Breaking News

Breaking News

ಹಿಂದೂ ಯುವತಿ ಜತೆ ಮದುವೆ, ಮಗು ಆದ ಬಳಿಕ ಅನ್ಯಕೋಮಿನ ಯುವಕ ಪರಾರಿ

ಬೆಂಗಳೂರು: ಹಿಂದೂ ಯುವತಿಯನ್ನು ಮದುವೆ ಯಾಗಿ ಹೆಣ್ಣು ಮಗು ಹುಟ್ಟಿದ್ದ ಬಳಿಕ ಪರಾರಿಯಾಗಿರುವ ಅನ್ಯ ಕೋಮಿನ ಯುವಕನ ವಿರುದ್ಧ ಮಹಿಳೆಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಬಿಟಿಎಂ ಲೇಔಟ್‌ ನಿವಾಸಿ ಸೈಯದ್‌ ಇಮ್ತಿಯಾಜ್‌ ವಿರುದ್ಧ ಕೊಲ್ಕೋತ್ತಾ ಮೂಲದ ಮಹಿಳೆ ದೂರು ನೀಡಿದ್ದು, ಆರೋಪಿ ಪರಾರಿಯಾಗಿದ್ದಾನೆ.ಆತನಿ ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣದ ಮೂಲಕ ಕೊಲ್ಕೋತ್ತಾ ಮೂಲದ ಹಿಂದೂ ಯುವತಿಯನ್ನು ಪರಿಚಯಿಸಿ ಕೊಂಡ ಸೈಯದ್‌ ಇಮ್ತಿಯಾಜ್‌, ಬಳಿಕ ಆಕೆಯನ್ನು …

Read More »

ಹೊತ್ತಿ ಉರಿದ ಕಾರು

ಬಳ್ಳಾರಿ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡ ಪರಿಣಾಮ ಬೆಂಕಿಗೆ ಕಾರು ಆಹುತಿಯಾದ ಘಟನೆ ಇಲ್ಲಿನ ಗವಿಯಪ್ಪ ವೃತ್ತದ ಬಳಿ ಸೋಮವಾರ ನಡೆದಿದೆ.ಸಂಡೂರು ತಾಲೂಕಿನ ತೋರಣಗಲ್ ಎಂ.ರಾಜು ಎಂಬುವವರ ಕಾರು ಆಗಿದೆ. ತೋರಣಗಲ್‌ನಿಂದ ನಗರಕ್ಕೆ ಆಗಮಿಸುವ ವೇಳೆ ಇದ್ದಕ್ಕಿದಂತೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಕಾರಿನಲ್ಲಿದ್ದವರನ್ನು ಇಳಿಸಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿದ್ದಾರೆ. ಸಂಚಾರ ಠಾಣಾ ಪೊಲೀಸರು ಸುಗಮ …

Read More »

ಕಾಫಿ ತೋಟಕ್ಕೆ ನೀರು ಹಾಯಿಸುವಾಗ ದುರಂತ: ವಿದ್ಯುತ್ ತಂತಿ ತುಳಿದು ವ್ಯಕ್ತಿ ದುರ್ಮರಣ

ಕೊಡಗು: ವಿದ್ಯುತ್ ತಂತಿ ತುಳಿದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.ಇಲ್ಲಿನ ಹಾಲುಗುಂದ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಈ ದುರಂತ ಸಂಭವಿಸಿದೆ. ಕೆ.ಜಿಮಮ್ (67) ಮೃತ ದುರ್ದೈವಿ. ಕಾಫಿ ತೋಟಕ್ಕೆ ನೀರು ಬಿಡಲೆಂದು ಹೋಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಿಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಜೀಮಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ …

Read More »

ಗ್ಯಾಸ್ ಕಟರ್ ಬಳಸಿ ಎಟಿಎಂ ದರೋಡೆ

ಹಾವೇರಿ: ಸಿಸಿಟಿವಿ ಕ್ಯಾಮರಾಗಳಿಗೆ ಬಿಳಿ ಬಣ್ಣ ಸಿಂಪಡಣೆ ಮಾಡಿ, ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರ ಕೊರೆದು 4.66 ಲಕ್ಷ ರೂ. ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕು ಹನುಮರಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯ ಎಟಿಎಂ ಯಂತ್ರ ಹಾನಿಗೊಳಿಸಿ ಹಣ ದೋಚಲಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ನಾಲ್ವರು ಸೆರೆಯಾಗಿದ್ದಾರೆ. ಆದರೆ, ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದರು. 4 ಕ್ಯಾಮರಾಗಳಿಗೆ ಬಿಳಿ ಬಣ್ಣ …

