Breaking News

Breaking News

ಶಹಾಪುರ :ತಾಯಿ ಮೇಲೆ ಹಲ್ಲೆ, ಮಗ ಸೊಸೆಗೆ ದಂಡ !

ಬಸವರಾಜೇಶ್ವರಿ ಅವರು ನನ್ನ ಅಣ್ಣ ಮಲ್ಲಿಕಾರ್ಜುನ ಹಾಗೂ ಆತನ ಹೆಂಡತಿ ಸವಿತಾ ಅವರು ನನ್ನ ಹಾಗೂ ನನ್ನ ತಾಯಿ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಅಡಿಯಲ್ಲಿ ಶಹಾಪುರ ಠಾಣೆಯಲ್ಲಿ 2022 ನವಂಬರ 12ರಂದು ದೂರು ಸಲ್ಲಿಸಿದ್ದರು. ಆಗಿನ ಎಎಸ್‌ಐ ವಿಠೋಬಾ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶೋಭಾ ಅವರು ಆದೇಶ ಪ್ರಕಟಿಸಿದರು. ದೂರುದಾರರ ಪರ ಎಪಿಪಿ ದಿವ್ಯಾರಾಣಿ ನಾಯಕ ವಾದ ಮಂಡಿಸಿದ್ದರು.ನಗರದ …

Read More »

ವರದಕ್ಷಿಣೆ ಕಿರುಕುಳ: ಇಬ್ಬರಿಗೆ ಒಂದು ವರ್ಷ ಜೈಲು ಶಿಕ್ಷೆ, ದಂಡ.

ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಜೆ ಎಂಎಫ್ ಸಿ ಕೋರ್ಟ್ ಬುಧವಾರ ಪತಿ ಹಾಗೂ ಅತ್ತೆಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹4 ಸಾವಿರ ದಂಡ ವಿಧಿಸಿದೆ.ಜೇವರ್ಗಿ ತಾಲ್ಲೂಕಿನ ಮಲ್ಲಾ(ಕೆ) ಗ್ರಾಮದ ಸದ್ಯ ಬಾಪೂಗೌಡ ನಗರದ ನಿವಾಸಿ ಜಯಪಾಲರೆಡ್ಡಿ ಶರಣಗೌಡ ಯದ್ಲಾಪುರ ಹಾಗೂ ಲಲಿತಾ ಶರಣಗೌಡ ಯದ್ಲಾಪುರ ಶಿಕ್ಷೆಗೆ ಒಳಗಾದವರು.

Read More »

SSLC’ ಓದಿ ವೈದ್ಯ ವೃತ್ತಿ ಮಾಡುತ್ತಿದ್ದ ವ್ಯಕ್ತಿಯ ಕ್ಲಿನಿಕ್ ಸೀಜ್.!

ಬಿ.ಎನ್.ವೀರೇಶ್ ಯಾವುದೇ ವೈದ್ಯಕೀಯ ಪದವಿ ಪಡೆಯದೇ ಕೇವಲ 10ನೇ ತರಗತಿಯವರೆಗೆÀ ವಿದ್ಯಾಭ್ಯಾಸ ಮಾಡಿ ಔಷಧಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸಾರ್ವಜನಿಕರಿಗೆ ತಾವು ವೈದ್ಯರೆಂದು ಬಿಂಬಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದನು. ವೈದ್ಯಕೀಯ ಪದವಿ ಪಡೆಯದೇ ಜನತೆಗೆ ತಾನು ವೈದ್ಯನೆಂದು ಸುಳ್ಳು ಹೇಳಿ ವೈದ್ಯ ವೃತ್ತಿ ಮಾಡುತ್ತಿದ್ದ ಸಂಡೂರಿನ ತೋರಣಗಲ್ಲು ಗ್ರಾಮದ ಅಭಿಲಾಷ್ ಕ್ಲಿನಿಕ್ ನ ಬಿ.ಎನ್.ವೀರೇಶ್ ಎಂಬುವನ ಕ್ಲಿನಿಕ್ ನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ …

Read More »

ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ: ಅಥಣಿ ಪೋಲಿಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ.

ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯಿಂದ ದೂರುದಾರನಿಗೆ ಹಣ ಕೊಡಿಸುವಲ್ಲಿ ಸಹಾಯ ಮಾಡಿದ್ದ ಅಥಣಿ ಸಿಪಿಐ ಸಂತೋಷ ಹಳ್ಳೂರ ದೂರುದಾರನಿಗೆ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಭತರ ರೆಡ್ಡಿ ನೇತೃತ್ವದ ತಂಡ ಬುಧವಾರ ಅಥಣಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತು.ಅಥಣಿ ನಿವಾಸಿ ಮೀರಸಾಬ ಮುಜಾವರ ಲೋಕಾಯುಕ್ತ ಕಚೇರಿಗೆ ಸಿಪಿಐ ಸಂತೋಷ ಹಳ್ಳೂರ ಮೇಲೆ ದೂರು ದಾಖಲಿಸಿದ್ದರು. ಅಥಣಿ ನಿವಾಸಿ …

Read More »

ಹಣ ಡಬಲ್ ಆಮಿಷ: ₹ 1ಕೋಟಿ ಕಳೆದುಕೊಂಡ ಮಹಿಳೆಯರು.

ಆಂಧ್ರಪ್ರದೇಶದ ಅನಂತಪುರ ನಗರದ ಬೊಗ್ಗು ಶ್ರೀರಾಮುಲು ಹಾಗೂ ಪತ್ನಿ ಪುಷ್ಪಾ ಎಂಬುವವರು ಮಧ್ಯವರ್ತಿಗಳ ಮೂಲಕ ತಾಲ್ಲೂಕಿನ ಮಹಿಳೆಯರನ್ನು ಕೆಲವು ದಿನಗಳ ಹಿಂದೆ ಸಂಪರ್ಕಿಸಿ, ತಾನು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ 30 ದಿನಗಳೊಳಗಾಗಿ ಡಬಲ್ ಮೊತ್ತ ಮರಳಿಸಲಾಗುವುದು ಎಂದು ನಂಬಿಸಿ ವಂಚನೆ ಮಾಡಿದಾರೆ ಎಂದು ₹ 17 ಲಕ್ಷ ಕಳೆದುಕೊಂಡಿರುವ ಪಟ್ಟಣದ ನಿವಾಸಿ ಬಿ.ತಿರುಮಲೇಶ್ ಹಾಗೂ ಆತನ ಪತ್ನಿ ಪೂಜಾ ದೂರು ನೀಡಿದ್ದಾರೆ.

Read More »

ಸೈಬರ್ ಕ್ರೈಂ ಮಾಡಿ ಹಣ ವಂಚನೆ: ಬೆಳಗಾವಿ ಪೊಲೀಸರ ಭರ್ಜರಿ ಭೇಟೆ- 33 ಆರೋಪಿಗಳ ಬಂಧನ

ಬೆಳಗಾವಿಯಲ್ಲೇ ಕುಳಿತು ಅಮೆರಿಕದ ನಾಗರಿಕರನ್ನು ‘ಡಿಜಿಟಲ್‌ ಅರೆಸ್ಟ್‌’ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ಪ್ರಕರಣವನ್ನು ನಗರದ ಪೊಲೀಸರು ಗುರುವಾರ ಭೇದಿಸಿದ್ದಾರೆ. ವಿವಿಧ ರಾಜ್ಯಗಳ 33 ಆರೋಪಿಗಳನ್ನು ಬಂಧಿಸಿದ್ದು, 37 ಹೈಟೆಕ್‌ ಲ್ಯಾಪ್‌ಟಾಪ್‌, 37 ಮೊಬೈಲ್‌ ಫೋನ್‌ ವಶಕ್ಕೆ ಪಡೆದಿದ್ದಾರೆ.ನಗರದ ಬಾಕ್ಸೈಟ್‌ ರಸ್ತೆಯಲ್ಲಿರುವ ಕುಮಾರ್‌ ಹಾಲ್‌ನಲ್ಲಿ ‘ಅಂತರರಾಷ್ಟ್ರೀಯ ಕಾಲ್‌ ಸೆಂಟರ್‌’ ತೆರೆಯಲಾಗಿತ್ತು. ಇಲ್ಲಿ ಕೆಲಸಕ್ಕೆಂದು ಹಲವರನ್ನು ನೇಮಕ ಮಾಡಿಕೊಂಡಿದ್ದರು. ಅವರಿಗೆ ಪ್ರತಿ ತಿಂಗಳು ಕನಿಷ್ಠ ₹18 ಸಾವಿರದಿಂದ ₹45 ಸಾವಿರದವರೆಗೆ ಸಂಬಳ ಇತ್ತು. …

Read More »

