Breaking News

Breaking News

ಮಂಗಳೂರು | ತಾಂತ್ರಿಕ ದೋಷ: ಬೋಟ್ ಬೆಂಕಿಗೆ ಆಹುತಿ

ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ, ಬೋಟ್‌ಗೆ ಬೆಂಕಿ ಹೊತ್ತಿ ಉರಿದು, ₹1 ಕೋಟಿಯಷ್ಟು ನಷ್ಟವಾಗಿದೆ ಎಂದು ಕಂಕನಾಡಿ ಮುಹಮ್ಮದ್ ಫಾರೂಕ್ ಅವರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ಹಾಗೂ ಕರಾವಳಿ ಕಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.’ಮಗಳು ಫಾತಿಮಾ ಶಾಫಾ ಮಾಲೀಕತ್ವದ ‘ಮಶ್ರಿಕ್‌’ ಹೆಸರಿನ ಬೋಟ್ ಡಿ.10ರಂದು ಬೆಳಗಿನ ಜಾವ ಮಂಗಳೂರು ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ಅದೇ ದಿನ ಸಂಜೆ ಸುರತ್ಕಲ್-ಕಾಪು ಕರಾವಳಿ ತೀರದಿಂದ ಸುಮಾರು 12 …

Read More »

ಮಲೆ ಮಹದೇಶ್ವರ ಬೆಟ್ಟದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ

ಚಾಮರಾಜನಗರ : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಿವಾಸಿ ಭಾಗ್ಯ(40) ಬಂಧಿತ ಆರೋಪಿ. ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವವರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ ಟಿ ಕವಿತಾ, ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಧಮೇಂದ್ರ ಮಾರ್ಗದರ್ಶನದಲ್ಲಿ ಮಲೆ …

Read More »

ಬಾಲಕಿಗೆ ಲೈಂಗಿಕ ಕಿರುಕುಳ; ಬಂಧನ

ಸುರತ್ಕಲ್: ಹಳೆಯಂಗಡಿ ಚೇಳಾರು ಕರಿತೋಟ ಎಂಬಲ್ಲಿ ಕಳೆದ ಅಕ್ಟೊಬರ್ ತಿಂಗಳಲ್ಲಿ ನಡೆದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸುಂದರ ಸಾಲ್ಯಾನ್ (60) ಎಂಬಾತನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.ಟ್ಯೂಶನ್ ಮುಗಿಸಿ ಬಸ್‌ನಲ್ಲಿ ಬಂದಿಳಿದು ತನ್ನ ಒಳ ರಸ್ತೆಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರು ಬದಿಯಿಂದ ಬಂದ ವ್ಯಕ್ತಿ ಆಕೆಯ ಕೈಹಿಡಿದು ಕಿರುಕುಳ ನೀಡಿದ್ದಾನೆ ಎನ್ನಲಾಗಿದೆಘಟನೆಯ ಬಳಿಕ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾದ ಕಾರಣ ವೈದ್ಯರ ಬಳಿ …

Read More »

ಆನೇಕಲ್: ಕುಡಿದ ಮತ್ತಿನಲ್ಲಿ ಖಾಸಗಿ ಬಸ್ ಕದ್ದರು!

ಆನೇಕಲ್‌ನ ಥಳಿ ರಸ್ತೆಯಲ್ಲಿ ಬಸ್ ಏರಿದ ಮದ್ಯದ ಮತ್ತಿನಲ್ಲಿದ್ದ ನಾಲ್ವರು ಯುವಕರು ಬಸ್‌ ಓಡಿಸಿಕೊಂಡು ಹೋಗಿದ್ದಾರೆ. ನಿಯಂತ್ರಣ ತಪ್ಪಿದ ಬಸ್‌ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿ ರಸ್ತೆ ಬದಿಯ ಎರಡು ವಿದ್ಯುತ್‌ ಕಂಬಗಳಿಗೆ ಗುದ್ದಿದೆ. ಅದಕ್ಕೂ ಮುನ್ನ ಥಳಿ ರಸ್ತೆಯಲ್ಲಿ ನಡೆದು ಹೊರಟಿದ್ದ ಪಾದಚಾರಿಗೆ ಗುದ್ದಿ ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಡ್ಡಾದಿಡ್ಡಿ ಚಲಿಸುತ್ತಿದ್ದ ಬಸ್‌ ಕಂಡ ಸಾರ್ವಜನಿಕರು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಸ್‌ನಲ್ಲಿದ್ದ ಮೂವರು ಪರಾರಿಯಾಗಿದ್ದಾರೆ. ಚಾಲನೆ ಮಡುತ್ತಿದ್ದ ಗುನ್ನಿ ಪಾಷಾ (26) …

