BigTv News
December 1, 2025
Breaking News, Crime
16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 21 ವರ್ಷದ ಯುವಕನಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 61 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಭದ್ರಾವತಿ ನಗರದ ಸಿಪಿಐ ಶ್ರೀಧರ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯ ವೇಳೆ ಆರೋಪ ದೃಢಪಟ್ಟ …
Read More »
BigTv News
December 1, 2025
Breaking News
ರಾಯಚೂರಲ್ಲಿ ಭೀಕರ ಅಪಘಾತ : ರಸ್ತೆ ಬದಿ ನಿಂತಿದ್ದ ತಂದೆ ಮಗನ ಮೇಲೆ ಹರಿದ ಲಾರಿ : ದೇಹಗಳು ಛಿದ್ರ ಛಿದ್ರ!ತಂದೆ ನಾಗಪ್ಪ (65) ಹಾಗೂ ಪುತ್ರ ರಮೇಶ್ (46) ಸ್ಥಳದಲ್ಲಿ ಸಾವನಪ್ಪಿದ್ದಾರೆ.ರಸ್ತೆ ಬದಿ ಮೊಬೈಲ್ನಲ್ಲಿ ತಂದೆ ಭಾಗ ಮಾತನಾಡುತ್ತ ನಿಂತಿದ್ದರು. ಏಕಾಏಕಿ ವೇಗವಾಗಿ ಬಂದಂತಹ ಲಾರಿ ಇಬ್ಬರ ಮೇಲೆ ಹರಿದು ದೇಹಗಳು ಛಿದ್ರ ಛಿದ್ರವಾಗಿವೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.
Read More »
BigTv News
December 1, 2025
Breaking News
ಧಾರವಾಡದಲ್ಲಿ ಇಂದು ಜನ ಸಾಮಾನ್ಯರ ವೇದಿಕೆ ನೀಡಿದ್ದ “ಧಾರವಾಡ ಚಲೋ” ಕರೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಜಾರಿಗೊಂಡಿದೆ. ಶ್ರೀನಗರ ವೃತ್ತ, ಸಪ್ತಾಪುರ, ಹಾಗೂ ಇಡೀ ಹು-ಧಾ ಆಯುಕ್ತಾಲಯ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳನ್ನ ತಪ್ಪಿಸಲು ಕಠಿಣ ಬಂದೋಬಸ್ತ್ ಮಾಡಲಾಗಿದೆ. ರ್ಯಾಲಿಗೆ ಅನುಮತಿ ನೀಡದ ನಿರ್ಧಾರಕ್ಕೆ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹು-ಧಾ ನಗರ ಪೊಲೀಸ್ …
Read More »
BigTv News
December 1, 2025
Breaking News
ಧಾರವಾಡ : ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಉದ್ಯೋಗಿ ಆಕಾಂಕ್ಷಿಗಳ ಪ್ರತಿಭಟನೆ ಕುರಿತು ಮಾಧ್ಯಮಗಳಿಗೆ ಮಾತನಾಡಿದ್ದಾರೆ. “ಉದ್ಯೋಗಾಕಾಂಕ್ಷಿಗಳು ಇಂದು ಪ್ರತಿಭಟನೆಗೆ ಮುಂದಾಗಿದ್ದರು. ಪ್ರತಿಭಟನೆಯ ಸಂಪೂರ್ಣ ರೂಪುರೇಷೆ ಬಗ್ಗೆ ನಾವು ಮಾಹಿತಿ ಕೇಳಿದ್ದೇವೆ. ಆದರೆ ನೀಡಬೇಕಾದ ಸ್ಪಷ್ಟ ಮಾಹಿತಿ ನೀಡದ ಕಾರಣ, ಅವರ ಮನವಿಯನ್ನು ಪರಿಗಣಿಸಲು ಸಾಧ್ಯವಾಗಲಿಲ್ಲ ಎಂದು.. ಧಾರವಾಡ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಈಗಾಗಲೇ ಒಂದು ಲಕ್ಷದಷ್ಟು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ವಾಸವಿದ್ದಾರೆ. ಪ್ರತಿಭಟನೆ ಸ್ಥಳವಾಗಿ …
Read More »
BigTv News
December 1, 2025
Breaking News
ಉಡುಪಿ: ಸ್ಕೂಟರ್ ಢಿಕ್ಕಿ ಹೊಡೆದು ಮಹಿಳೆಯರಿಬ್ಬರು ಗಾಯಗೊಂಡ ಘಟನೆ ಎಂಜಿಎಂ ಕಾಲೇಜು ಬಳಿ ಸಂಭವಿಸಿದೆ.ಸಂದೇಶ್ ಎಂಬವರು ತನ್ನ ಸ್ಕೂಟರಿನಲ್ಲಿ ಸುರಾಜ್ ಅವರನ್ನು ಕುಳ್ಳಿರಿಸಿಕೊಂಡು ಉಡುಪಿಯಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದಾಗ ರಸ್ತೆ ದಾಟುತ್ತಿದ್ದ ಭಾರತಿ (74) ಮತ್ತು ಸುಮನಾ ಅವರಿಗೆ ಢಿಕ್ಕಿ ಹೊಡೆಯಿತು.ಭಾರತಿ ಮತ್ತು ಸುಮನಾ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಸವಾರನ ವಿರುದ್ಧ ಸಂಚಾರ ಠಾಣೆಯಲ್ಲಿ ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಾಗಿದೆ.