Read More »

ಟಿಪ್ಪರ್ ನಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ದ ಪ್ರಭಾರ ಮುಖ್ಯ ಶಿಕ್ಷಕ ಸಸ್ಪೆಂಡ್

ದಕ್ಷಿಣ ಕನ್ನಡ: ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಸರ್ಕಾರಿ ಸಾರಿಗೆ ಬಸ್ಸುಗಳಲ್ಲೇ ಕರೆದೊಯ್ಯಬೇಕು ಎಂಬುದು ನಿಯಮ. ಈ ನಿಯಮವನ್ನೇ ಮೀರಿದಂತ ಶಾಲೆಯೊಂದು, ಟಿಪ್ಪರ್ ನಲ್ಲಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಳೆಂಜ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಟಿಪ್ಪರ್ ಮೂಲಕ ಪ್ರವಾಸಕ್ಕೆ ಕರೆದೊಯ್ದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ವೀಡಿಯೋ, ಪೋಟೋಗಳು …

Read More »

ಹ್ಯಾಂಡಲ್‌ ಲಾಕ್‌ ಮುರಿದು ಬೈಕ್‌ಗಳ ಕಳವು ಮಾಡ್ತಿದ್ದವನ ಸರೆ, 10 ಬೈಕ್‌ ವಶ

ಬೆಂಗಳೂರು: ಹ್ಯಾಂಡ್‌ ಲಾಕ್‌ ಮುರಿದು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂದ್ರಹಳ್ಳಿ ನಿವಾಸಿ ಮೂರ್ತಿ(20) ಬಂಧಿತ. ಆರೋಪಿಯಿಂದ 3.5 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಅಂದ್ರಹಳ್ಳಿ ರಸ್ತೆಯ ವಿದ್ಯಾಮಾನ್ಯ ನಗರದ 8ನೇ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದ ಬಳಿ ಅನುಮಾನಾಸ್ಪದವಾಗಿ ನಿಂತಿರುವುದು ಕಂಡು ಬಂದಿತ್ತು. ತಕ್ಷಣ ಸಿಬ್ಬಂದಿ ಆತನನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ …

Read More »

ಸಾಲಗಾರರ ಕಾಟ ತಾಳಲಾರದೆ ರೈತ ಆತ್ಮಹತ್ಯೆ

ಪಾಂಡವಪುರ: ತಾಲೂಕಿನ ಸೀತಾಪುರ ಗ್ರಾಮದಲ್ಲಿ ಸಾಲಗಾರರ ಕಾಟ ತಾಳಲಾರದೆ ರೈತರೊಬ್ಬರು ಜಮೀನಿನಲ್ಲಿ ಭಾನುವಾರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಲಿಂಗರಾಜು (48) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತರಿಗೆ ಪತ್ನಿ , ಒಬ್ಬ ಪುತ್ರಿ, ಪುತ್ರ ಇದ್ದಾರೆ. ಮೃತ ಲಿಂಗರಾಜುಗೆ 1 ಎಕರೆ ಜಮೀನು ಇದ್ದು, ಮಗಳ ಮದುವೆಗೆಂದು ಖಾಸಗಿಯಾಗಿ 8 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 6 …

Read More »

‘ಕಾಫಿ ಬಿಲ್’ ಕೇಳಿದ್ದಕ್ಕೆ ಕೆಂಪೇಗೌಡ ಏರ್’ಪೋರ್ಟ್ ಕ್ಯಾಂಟೀನ್ ಸಿಬ್ಬಂದಿ ಮೇಲೆ ಪೊಲೀಸರಿಂದ ಹಲ್ಲೆ : FIR ದಾಖಲು.!

