Breaking News

Breaking News

ಕಾವೇರಿ ನರ್ಸಿಂಗ್ ಕಾಲೇಜಿನಲ್ಲಿ ಬೆಂಕಿ

ನಗರದ ಬನ್ನೂರು ರಸ್ತೆಯ ಕಾವೇರಿ ನರ್ಸಿಂಗ್ ಕಾಲೇಜಿನ ಕಟ್ಟಡದಲ್ಲಿ ಶನಿವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಾಲ್ಕು ಅಂತಸ್ತಿನ ಕಾಲೇಜಿನ ಕಟ್ಟಡದ ಬಾಲ್ಕನಿಯಲ್ಲಿ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ತಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಕಾಲೇಜಿನ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಕಾಲೇಜಿನ ವಿದ್ಯಾರ್ಥಿಗಳನ್ನು …

Read More »

ಆನೇಕಲ್‌ನಲ್ಲಿ ಪೈಶಾಚಿಕ ಕೃತ್ಯ: ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕೇಸ್ ದಾಖಲು

ಬೆಂಗಳೂರು ಹೊರವಲಯದ ಆನೇಕಲ್ನ ಲ್ಲಿ ಶಾಲಾ ಮಕ್ಕಳ ಮೇಲೆ ನಡೆದ ಪೈಶಾಚಿಕ ಲೈಂಗಿಕ ದೌರ್ಜನ್ಯ ಪ್ರಕರಣ ಆತಂಕ ಮೂಡಿಸಿದೆ. ಆರೋಪಿಯು ಕೃಷ್ಣಮೂರ್ತಿ @ ಕಿಟ್ಟಿ ಎಂಬಾತನಾಗಿದ್ದು, ಶಾಲಾ ಆವರಣ ಹಾಗೂ ಶೌಚಾಲಯದಲ್ಲಿ ಒಟ್ಟು 9 ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಚಾಕಲೇಟ್ ನೀಡುವುದಾಗಿ ಆಮಿಷವೊಡ್ಡಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದನು ಎನ್ನಲಾಗಿದೆ. ಈ ದುಷ್ಕೃತ್ಯಗಳ ಬಗ್ಗೆ ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. …

Read More »

ಟೆಕಿ ಶರ್ಮಿಳಾ ಕೊಲೆ ಕೇಸಿನ ಮತ್ತಷ್ಟು ರಹಸ್ಯ ಬಹಿರಂಗ: ಶವದ ಮೇಲೂ ಅತ್ಯಾಚಾರಕ್ಕೆ ಯತ್ನ

ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜ.16ರಂದು ನಡೆದಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಶರ್ಮಿಳಾ ಕೊಲೆ ಪ್ರಕರಣದ ಹಿಂದಿನ ಇನ್ನಷ್ಟು ರಹಸ್ಯಗಳು ಹೊರ ಬಿದ್ದಿದ್ದು, ಶವದ ಮೇಲೆಯೂ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಕೇರಳ ದ ಆರೋಪಿ ಕರ್ನಲ್‌ ಕುರೈ ಪೊಲೀಸರ ವಿಚಾರಣೆ ವೇಳೆ ಇನ್ನಷ್ಟು ಸಂಗತಿಯನ್ನು ಬಿಚ್ಚಿಟ್ಟಿ ದ್ದಾನೆ. ಶರ್ಮಿಳಾ ಫ್ಲಾಟ್‌ ಗೆ ನುಗ್ಗಿದ್ದ ಆರೋಪಿ, ಆಕೆಯನ್ನು ತಬ್ಬಿ ಹಿಡಿದಾಗ ಆಕೆ ಬೇಡಿಕೊಂಡರೂ ಬಿಟ್ಟಿರಲಿಲ್ಲ. ಸೋಪಾಗೆ ಶರ್ಮಿಳಾ …

Read More »

ವಿರಾಜಪೇಟೆ | 1.60 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ

ಮಡಿಕೇರಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದು, ಅವರಿಂದ 1 ಕೆಜಿ 60 ಗ್ರಾಂ ಗಾಂಜಾ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ವಿರಾಜಪೇಟೆಯ ಸುಣ್ಣದ ಬೀದಿಯ ಹಸೈನಾರ್ ರಝಾಕ್ (43) ಹಾಗೂ ಬಾಳುಗೋಡು ಬಿಟ್ಟಂಗಾಲ ಗ್ರಾಮದ ಮೋಹನ ಎ.ಜಿ.ಅಶೋಕ (42) ಬಂಧಿತ ಆರೋಪಿಗಳಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿಯಂಗಡಿ ರಸ್ತೆಯ ಪ್ರೌಢಶಾಲೆ ಮೈದಾನದ ಬಳಿಯ ಬಸ್ ತಂಗುದಾಣದಲ್ಲಿ ಇವರಿಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು …

