Breaking News

Breaking News

ಗಾಂಜಾ ಮಾರಾಟ: ಇಬ್ಬರ ಬಂಧನ

ಹೂವಿನಹಡಗಲಿ: ಪಟ್ಟಣ ಹಾಗೂ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆಪಟ್ಟಣ ಹೊರ ವಲಯ ನಂದಿಪುರ ದೊಡ್ಡಬಸವೇಶ್ವರ ಗದ್ದುಗೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ದಾಸರಹಳ್ಳಿ ತಾಂಡಾದ ಸುನೀಲ್ ನಾಯ್ಕ ಎಂಬಾತನ ಬಂಧಿಸಿ ₹10 ಸಾವಿರ ಮೌಲ್ಯದ 393.85 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಇಟ್ಟಿಗಿ ಗ್ರಾಮದ ಹೊರ ವಲಯ ಹಾಲಿನ ಡೇರಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ದಾಸರಹಳ್ಳಿ ತಾಂಡಾದ ನಿವಾಸಿ, ಮೂಲತಃ ಹಾವೇರಿ …

Read More »

ಚಿಕ್ಕಜಾಜೂರು | ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಈಚೆಗೆ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಮೀಪದ ಸಾಸಲು ರೈಲು ನಿಲ್ದಾಣದ ಬಳಿ 55- 60 ವರ್ಷದ ಅಪರಿಚಿತ ವ್ಯಕ್ತಿಯ ಶವ ದೊರೆತಿದೆ. ಮೃತನು ಕಾವಿ ಬಟ್ಟೆ ಧರಿಸಿದ್ದು, ಮೇಲ್ನೋಟಕ್ಕೆ ಸನ್ಯಾಸಿಯಂತೆ ಕಂಡು ಬರುತ್ತಾನೆ. ದುಂಡು ಮುಖ, ಸಾಧಾರಣ ಮೈಕಟ್ಟು, ಬೋಳು ತಲೆ ಹೊಂದಿದ್ದಾನೆ.ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ಸಂಪರ್ಕಿಸಲು ಚಿಕ್ಕಜಾಜೂರು ರೈಲ್ವೆ ಪೊಲೀಸ್‌ ಉಪ ಠಾಣೆಯ ಪೊಲೀಸರು …

Read More »

ಪರಸ್ತ್ರೀ ಸಂಗ, ವರದಕ್ಷಿಣೆ ಕಿರುಕುಳ: ಇನ್‌ಸ್ಪೆಕ್ಟರ್‌ ವಿರುದ್ಧ ಪತ್ನಿ ಆರೋಪ

ಬೆಂಗಳೂರು: ಸದಾಶಿವನಗರ ಠಾಣೆಯ ಇನ್‌ಸ್ಪೆಕ್ಟರ್‌ ಬಿ.ಪಿ. ಗಿರೀಶ್‌ ವಿರುದ್ಧ ಅವರ ಪತ್ನಿ, ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಹಾಗೂ ಪರಸ್ತ್ರೀ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.ಈ ಕುರಿತು ಗಿರೀಶ್‌ ಪತ್ನಿ ಕಾವ್ಯಾ ನೀಡಿದ ದೂರಿನ ಮೇರೆಗೆ ಉತ್ತರ ವಿಭಾಗದ ಮಹಿಳಾ ಪೊಲೀಸ್‌ ಠಾಣೆ ಪೊಲೀಸರು ಗಿರೀಶ್‌, ಅವರ ತಾಯಿ ಲಲಿತಮ್ಮ, ಸಹೋದರ ಹರೀಶ್‌ ಹಾಗೂ ಸಂಬಂಧಿ ರಾಜೇಶ್‌ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.2010ರಲ್ಲಿ ಗಿರೀಶ್‌ ಮತ್ತು …

Read More »

