಿ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.ಕಾರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಹಾಗೂ ಕಾರಿನಲ್ಲಿ ಇದ್ದ ಪ್ರಯಾಣಿಕರಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದ್ದು, ಬಸ್ ನ …

Read More »

ಮಂಗಳೂರು| ಲೈಂಗಿಕ ಕಿರುಕುಳ ಆರೋಪ: ನೈರ್ಮಲ್ಯ ನಿರೀಕ್ಷಕನ ವಿರುದ್ಧ ಪ್ರಕರಣ ದಾಖಲು

ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕೆಗೆ ನೈರ್ಮಲ್ಯ ನಿರೀಕ್ಷಕ ಲೈಂಗಿಕ ಕಿರುಕುಳ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ಕಂಕನಾಡಿಯ ವಾರ್ಡ್‌ನಲ್ಲಿ ಖಾಯಂ ಪೌರ ಕಾರ್ಮಿಕೆಯಾಗಿದ್ದು, 10 ದಿನ ರಜೆ ಬೇಕು ಎಂದು ಮನಪಾ ನೈರ್ಮಲ್ಯ ನಿರೀಕ್ಷಕ ಭಾಸ್ಕರ ಎಂಬಾತನ ಬಳಿ ಕೇಳಿದಾಗ 2025ರ ಜೂ.22ರಂದು ಬೆಳಗ್ಗೆ 10ಕ್ಕೆ ಕಚೇರಿಗೆ ಬರಲು ತಿಳಿಸಿದ್ದು, ಅದರಂತೆ ಆ ದಿನ ತಾನು ಕಚೇರಿಗೆ ಹೋದಾಗ ನನ್ನ ಕೈಗೆ 1 …

Read More »

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಸಿರುಗುಪ್ಪ: ನಗರದ ಹೊರವಲಯದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರದ ಪೊಲೀಸರು ಬಂಧಿಸಿದ ಘಟನೆ ಮಾ.4ರ ಬುಧವಾರ ನಡೆದಿದೆ. ನಗರದ 3ನೇ ವಾರ್ಡ್ ನಿವಾಸಿ ಇರ್ಫಾನ್ ಬಂಧಿತ ಆರೋಪಿ. ನಗರದ ಆದೋನಿ ರಸ್ತೆಯ ತಾಯಮ್ಮ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇರ್ಫಾನ್ ನನ್ನು ಬಂಧಿಸಿ, 5 ಸಾವಿರ ಮೌಲ್ಯದ 50 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Read More »

ಗೋಕರ್ಣದಲ್ಲಿ ಹೋಂಸ್ಟೇ ನಿಯಮ ಉಲ್ಲಂಘನೆ: ವಿದೇಶಿ ಪ್ರವಾಸಿಗರ ಮಾಹಿತಿ ನೀಡದ ಮಾಲೀಕರ ವಿರುದ್ಧ ಪ್ರಕರಣ

ಕಾರವಾರ: ಜಿಲ್ಲೆಯ ಪ್ರವಾಸಿ ತಾಣವಾದ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ತಂಗಿರುವ ಮಾಹಿತಿ ಪೊಲೀಸ್ ಇಲಾಖೆಗೆ ನೀಡದೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಭೀಮಕೊಂಡ ಪ್ರದೇಶದಲ್ಲಿರುವ ವೈಲ್ಡ್ ವಿಲೇಜ್ ಹೋಮ್ ಸ್ಟೇ ಮಾಲೀಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಹೋಂಸ್ಟೇನಲ್ಲಿ ಅರ್ಜೆಂಟೈನಾದ ಪ್ರವಾಸಿಗ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಹಾಗೂ ಅವರ ತಾಯಿ ಕಳೆದ …

Read More »

ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದಿಂದ ಕಳವು

ಬಜಪೆ: ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಹಿಂಬದಿಯ ಮರದ ಬಾಗಿಲನ್ನು ಕಲ್ಲಿನಿಂದ ಮುರಿದು ಮುರಿದು ದೊಡ್ಡ ಕಾಣಿಕೆ ಡಬ್ಬಿಯಲ್ಲಿದ್ದ ಹಣ ಹಾಗೂ ಇತರ ಎರಡು ಡಬ್ಬಿಗಳನ್ನು ಕಳವು ಮಾಡಿದ ಘಟನೆ ಮಾ.3ರಂದು ರಾತ್ರಿ ಸುಮಾರು 1.55ಕ್ಕೆ ನಡೆದಿದೆ. ದೊಡ್ಡ ಕಾಣಿಕೆ ಡಬ್ಬಿಯನ್ನು ಹೊರ ತಂದು ಅದನ್ನು ಒಡೆದು ಅದರಲ್ಲಿದ್ದ ಹಣ ಹಾಗೂ ಇತರ ಎರಡು ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿರುವುದು ಅಲ್ಲಿದ್ದ ಸಿಸಿಕೆಮರಾದಲ್ಲಿ ಸೆರೆಯಾಗಿದೆ. ಸುಮಾರು 50 ಸಾವಿರ ರೂ. …

Read More »

20 ಲಕ್ಷಕ್ಕೆ 1 ಕೆಜಿ ಚಿನ್ನ ಕೊಡ್ತೀವಿ ಎಂದವರನ್ನ ನಂಬಿ ಬಂದ ಆಂಧ್ರ ವ್ಯಕ್ತಿಗೆ ಕಾದಿತ್ತು ಶಾಕ್: ಆಗಿದ್ದೇನು?