Read More »

ಮತ್ತೊಂದು ಬೆಂಕಿ ಅವಘಡ: ಹುಬ್ಬಳ್ಳಿಯಲ್ಲಿ ಹೊತ್ತಿ ಉರುದ ಎಲೆಕ್ಟ್ರಾನಿಕ್ ಗೋಡೌನ್

ಹುಬ್ಬಳ್ಳಿ: ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಸಾಲು ಸಾಲು ಬೆಂಕಿ ಅವಘಡ ಪ್ರಕರಣಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಪರ್ಫ್ಯೂಮ್ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿ, ಇಬ್ಬರು ಕೂಲಿ ಕಾರ್ಮಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆನ್ನಲ್ಲೇ ಅತ್ತ ಹುಬ್ಬಳ್ಳಿಯಲ್ಲಿಯೂ ಬೆಂಕಿ ಅವಘಡ ಸಂಭವಿಸಿದೆ. ಹುಬ್ಬಳ್ಳಿಯಲ್ಲಿ ಎಲೆಕ್ಟ್ರಾನಿಕ್ ಗೋಡೌನ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೆಯೇ ಗೋಡೌನ್ ಹೊತ್ತಿ ಉರಿದಿದೆ. ಹುಬ್ಬಳ್ಳಿಯ ಕುಸಗಲ್ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ಗೋದಾಮಿನಲ್ಲಿ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ …

Read More »

ಇಂಜೆಕ್ಷನ್ ಚುಚ್ಚಿಕೊಂಡು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ದಾವಣಗೆರೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿ ಘಟನೆ ನಡೆದಿದೆ. ಸಿದ್ಧಾರ್ಥ ತ್ರಯಂಬಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಹೇಳಲಾಗಿದೆ. ಹಾನಿಕಾರಕ ಇಂಜೆಕ್ಷನ್ ಹಾಕಿಕೊಂಡು ವಿದ್ಯಾರ್ಥಿ ತ್ರಯಂಬಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾಡ್ ನಿವಾಸಿ ಸಿದ್ದಾರ್ಥ್ ತ್ರಯಂಬಕೆ ಡರ್ಮಾಟಾಲಜಿ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನದಿಂದ ಅವರ ರೂಂ ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಅನುಮಾನ ಬಂದಿದೆ. ಕೊಠಡಿ ಬಾಗಿಲು ಒಡೆದು …

Read More »

ವರನ ಮುಂದೆಯೇ ಗುಂಡು ಹಾರಿಸಿ ವಧು ಅಪಹರಿಸಿದ ಪ್ರೇಮಿ

ಒಡಿಶಾದ ಸುಬರ್ಣಾಪುರದಲ್ಲಿ ಮದುವೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ವರನ ಮುಂದೆಯೇ ಗುಂಡು ಹಾರಿಸಿ ಮಾಜಿ ಪ್ರೇಮಿಯೊಬ್ಬ ವಧು ಅಪಹರಿಸಿದ ಘಟನೆ ನಡೆದಿದೆ. ನವವಿವಾಹಿತ ದಂಪತಿಗಳು ತಮ್ಮ ವಿವಾಹ ಸಮಾರಂಭವನ್ನು ಮುಗಿಸಿ ಕಾಂತಮಲ್‌ನಿಂದ ಕಾಮಕ್ಯಾನಗರಕ್ಕೆ ಪ್ರಯಾಣಿಸುತ್ತಿದ್ದಾಗ ಸುಬರ್ಣಾಪುರ ಜಿಲ್ಲೆಯ ತರ್ಭಾ ಬಳಿ ಹಗಲು ಹೊತ್ತಿನಲ್ಲಿ ಈ ಘಟನೆ ಸಂಭವಿಸಿದೆ. ಮೂಲಗಳ ಪ್ರಕಾರ, ಅಪಹರಿಸಿದ ಮಹಿಳೆ ರಶ್ಮಿ ಬೋಲಂಗಿರ್ ಜಿಲ್ಲೆಯ ಬನಪಾಲಿ ಗ್ರಾಮದ ರಿಂಕು ಪಟೇಲ್ ಅವರನ್ನು ವಿವಾಹವಾದರು. ಬೋಲಂಗಿರ್‌ನಲ್ಲಿರುವ ರಿಂಕು ಅವರ …

Read More »

ನೆಲಮಂಗಲದಲ್ಲಿ ಪರ್ಫ್ಯೂಮ್ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ: 40 ಸಿಬ್ಬಂದಿ ಪಾರು