ಹಣಕ್ಕೆ ಬೇಡಿಕೆ: ಪತ್ರಕರ್ತ 7 ದಿನ ಪೊಲೀಸ್‌ ಕಸ್ಟಡಿಗೆ

ಬೆಂಗಳೂರು: ಡ್ರಗ್ಸ್‌ ಕಾರ್ಖಾನೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಗೆ ವಾಟ್ಸ್‌ಆಯಪ್‌ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಾಗಲೂರು ಠಾಣೆಯ ಪೊಲೀಸರಿಂದ ಬಂಧನ ಕ್ಕೊಳಗಾಗಿರುವ ಪತ್ರಕರ್ತನನ್ನು 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.ಪತ್ರಕರ್ತ ಶರತ್‌ ಶರ್ಮಾ ಕಲಗಾರು ಬಂಧಿತ. ಆರೋಪಿಯನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್‌ 7 ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಪ್ರಕರಣದ …

Read More »

ಢಿಕ್ಕಿ: ಮೂವರಿಗೆ ಗಾಯ

ಉಡುಪಿ: ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹಸವಾರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಸ್ಕೃತ ಕಾಲೇಜು ಬಳಿ ನಡೆದಿದೆ.ಎ.ವಿ.ಶಾನುಭಾಗ್‌ ಎಂಬವರು ಕಾರನ್ನು ಅತೀ ವೇಗದಲ್ಲಿ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅದರ ಸವಾರ ರಿಚರ್ಡ್ ಡಿ”ಸೋಜಾ ಹಾಗೂ ಸಹಸವಾರ ರಸ್ತೆಗೆ ಬಿದ್ದು ಗಾಯಗೊಂಡರು.ಢಿಕ್ಕಿಯ ರಭಸಕ್ಕೆ ಅಲ್ಲಿಯೇ ಇದ್ದ ಇಮ್ತಿಯಾಜ್ ಅವರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಸನಿಹದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಜಖಂಗೊಂಡಿದೆ. …

Read More »

ಮರಳು ಅಕ್ರಮ ದಂಧೆ: ಎಂಟು ಜನರ ವಿರುದ್ಧ ಎಫ್‌ಐಆರ್‌

ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ ಸೀಮೆ ಹಾಗೂ ಭೂಮಿಯಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಸ್ಥಳದ ಮೇಲೆ ಮಂಗಳವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದ್ದು, ಎಂಟು ಹಿಟಾಚಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮರಳು ಕಳ್ಳತನ ಮಾಡಿದ ಆರೋಪದ ಮೇಲೆ ಎಂಟು ಜನರ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಗಂಗಾವತಿ ಪೊಲೀಸ್ ಉಪ ವಿಭಾಗಾಧಿಕಾರಿ ಜಾಯಪ್ಪ ನ್ಯಾಮಗೌಡ ಹಾಗೂ ಪೊಲೀಸ್‌ ಇನ್‌ಸ್ಟೆಕ್ಟರ್‌ ಎಂ.ಡಿ.‌ ಫೈಜುಲ್ಲಾ ನೇತೃತ್ವದಲ್ಲಿ ನಸುಕಿನ ಜಾವ ದಾಳಿ …

Read More »

ಬೆಂಗಳೂರಿನಲ್ಲಿ ಮಾರಕಾಸ್ತ್ರ ಹಿಡಿದು ಗಲಾಟೆ: ಆರು ಮಂದಿ ಸೆರೆ

ಮಾರಕಾಸ್ತ್ರ ಹಿಡಿದು ದಾಂದಲೆ ನಡೆಸಿದ್ದ ಆರು ಮಂದಿಯನ್ನು ಸಿ.ಕೆ. ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಪ್ರಜ್ಞಾ ಲೇಔಟ್‌ನ ವೆಂಕಟೇಶ್ ಅಲಿಯಾಸ್ ಕಾಡು, ಕತ್ರಿಗುಪ್ಪೆಯ ನಿವಾಸಿ ಗಿರೀಶ್ ಅಲಿಯಾಸ್ ಚೋಟ, ಬ್ಯಾಟರಾಯನಪುರದ ಸುರೇಂದ್ರ ಅಲಿಯಾಸ್ ಸುರಿ, ಚಂದನ್‌ ಅಲಿಯಾಸ್ ಸಣ್ಣ, ಶ್ರೀನಿವಾಸನಗರದ ಕೆ.ಎಸ್‌.ಗಣೇಶ್, ಜ್ಞಾನಭಾರತಿಯ ಗಣೇಶ ಬಂಧಿತರು.ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಗಲಾಟೆ ನಡೆದಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು. ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರ ಮೇಲೆ …

