Breaking News

Breaking News

ಮಾವನಿಗೆ ಬೆಂಕಿ ಹಚ್ಚಿದ ಸೊಸೆ, ನೋವು ತಡೆಯಲಾರದೆ ಸಹಾಯಕ್ಕಾಗಿ ರಸ್ತೆಯ ತುಂಬೆಲ್ಲಾ ಓಡಿದ ವ್ಯಕ್ತಿ

ಚೆನ್ನೈ, ಸೊಸೆಯ ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ ಪ್ರಿಯಕರನ ಜತೆ ಸೇರಿ ಮಾವನಿಗೆ ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದಕ್ಕೆ ಗದರಿಸಿದ್ದಕ್ಕೆ ಆಕೆ ಮಾವ ರಾಜೇಂದ್ರನ್(64) ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಬೈಕ್ ಸವಾರಿ ಮಾಡುತ್ತಿದ್ದ ರಾಜೇಂದ್ರನ್ ಅವರನ್ನು ತಡೆದು ಅಲ್ಲೇ ಬೆಂಕಿ ಹಚ್ಚಲಾಗಿದೆ. ಕೂಡಲೇ ಬೆಂಕಿಯ ಉರಿ ತಡೆಯಲಾರದೆ ರಾಜೇಂದ್ರನ್ ರಸ್ತೆಯ ತುಂಬೆಲ್ಲಾ ಓಡಾಡಿರುವ ವಿಡಿಯೋ ವೈರಲ್ ಆಗಿದೆ. ಅವರ ದೇಹದ …

Read More »

ಬೀರೂರು | ಆಟೊ ಪಲ್ಟಿ: ಚಾಲಕ ಸಾವು

ಕಡೂರು ತಾಲ್ಲೂಕು ಅಂತರಘಟ್ಟೆಯಲ್ಲಿ ನಡೆಯುತ್ತಿದ್ದ ಜಾತ್ರೆಗೆ ಪ್ರಯಾಣಿಕರನ್ನು ಕರೆದುಕೊಂಡು ತೆರಳುತ್ತಿದ್ದ ಆಟೊ ಮಗುಚಿ ಬಿದ್ದು, ಚಾಲಕ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ಬೀರೂರು ಹೊರವಲಯದ ದೋಗೆಹಳ್ಳಿ ಬಳಿ ನಡೆದಿದೆ.ಬೀರೂರಿನ ಆಟೊ ಚಾಲಕ ಶಿವು (45) ಮೃತಪಟ್ಟವರು. ಬೀರೂರು-ಅಜ್ಜಂಪುರ ರಸ್ತೆಯಲ್ಲಿ ದೋಗೆಹಳ್ಳಿಯಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಆಟೊಗೆ ನಾಯಿಯೊಂದು ಅಡ್ಡಬಂದಿತ್ತು, ಅದನ್ನು ತಪ್ಪಿಸಲು ಯತ್ನಿಸಿದಾಗ ಆಟೊ ರಸ್ತೆ ಬದಿಯ ಕೊರಕಲಿಗೆ ಉರುಳಿದೆ. ತೀವ್ರವಾಗಿ ಗಾಯಗೊಂಡ ಶಿವು ಅವರನ್ನು ಆಟೊದ ಹಿಂದೆಯೇ ಬೈಕ್‌ನಲ್ಲಿ …

Read More »

ಮಂಡ್ಯ: ಚಲಿಸುತ್ತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ; ಅಣ್ಣ-ತಂಗಿ ಸಾವು

ನಾಗಮಂಗಲ (ಮಂಡ್ಯ ಜಿಲ್ಲೆ): ಚಲಿಸುತ್ತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಅಣ್ಣ- ತಂಗಿ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿ, ಮೂವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೇಗಮಂಗಲ ಅಂಚೆಭೂವನಹಳ್ಳಿ ನಡುವಿನ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಬೆಂಗಳೂರಿನ ಕತ್ತರಗುಪ್ಪೆಯ ನಿವಾಸಿಗಳಾದ ರವೀಂದ್ರರಾಜ್ ಕೃಷ್ಣ ಅವರ ಮಕ್ಕಳಾದ ಮವೀನ (20) ಮತ್ತು ಶ್ಯಾಮ್ (21) ಮೃತಪಟ್ಟವರು. ಕಾರಿನಲ್ಲಿದ್ದ ಹಿತಶ್ರೀ, ಕಲಾಶ್ರೀ ಹಾಗೂ ಕಾರು ಚಾಲಕ ಚೇತನ್ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ …

Read More »