ಬೆಂಗಳೂರು | ಚೀಟಿ ವ್ಯವಹಾರದಲ್ಲಿ ನಷ್ಟ: ಟ್ರಾವೆಲ್ಸ್ ಕಂಪನಿ ಮಾಲೀಕ ಆತ್ಮಹತ್ಯೆ

ಆರು ಮಂದಿ ಸ್ನೇಹಿತರೊಂದಿಗೆ ವೆಂಕಟೇಶ್ ಅವರು ಚೀಟಿ ವ್ಯವಹಾರ ನಡೆಸುತ್ತಿದ್ದರು. ಕೆಲವರು ಚೀಟಿ ಹಣ ಪಡೆದುಕೊಂಡು ವಾಪಸ್ ಮಾಡಿರಲಿಲ್ಲ. ಇದರಿಂದ ವೆಂಕಟೇಶ್ ಅವರು ನಷ್ಟಕ್ಕೆ ಒಳಗಾಗಿದ್ದರು. ಹಣ ಹೊಂದಿಸಲು ಸಾಧ್ಯವಾಗದೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ₹70 ಲಕ್ಷ ಸಾಲವಿತ್ತು’ ಎಂದು ಮೂಲಗಳು ಹೇಳಿವೆ.ಆತ್ಮಹತ್ಯೆಗೂ ಮೊದಲು ಕೆಲವು ನಿಮಿಷ ಸೆಲ್ಫಿ ವಿಡಿಯೊ ಮಾಡಿರುವ ವೆಂಕಟೇಶ್‌ ಅವರು, ‘ಚೀಟಿ ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದ ಇರಿ; ಕಷ್ಟದಲ್ಲಿ ಯಾರೂ ಬರುವುದಿಲ್ಲ. ಅದರಲ್ಲೂ ಹಣ …

Read More »

ಮೂಡುಬಿದಿರೆಯ ಕಾಲೇಜು ಕ್ಯಾಂಟಿನ್‌ನ ಕೆಲಸಗಾರನ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ.

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರ ಕ್ಯಾಂಟಿನ್‌ನಲ್ಲಿ ಕೆಲಸಗಾರ ಚೇತನ್‌ನನ್ನು ಐದು ವರ್ಷಗಳ ಹಿಂದೆ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿದಾನಂದ ಪರಶುನಾಯ್ಕರ್ ಎಂಬವನಿಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿದೆ.ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಬಿ.ಎಸ್.ದಿನೇಶ ಕುಮಾರ ಮತ್ತು ತನಿಖಾ ಸಹಾಯಕರಾದ ಕಾಂತಪ್ಪ ಸುಮಾರು 40 ಸಾಕ್ಷಿದಾರರನ್ನು ವಿಚಾರಿಸಿ ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ …

Read More »

ಕಾರವಾರ: ಮೆಡಿಕಲ್ ವಿದ್ಯಾರ್ಥಿಗಳ ಬುಲೆಟ್ ಬೈಕ್ ಸ್ಕೂಟಿಗೆ ಡಿಕ್ಕಿ, ಮಗ ಕಣ್ಮುಂದೆ ಸಾವು, ತಾಯಿ ಗಂಭೀರ ಗಾಯ!

ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಆರ್‌ಟಿಒ ಕಚೇರಿ ಬಳಿ ನಡೆದಿದೆ.ಚಿರಂಜೀವಿ ಬ್ರಹ್ಮಾನಂದ ಕುಂಜಿ(15) ಮೃತ ದುರ್ದೈವಿ. ಮೂಲತಃ ಯಲ್ಲಾಪುರ ತಾಲೂಕಿನ ಇಡಗುಂದಿ ನಿವಾಸಿಗಳು.ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಬುಲೆಟ್‌ ಬೈಕ್ ರಭಸವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಿರಂಜೀವ ತಲೆ‌ ರಸ್ತೆಗೆ ಬಡಿದದ್ದರಿಂದ ತೀವ್ರ ರಕ್ತಸ್ರಾವದೊಂದಿಗೆ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ.

Read More »

ಬೆಂಗಳೂರು – ಹಾರ್ನ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಕಾರಿನಲ್ಲಿದ್ದ ಯುವಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿ

ಸ್ಕೂಟರ್ ನಲ್ಲಿದ್ದವರು ಹಾರ್ನ್ ಮಾಡಿದ್ದಾರೆ ಎಂಬ ಕಾರಣಕ್ಕೆ ಕಾರಿನಲ್ಲಿದ್ದ ಯುವಕನೊಬ್ಬ ಸ್ಕೂಟರ್ ನ್ನು ಪಾಲೋ ಮಾಡಿ ಅದಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಸಿಟಿವಿ ಆದಾರದ ಮೇಲೆ ಆರೋಪಿ ಕಾರಿನ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಬಂಧಿತನನ್ನು ಕೊಡಿಗೇಹಳ್ಳಿ ನಿವಾಸಿ ಸುಕೃತ್ ಗೌಡ ಎಂದು ಗುರುತಿಸಲಾಗಿದ್ದು, ಈತ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಅಂಕಿತಾ ಪಟೇಲ್ (31), ತಮ್ಮ ಪತಿ ವಿನೀತ್ ಎ (33) …

Read More »