Read More »
BigTv News
December 1, 2025
Breaking News
ಬಂದೋಬಸ್ತ್ ಕರ್ತವ್ಯ ನಿರ್ವಹಣೆ ವೇಳೆ ಅಸ್ವಸ್ಥರಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ಸಾವನ್ನಪ್ಪಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನೇಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ವಿಜಯ ಕುಮಾರ್ ನಾಯ್ಕ ಜಿ.ಮೃತಪಟ್ಟವರು.ನ. 26ರಂದು ಬಂದೋಬಸ್ತ್ ಕರ್ತವ್ಯಕ್ಕೆಂದು ಉಡುಪಿಗೆ ಬಂದಿದ್ದರು. ನ. 27ರಂದು ಉಡುಪಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ವಾಂತಿ ಮಾಡಿಕೊಂಡಿದ್ದರು. ಜತೆಗೆ ಉಸಿರಾಟದ ಸಮಸ್ಯೆಯೂ ಕಂಡುಬಂದಿದ್ದು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನ. 29ರಂದು ಕೊನೆಯುಸಿರೆಳೆದ್ದಾರೆ. …
Read More »
BigTv News
December 1, 2025
Breaking News
ಮಧ್ಯಪ್ರದೇಶದ ಜಬಲ್ಪುರದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ತನ್ನ ಪತಿಯ ಕ್ರೌರ್ಯದ ಪುರಾವೆಗಳೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ್ದಾರೆ.ಪತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಲ್ಲದೆ, ತನ್ನನ್ನೂ ಮತ್ತು ತನ್ನ ಮಕ್ಕಳನ್ನು ಮನೆಯಿಂದ ಹೊರಗಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.ಮದುವೆಯಾಗಿ 16 ವರ್ಷಗಳಾಗಿವೆ. ತನ್ನ ಗಂಡ ಪ್ರತಿದಿನ ತನಗೆ ವಿಚ್ಛೇದನ ನೀಡುವಂತೆ ಒತ್ತಡ ಹೇರುತ್ತಾ ಕಿರುಕುಳ …
Read More »
BigTv News
December 1, 2025
Breaking News
ಎರಡು ದಶಕಗಳಲ್ಲಿ ದ್ವೀಪವನ್ನು ಅಪ್ಪಳಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಪತ್ತು ಮತ್ತು ಪರಿಹಾರ ಕಾರ್ಯಕರ್ತರು ಬಿದ್ದ ಮರಗಳು ಮತ್ತು ಭೂಕುಸಿತದಿಂದ ನಿರ್ಬಂಧಿಸಲ್ಪಟ್ಟ ರಸ್ತೆಗಳನ್ನು ತೆರವುಗೊಳಿಸಿದಾಗ ಮಾತ್ರ ಹೆಚ್ಚು ಪೀಡಿತ ಕೇಂದ್ರ ಪ್ರದೇಶದಲ್ಲಿ ಹಾನಿಯ ಪ್ರಮಾಣವನ್ನು ಬಹಿರಂಗಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭಾನುವಾರ 212 ರಿಂದ ಸಾವಿನ ಸಂಖ್ಯೆ 334 ಕ್ಕೆ ಏರಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ತಿಳಿಸಿದೆ, ಸುಮಾರು 400 ಜನರು ಕಾಣೆಯಾಗಿದ್ದಾರೆ ಮತ್ತು ದ್ವೀಪದಾದ್ಯಂತ 1.3 ದಶಲಕ್ಷಕ್ಕೂ …
Read More »
BigTv News
December 1, 2025
Breaking News
ಅಕ್ರಮ ಸಂಬಂಧ ಶಂಕಿಸಿ ಪತಿಯೊಬ್ಬ ಪತ್ನಿಯ ಪ್ರಾಣ ತೆಗೆದಿರುವ ಘಟನೆ ಕೊಯಮತ್ತೂರುನಲ್ಲಿ ನಡೆದಿರುವುದು ವರದಿಯಾಗಿದೆ. ಬಾಲಮುರುಗನ್‌ಗೆ ಪತ್ನಿ ಶ್ರೀಪ್ರಿಯಾಳ ಬೇರೊಬ್ಬರ ಜತೆ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನುವ ಸಂಶಯ ಬಂದಿದೆ. ಈ ಕಾರಣದಿಂದ ಇತ್ತೀಚೆಗೆ ಪತಿ ಬಾಲಮುರುಗನ್ ಪತ್ನಿ ಕೆಲಸ ಮಾಡುತ್ತಿರುವ ಹಾಸ್ಟೆಲ್‌ಗೆ ಭೇಟಿ ನೀಡಿದ್ದಾನೆ. ಹೊರಗೆ ಬರುವಂತೆ ಪತ್ನಿಗೆ ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಬಾಲಮುರುಗನ್ ಮೃತದೇಹದ ಬಳಿಯೇ ಕೂತಿದ್ದು, ಸೆಲ್ಫಿ ತೆಗೆದುಕೊಂಡಿದ್ದಾನೆ, “ದ್ರೋಹಕ್ಕೆ ಶಿಕ್ಷೆ …
Read More »
BigTv News
December 1, 2025
Breaking News
ದೇವಹಳ್ಳಿಯಲ್ಲಿರುವ ಪಿಜಿಯ ತನ್ನ ಕೋಣೆಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಪ್ಪ, ನಿನ್ನ ಪ್ರೀತಿಗೆ ನಾನು ಅರ್ಹಳಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀ ಸಲಾಗಿದೆ. ವತ್ಸಲಾ ಹೆಸರುಘಟ್ಟ ರಸ್ತೆಯಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದರು.ಹಾಸನ ಮೂಲದ ವತ್ಸಲಾ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
Read More »