ಸ್ನೇಹಿತರ ನಡುವೆ ಗಲಾಟೆ, ಚಾಕುವಿನಿಂದ ಇರಿದು ಕೊಲೆ

ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಮನೆಯ ಬಳಿಗೆ ಆಟೋ ನಿಲ್ಲಿಸುವ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿದೆ. ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ನಾಯಂಡಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಗುಣ ಮತ್ತು ವೇಲು ಇಬ್ಬರಿಗೂ ಚಾಕುವಿನಿಂದ ಇರಿದು ಆರೋಪಿ ವಿನೋದ್ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗುಣ ಸಾವನ್ನಪ್ಪಿದ್ದು, ಗಾಯಾಳು ವೇಲು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದೆ. ಮೃತಪಟ್ಟ ಗುಣ, ಆರೋಪಿ …

Read More »

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಆಂಧ್ರಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ವೈಎಸ್‌ಆರ್‌ಸಿಪಿ ನಾಯಕ ಜೋಗಿ ರಮೇಶ್ ಅವರ ಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಬೆಂಕಿ ಹಚ್ಚಿರುವ ಮಾಹಿತಿ ಲಭ್ಯವಾಗಿದೆ. ವೈಎಸ್‌ಆರ್‌ಸಿಪಿ ಹಿರಿಯ ನಾಯಕ ಅಂಬಟಿ ರಾಂಬಾಬು ಅವರ ಮೇಲೆ ಕೊಲೆ ಯತ್ನ ನಡೆದಿದೆ ಎನ್ನುವ ಮಾಹಿತಿ ಹೊರಬಂದ ಬಳಿಕ ಈ ಘಟನೆ ನಡೆದಿದೆ.ಇಬ್ರಾಹಿಂಪಟ್ಟಣದಲ್ಲಿ ಹಲವಾರು ಗಂಟೆಗಳ ಕಾಲ ಹೈ ಡ್ರಾಮಾ ನಡೆಯಿತು. ದಾಳಿಯನ್ನು ದೃಢಪಡಿಸಿದ ಪಶ್ಚಿಮ ವಲಯದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ದುರ್ಗಾ ರಾವ್, ಇಲ್ಲಿಯವರೆಗೆ ಯಾರನ್ನೂ …

Read More »

ವಿಜಯಪುರ | ಬರಗುಡಿಯಲ್ಲಿ ಭೀಕರ ಕೊಲೆ: ನಾಲ್ವರ ಬಂಧನ

ಇಂಡಿ: ತಾಲ್ಲೂಕಿನ ಬರಗುಡಿಯಿಂದ ಲಚ್ಯಾಣ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನೀರಿನ ಟ್ಯಾಂಕ್‌ ಹತ್ತಿರದ ಪಕ್ಕದ ಹೊಲದಲ್ಲಿ ಸಿದ್ರಾಮ ದೊಂಡಿಬಾ ಕ್ಷತ್ರಿ (31) ಎಂಬುವವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಆರೋಪಿಗಳಾದ ಅದೇ ಗ್ರಾಮದ ಲಾಲ್ಯಾ ಅಲಿಯಾಸ್‌ ರಜನಿಕಾಂತ ಗಿರಣಿವಡ್ಡರ, ಪರಸು ದಶರಥ ಕ್ಷತ್ರಿ, ಸರ್ಜನ ಸಿದ್ದಾರಾಮ ಕ್ಷತ್ರಿ, ಕಾಂತಪ್ಪ ಗಜಪ್ಪ ಕ್ಷತ್ರಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ಪರಸ್ಪರ ಸಂಬಂಧಿಗಳಾಗಿದ್ದಾರೆ. ಹಳೇ ವೈಷಮ್ಯದಿಂದ …

Read More »

ವರನಿಗೆ ಇರಿತ, ಸುಪಾರಿ ನೀಡಿದ್ದ ವಧು ಸೇರಿ ಮೂವರ ಬಂಧನ

ಕೊಳ್ಳೇಗಾಲ(ಚಾ.ನಗರ): ಮದುವೆಗೆ ಒಂದು ದಿನ ಮುನ್ನವೇ (ಜ.29) ವರನಿಗೆ ಚಾಕು ಇರಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಸೇರಿ ಸುಪಾರಿ ನೀಡಿದ್ದ ವಧುವನ್ನು ನಗರ ಪೊಲೀಸರು ಭಾನುವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ತಾಲೂಕಿನ ಕುಣಗಳ್ಳಿಯ ವರ ರವೀಶ್‌ಗೆ ಚಾಕು ಇರಿದಿದ್ದ ಪ್ರಮುಖ ಆರೋಪಿ ಬೆಂಗಳೂರಿನ ದರ್ಶನ್, ಮಿಥುನ್‌, ಕೊಲೆಗೆ ಸುಫಾರಿ ನೀಡಿದ್ದ ಹೊಸ ಅಣಗಳ್ಳಿಯ ವಧು ನಯನಾ ಅವರನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ. ಜ.29ರಂದು ನಗರದ …

Read More »

ಭ್ರಷ್ಟಾಚಾರಕ್ಕೆ ಬ್ರೇಕ್ ಲಂಚ ಸ್ವೀಕಾರ: ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ..