Read More »

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ

ಹುಬ್ಬಳ್ಳಿ, (ಡಿಸೆಂಬರ್ 14):ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿರೋ ಘಟನೆ ಹುಬ್ಬಳ್ಳಿ ನಗರದ ಈಶ್ವರ ನಗರದಲ್ಲಿ ನಡೆದಿದೆ. ನಿನ್ನೆ ಸಂಜೆ ಬಡಾವಣೆಗೆ ಆಗಮಿಸಿದ್ದ ಓರ್ವ ವ್ಯಕ್ತಿ, ಬಡಾವಣೆಯ ಮಹಿಳೆಯರಿಗೆ ಚುಡಾಯಿಸುವದು, ಅಸಭ್ಯವಾಗಿ ವರ್ತಿಸುತ್ತಿದ್ದನಂತೆ.ಇದನ್ನು ಗಮನಿಸಿದ ಸ್ಥಳೀಯರು, ವಿಕೃತ ಕ್ರಿಮಿಯನ್ನು ಕಂಬಕ್ಕೆ ಕಟ್ಟಿ, ಚಪ್ಪಲಿಯಿಂದ ಹೊಡೆದಿದ್ದಾರೆ. ಮುಖ ಮುಸುಡಿ ನೋಡದೆ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದ್ರೆ ಈ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೇ, ನಂತರ ಬಿಟ್ಟು ಕಳುಹಿಸಿದ್ದಾರೆ.

Read More »

ಪೊಲೀಸ್ ವೇಷದಲ್ಲಿ ಕಳ್ಳತನ, ನಾಲ್ವರು ಖತರ್ನಾಕ್ ಖದೀಮರು ಅಂದರ್!

ಬೆಂಗಳೂರು: ಚಾಲಾಕಿ ಕಳ್ಳರು, ಖದೀಮರು ಮತ್ತು ಕ್ರಿಮಿನಲ್ ಗಳು ಎಂತೆಂಥಾ ಖತರ್ನಾಕ್ ಐಡಿಯಾ ಮಾಡಿ ಜನರನ್ನ ಯಾಮಾರಿಸ್ತಾರೆ ಅಂದ್ರೆ, ಇಲ್ಲೊಂದು ಪ್ರಕರಣದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಸೇರಿ ನಾಲ್ವರು ಆರೋಪಿಗಳು ಬೆಂಗಳೂರಲ್ಲಿ ಲಾಕ್ ಆಗಿದ್ದಾರೆ.ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿ ಪಿ.ಎಸ್.ಐ ಮಲ್ಲಿಕಾರ್ಜುನ್ ಸೇರಿ ಒಟ್ಟು ನಾಲ್ವರು, ಐಷಾರಾಮಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಈ …

Read More »