ದೇವನಹಳ್ಳಿ:- ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಬಳಿ ಭೀಕರ ಘಟನೆ ನಡೆದಿದ್ದು, 20 ಲಕ್ಷ ರೂ. ಬೆಲೆ ಮೌಲ್ಯದ 1 ಕೆಜಿ ಚಿನ್ನವನ್ನು ಹಂಚಿಕೆಯಾಗಲಿದೆ ಎಂಬ ರೂಪಕಾಣಿಕೆಯೊಂದಿಗೆ ವ್ಯಕ್ತಿಗೆ ಪಂಗನಾಮ ಕೊಟ್ಟ ಗ್ಯಾಂಗ್ ಹಲ್ಲೆಗೆ ಮುಂದಾಗಿದೆ. ಆಂಧ್ರ ಪ್ರದೇಶದಿಂದ ಚಿನ್ನ ಖರೀದಿಸಲು ವಿಮಾನದಲ್ಲಿ ಬಂದ ವಿಶ್ವಪ್ರಸಾದ್ ರೆಡ್ಡಿ ಈ ಘಟನೆಗೆ ಗುರಿಯಾದರು. ಖಾಸಗಿ ಬಡಾವಣೆಯ ಕಾರಿನಲ್ಲಿ ಹಣವನ್ನು ಪರಿಶೀಲಿಸುತ್ತಿದ್ದಾಗ 6 ಮಂದಿ ದುಷ್ಕೃತಿಗಳು ದಾಳಿ ನಡೆಸಿದರು. ಸ್ವಲ್ಪ ಸಮಯಕ್ಕೂ …

Read More »

ಹಾಸನ | ವೇಶ್ಯಾವಾಟಿಕೆ ಆರೋಪ: ಲಾಡ್ಜ್ ನಿಂದ ಮೂವರು ವಿದೇಶಿ ಮಹಿಳೆಯರ ರಕ್ಷಣೆ

ಹಾಸನ: ವಿದೇಶಿ ಮಹಿಳೆಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಆರೋಪದಲ್ಲಿ ನಗರದ ಹೊರವಲಯದಲ್ಲಿರುವ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಿಸಿದ್ದು, ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಬೂವನಹಳ್ಳಿ ಸಮೀಪ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ‘ಕರಾವಳಿ ಕಂಫರ್ಟ್’ಲಾಡ್ಜ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಬಡಾವಣೆ ಪೊಲೀಸ್ ಠಾಣೆಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಡಾವಣೆ ಠಾಣೆ ಪೊಲೀಸರು ಹಾಗೂ ‘ಒಡನಾಡಿ’ಸಂಸ್ಥೆಯ …

Read More »

ಪ್ರಾಣಿ ಸತ್ತಂತೆ ವಾಸನೆ ಬರ್ತಿದೆ ಎಂದು ಹುಡುಕಿದಾಗ ಪೀಸ್ ಪೀಸ್ ಆಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮನೆ ಮಗನ ಶವ

ಬಳ್ಳಾರಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಬೀರಬ್ಬಿಯಲ್ಲಿ ಯುವಕನ ಭೀಕರ ಕೊಲೆ ನಡೆದಿದೆ. ಕೊಲೆ ಮಾಡಿದ ಆರೋಪಿಗಳು ಯುವಕನ ದೇಹ ಭಾಗವನ್ನು ಹಲವು ಭಾಗಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ದೂರ ಎಸೆದು ಪರಾರಿಯಾಗಿದ್ದಾರೆ. 25 ವರ್ಷದ ಬೀರೇಶ್ ಕೊಲೆಯಾದ ಯುವಕ. ಬೀರೇಶ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ. ಕಾಣೆಯಾಗಿದ್ದ ಬೀರೇಶ್‌ಗಾಗಿ ಆತನ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಸಂಜೆ ಆತನ ಶವ ಮನೆಯ ಹಿಂಭಾಗದಲ್ಲಿ ಪ್ಲಾಸ್ಟಿಕ್ …

Read More »

ಗೋಲ್ಡ್ ಮಾರ್ಕೆಟ್‌ನಲ್ಲಿ ಹೂಡಿಕೆ ಆಮಿಷ 10.55 ಲಕ್ಷ ರೂ. ವಂಚನೆ

ಬೆಂಗಳೂರು: ಗೋಲ್ಡ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಗಳಿಸಬಹುದೆಂದು ನಂಬಿ ಸಿ 10,55,000ರೂ. ವರ್ಗಾವಣೆ ಮಾಡಿ ವಂಚಿಸಿದ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಗೆ ಸಾಮಾಜಿಕ ಜಾಲತಾಣ ಮೂಲಕ ಅಪರಿಚಿತ ವ್ಯಕ್ತಿ ಸುಹಾನಿ ಪಟೇಲ್ ಎಂದು ಪರಿಚಯ ಮಾಡಿಕೊಂಡು ಹಂತ ಹಂತವಾಗಿ 10,55,000ರೂ. ಹಣ ಹೂಡಿಕೆ ಮಾಡಿಸಿದ್ದಾನೆ. ಈ ಮೊತ್ತ ಆತ ಹೇಳಿದ ಆಯಪ್‌ನಲ್ಲಿ 60ಲಕ್ಷ ರೂ. ಎಂದು ತೋರಿಸುತ್ತಿತ್ತು. ದೂರುದಾರರು ಹಣದ ಅವಶ್ಯಕತೆಯಿಂದ …

Read More »