ಸಾರ್ವಜನಿಕರು ಧೈರ್ಯದಿಂದ ಮುಂದೆ ಬಂದು ಲೋಕಾಯುಕ್ತ, ಎಸಿಬಿ ಹಾಗೂ ಇತರೆ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸುವ ಮೂಲಕ ಲಂಚಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಬೇಕು. ವಿಶೇಷವಾಗಿ ಯುವಕರು ಈ ಹೋರಾಟದಲ್ಲಿ ಮುಂಚೂಣಿಗೆ ಬರಬೇಕೆಂಬುದು ನಮ್ಮ ಆಶಯ “ಕೆಲವೊಂದು ಬೆರಳೆಣಿಕೆ ಭ್ರಷ್ಟ ಪೊಲೀಸ್ ಅಧಿಕಾರಿಗಳು ಇಡೀ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ ನಡೆಯುತ್ತಿದೆ. ಇಂತಹ ಭ್ರಷ್ಟ ಪೊಲೀಸರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಒಳ್ಳೆಯ ಪೋಲಿಸ್ ಅಧಿಕಾರಿಗಳನ್ನು ರಕ್ಷಿಸಿ …

Read More »

‘ಗುಲಾಮರ ಅಪ್ಪ’ ಫೇಸ್‌ಬುಕ್‌ ಖಾತೆ ಅಡ್ಮಿನ್ ಬಂಧನ

ಕಲಬುರಗಿ: ಪರಿಶಿಷ್ಟ ಸಮುದಾಯದ ನಾಯಕರ ಬಗ್ಗೆ ‘ಗುಲಾಮರ ಅಪ್ಪ’ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿ ಬರಹ ಪ್ರಕಟಿಸುತ್ತಿದ್ದ ವ್ಯಕ್ತಿಯನ್ನು ನಗರದ ಸಬರ್ಬನ್‌ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ವಿದ್ಯಾಮಾನ್ಯ ನಗರದ ನಿವಾಸಿ ಆನಂದ್‌ ಅಂಜನಪ್ಪ (41) ಬಂಧಿತ ಆರೋಪಿ. ಬೆಂಗಳೂರು ರೇಸ್‌ಕೋರ್ಸ್‌ ರಸ್ತೆಯ ಕಂಪನಿಯೊಂದರಲ್ಲಿ ಹಿರಿಯ ಐಟಿ ಎಕ್ಸಿಕ್ಯುಟಿವ್‌ ಆಗಿ ಕೆಲಸ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ‘ಗುಲಾಮರ ಅಪ್ಪ’ ಹೆಸರಲ್ಲಿ ಫೇಸ್‌ಬುಕ್ ಖಾತೆ ತೆರೆದಿದ್ದ ಆನಂದ್, ಎಐಸಿಸಿ ಅಧ್ಯಕ್ಷ …

Read More »

ಹಾಸನದಲ್ಲಿ ವರದಕ್ಷಿಣೆ ಕಿರುಕುಳ : ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ!

ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳ ಸಹಿಸಲಾಗದೇ ವಿಷ ಸೇವಿಸಿ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೆಚ್.ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ.ಬೇಲೂರು ತಾಲ್ಲೂಕಿನ ಐ.ಹುಣಸೆಕೆರೆ ಗ್ರಾಮದ ಹೆಚ್.ಎಲ್.ಇಂದ್ರ (24) ಮೃತ ಗೃಹಿಣಿ.ಕಳೆದ ನಾಲ್ಕು ವರ್ಷಗಳ ಹಿಂದೆ ಹೆಚ್.ಮೈಲಳ್ಳಿ ಗ್ರಾಮದ ಎಂ.ಹೆಚ್.ಸ್ವಾಮಿ ಜೊತೆ ವಿವಾಹವಾಗಿದ್ದರು. ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ 60 ಗ್ರಾಂ ಚಿನ್ನ ಹಾಗೂ 1.30 ಲಕ್ಷ ರೂ. ಹಣವನ್ನು ಹೆಚ್.ಎಲ್.ಇಂದ್ರ ಪೋಷಕರು ನೀಡಿದ್ದರು. ಪತಿ ಸ್ವಾಮಿ ಬೇಕರಿ ನಡೆಸುತ್ತಿದ್ದ. …

Read More »