ಬೆಂಗಳೂರು | ರಸ್ತೆ ಅಪಘಾತ: ಯುವಕ ಸಾವು

ದಾಬಸ್ ಪೇಟೆ: ಮಧುಗಿರಿ ರಸ್ತೆಯ ನರಸೀಪುರ ತೋಪಿನ ಬಳಿ ಸಾರಿಗೆ ಸಂಸ್ಥೆ ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಯುವಕ ಮೃತಪಟ್ಟಿದ್ದಾರೆ.ದೀಕ್ಷಿತ್ ಶೆಟ್ಟಿ (21) ಮೃತ ಯುವಕ. ಬೈಂದೂರಿನ ದೀಕ್ಷಿತ್, ಮತ್ತಿಕೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಿ.ಎ ವ್ಯಾಸಂಗ ಮಾಡುತ್ತಿದ್ದರು.ಸ್ನೇಹಿತರೊಂದಿಗೆ ದೇವರಾಯನ ದುರ್ಗ ಬೆಟ್ಟಕ್ಕೆ ಬೈಕ್‌ನಲ್ಲಿ ಹೋಗುವಾಗ ಈ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಮೃತದೇಹ ನೀಡಲಾಯಿತು. ದಾಬಸ್‌ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, …

Read More »

ಮುಂಡಗೋಡ | ಕಾರು ಅಪಘಾತ: ಸಾವು

ಮುಂಡಗೋಡ: ತಾಲ್ಲೂಕಿನ ಗಡಿಭಾಗದ ತಾಯವ್ವನ ದೇವಸ್ಥಾನ ಹತ್ತಿರದ ರಾಜ್ಯ ಹೆದ್ದಾರಿ ತಿರುವಿನಲ್ಲಿ ಶನಿವಾರ ರಾತ್ರಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.ಪಟ್ಟಣದ ಕಂದಾಯ ಇಲಾಖೆ ಅಧಿಕಾರಿ ಗೋಪಾಲ ಎಂ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗ್ರಾಮ ಲೆಕ್ಕಿಗರಾದ ಮಂಜುನಾಥ ಹಾಗೂ ಗೋವಿಂದ ತೀವ್ರ ಗಾಯಗೊಂಡಿದ್ದು, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಡಸ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Read More »

ಬೆಂಗಳೂರು | ಕಾರು ಡಿಕ್ಕಿ: ಮಹಿಳೆಯರಿಬ್ಬರ ಸಾವು

ರಸ್ತೆ ದಾಟುವ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ.ಯಾದಗಿರಿಯವರಾದ ರಂಗಮ್ಮ (45), ಚೌಡಮ್ಮ (50 ) ಮೃತರು. ಕೂಲಿ ಕಾರ್ಮಿಕರಾದ ಈ ಇಬ್ಬರೂ ರಾಜರಾಜೇಶ್ವರಿ ನಗರದಲ್ಲಿ ತಮ್ಮ ಕುಟುಂಬಗಳ ಜತೆ ವಾಸವಿದ್ದರು.ಏಜೆನ್ಸಿಯೊಂದರ ಮೂಲಕ ಹೊಸಕೆರೆಹಳ್ಳಿ ಟೋಲ್ ಸಮೀಪದ ನೈಸ್ ರಸ್ತೆಯಲ್ಲಿ ಮಣ್ಣು ತೆಗೆಯುವುದು ಮತ್ತಿತರ ಕೆಲಸ ಮಾಡುತ್ತಿದ್ದರು. ಶುಕ್ರವಾರ ಕೆಲಸ ಮುಗಿಸಿ ರಸ್ತೆ ದಾಟುತ್ತಿದ್ದಾಗಲೇ ಮಾಗಡಿ ರಸ್ತೆ ಕಡೆ ತೆರಳುತ್ತಿದ್ದ …

Read More »

ಗೌರವ ಸನ್ಮಾನ ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ….

ಸಭಾಪತಿ ಬಸವರಾಜ ಹೊರಟ್ಟಿಯವರ ಅಭಿನಂದನಾ ಗೌರವ ಸನ್ಮಾನ ಕಾರ್ಯಕ್ರಮಕ್ಕೆ ಸಿಎಂ ಸಿದ್ಧರಾಮಯ್ಯ ದೀಪ ಬೆಳಗುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಎಚ್.ಕೆ.ಪಾಟೀಲ, ಸಂತೋಷ ಲಾಡ್, ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ‌ ದೊರೆಯಿತು.ಇನ್ನೂ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಹಾಗೂ ರಾಜಕೀಯ ಮುಖಂಡರು ಸೇರಿದಂತೆ ನಾಡಿನ ವಿವಿಧ …

Read More »