ಬೆಂಗಳೂರು: ಕೆಂಪೇಗೌಡ ಏರ್ ಪೋರ್ಟ್ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ – ಬಾಳಪ್ಪ, ಕುಮಾರ್ ಮತ್ತು ಗಂಗರಾಜು ಹಲ್ಲೆ ನಡೆಸಿದ ಆರೋಪಿಗಳು.bನೈಟ್ ಬೀಟ್ ಸಮಯದಲ್ಲಿ ಈ ಮೂವರು ಪೊಲೀಸರು ಕ್ಯಾಂಟೀನ್‌ಗೆ ಕಾಫಿ ಕುಡಿಯಲು ಹೋಗಿದ್ದರು. ಕಾಫಿ ಕುಡಿದ ನಂತರ ಕ್ಯಾಂಟೀನ್ ಸಿಬ್ಬಂದಿ ಬಿಲ್ ಕೇಳಿದ್ದಕ್ಕೆ, “ಪೊಲೀಸರಾಗಿ ನಾವು ಯಾಕೆ ಬಿಲ್ ಕೊಡಬೇಕು?” ಎಂದು ಉದ್ಧಟತನ ತೋರಿದ್ದಾರೆ. ಬಿಲ್ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಪೊಲೀಸರು ಕ್ಯಾಂಟೀನ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ …

Read More »

ಹೊಸಪೇಟೆ: ಪಿಡಬ್ಲ್ಯುಡಿ ಕಚೇರಿ ಮೇಲೆ ಲೋಕಾ ದಾಳಿ – ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಲಂಚಬಾಕರು.!

ಕಾಮಗಾರಿ ಬಿಲ್ ಮಂಜೂರಿಗಾಗಿ ₹1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕೋಪಯೋಗಿ ಇಲಾಖೆ ಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಮತ್ತು ಅಕೌಂಟೆಂಟ್ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಪಿಡಬ್ಲ್ಯುಡಿ ಕಚೇರಿಯಲ್ಲಿ ಈ ಟ್ರ್ಯಾಪ್ ನಡೆದಿದೆ. ಹೂವಿನ ಹಡಗಲಿಯ ಮಹೇಶ್ ಹಲಗೇರಿ ಎಂಬ ಗುತ್ತಿಗೆದಾರರು ಪಿಡಬ್ಲ್ಯುಡಿ ಟೆಂಡರ್ ಪಡೆದು ಕೆಲಸ ಮುಗಿಸಿದ್ದರು. ಆದರೆ ಬಿಲ್ ಬಿಡುಗಡೆಗೆ ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ ₹1 …

Read More »

ಬೀದರ್‌ನಲ್ಲಿ ಸೈಟ್ ವಿಚಾರಕ್ಕೆ ಕಿರಿಕ್: ಮನೆ ಮುಂದೆ ನಿಲ್ಲಿಸಿದ್ದ ಓಮಿನಿ ಕಾರಿಗೆ ಬೆಂಕಿಯಿಟ್ಟ ಭೂಪ..!

ಬೀದರ್ ಜಿಲ್ಲೆಯ ಶಿವನಗರದಲ್ಲಿ ನಿನ್ನೆ ಮಧ್ಯರಾತ್ರಿ ಕಿಡಿಗೇಡಿಯೊಬ್ಬ ಕಿರಿಕ್ ಮಾಡಿದ್ದಾನೆ. ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿಗೆ ಬೆಂಕಿ ಹಚ್ಚಿ, ನಂತರ ಮನೆಯ ಮುಂದಿದ್ದ ಇತರ ವಸ್ತುಗಳನ್ನು ಎಸೆದು ದಾಂಧಲೆ ಮಾಡಿದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈ ಘಟನೆಯಲ್ಲಿ ರಮೇಶ ಗಾಯಕವಾಡ ಎಂಬುವವರಿಗೆ ಸೇರಿದ್ದ ಓಮ್ನಿ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸ್ಥಳೀಯರ ಪ್ರಕಾರ, ಸುದರ್ಶನ ಎಂಬ ವ್ಯಕ್ತಿಯೇ ಈ ಕೃತ್ಯಕ್ಕೆ ಕಾರಣ ಎಂಬ ಆರೋಪವಿದೆ. ಇಬ್ಬರ ನಡುವೆ ನಿವೇಶನ …

Read More »