Read More »

ಹುಲಿಕಲ್ ಘಾಟೆಯಲ್ಲಿ ಧರೆಗೆ ಗುದ್ದಿದ ಖಾಸಗಿ ಬಸ್; ಮಗು ಸಾವು; ಹಲವರಿಗೆ ಗಾಯ

ದಾವಣಗೆರೆಯಿಂದ ಮಂಗಳೂರಿಗೆ ಹೊರಟಿದ್ದ ಕುಂದಾಪುರ ಮೂಲದ ಖಾಸಗಿ ಬಸ್ ಹುಲಿಕಲ್ ಘಾಟಿಯಲ್ಲಿ ಧರೆಗೆ ಗುದ್ದಿದ ಪರಿಣಾಮ, ಮಗುವೊಂದು ಮೃತಪಟ್ಟಿದ್ದು, ಹಲವು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಸೇರಿ ವಿವಿಧ ಆಸ್ಪತ್ರೆಗೆ ದಾಖಲಾದ ಘಟನೆಯು ಡಿ.29 ರ ತಡರಾತ್ರಿ ನಡೆದಿದೆ. ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಬಸ್ ನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ. ಗಾಯಾಳುಗಳಾದ ಶರೀಫಾಬಿ(57), ಇಮಾಮ್ ಸಾಬ್ (73), ಸಫನಾ …

Read More »

ಇನ್‌ಸ್ಪೆಕ್ಟರ್‌ಗಳ ಬಳಿ ₹5 ಲಕ್ಷ ಹಣಕ್ಕೆ ಬೇಡಿಕೆ: ಪತ್ರಕರ್ತ ಬಂಧನ

ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ವಾಟ್ಸ್‌ಆಯಪ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪತ್ರಕರ್ತರೊಬ್ಬರನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಬಾಗಲೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ರಮೇಶ್ ಅವರ ದೂರು ಆಧರಿಸಿ ಪತ್ರಕರ್ತ ಶರತ್ ಶರ್ಮಾ ಕಲಗಾರ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧಿಸಿದ್ದಾರೆ.ಆರೋಪಿಯು ಬಾಗಲೂರು ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ಶಬರೀಶ್ ಮತ್ತು ಸಬ್ ಇನ್‌ಸ್ಪೆಕ್ಟರ್‌ ರಮೇಶ್, ಕೊತ್ತನೂರು ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ಚೇತನ್ ಕುಮಾರ್ ಮತ್ತು ಅವಲಹಳ್ಳಿಯ …

Read More »

ನ್ಯಾಯಕ್ಕಾಗಿ ಆಗ್ರಹಿಸಿ ಪತಿಯ ಶಾಲೆಯ ಮುಂದೆ ಧರಣಿ ಕುಳಿತ ಪತ್ನಿ

ಪ್ರೀತಿಸಿ ವಿವಾಹವಾಗಿದ್ದ ವ್ಯಕ್ತಿಯೋರ್ವ ಹೆಂಡತಿಗೆ ಕಿರುಕುಳ ನೀಡಿ ಮನೆಯಿಂದಲೇ ಹೊರ ಹಾಕಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ನಡೆದಿದೆ.ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮಾಲೀಕ ರೂಪೇಶ್ ವಿರುದ್ಧ ಪತ್ನಿಗೆ ಕಿರುಕುಳ ಆರೋಪ ಕೇಳಿಬಂದಿದೆ.ಒಂದು ವರ್ಷದ ಹಿಂದಷ್ಟೇ ರೂಪೇಶ್ ಪ್ರೀತಿ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದು, ಮದುವೆ ಬಳಿಕ ರೂಪೇಶ್ ಪತ್ನಿಗೆ ಕಿರುಕುಳ, ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಕೆಲ ದಿನಗಳಿಂದ ಪತ್ನಿಯನ್ನು ಮನೆಯೊಳಗೆ ಸೇರಿಸುತ್ತಿಲ್ಲ ಎಂದು ಪತ್ನಿ ಆರೋಪಿಸಿದ್ದಾರೆ. …

Read More »