ಪರ್ಫ್ಯೂಮ್ ಗೋದಾಮಿನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನೆಲಮಂಗಲ ರಸ್ತೆಯ ಮಾಕಳಿ ಬಳಿ ಈ ದುರ್ಘಟನೆ ಸಂಭವಿಸಿದ್ದು, ಗೋದಾಮು ಧಗಧಗ ಹೊತ್ತಿ ಉರಿದಿದೆ. ಮುಗಿಲೆತ್ತರಕ್ಕೆ ಜ್ವಾಲೆಗಳು ಹಬ್ಬಿ, ಭಾರೀ ಸ್ಫೋಟದಂತ ಶಬ್ದಗಳು ಕೇಳಿಬಂದಿವೆ. ಬೆಂಕಿ ಕಾಣುತ್ತಿದ್ದಂತೆಯೇ ಗೋದಾಮಿನಲ್ಲಿದ್ದ 40 ಸಿಬ್ಬಂದಿ ತಕ್ಷಣ ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿ ಅವಘಡದ ತೀವ್ರತೆ ಹೆಚ್ಚಾಗಿ, ಪಕ್ಕದಲ್ಲಿದ್ದ ಎಸಿ ಗೋಡೌನ್‌ಗೂ ಬೆಂಕಿ ತಗುಲಿದೆ. ಅಲ್ಲಿದ್ದ ಹಲವು ವಾಹನಗಳು …

Read More »

ಪ್ರೇಮ ವಿವಾಹ: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ

ಮದ್ದೂರು (ಮಂಡ್ಯ ಜಿಲ್ಲೆ): ತಮ್ಮ ‌ಒಪ್ಪಿಗೆ ಇಲ್ಲದೆ ಮಗಳನ್ನು ಮದುವೆಯಾದ ಸಂಬಂಧಿ ಯುವಕನ ಮನೆಗೆ ಆಕೆಯ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಚುಂಚಗಹಳ್ಳಿಯಲ್ಲಿ ನಡೆದಿದೆ. ಶನಿವಾರ ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಗ್ರಾಮದ ವಿನೋದ್ ಹಾಗೂ ಕಾವ್ಯ ಪ್ರೀತಿಸುತ್ತಿದ್ದು, ಗುರುವಾರ ನಾಪತ್ತೆಯಾಗಿದ್ದರು. ಶುಕ್ರವಾರ ಮದುವೆಯಾಗಿದ್ದರು. ಹುಡುಗಿಯ ತಂದೆ, ಆರೋಪಿ ಚನ್ನೇಗೌಡ ಬೆಳಗ್ಗೆ 10.30ರಲ್ಲಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಅವರಿಗೂ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. …

Read More »

ಹುಬ್ಬಳ್ಳಿ ಸಬ್ ಜೈಲ್ ಪ್ರಕರಣದಲ್ಲಿ ಸಿಬ್ಬಂದಿ ಸಸ್ಪೆಂಡ್ ಆಗ್ತಾರಾ ಇಲ್ವಾ ಎಂಬುದು ತನಿಖೆ ಮೇಲೆ ಅವಲಂಬಿತವಾಗಿದೆ….

ಹುಬ್ಬಳ್ಳಿ ಸಬ್ ಜೈಲ್ ನಲ್ಲಿ ಗಾಂಜಾ ಸಿಕ್ಕಿರುವುದು ಭದ್ರತಾ ಲೋಪದ ಸಂಕೇತವಾಗಿದೆ. ಮಲ್ಲಿಕ್ ಕೊಲೆ ಪ್ರಕರಣದ ಆರೋಪಿಗಳು ಇರುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. ಜೈಲಿನೊಳಗೆ ಗಾಂಜಾ ಹೇಗೆ ತಲುಪಿತು ಎಂಬುದರ ಬಗ್ಗೆ ಅನುಮಾನಗಳು ಹೆಚ್ಚಿವೆ. ಭೇಟಿಗೆ ಬರುವವರ ಮೂಲಕ ಅಥವಾ ಒಳಗಿನ ಸಹಕಾರದಿಂದ ಸ್ಮಗ್ಲಿಂಗ್ ನಡೆದಿರಬಹುದು ಎಂಬ ಶಂಕೆ ಇದೆ. ಖೈದಿಗಳ ಕೈಯಲ್ಲಿ ಮೊಬೈಲ್ ಸಿಕ್ಕಿರುವುದು ಗಂಭೀರ ವಿಷಯವಾಗಿದೆ. ಮೊಬೈಲ್ ಮೂಲಕ ಹೊರಗಿನ ಸಂಪರ್ಕ ಸಾಧ್ಯವಾಗಿರುವ ಆತಂಕ …

Read More »